ಸ್ಕೈಡೈವ್ (Skydive) ಅಂದರೇ ಸುಮ್ಮನೆನಾ ಇದು ತುಂಬಾ ಸಾಹಸದ ಕೆಲಸವಾಗಿದೆ ಎಂದರೆ ತಪ್ಪಾಗಲಾರದು. ಇದನ್ನು ಯಾರು ಬೇಕಾದರೂ ಮಾಡಬಹುದು ಆದರೆ ಸ್ಕೈಡೈವಿಂಗ್ ಮಾಡುವುದಕ್ಕೆ ಸಾಕಷ್ಟು ಹಣ (Money) ಬೇಕಾಗುತ್ತದೆ. ಇದು ಸಾಹಸವನ್ನು ಮಾಡಬೇಕೆಂದು ಬಯಸುವ ಜನರಿಗೆ ಅತ್ಯಂತ ಪ್ರೀಯವಾದ ಕೆಲಸವಾಗಿದೆ. ಆದರೆ ಇಲ್ಲಿ ಇಬ್ಬರು ಆಸ್ಟ್ರೇಲಿಯನ್ (Australian) ವ್ಯಕ್ತಿಗಳು ಒಂದು ಅದ್ಭುತ ಕೆಲಸವನ್ನು ಮಾಡುವ ಮೂಲಕ ಆನ್ ಲೈನ್ (Online) ಅಲ್ಲಿ ಎಲ್ಲರ ಮನ ಗೆಲ್ಲುತ್ತಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಹಾಗಾದರೆ ಇವರು ಮಾಡಿದ ಕೆಲಸವಾದರೂ ಏನು.? ಎಂಬುದನ್ನು ಈಗ ತಿಳಿಯೋಣ ಬನ್ನಿ. ಈ ಇಬ್ಬರು ವ್ಯಕ್ತಿಗಳು ಮನೆ ಇಲ್ಲದ ನಿರಾಶ್ರಿತ ವ್ಯಕ್ತಿಯನ್ನು ಯಾವುದೇ ಸಿದ್ಧತೆಯಿಲ್ಲದೆ ಸ್ಕೈಡೈವ್‌ಗೆ ಕರೆದೊಯ್ದಿದ್ದಾರೆ.
ಆರಾಮವಾಗಿ ನಗುತ್ತಲೇ ಸ್ಕೈ ಡೈವ್ ಮಾಡಿರುವ ನಿರಾಶ್ರಿತ ವ್ಯಕ್ತಿ
ಆ ನಿರಾಶ್ರಿತ ವ್ಯಕ್ತಿಯು ತನ್ನ ನೋವನ್ನೆಲ್ಲ ಮರೆತು ಕೆಲ ಕಾಲ ಆರಾಮವಾಗಿ ನಗುತ್ತಲೇ ಸ್ಕೈ ಡೈವ್ ಮಾಡಿರುವ ವೈರಲ್ ವಿಡಿಯೋ ಈಗ ಎಲ್ಲೆಡೆ ಹಂಚಲ್ಪಡುತ್ತಿದೆ. ಆಸ್ಟ್ರೇಲಿಯಾದ ಟಿಕ್ ಟಾಕ್ ಜೋಡಿಯಾದ ಸೆಬ್ ಮತ್ತು ವಿಲ್ ಕೇವಲ ಈ ನಿರಾಶ್ರಿತ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿಸುವ ಸಲುವಾಗಿ ತಮ್ಮದೇ ಖರ್ಚಿನಲ್ಲಿ ಸ್ಕೈಡೈವ್ ಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Viral Video: ಮಲಾಲಾ ಯೂಸುಫಾಯ್‌ಗೆ 'ಮಿಸ್ ಯೂ' ಎಂದ ಗೆಳತಿಯ ವೀಡಿಯೋ ಈಗ ಫುಲ್ ವೈರಲ್
ಇವರು ಅಪರಿಚಿತ ವ್ಯಕ್ತಿಗಳು ನಮ್ಮ ಜೊತೆ ಎಷ್ಟು ನಂಬಿಕೆಯಿಂದ ಸ್ಕೈಡೈವಿಂಗ್ ಮಾಡಲು ಒಪ್ಪುತ್ತಾರೆ ಎಂಬುದನ್ನು ಕಂಡುಹಿಡಿಯಲು ಕೂಡ ಈ ಹೊಸ ಸ್ಕೈಡೈವಿಂಗ್ ಉಪಾಯವನ್ನು ಮಾಡಿದ್ದಾರೆ. ಈ ಸ್ಕೈಡೈವಿಂಗ್ ಮಾಡಲು ಒಪ್ಪಿದ ಆ ನಿರಾಶ್ರಿತ ವ್ಯಕ್ತಿಯು ಡಿಯೋನ್ ಆಗಿದ್ದಾನೆ.
ಸ್ಕೈಡೈವ್ ಬಗ್ಗೆ ವ್ಯಕ್ತಿ ಹೇಳಿದ್ದೇನು ನೋಡಿ
ಮೊದಲು ಈ ರೀತಿ ಕೇಳಿದ್ದಕ್ಕೆ ಒಬ್ಬ ಮಹಿಳೆ ಸ್ಕೈಡೈವಿಂಗ್ ಮಾಡಲು ಒಪ್ಪಿದರೂ ಕೂಡ ನಂತರದಲ್ಲಿ ನನಗೆ ಈ ಕೆಲಸ ಆಗುವುದಿಲ್ಲ ಎಂದು ನಿರಾಕರಿಸಿದಳು. ನಂತರ ಈ ಟಿಕ್ ಟಾಕ್ ಜೋಡಿ ಡಿಯೋನ್ ಅನ್ನು ಮೀಟ್ ಮಾಡಿದ್ದಾರೆ.
ಮೊದ ಮೊದಲು ನಿರಾಶ್ರಿತ ವ್ಯಕ್ತಿಯೂ ಕೂಡ ನನ್ನಿಂದ ಸಾಧ್ಯವಾಗುವುದಿಲ್ಲ ಎಂದಿದ್ದಾನೆ. ಆದರೆ ನಂತರದಲ್ಲಿ ಅವನು ಇದು ನನ್ನ 20 ವರ್ಷಗಳ ಹುಚ್ಚು ಕನಸಾಗಿತ್ತು. ನಾನು ಅದೆಷ್ಟೋ ಹುಚ್ಚುತನಗಳನ್ನು ಮಾಡಿದ್ದೇನೆ ಆದರೆ ಯಾವತ್ತು ನಾನು ಆಕಾಶದಿಂದ ಜಿಗಿಯುವ ಹುಚ್ಚುತನಕ್ಕೆ ಕೈ ಹಾಕಿಯೇ ಇರಲಿಲ್ಲ ಎಂದು ಹೇಳುವಾಗ ನಾನು ಒಬ್ಬ ಮನೆಯಿಲ್ಲದ ನಿರಾಶ್ರಿತ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bill Gates Resume: 48 ವರ್ಷಗಳ ಹಿಂದೆ ಬಿಲ್ ಗೇಟ್ಸ್ ರೆಸ್ಯೂಮ್ ಹೀಗಿತ್ತು!
'ಸ್ಕೈಡೈವಿಂಗ್ ತುಂಬಾ ಅದ್ಭುತವಾದ ಸಾಹಸಮಯವಾದ ಸಂಗತಿಯಾಗಿದೆ. ಈ ರೀತಿಯ ಕೆಲಸವನ್ನು ನಾನು ಈ ಹಿಂದೆ ಎಂದಿಗೂ ಮಾಡಿರಲಿಲ್ಲ. ವಿಮಾನದಿಂದ ಹಾರುವಾಗ ನನಗೆ ಭಯವಾದರೂ ನಂತರದ ಸಮಯದಲ್ಲಿ ನನಗೆ ಅದು ಕೊಟ್ಟಂತಹ ಖುಷಿ ಮತ್ತೇ ಯಾವ ಕೆಲಸವೂ ಕೊಟ್ಟಿರಲಿಲ್ಲ. ಇದು ನನ್ನ ಇಡೀ ಜೀವನದಲ್ಲಿ ಅನುಭವಿಸಿದ ಬೆಸ್ಟ್ ಅಂದರೆ ಬೆಸ್ಟ್ ವಿಷಯವೆಂದರೆ ತಪ್ಪಾಗಲಾರದು' ಎಂದು ಸ್ಕೈಡೈವ್ ಮಾಡಿದ ನಿರಾಶ್ರಿತ ವ್ಯಕ್ತಿ ಡಿಯೋನ್ ತಮ್ಮ ಅನುಭವಗಳನ್ನು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು
ಈ ವಿಡಿಯೋ ಕುರಿತು ನೆಟ್ಟಿಗರು 'ನೀವು ತುಂಬಾ ಗ್ರೇಟ್, ನಿರಾಶ್ರಿತ ವ್ಯಕ್ತಿ ಎಂದು ತಿಳಿದರೂ ಅವರು ಮನುಷ್ಯರು ಅವರಿಗೂ ನಮ್ಮ ನಿಮ್ಮಂತೆ ಖುಷಿ ಪಡುವ ಹಕ್ಕು ಖಂಡಿತ ಇರುತ್ತದೆ ಎಂದು ತಿಳಿದು ಅವರನ್ನು ಸ್ಕೈಡೈವಿಂಗ್ ಗೆ ಕರೆದುಕೊಂಡು ಹೋಗಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್' ಎಂದು ಈ ವಿಡಿಯೋಗೆ ಕಮೆಂಟ್ ಬರೆದಿದ್ದಾರೆ.
ಮತ್ತೊಬ್ಬರು 'ನೀವು ಅದ್ಭುತ ವ್ಯಕ್ತಿಗಳು ಆಗಿದ್ದೀರಿ. ನೀವು ನಿಮ್ಮ ಕೆಲಸಕ್ಕೆ ಪರ್ಫೆಕ್ಟ್ ವ್ಯಕ್ತಿಯನ್ನು ಹುಡುಕಿದ್ದಿರಿ' ಎಂದು ಕಮೆಂಟ್ ಬರೆದು ಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ