Trending| ಅಬ್ಬಬ್ಬಾ..ಅದೃಷ್ಟ ಅಂದರೆ ಇದಪ್ಪಾ! ಈ ಹಳೆಯ ಎಟಿಎಂ ಮಶಿನ್‌ನಲ್ಲಿ ಇವರಿಗೆ ಎಷ್ಟು ಹಣ ಸಿಕ್ಕಿದೆ ನೀವೇ ನೋಡಿ..

ಎಷ್ಟೋ ಕಳ್ಳರು ಈ ಎಟಿಎಂ ಮಶಿನ್‌ಗಳನ್ನು ಕೊಳ್ಳೆ ಹೊಡೆಯಲು ಪ್ರಯತ್ನಿಸಿ ವಿಫಲರಾಗಿರುತ್ತಾರೆ, ಆದರೆ ಇಲ್ಲಿ ಕೆಲವು ಹುಡುಗರು ಹಳೆಯ ಎಟಿಎಂ ಮಶಿನ್‌ಗೆ ಹಣ ನೀಡಿ ಖರೀದಿಸಿ ಅದರಲ್ಲಿ ನೂರಲ್ಲ, ಸಾವಿರ ಅಲ್ಲ, ಬರೋಬ್ಬರಿ 1 ಲಕ್ಷದ ಮೇಲೆ ಹಣ ಪಡೆದಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ.

ಎಟಿಎಂ.

ಎಟಿಎಂ.

  • Share this:
ಇವತ್ತಿನ ದಿನಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಿಯತ್ತಾಗಿ ಕೆಲಸ ಮಾಡಿದರೂ ಅದಕ್ಕೆ ನ್ಯಾಯ ಒದಗಿಸುವ ತಕ್ಕ ಹಣ ಸಿಗುವುದು ತುಂಬಾನೇ ಕಷ್ಟವಾಗಿದೆ. ಅಂತಹದರಲ್ಲಿ ಯಾರಿಗೋ ಕೂತಲ್ಲಿಯೇ ಲಕ್ಷಾಂತರ ರೂಪಾಯಿ ಸಿಕ್ಕಿದೆ ಎಂದರೆ ಅದನ್ನು ಅದೃಷ್ಟ ಅಂತಾನೆ ಹೇಳಬಹುದು.ಒಂದೊಂದು ಬಾರಿ ಈ ಅದೃಷ್ಟ ಲಕ್ಷ್ಮೀ ಯಾರಿಗೆ ಹೇಗೆ ಯಾವ ರೂಪದಲ್ಲಿ ಒಲಿದು ಬರುತ್ತಾಳೆ ಎಂದು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಎಷ್ಟೋ ಕಳ್ಳರು ಈ ಎಟಿಎಂ (ATM) ಮಶಿನ್‌ಗಳನ್ನು ಕೊಳ್ಳೆ ಹೊಡೆಯಲು ಪ್ರಯತ್ನಿಸಿ ವಿಫಲರಾಗಿರುತ್ತಾರೆ, ಆದರೆ ಇಲ್ಲಿ ಕೆಲವು ಹುಡುಗರು ಹಳೆಯ ಎಟಿಎಂ ಮಶಿನ್‌ಗೆ ಹಣ ನೀಡಿ ಖರೀದಿಸಿ ಅದರಲ್ಲಿ ನೂರಲ್ಲ, ಸಾವಿರ ಅಲ್ಲ, ಬರೋಬ್ಬರಿ 1 ಲಕ್ಷದ ಮೇಲೆ ಹಣ ಪಡೆದಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ.

ಇಲ್ಲಿ ಕೆಲವು ಹುಡುಗರು ಒಬ್ಬ ವ್ಯಕ್ತಿಯಿಂದ ಒಂದು ಹಳೆಯ ಎಟಿಎಂ ಮಶೀನ್ ಅನ್ನು 300 ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 21,000 ದಿಂದ 22,000 ರೂಪಾಯಿ ಹಣ ನೀಡಿ ಖರೀದಿ ಮಾಡಿದ್ದಾರೆ ಮತ್ತು ಅದರಲ್ಲಿ ಏನಾದರೂ ಹಣವಿದೆಯೇ ಎಂದು ನೋಡಬೇಕೆಂಬ ಕುತೂಹಲದಿಂದ ಅದನ್ನು ತೆಗೆದು ನೋಡಲು ನಿರ್ಧರಿಸಿದರು.

ಅವರು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಂತಹ ವೀಡಿಯೋ ತುಣುಕಿನಲ್ಲಿ ಹುಡುಗರು ಆ ಹಳೆಯ ಎಟಿಎಂ ಮಶಿನ್‌ ತೆರೆಯಲು ಅನೇಕ ತರಹದಲ್ಲಿ ಪ್ರಯತ್ನಿಸುವುದನ್ನು ಕಾಣಬಹುದು. ಡ್ರಿಲ್ ಮಶಿನ್‌ ಮತ್ತು ಸುತ್ತಿಗೆ ಬಳಸಿ ಮಶಿನ್‌ ಅನ್ನು ಒಡೆದು ತೆಗೆಯಲು ಪ್ರಯತ್ನಿಸಿದರು.

ಕೊನೆಗೆ ಎಲ್ಲಾ ಪ್ರಯತ್ನದ ನಂತರ ಅವರು ಆ ಎಟಿಎಂ ಮಶಿನ್‌ ಅನ್ನು ಹೇಗೆ ತೆಗೆದರು ಎನ್ನುವುದನ್ನು ವಿವರಿಸುತ್ತಾ, ವಿಡಿಯೋ ಮಾಡಿದ ಸ್ನೇಹಿತನೊಬ್ಬ "ಈ ಹಳೆಯ ಎಟಿಎಂ ಮಶಿನ್‌ನ ಮಾಜಿ ಮಾಲೀಕ ಅನೇಕ ಎಟಿಎಂ ಮಶಿನ್‌ಗಳನ್ನು ಹೊಂದಿದ್ದರು ಮತ್ತು ಅವರ ಬಳಿ ನಾವು ಒಂದು ಹಳೆಯ ಎಟಿಎಂ ಮಶಿನ್‌ ಅನ್ನು ಕೊಂಡುಕೊಂಡೆವು” ಎಂದು ಹೇಳಿದರು.

"ಆದರೆ ಆ ಮಶಿನ್‌ ಅನ್ನು ತೆಗೆಯಲು ಅದರ ಬೀಗದ ಕೈ ಅವರ ಬಳಿ ಇರಲಿಲ್ಲ ಎಂದು ಮಾಲೀಕನು ಹೇಳಿದನು. 'ನೀವು ಈ ಎಟಿಎಂ ಮಶಿನ್‌ ಕೊಂಡುಕೊಂಡರೆ ಅದರಲ್ಲಿ ಏನಾದರೂ ಹಣ ಮಿಕ್ಕಿದ್ದರೆ ಅದು ನಿಮಗೆ ಸೇರುತ್ತದೆ ಎಂದು ಮಾಲೀಕನು ನಮಗೆ ಹೇಳಿದ್ದರು’ ಎಂದು ಹುಡುಗನು ತಿಳಿಸಿದನು.

ಇದನ್ನೂ ಓದಿ: Viral Story: ಗಂಡ ಅತ್ತೆಯೊಂದಿಗೆ ಓಡಿ ಹೋದರೆ ದಿಕ್ಕು ಕಾಣದೆ ಹೆಂಡತಿ ಮಾವನನ್ನೇ ಮದುವೆಯಾದಳು!

ಈ ಹಳೆಯ ಎಟಿಎಂ ಮಶಿನ್‌ನಿಂದ ಮಿಕ್ಕಂತಹ ಹಣವನ್ನು ಹೊರತೆಗೆಯಲು ಪ್ರಯತ್ನಿಸಲು ಹಲವಾರು ಸಾಧನಗಳನ್ನು ಬಳಸಿದ ನಂತರ, ನಾವು ನಿಧಾನವಾಗಿ ಅದನ್ನು ತೆಗೆದಿದ್ದೇವೆ ಮತ್ತು ಆ ಹಳೆಯ ಎಟಿಎಂ ಮಶಿನ್‌ನಲ್ಲಿ ನಮಗೆ 2,000 ಡಾಲರ್ ಹಣ ಎಂದರೆ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 1,48,568 ಆಗುತ್ತದೆ ಎಂದು ಹೇಳಿದನು. ಒಟ್ಟಿನಲ್ಲಿ ಹಳೆಯ ಎಟಿಎಂ ಮಶಿನ್‌ ಮೂಲಕ ಇವರಿಗೆ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ ಅಂತಾನೆ ಹೇಳಬಹುದು.
Published by:MAshok Kumar
First published: