• Home
  • »
  • News
  • »
  • trend
  • »
  • Halloween day: ಹ್ಯಾಲೋವೀನ್ ʼಸ್ಕೇರಿ ವೀಕೆಂಡ್ʼ! ಭಯಾನಕವಾಗಿತ್ತು ಇವರ ವೇಷಭೂಷಣ

Halloween day: ಹ್ಯಾಲೋವೀನ್ ʼಸ್ಕೇರಿ ವೀಕೆಂಡ್ʼ! ಭಯಾನಕವಾಗಿತ್ತು ಇವರ ವೇಷಭೂಷಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹ್ಯಾಲೋವೀನ್ ಅನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಈ ಸಂಭ್ರಮಾಚರಣೆಯಲ್ಲಿ ಜನರು ದೆವ್ವ, ಪಿಶಾಚಿಗಳು ಮತ್ತು ರಾಕ್ಷಸರ ಅಲಂಕಾರಿಕ ವೇಷಭೂಷಣಗಳನ್ನು ಧರಿಸುತ್ತಾರೆ.

  • Share this:

ಹ್ಯಾಲೋವೀನ್‌ (Halloween day) ಆಚರಣೆ ಇಂದು ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಕಂಡುಬರುತ್ತಿದೆ. ಇದಕ್ಕೆ ಸೌದಿ ಅರೇಬಿಯಾ (Saudi Arabia) ಕೂಡ ಹೊರತಾಗಿಲ್ಲ. ಚಿತ್ರ ವಿಚಿತ್ರ ವೇಷ ತೊಟ್ಟು ಆಚರಿಸಲಾಗುವ ಈ ಹ್ಯಾಲೋವೀನ್‌ ಹಬ್ಬ ಜನರಲ್ಲಿ ಭಯವನ್ನು (Fear) ಉಂಟುಮಾಡುವುದಂತೂ ಸತ್ಯ. ಹಾಗೆಯೇ ಸೌದಿ ಅರೇಬಿಯಾದಲ್ಲಿ ಆಚರಿಸಲಾಗಿರುವ ಹ್ಯಾಲೋವೀನ್‌ ಗೆ ಇಂಟರ್‌ ನೆಟ್‌ (Internet) ಮಿಶ್ರ ಪ್ರತಿಕ್ರಿಯೆ ನೀಡಿದೆ.


ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ಹ್ಯಾಲೋವೀನ್ ಹಬ್ಬವನ್ನು ಆಚರಿಸಲಾಯ್ತು. ಅದರಲ್ಲಿ ಭಾಗವಹಿಸುವವರು ಭಯಾನಕ ವೇಷಭೂಷಣಗಳನ್ನು ಧರಿಸಿ ರಾಜಧಾನಿ ರಿಯಾದ್‌ನಲ್ಲಿ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಲ್ಲಿ ಕಳೆದ ಗುರುವಾರದಿಂದ ಭಾನುವಾರದವರೆಗೆ "ಭಯಾನಕ ವಾರಾಂತ್ಯ" ಆಚರಿಸಲಾಗಿದೆ.


ಕೆಲವು ವರ್ಷಗಳ ಹಿಂದೆ ಹ್ಯಾಲೋವೀನ್ ಅನ್ನು ಸೌದಿಯಲ್ಲಿ ನಿಷೇಧಿಸಲಾಗಿತ್ತು. 2018 ರಲ್ಲಿ ಸೌದಿ ಪೊಲೀಸರು ಹ್ಯಾಲೋವೀನ್ ಪಾರ್ಟಿಯ ಮೇಲೆ ದಾಳಿ ಮಾಡಿದ್ದರು. ಸ್ಪೂಕಿ ಉಡುಪುಗಳನ್ನು ಧರಿಸಿದ್ದ ಡಜನ್ಗಟ್ಟಲೆ ಜನರನ್ನು ಬಂಧಿಸಿದ್ದರು ಎಂಬುದಾಗಿ ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಅಲ್ಲದೇ "ವಿಚಿತ್ರವಾದ ಬಟ್ಟೆಗಳನ್ನು" ಧರಿಸಿದ್ದ ಮಹಿಳೆಯರಿಗೆ ಕೆಲವು ಆದೇಶಗಳನ್ನು ನೀಡಿದ್ದರು ಎಂಬುದಾಗಿಯೂ ವರದಿಯಾಗಿತ್ತು.


ಭಯಾನಕವಾಗಿತ್ತು ವೇಷಭೂಷಣ


ಆದರೆ ಇದೀಗ ಸೌದಿ ಅರೇಬಿಯಾದಲ್ಲಿ ಬದಲಾವಣೆಯಾಗಿದ್ದು, ವಿಷನ್ 2030 ಅಡಿಯಲ್ಲಿ ಹ್ಯಾಲೋವೀನ್‌ ಆಚರಣೆಗಳನ್ನು ಅನುಮತಿಸಲಾಗಿದೆ. ಈ ವರ್ಷ, ವಿಚಿತ್ರವಾದ ಬಟ್ಟೆಗಳನ್ನು ಧರಿಸಿದ ಜನರು ರಿಯಾದ್‌ನ ಬೀದಿಗಳನ್ನು ಆಕ್ರಮಿಸಿಕೊಂಡರು. ಅವರು ರಾಕ್ಷಸರು, ಮಾಟಗಾತಿಯರು, ಬ್ಯಾಂಕ್ ದರೋಡೆಕೋರರು ಮತ್ತು ಫ್ರೆಂಚ್ ದಾಸಿಯರಂತೆ ವೇಷ ಧರಿಸಿದ್ದರು. ಆದಾಗ್ಯೂ, ಆಚರಣೆಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ವಿಭಜಿಸುವಂತೆ ಮಾಡಿದೆ. ಕೆಲವರು ಸಾಮ್ರಾಜ್ಯದ ತೆರೆಯುವಿಕೆಯನ್ನು ಶ್ಲಾಘಿಸಿದರೆ ಇನ್ನೂ ಕೆಲವರು ಈ ಕ್ರಮವನ್ನು ಖಂಡಿಸಿದರು.


ಇದನ್ನೂ ಓದಿ: ಆನೆಯೂ ವಿಡಿಯೋ ನೋಡುತ್ತಂತೆ ಈ ಊರಲ್ಲಿ! ಹೀಗೂ ಉಂಟಾ? ನೀವೇ ನೋಡಿ


ಇನ್ನು #ವೀಕೆಂಡ್‌ ಹಾರರ್‌ ಮತ್ತು ಕಾಸ್ಟ್ಯೂಮ್‌ ಆಫ್‌ ಇವಿಲ್‌ ಅನ್ನೋದು ಟ್ವಿಟ್ಟರ್‌ನಲ್ಲಿ ಹ್ಯಾಲೋವೀನ್ ಆಚರಿಸಿದಾಗ ಟಾಪ್ ಟ್ರೆಂಡ್‌ಗಳಾಗಿವೆ. ಆದರೆ ಸೌದಿಯ ವಿಡಿಯೋಗಳಿಗೆ ಇಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಸೌದಿ ಅರೇಬಿಯಾದಲ್ಲಿ "ಸುಧಾರಣಾವಾದ" ಹೆಸರಿನಲ್ಲಿ ಹ್ಯಾಲೋವೀನ್ ಆಚರಣೆಗಳನ್ನು ಅನುಮತಿಸಲು ಪ್ರಾರಂಭಿಸಿದ್ದಾರೆ. ಇದು ಸುಧಾರಣಾವಾದ ಅಥವಾ ನಾವೀನ್ಯತೆಯಲ್ಲ ಬದಲಿಗೆ ಅವಮಾನ ಮತ್ತು ಅವನತಿಯಾಗಿದೆ. ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಸಂಶೋಧನಾ ಬರಹಗಾರ ಮತ್ತು ಟರ್ಕಿಕ್ ವರ್ಲ್ಡ್ ಯೂತ್ ಕೌನ್ಸಿಲ್ ಅಧ್ಯಕ್ಷ ರಂಜಾನ್ ಇಜೋಲ್ ಟ್ವೀಟ್ ಮಾಡಿದ್ದಾರೆ.ಹಣಕಾಸು ವಿದ್ಯಾರ್ಥಿ ಅಬ್ದುಲ್ ಅಜೀಜ್ ಖಲೀದ್ "ಸೌದಿ ಬದಲಾಗುತ್ತಿದೆ" ಎಂದಿದ್ದಾರೆ. ಇನ್ನು, ಸೌದಿ ಅರೇಬಿಯಾ ಬಹಿರಂಗವಾಗಿ ಹ್ಯಾಲೋವೀನ್ ಅನ್ನು ಆಚರಿಸುವುದು ನನಗೆ ಅತ್ಯಂತ ಭಯಾನಕವಾಗಿದೆ ” ಎಂದು ಇನ್ನೊಬ್ಬರು ಹೇಳಿದ್ದಾರೆ.


ಇನ್ನೂ ಕೆಲವರು ಅಂತಿಮವಾಗಿ ಸೌದಿ ತೆರೆದುಕೊಂಡಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. "ಈ ವರ್ಷ ಸೌದಿ ಅರೇಬಿಯಾದಲ್ಲಿ ಹ್ಯಾಲೋವೀನ್ ಸರಳವಾಗಿ ಅದ್ಭುತವಾಗಿದೆ" ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.


ಇದನ್ನೂ ಓದಿ: ಬದುಕು ಕಲಿಸಿದ ಗುರುವಿಗೆ ಕಣ್ಣೀರ ವಿದಾಯ! 30 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಗೆ ಭಾವನಾತ್ಮಕ ಬೀಳ್ಕೊಡುಗೆ


ಅಂದಹಾಗೆ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೌದಿ ಸಿಂಹಾಸನದ ಉತ್ತರಾಧಿಕಾರಿಯಾದಾಗಿನಿಂದ ಬದಲಾವಣೆ ಪ್ರಾರಂಭವಾಯಿತು, 2015 ರ ಬಳಿಕ ಅಲ್ಲಿ ಸಾಮಾಜಿಕ ನಿರ್ಬಂಧಗಳನ್ನು ತೆಗೆದುಹಾಕಲು ಪ್ರಾರಂಭಿಸಿದರು. ಅದರಲ್ಲೂ ಸಾರ್ವಜನಿಕ ಹ್ಯಾಲೋವೀನ್ ಆಚರಣೆಗಳು ಸೌದಿ ರಾಜಧಾನಿಯಲ್ಲಿ ಮೊದಲ ಬಾರಿಗೆ 2021 ರಲ್ಲಿ ಪ್ರಾರಂಭವಾಯಿತು.


ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ.


ಹ್ಯಾಲೋವೀನ್ ಅನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಇದು ಸ್ಪೂಕಿ ಮ್ಯಾಜಿಕ್‌ನ ಮೋಜಿನ ಹಬ್ಬವಾಗಿದೆ. ಈ ಸಂಭ್ರಮಾಚರಣೆಯಲ್ಲಿ ಜನರು ದೆವ್ವ, ಪಿಶಾಚಿಗಳು ಮತ್ತು ರಾಕ್ಷಸರ ಅಲಂಕಾರಿಕ ವೇಷಭೂಷಣಗಳನ್ನು ಧರಿಸುತ್ತಾರೆ. ಅಲ್ಲದೇ ಕುಂಬಳಕಾಯಿ ಲ್ಯಾಂಟರ್ನ್‌ಗಳನ್ನು ತಯಾರಿಸುತ್ತಾರೆ. ಭೂತ - ಪ್ರೇತ ಕಥೆಗಳನ್ನು ಹೇಳಲು ಇಷ್ಟಪಡುತ್ತಾರೆ.

First published: