ಬೇಕು ಅಂತಾಲೇ Covid ಅಂಟಿಸಿಕೊಂಡ ಜೆಕ್ ಗಾಯಕಿ ಸಾವು, ಆಕೆ ಲಸಿಕೆ ಕೂಡಾ ಹಾಕಿಸಿಕೊಂಡಿಲ್ಲ

"ನಾನು ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಇನ್ನು ಮುಂದೆ ಥಿಯೇಟರ್, ಸೌನಾ ಮತ್ತು ಸಂಗೀತ ಕಚೇರಿ ಇರುತ್ತದೆ" ಎಂದು ಅವರು ಸಾಯುವ 2 ದಿನಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿನ ತನ್ನ ಪೋಸ್ಟ್‌ನಲ್ಲಿ ಬರೆದಿದ್ದರು.

ಹ್ಯಾನಾ

ಹ್ಯಾನಾ

  • Share this:
ಜೆಕ್ ಗಣರಾಜ್ಯದ (Czech Republic) ಜಾನಪದ ಗಾಯಕಿ ಹನಾ ಹೊರ್ಕಾ ಉದ್ದೇಶಪೂರ್ವಕವಾಗಿ ಕೋವಿಡ್ (Covid infection) ಸೋಂಕಿಗೆ ಒಳಪಟ್ಟು ಸಾವನ್ನಪ್ಪಿದ್ದಾರೆ ಎಂದು ಅವರ ಮಗ ಬಿಬಿಸಿಗೆ ತಿಳಿಸಿದ್ದಾರೆ.57 ವರ್ಷದ ಹನಾ ಹೊರ್ಕಾ(Hana Horca) ಅವರು, ಕೋವಿಡ್ ಸೋಂಕಿಗೆ ಒಳಪಟ್ಟ ನಂತರ ತಾನು ಚೇತರಿಸಿಕೊಳ್ಳುತ್ತಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ 2 ದಿನಗಳ ನಂತರ ನಿಧನರಾದರು. ಅವರು ಕೋವಿಡ್ ಲಸಿಕೆಯನ್ನು(Vaccine) ತೆಗೆದುಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಕ್ರಿಸ್‌ಮಸ್‌ನಲ್ಲಿ ಸೋಂಕು
ಆಕೆಯ ಮಗ ಜಾನ್ ರೆಕ್ ಪ್ರಕಾರ, ರೆಕ್ ಮತ್ತು ಅವರ ತಂದೆ ಸೋಂಕಿಗೆ ಒಳಗಾದಾಗ, ಗಾಯಕಿ ಸ್ವ ಇಚ್ಛೆಯಿಂದ ಸೋಂಕಿಗೆಒಳಗಾದರು. ಈ ರೀತಿಯಲ್ಲಿ ಚೇತರಿಕೆಯ ಪಾಸ್ ಪಡೆದು ಕೆಲವು ಸೋಂಕಿನಿಂದಾಗಿ ನಿರ್ಬಂಧಿತ ಸ್ಥಳಗಳನ್ನು ಪ್ರವೇಶಿಸುವುದು ಆಕೆಯ ಉದ್ದೇಶವಾಗಿತ್ತು. ಬುಧವಾರ, ಜೆಕ್ ಗಣರಾಜ್ಯವು ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಸಂಪೂರ್ಣವಾಗಿ ಲಸಿಕೆ ಪಡೆದಿದ್ದರೂ ಸಹ ರೆಕ್ ಮತ್ತು ಅವರ ತಂದೆ ಕ್ರಿಸ್‌ಮಸ್‌ನಲ್ಲಿ, ಕೋವಿಡ್ ಸೋಂಕಿಗೆ ಒಳಗಾದರು. ಆದಾಗ್ಯೂ, ಅವರ ತಾಯಿ ಅವರಿಬ್ಬರಿಂದ ದೂರವಿರಲು ಬಯಸದೆ ತಮ್ಮನ್ನು ತಾವು ಸ್ವತಃ ವೈರಸ್‌ಗೆ ಒಡ್ಡಿಕೊಂಡರು ಎಂದವರು ಹೇಳಿಕೊಂಡರು.

ನಾವು ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟ ಮೇಲೆ, ಆಕೆ ಪ್ರತ್ಯೇಕವಾಗಿ ನಮ್ಮಿಂದ ದೂರ ಉಳಿಯಬಹುದಾಗಿತ್ತು. ಆದರೆ , ಅವಳು ಇಡೀ ಸಮಯ ನಮ್ಮೊಂದಿಗೆ ಇದ್ದಳು” ಎಂದವರು ತಿಳಿಸಿದರು. ಜೆಕ್ ಗಣರಾಜ್ಯದಲ್ಲಿನ ಚಿತ್ರಮಂದಿರಗಳು, ಬಾರ್‌ಗಳು ಮತ್ತು ಕೆಫೆಗಳು ಸೇರಿದಂತೆ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಳಗಳಲ್ಲಿ ಪ್ರವೇಶಕ್ಕಾಗಿ ಲಸಿಕೆ ಹೊಂದಿದ ಅಥವಾ ಇತ್ತೀಚಿಗೆ ಸೋಂಕಿಗೆ ಒಳಪಟ್ಟ ಪುರಾವೆಯ ಅಗತ್ಯವಿದೆ.

ಇದನ್ನೂ ಓದಿ: Jungkook: ಹೊಸ ವರ್ಷದಂದೇ ವಿಶ್ವದಾಖಲೆ! ಪೋಸ್ಟ್​ವೊಂದಕ್ಕೆ 2 ನಿಮಿಷದಲ್ಲಿ ಮಿಲಿಯನ್​ ಲೈಕ್ಸ್​ ಪಡೆದ ಕೊರಿಯನ್​ ಗಾಯಕ

ಸಾಯುವ 2 ದಿನಗಳ ಮೊದಲು ಪೋಸ್ಟ್
ಅವರ ತಾಯಿ ಹಳೆಯ ಜೆಕ್ ಜಾನಪದ ಗುಂಪುಗಳಲ್ಲಿ ಒಂದಾದ ಅಸೋನಾನ್ಸ್‌ನ ಸದಸ್ಯರಾಗಿದ್ದರು. ಹಾಗಾಗಿ, ತನ್ನ ಚಲನವಲನಗಳ ಮೇಲಿನ ನಿರ್ಬಂಧಗಳನ್ನು ಕಡಿಮೆಗೊಳಿಸುವ ಸಲುವಾಗಿ ಆಕೆ ಕೋವಿಡ್ ಸೋಂಕಿಗೆ ಒಳಪಡಲು ಬಯಸಿದ್ದರು ಎಂದು ರೆಕ್ ವಿವರಿಸಿದರು. ನಾನು ಚೇತರಿಸಿಕೊಳ್ಳುತ್ತಿರುವೆನು ಮತ್ತು ಇನ್ನು ಮುಂದೆ ಥಿಯೇಟರ್, ಸೌನಾ ಮತ್ತು ಸಂಗೀತ ಕಚೇರಿ ಇರುತ್ತದೆ" ಎಂದು ಅವರು ಸಾಯುವ 2 ದಿನಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿನ ತನ್ನ ಪೋಸ್ಟ್‌ನಲ್ಲಿ ಬರೆದಿದ್ದರು.

ಭಾನುವಾರ ಬೆಳಿಗ್ಗೆ, ಹೊರ್ಕಾ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು ಆಕೆ ವಾಕಿಂಗ್ ಹೋಗಲು ತಯಾರಾಗುತ್ತಿದ್ದರು. ಸ್ವಲ್ಪ ಸಮಯದ ನಂತರ, ಅವರಿಗೆ ಬೆನ್ನು ನೋವು ಕಾಣಿಸಿಕೊಂಡು ಆಕೆ ಮಲಗಲು ಅಣಿಯಾದರು. ಕೇವಲ 10 ನಿಮಿಷಗಳಲ್ಲಿ ಎಲ್ಲಾ ಮುಗಿದು ಹೋಯಿತು, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಕೆ ಉಸಿರಿನ ತೊಂದರೆಯಿಂದಾಗಿ ಸತ್ತು ಹೋದರು" ಎಂದು ಅವರ ಮಗ ಹೇಳಿದರು .

ಲಸಿಕೆಗೆ ಮನವೊಲಿಕೆ
ಲಸಿಕೆ ಪಡೆದುಕೊಳ್ಳದ ಜೊತೆಗೆ, ತನ್ನ ತಾಯಿಯು ಕೋವಿಡ್ ಲಸಿಕೆಗಳ ಬಗ್ಗೆ ಹೆಚ್ಚು ವಿಲಕ್ಷಣವಾದ ಪಿತೂರಿ ಸಿದ್ಧಾಂತಗಳನ್ನು ನಂಬಲಿಲ್ಲ ಎಂದು ಜಾನ್ ರೆಕ್ ಒತ್ತಿ ಹೇಳಿದರು. ಲಸಿಕೆ ಹಾಕಿಸಿಕೊಳ್ಳುವುದರ ಬದಲಾಗಿ ಕೋವಿಡ್‌ಗೆ ತುತ್ತಾಗುವುದು ಆಕೆಯ ತತ್ವವಾಗಿತ್ತು. ಆಕೆಯೊಂದಿಗೆ ಸಮಸ್ಯೆಯ ಬಗ್ಗೆ ಮಾತನಾಡಲು ಪ್ರಯತ್ನಿಸುವುದು ತುಂಬಾ ಭಾವನಾತ್ಮಕವಾಗಿರುತ್ತಿತ್ತು ಎಂದು ಅವರು ಹೇಳಿದರು. ತನ್ನ ಕಥೆಯನ್ನು ಹೇಳುವ ಮೂಲಕ ಇತರರನ್ನು ಲಸಿಕೆ ಹಾಕುವಂತೆ ಮನವೊಲಿಸುವುದು ಆತನ ಆಶಯವಾಗಿತ್ತು.

ಇದನ್ನೂ ಓದಿ: Singer Mangli ಜೊತೆ ಯುವಕರ ಅಸಭ್ಯ ವರ್ತನೆ: ಅಟ್ಟಾಡಿಸಿ ಅಭಿಮಾನಿಗಳಿಗೆ ವಾರ್ನಿಂಗ್​ ಕೊಟ್ಟ ಗಾಯಕಿ!

ಜೀವಂತ ಉದಾಹರಣೆಗಳು, ಗ್ರಾಫ್‌ಗಳು ಮತ್ತು ಸಂಖ್ಯೆಗಳಿಗಿಂತ ಹೆಚ್ಚು ಶಕ್ತಿಯುತವಾಗಿವೆ. ಸಂಖ್ಯೆಗಳು ಸಹಾನುಭೂತಿಯನ್ನು ನೀಡಲಾರವು. ಬುಧವಾರದ ಹೊತ್ತಿಗೆ, ಜೆಕ್ ಗಣರಾಜ್ಯದಲ್ಲಿ 10.7 ಮಿಲಿಯನ್ ಜನಸಂಖ್ಯೆಯಲ್ಲಿ 28,469 ಕೋವಿಡ್ ಪ್ರಕರಣಗಳು ವರದಿಯಾಗಿವೆ. ನೌಕರರು ಮತ್ತು ಶಾಲಾ ಮಕ್ಕಳಿಗೆ ಕಡ್ಡಾಯ ಪರೀಕ್ಷೆ ಸೇರಿದಂತೆ ಏರಿಕೆಯನ್ನು ಎದುರಿಸಲು ಸರ್ಕಾರವು ಹೊಸ ಕ್ರಮಗಳನ್ನು ಜಾರಿಗೆ ತಂದಿದೆ. ಯಾವುದೇ ರೋಗಲಕ್ಷಣಗಳನ್ನು ಹೊಂದದೆ ಸೋಂಕಿಗೆ ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟವರ ಪ್ರತ್ಯೇಕತೆಯ ಅವಧಿಯನ್ನು 14 ದಿನಗಳಿಂದ 5 ದಿನಗಳಿಗೆ ಇಳಿಸಲಾಗಿದೆ .
Published by:vanithasanjevani vanithasanjevani
First published: