ಕೆಲವರಿಗೆ ಬ್ರಾಂಡೆಡ್ (Branded Clothes) ಬಟ್ಟೆಗಳು ಅಂದ್ರೆ ಅದೇನೋ ಪ್ರೀತಿ (Love).. ತಮ್ಮ ಅಂತಸ್ತು ಹಾಗೂ ತಮ್ಮ ಉಡುಪಿನ (Dress) ಮೇಲೆ ಇರುವ ಆಸಕ್ತಿ ತೋರಿಸಲು ಹೆಚ್ಚಾಗಿ ಬ್ರಾಂಡೆಡ್ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ.. ಬ್ರಾಂಡೆಡ್ ಬಟ್ಟೆಗಳ ಮೌಲ್ಯ (Cost) ಎಷ್ಟೇ ಆಗಿದ್ದರೂ ಸಹ ತಲೆಕೆಡಿಸಿಕೊಳ್ಳದೆ ಬ್ರಾಂಡೆಡ್ ಬಟ್ಟೆಗಳ ಖರೀದಿ ಮಾಡಲು ಮುಗಿಬೀಳುತ್ತಾರೆ.. ಆನ್ಲೈನ್ ಶಾಪಿಂಗ್ (Online Shopping) ಇರಲಿ ಅಥವಾ ಅಂಗಡಿಗೆ ಹೋಗಿ ಬಟ್ಟೆ ಖರೀದಿ ಮಾಡುವುದು ಮೊದಲ ಆಯ್ಕೆ ಬ್ರಾಂಡೆಡ್ ಬಟ್ಟೆಗಳು ಆಗಿರುತ್ತವೆ. ಆದ್ರೆ ಹೀಗೆ ಖರೀದಿ ಮಾಡುವ ಬ್ರಾಂಡೆಡ್ ಬಟ್ಟೆಗಳ ಬಂಡವಾಳ ಹೇಗೆ ಇರುತ್ತದೆ, ಖರೀದಿ ಮಾಡುವ ಮುನ್ನ ಒಮ್ಮೆ ಪರಿಶೀಲನೆ ಮಾಡದ್ರೆ ಇದ್ರೆ ದೇವರೇ ಗತಿ ಎನ್ನುವಂತೆ ಆಗಿರುತ್ತದೆ.ಇದಕ್ಕೆ ಉತ್ತಮ ಉದಾಹರಣೆ ಎಂದರೆ ವೈರಲ್ ಆಗುತ್ತಿರುವ ಈ ಸುದ್ದಿ.. ಈ ಸುದ್ದಿಯನ್ನು ಒಮ್ಮೆ ನೀವು ಓದಿದ್ರೆ ಇನ್ನು ಮುಂದೆ ಬ್ರಾಂಡೆಡ್ ಬಟ್ಟೆ ಖರೀದಿ ಮಾಡುವ ಮುನ್ನ ಸಾಕಷ್ಟು ಜಾಗೃತರಾಗಿ ಇರುತ್ತೀರಾ..
H&M ಶೋರೂಂನಲ್ಲಿ ಬಟ್ಟೆ ಮೇಲೆ ಹೇನು, ಕ್ರಿಮಿ ಕೀಟ!
H&M ಬ್ಯಾಂಡೆಡ್ ಬಟ್ಟೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಹದಿಹರೆಯದ ಯುವಕರ ನೆಚ್ಚಿನ ಬಟ್ಟೆಯ ಬ್ರಾಂಡ್ ಆಗಿರುವ ಸ್ವೀಡಿಷ್ ಮೂಲದ ಬಹುರಾಷ್ಟ್ರೀಯ ಬಟ್ಟೆ ಕಂಪನಿ ಪುರುಷರು ಮಹಿಳೆಯರು ಹದಿಹರೆಯದ ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ವಸ್ತ್ರವಿನ್ಯಾಸ ಮಾಡಿ ಗಮನ ಸೆಳೆಯುವ ಕಂಪನಿ. ಸುಮಾರು 74 ಅಧಿಕಾರ ದೇಶಗಳಲ್ಲಿ 5000ಕ್ಕೂ ಅಧಿಕ ಸ್ಟೋರ್ ಗಳನ್ನು ಹೊಂದಿರುವ H&M ವಿಶ್ವದಲ್ಲಿನ ಬ್ರಾಂಡೆಡ್ ಬಟ್ಟೆಗಳ ಸಾಲಿನಲ್ಲಿ ಎರಡನೆಯ ಸ್ಥಾನ ಪಡೆದಿದೆ.. ಹೀಗಾಗಿಯೇ ಇಂತಹ ಬ್ರಾಂಡೆಡ್ ಬಟ್ಟೆ H&M ಅಂದ್ರೆ ಹದಿಹರೆಯದ ಯುವಕರಿಗೆ ಹಚ್ಚು ಮೆಚ್ಚು.. ಆದ್ರೆ ನ್ಯೂಯಾರ್ಕ್ ನಲ್ಲಿ ನಡೆದಿರುವ ಘಟನೆಯನ್ನು ನೀವು ತಿಳಿದುಕೊಂಡರೆ ಇನ್ನಮುಂದೆ H&M ಬ್ರಾಂಡ್ ಬಟ್ಟೆ ಖರೀದಿ ಮಾಡುವ ಮುನ್ನ ಒಮ್ಮೆ ಯೋಚನೆ ಮಾಡುತ್ತೀರಾ.
ಇದನ್ನೂ ಓದಿ: 119ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕೆನ್ ತನಕಾ; ಈಕೆಗಿದೆ ವಿಶ್ವದ ಹಿರಿಯ ಮಹಿಳೆ ಎಂಬ ಪಟ್ಟ
ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿರುವ H&M ಅಂಗಡಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬಟ್ಟೆ ಖರೀದಿ ಮಾಡಲು ಹೋದ ಗ್ರಾಹಕರಿಗೆ ಶಾಕ್ ಉಂಟಾಗಿದೆ.. ಯಾಕಂದ್ರೆ ಬ್ರಾಂಡೆಡ್ ಬಟ್ಟೆ ಯಾಗಿರುವ H&M ನಲ್ಲಿ ಕೊಂಚ ದೂಳು ಕೂಡ ಇರುವುದಿಲ್ಲ. ಆದ್ರೆ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿರುವ H&M ಅಂಗಡಿಯಲ್ಲಿ ಇದ್ದ ಹೂಡಿಗಳ ಮೇಲೆ ಹೇನು ಮತ್ತು ಕ್ರಿಮಿಕೀಟಗಳು ಹರಿದಾಡಿವೆ. ಅಲ್ಲದೆ ಈ ಹೂಡಿಗಳ ಮೇಲೆ ಹೇನು ಮತ್ತು ಕ್ರಿಮಿಕೀಟಗಳು ಹರಿದಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿ ಗ್ರಾಹಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
H&M ಕಂಪನಿಯ ಉದ್ಯೋಗಿ ಇಂದಲೇ ವೈರಲ್ ಆದ ಫೋಟೋ
ಇನ್ನು H&M ಅಂಗಡಿಯಲ್ಲಿ ಇದ್ದ ಹೂಡಿಗಳ ಮೇಲೆ ಹೇನು ಮತ್ತು ಕ್ರಿಮಿಕೀಟಗಳು ಹರಿದಾಡುತ್ತಿರುವ ಫೋಟೋ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ಒಬ್ಬರಿಂದ ವೈರಲ್ ಆಗಿದೆ. ತನ್ನ ಕೆಲಸದ ಕೊನೆಯ ದಿನವಾದ್ದರಿಂದ ಉದ್ಯೋಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸಲು ಫೋಟೋ ತೆಗೆದುಕೊಂಡು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಈ ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ H&M ವೆಸ್ಟ್‌ಫೀಲ್ಡ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿರುವ ಹೆಚ್ & ಎಂ ಅಂಗಡಿಯನ್ನ ತಾತ್ಕಾಲಿಕವಾಗಿ ಮುಚ್ಚಿ ಪರಿಶೀಲನೆ ನಡೆಸಿ ಸ್ವಚ್ಛತೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: 15 ನಿಮಿಷ ಅಂತರದಲ್ಲಿ ಜನಿಸಿದ ಅವಳಿಗಳು; ಆದರೆ, ಇವರು ಹುಟ್ಟಿದ ವರ್ಷ ಮಾತ್ರ ಬೇರೆ ಬೇರೆ
ಇತ್ತ H&M ಅಂಗಡಿಯಲ್ಲಿ ಇದ್ದ ಹೂಡಿಗಳ ಮೇಲೆ ಹೇನು ಮತ್ತು ಕ್ರಿಮಿಕೀಟಗಳು ಹರಿದಾಡಿದ ಫೋಟೋವನ್ನು ಹಂಚಿಕೊಂಡಿದ್ದ ಅಲ್ಲಿನ ಸಿಬ್ಬಂದಿ ನಾನು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನಿಂದ ನಕಾರಾತ್ಮಕ ಭಾವನೆ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ ಆದರೆ ಈ ತಪ್ಪನ್ನು ಸರಿ ಮಾಡುತ್ತಿರುವುದಕ್ಕಾಗಿ ನನಗೆ ನನ್ನ ಸಿಬ್ಬಂದಿಗಳಿಂದ ಧನ್ಯವಾದ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
I work at the H&M in the Oculus at World Trade & today a customer discovered lice on a rack of hoodies. They’re not closing the store nor are they notifying employees of the problem. The section was just blocked off. pic.twitter.com/eAIlOxfmJu
— Choy Choy 🎋 (@Madesonee_) December 29, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ