ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂಬ ಸಿನಿಮಾ ಹಾಡಿನ ಈ ಸಾಲುಗಳನ್ನು ನೀವು ಕೇಳಿರ್ತೀರಾ ಆದರೆ ಈಗ ಹಂಪಿಯಲ್ಲಿದು (Hampi) ನಿಜಕ್ಕೂ ಸತ್ಯವಾಗಿದೆ ಯಾಕಂತೀರಾ ಹಂಪಿಯಲ್ಲಿ ಕಂಬಗಳು ಮಾತ್ರವಲ್ಲ ಚಪ್ಪಟೆ ಕಲ್ಲುಗಳಲ್ಲೂ ಸಹ ಸಂಗೀತ (Music) ಕೇಳಿಸುವ ವಿಡಿಯೋ (Video) ಒಂದು ವೈರಲ್ ಆಗಿದೆ. ಹಂಪಿ, ವಿಜಯನಗರ ಸಾಮ್ರಾಜ್ಯದ ಭವ್ಯ ನಗರ. ಅಲ್ಲಿನ ದೇಗುಲಗಳು, ರಚನೆಗಳು, ಶಿಲ್ಪಗಳು, ಕೆತ್ತನೆಗಳು, ಕಟ್ಟಡಗಳು (Building) ಒಂದಕ್ಕಿಂತ ಒಂದು ಅದ್ಭುತ. ಇಲ್ಲಿ ನೋಡಲು ಹತ್ತಾರು ವಿಶೇಷ ಸ್ಥಳಗಳಿವೆ, ವಾಸ್ತು ಶಿಲ್ಪವನ್ನು ಅನುಭವಿಸುವ ನೂರಾರು ಕಲೆಗಳಿವೆ. ಅದರಲ್ಲೂ ವಿಶ್ವ ಪರಂಪರೆ ತಾಣ ಹಂಪಿಯ ವಿಜಯ ವಿಠ್ಠಲ ದೇಗುಲದ (Temple) ಸಪ್ತಸ್ವರ ಹೊರಡಿಸುವ ಕಂಬಗಳು ಪ್ರವಾಸಿಗರ ಮೆಚ್ಚಿನ ವಿಷಯ.
ಸಪ್ತಸ್ವರ ಹೊರಡಿಸುವ ಕಂಬಗಳು
15 ನೇ ಶತಮಾನದಲ್ಲಿ ಎರಡನೇ ದೇವರಾಯ ನಿರ್ಮಿಸಿದ ವಿಠಲ ದೇವಾಲಯದ ಸಪ್ತಸ್ವರ ಹೊರಡಿಸುವ 56 ಕಂಬಗಳು ಇಲ್ಲಿನ ಪ್ರಮುಖ ವಿಶೇಷ. ಈ ಕಂಬಗಳಿಂದ ಹೊರಹೊಮ್ಮುವ ಪಂಚವಾದ್ಯ, ಜಲ ತರಂಗ, ಗಂಟೆ ನಾದ, ಶಾಲಾ ಗಂಟೆ, ಕಾಲಿಂಗ್ ಬೆಲ್, ಘಟವಾದ್ಯ, ಡಮರುಗ, ಮೃದಂಗ, ವೀಣೆ ನಾದ ಆಲಿಸಲು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಆದರೆ ಇವುಗಳ ರಕ್ಷಣೆಯ ಸಲುವಾಗಿ ಅಪರೂಪ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಸಂಗೀತ ಮಂಟಪದ ಕಂಬಗಳನ್ನು ಮುಟ್ಟುವುದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 2000ರಲ್ಲೇ ನಿಷೇಧ ಹೇರಿದೆ.
ಚಪ್ಪಟೆ ಕಲ್ಲುಗಳಲ್ಲೂ ಕೇಳುತ್ತಿದೆ ಸಂಗೀತ ಸ್ವರ
ಆದರೆ ಈಗ ಹರದಾಡುತ್ತಿರುವ ಕೆಲ ವೈರಲ್ ವಿಡಿಯೋಗಳು ಸಂಗೀತ ಕೇಳುವ ಮತ್ತೊಂದಿಷ್ಟು ರಚನೆಗಳನ್ನು ತೋರಿಸುತ್ತಿವೆ. ದೇವಾಲಯದ ರಂಗ ಮಂಟಪದಲ್ಲಿ ನೆಲೆಗೊಂಡಿರುವ 56 ಕಂಬಗಳು ವಿವಿಧ ತಾಳವಾದ್ಯಗಳ ಧ್ವನಿಯನ್ನು ಹೊರಹಾಕುತ್ತಿರುವ ಹಾಗೆ ಕೆಲ ಕಲ್ಲುಗಳಂತಹ ರಚನೆಗಳು ಸಹ ಸಂಗೀತವನ್ನು ಧ್ವನಿಸುತ್ತಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Viral Video: ಅಪರಿಚಿತರಿಂದ ತಿಂಡಿ ತೆಗೆದುಕೊಳ್ಳಬಾರದು, ತನ್ನ ಮಗುವಿಗೆ ಪಾಠ ಕಲಿಸಿದ ತಾಯಿ ಕೋತಿ: ವಿಡಿಯೋ ವೈರಲ್
ಟ್ವಿಟರ್‌ನಲ್ಲಿ ಪೋಸ್ಟ್ ವೈರಲ್
ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಈ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಇನ್‌ಕ್ರೆಡಿಬಲ್ ಇಂಡಿಯಾ, ಹಿಂದಿನ ಕಾಲದವರು ಅವೈಜ್ಞಾನಿಕ ಅಥವಾ ಅವಿದ್ಯಾವಂತರು ಎಂದು ಎಂದಿಗೂ ಹೇಳಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.
Incredible India 🇮🇳!
Never say that the Sanatani People were unscientific or uneducated.
Hampi, Karnataka.@templesofindia_
pic.twitter.com/vAhmkBjNMy
— Erik Solheim (@ErikSolheim) January 26, 2023
ಹಂಪಿ ಪ್ರವಾಸೋದ್ಯಮ ವೆಬ್‌ಸೈಟ್ ಏನು ಹೇಳಿದೆ?
ಪ್ರವಾಸೋದ್ಯಮಕ್ಕೆ ಮೀಸಲಾದ ವೆಬ್‌ಸೈಟ್ ಹಂಪಿ ಡಾಟ್‌ಇನ್ ಈ ಸಂಗೀತ ಫಲಕಗಳ ಬಗ್ಗೆ ವಿವರಿಸಿದ್ದು, ಈ ಪ್ಲೇಟ್‌ನಂತಹ ರಚನೆಗಳನ್ನು ಸೈನಿಕರಿಗಾಗಿ ಮಾಡಿದ ಸಮುದಾಯ ಭೋಜನ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಭೋಜನದ ಪ್ರದೇಶವು ರಾಜಮನೆತನದ ಪ್ರದೇಶದಲ್ಲಿ ಅಷ್ಟಭುಜಾಕೃತಿಯ ಮಂಟಪದಲ್ಲಿ ಧಾನ್ಯದ ಬಳಿ ಇದೆ ಎಂದು ಹೇಳಿಕೊಂಡಿದೆ.
ಇನ್ನೂ ಎರಿಕ್ ಸೋಲ್ಹೈಮ್ ಅವರ ಫೋಸ್ಟ್‌ಗೆ ಹಲವು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರು ಇದು ನಿಜಕ್ಕೂ ಅದ್ಭುತವಾಗಿದೆ. ಸನಾತನಿ ಜನರ ಶ್ರೀಮಂತ ವೈಜ್ಞಾನಿಕ ಮತ್ತು ಶೈಕ್ಷಣಿಕ ಇತಿಹಾಸ ಬೆರಗು ಮೂಡಿಸುತ್ತದೆ. ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಹೊಸ ವಿಷಯಗಳನ್ನು ಕಲಿಯುವುದನ್ನು ಮತ್ತು ಅನ್ವೇಷಿಸುವುದು ಈ ವಿಶೇಷವನ್ನು ಕೊಂಡಾಡಿದ್ದಾರೆ.
ಈ ವಿಡಿಯೋ ಕೆಲ ವರ್ಷಗಳ ಹಿಂದೂ ಕೂಡ ವೈರಲ್ ಆಗಿತ್ತು. ಹಂಪಿಯಲ್ಲಿ ಇಂತಹ ಇನ್ನೂ ಅದೆಷ್ಟೋ ಅತ್ಯದ್ಭುತಗಳು ಇವೆ ಎಂದರೆ ತಪ್ಪಾಗಲಾರದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ