Hair Care: ನೀವು ಎಷ್ಟೇ ಅಂದವಾಗಿದ್ದರೂ ಬಿಳಿ ಕೂದಲು ನಿಮ್ಮ ಕೇಶರಾಶಿಯ ನಡುವೆ ಮಿನುಗುತ್ತಿದ್ದರೆ ಒಂದು ರೀತಿಯ ಕೀಳರಿಮೆ ಕಾಡುವುದು ಸಹಜವೇ. ಹೆಂಗಸರೇ ಆಗಿರಲಿ ಗಂಡಸರೇ ಆಗಿರಲಿ ಕಪ್ಪಗಿನ ಕೂದಲಿನ ನಡುವೆ ಒಂದು ಬೆಳ್ಳಿಯ ರೇಖೆ ಕಂಡುಬಂದರೂ ಮುಜುಗರವನ್ನುಂಟು ಮಾಡುತ್ತದೆ. ಒಮ್ಮೊಮ್ಮೆ ಹದಿಹರೆಯದವರಲ್ಲೂ ಈ ಸಮಸ್ಯೆ ತಲೆದೋರುತ್ತದೆ. 30 ಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಕೂದಲಿಗೆ ಬಣ್ಣ ಹಚ್ಚಬೇಕು ಎಂದಾದರೆ ಅದೊಂದು ದುಃಸಪ್ನವೇ ಸರಿ. ಕೂದಲಿನ ಸಮಸ್ಯೆ ಎಂದರೆ ಬಿಳಿ ಕೂದಲು ಮಾತ್ರವಲ್ಲದೆ, ಕೂದಲು ಉದುರುವುದು, ಕೂದಲು ತುಂಡಾಗುವುದು, ತಲೆಹೊಟ್ಟಿನ ಸಮಸ್ಯೆ ಇತ್ಯಾದಿಯಾಗಿದೆ. ಹಾಗಿದ್ದರೆ ಈ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳೇನು ಎಂಬುದನ್ನು ಅನ್ವೇಷಿಸಿದರೆ ಪರಿಹಾರ ಇದೆ ಎಂಬುದು ತಿಳಿದುಬರುತ್ತದೆ. ಯೋಗ ಭಂಗಿಗಳನ್ನು ಅಭ್ಯಾಸ ನಡೆಸಿದರೆ ಈ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಹಾಗಿದ್ದರೆ ಆ ಯೋಗ ಭಂಗಿಗಳೇನು ಎಂಬುದನ್ನು ತಿಳಿದುಕೊಳ್ಳೋಣ
1. ಕ್ಯಾಮೆಲ್ ಪೋಸ್ (ಉಸ್ಟ್ರಾಸನ)
ಮೊದಲಿಗೆ ವಜ್ರಾಸನದಲ್ಲಿ ಕುಳಿತುಕೊಳ್ಳಿ. ಈಗ ವಜ್ರಾಸನದಿಂದ ನಿಮ್ಮ ಮಂಡಿಯ ಮೇಲೆ ನಿಂತುಕೊಳ್ಳಿ ಎರಡು ಮಂಡಿ ಭುಜದಷ್ಟು ಅಗಲವಾಗಿರಲಿ. ನಿಮ್ಮ ಎರಡು ಹಸ್ತಗಳನ್ನು ಸೊಂಟದ ಮೇಲಿರಿಸಿ ಉಸಿರನ್ನು ತೆಗೆದುಕೊಳ್ಳುತ್ತಾ ಎದೆಯ ಭಾಗವನ್ನು ವಿಸ್ತರಿಸುತ್ತಾ ಹಿಂದಕ್ಕೆ ಭಾಗಿ. ನಿಮ್ಮ ಕುತ್ತಿಗೆಯನ್ನು ಹಿಂದಕ್ಕೆ ಚಾಚಿ. ಇದೇ ಸ್ಥಿತಿಯಲ್ಲಿ 30 ಸೆಕೆಂಡ್ ಹಾಗೆಯೇ ಇರಿ. ಉಸಿರನ್ನು ಹೊರಹಾಕುತ್ತಾ ನಿಧಾನವಾಗಿ ಮಧ್ಯಕ್ಕೆ ಬಂದು ಕೈಯನ್ನು ಕೆಳಗಡೆ ಇಳಿಸಿ ವಜ್ರಾಸನ ಸ್ಥಿತಿಗೆ ಬನ್ನಿ.
2. ಹಾಲಾಸನ
ಮೊದಲು ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ಕೈಗಳು ದೇಹದ ಪಕ್ಕದಲ್ಲಿರಿಸಿ ಹಸ್ತ ಕೆಳಮುಖವಾಗಿರಲಿ. ಉಸಿರನ್ನು ತೆಗೆದುಕೊಳ್ಳುತ್ತಾ ( ಪೂರಕ) ನಿಧಾನವಾಗಿ ಎರಡು ಕಾಲುಗಳನ್ನು ಮೇಲಕ್ಕೆತ್ತಿ. ( ಕಾಲುಗಳು ಒಂದಕ್ಕೊಂದು ಪರಸ್ಪರ ಕೂಡಿರಲಿ)
ಉಸಿರನ್ನು ಹಿಡಿದು ಎರಡು ಕಾಲುಗಳನ್ನು ತಲೆಯ ಹಿಂದಕ್ಕೆ ತೆಗೆದುಕೊಂಡು ಬನ್ನಿ. ಕಾಲ್ಬೆರಳು ತಲೆಯ ಹಿಂಭಾಗದ ನೆಲವನ್ನು ತಾಗಿಸಲು ಪ್ರಯತ್ನಿಸಿ ಇಲ್ಲಿ ನಿಮ್ಮ ಕತ್ತು ಮತ್ತು ಭುಜ ನೆಲಕ್ಕೆ ತಾಗಿರಲಿ ಮತ್ತು ಬೆನ್ನು ನೆಲಕ್ಕೆ ಸಮಾನಾಂತರ ವಾಗಿರಲಿ.
ಇದೆ ಭಂಗಿಯಲ್ಲಿ ಕನಿಷ್ಠ ಒಂದು ನಿಮಿಷವಾದರೂ ಇರಲು ಪ್ರಯತ್ನಿಸಿ.
3. ತ್ರಿಕೋನಾಸನ
ನಿಮ್ಮ ಕಾಲುಗಳ ಮೇಲೆ ನಿಂತುಕೊಳ್ಳಿ ಈಗ ನಿಮ್ಮ ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ಮೊದಲು ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ಕೈಗಳು ದೇಹದ ಪಕ್ಕಾದಲ್ಲಿರಿಸಿ ಹಸ್ತ ಕೆಳಮುಖವಾಗಿರಲಿ.
ಉಸಿರನ್ನು ತೆಗೆದುಕೊಳ್ಳುತ್ತಾ ( ಪೂರಕ) ನಿಧಾನವಾಗಿ ಎರಡು ಕಾಲುಗಳನ್ನು ಮೇಲಕ್ಕೆತ್ತಿ. ( ಕಾಲುಗಳು ಒಂದಕ್ಕೊಂದು ಪರಸ್ಪರ ಕೂಡಿರಲಿ) ಉಸಿರನ್ನು ಹಿಡಿದು ಎರಡು ಕಾಲುಗಳನ್ನು ತಲೆಯ ಹಿಂದಕ್ಕೆ ತೆಗೆದುಕೊಂಡು ಬನ್ನಿ. ಕಾಲ್ಬೆರಳು ತಲೆಯ ಹಿಂಭಾಗದ ನೆಲವನ್ನು ತಾಗಿಸಲು ಪ್ರಯತ್ನಿಸಿ ಇಲ್ಲಿ ನಿಮ್ಮ ಕತ್ತು ಮತ್ತು ಭುಜ ನೆಲಕ್ಕೆ ತಾಗಿರಲಿ ಮತ್ತು ಬೆನ್ನು ನೆಲಕ್ಕೆ ಸಮಾನಾಂತರ ವಾಗಿರಲಿ.ಇದೆ ಭಂಗಿಯಲ್ಲಿ ಕನಿಷ್ಠ ಒಂದು ನಿಮಿಷವಾದರೂ ಇರಲು ಪ್ರಯತ್ನಿಸಿ.
4. ಅಪನಾಸನ
ಈ ಯೋಗ ಶುರು ಮಾಡುವ ಮುಂಚೆ ಮೊದಲು ನೆಲದ ಮೇಲೆ ಮೇಲ್ಛಾವಣಿ ನೋಡುತ್ತಾ ನೇರವಾಗಿ ಮಲಗಿ. ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ಮಂಡಿಗಳನ್ನು ಎದೆಯ ಭಾಗದವರೆಗೂ ತಂದು ಉಸಿರನ್ನು ಹೊರ ಹಾಕಿ. ಹೀಗೆ ಸುಮಾರು 15 ಸೆಕೆಂಡುಗಳ ಕಾಲ ಮಾಡಿ.
5. ಭುಜಂಗಾಸನ
ಮೊದಲಿಗೆ ನೆಲದಲ್ಲಿ ಹೊಟ್ಟೆಯ ಮೇಲೆ ಮಲಗಿ. ನಂತರ ನಿಮ್ಮ ಹಣೆಯನ್ನು ನೆಲದ ಮೇಲಿಟ್ಟು ನಿಮ್ಮ ಎರಡೂ ಅಂಗೈಗಳನ್ನು ಭುಜದ ಕೆಳಗಡೆ ಇರಿಸಿಕೊಳ್ಳಿ. ದೀರ್ಘವಾಗಿ ಉಸಿರು ಒಳಗೆ ತೆಗೆದುಕೊಳ್ಳುತ್ತಾ ನಿಮ್ಮ ಸೊಂಟ ಮತ್ತು ಬೆನ್ನಿನ ಭಾಗವನ್ನು ನಿಧಾನವಾಗಿ ಮೇಲಕ್ಕೆತ್ತಿ. ಕತ್ತನ್ನು ಮುಂದೆ ಚಾಚಿ ಮೇಲ್ಛಾವಣಿಯನ್ನು ನೋಡುತ್ತಾ ಸೊಂಟದ ಭಾಗವನ್ನು ನೆಲದಿಂದ ಒಂದೆರಡು ಇಂಚುಗಳಷ್ಟು ಮೇಲೆತ್ತಿ. ಸುಮಾರು 15 ರಿಂದ 30 ಸೆಕೆಂಡ್ಗಳಷ್ಟು ಹಾಗೆ ಇರಿ.
6.ಅಧೋಮುಖ ಶ್ವಾನಾಸನ
ಎರಡು ಕೈ ಮತ್ತು ಕಾಲುಗಳನ್ನು ಚಾಚಿ ನೆಲದ ಮೇಲಿರಿಸಿನಿಧಾನವಾಗಿ ಉಸಿರು ಬಿಡಿ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಮೊಣಕೈ ಮತ್ತು ಮೊಣಕಾಲನ್ನು ನೇರವಾಗಿಸಿ. ದೇಹವು 'ವಿ' ಆಕಾರದಲ್ಲಿ ಇರಬೇಕು. ಕೈಗಳು ಭುಜದ ಸಮಾನಾಂತರವಾಗಿರಬೇಕು ಮತ್ತು ಪಾದಗಳು ಸೊಂಟದ ಸಮಾನವಾಗಿರಲಿ. ಹೆಬ್ಬೆರಳುಗಳು ಮೇಲಿನ ಭಾಗಕ್ಕೆ ನೋಡುತ್ತಿರಲಿ. ಕೈಗಳನ್ನು ನೆಲಕ್ಕೆ ಊರಿಕೊಳ್ಳಿ ಮತ್ತು ಕುತ್ತಿಗೆ ಎಳೆಯಿರಿ. ಕಿವಿಗಳು ಒಳಭಾಗದ ಕೈಗಳನ್ನು ಮುಟ್ಟಬೇಕು ಮತ್ತು ನಾಭಿ ಕಡೆಗೆ ನೋಟವನ್ನಿಡಿ.
ಕೆಲವು ಸೆಕೆಂಡು ಹಾಗೆ ಇರಿ ಮತ್ತು ಇದರ ಬಳಿಕ ಮತ್ತೆ ಮೊಣಕಾಲುಗಳನ್ನು ಮಡಚಿ ಮೊದಲಿನ ಭಂಗಿಗೆ ಬನ್ನಿ.
7.ಮತ್ಸ್ಯಾಸನ
ಮೊದಲು ಬೆನ್ನಮೇಲೆ ನೇರವಾಗಿ ಮಲಗಿಕೊಳ್ಳಿರಿ. ಎರಡೂ ಪಾದಗಳು ಒಂದಕ್ಕೊಂದು ತಾಕಿರಲಿ. ಕೈಗಳು ಸೊಂಟದ ಬದಿ ಇದ್ದು ಹಸ್ತಗಳು ಮೇಲೆ ಬರುವಂತಿರಲಿ. ಈಗ ಎರಡೂ ಹಸ್ತಗಳನ್ನು ನಿತಂಬಗಳ ಕೆಳಗಿರಿಸಿ ಎರಡೂ ಮೊಣಕೈಗಳನ್ನು ಒಳಗೆಳೆದುಕೊಳ್ಳಿರಿ. ಈ ಪ್ರಯತ್ನದಲ್ಲಿ ಮೊದಲು ಸೊಂಟವನ್ನು ಎಡಕ್ಕೆ ಹೊರಳಿಸಿ ಬಲಹಸ್ತವನ್ನು ಒಳಗಿರಿಸಿ ಬಳಿಕ ಸೊಂಟವನ್ನು ಬಲಕ್ಕೆ ಹೊರಳಿಸಿ ಎಡ ಹಸ್ತವನ್ನು ಒಳಗಿಸಿರಿ ದೇಹದ ಭಾರವನ್ನು ಹಸ್ತಗಳ ಮೇಲೆ ಬರುವಂತೆ ಮಾಡಿ. ಬಳಿಕ ಪೂರ್ಣವಾಗಿ ಉಸಿರನ್ನು ಎಳೆದುಕೊಳ್ಳುತ್ತಾ ಎದೆಯನ್ನು ಮುಂದೆ ತನ್ನಿ. ಅಂದರೆ ಎರಡೂ ಮೊಣಕೈಗಳ ಮೇಲೆ ಭಾರ ಹಾಕಿ ಎದೆ ಮತ್ತು ತಲೆ ಮೇಲೆ ಎತ್ತಿ ಮುಂದೆ ನೋಡಿ. ಈಗ ನಿಮ್ಮ ಕಾಲುಬೆರಳುಗಳು ನಿಮಗೆ ಕಾಣಬೇಕು. ಈ ಹಂತದಲ್ಲಿ ಉಸಿರು ಪೂರ್ಣವಾಗಿ ತುಂಬಿದ್ದು ಉಸಿರು ಕಟ್ಟಿ. ಬಳಿಕ ತಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ವಾಲಿಸಿ. ಈಗ ಬೆನ್ನೆಲುಬು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಕಮಾನಿನಂತೆ ಬಾಗಬೇಕು. ನಿಧಾನವಾಗಿ ತಲೆಯನ್ನು ನೆಲಕ್ಕೆ ತಾಕಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ