HOME » NEWS » Trend » GUY RANTS ABOUT PARENTS GIVING HIM RS 74 LAKH ON BIRTHDAY STG KVD

ಪೋಷಕರು ಬರ್ತ್​​​ಡೇಗೆ ಗಿಫ್ಟ್ ಆಗಿ 74 ಲಕ್ಷ ರೂಪಾಯಿ ಕೊಟ್ಟರೂ ಮುನಿಸಿಕೊಂಡಿರುವ ಮಗ.. ಇಲ್ಲಿದೆ ಕಾರಣ!

ದುಬಾರಿ ವೆಚ್ಚದ ಶಾಲೆ ಮತ್ತು ಶಿಕ್ಷಣ, ಕಷ್ಟಗಳಿಲ್ಲದ ಹೂವಿನ ಹಾಸಿಗೆಯಂತಹ ಬದುಕನ್ನು ನೀಡಿರುವ ಪೋಷಕರ ವಿರುದ್ಧ ಸಿಡಿಮಿಡಿಗೊಂಡಿದ್ದಾನೆ. ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಮೈಕ್ರೋಬ್ಲಾಗಿಂಗ್​ ಓದುಗರನ್ನು ಅಚ್ಚರಿಗೊಳಿಸಿದ್ದಾನೆ.

Trending Desk
Updated:July 22, 2021, 11:24 PM IST
ಪೋಷಕರು ಬರ್ತ್​​​ಡೇಗೆ ಗಿಫ್ಟ್ ಆಗಿ 74 ಲಕ್ಷ ರೂಪಾಯಿ ಕೊಟ್ಟರೂ ಮುನಿಸಿಕೊಂಡಿರುವ ಮಗ.. ಇಲ್ಲಿದೆ ಕಾರಣ!
ಕಿಯೋಚು ಯುವಾನ್
  • Share this:

ಮನುಷ್ಯನಿಗೆ ಯಾವುದು ಹೆಚ್ಚಾದ್ರೂ ಕಷ್ಟ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಇಲ್ಲೊಬ್ಬ ಹುಡುಗ ತನಗೆ ಅದ್ಭುತವಾದ, ಅದ್ಧೂರಿ ಜೀವನವನ್ನು ಕೊಟ್ಟು ತನ್ನ ಹುಟ್ಟು ಹಬ್ಬಕ್ಕೆ 100,000 ಡಾಲರ್ ಅಂದರೆ 74 ಲಕ್ಷ ನೀಡಿದ ಹೆತ್ತವರ ವಿರುದ್ಧ ಕೋಪಿಸಿಕೊಂಡಿದ್ದಾನೆ. ನನ್ನ ಹೆತ್ತವರು ನನಗೆ ಏನು ಮಾಡಲಿಲ್ಲ ಎನ್ನುವವರ ಕೊರಗು ಒಂದೆಡೆಯಾದರೇ, ಇಷ್ಟೆಲ್ಲಾ ಯಾಕಪ್ಪ ಮಾಡಬೇಕು? ಅನ್ನೋ ಸಿರಿವಂತ ಕುಡಿಗಳ ಕೊರಗು ಇನ್ನೊಂದೆಡೆ.


ದುಬಾರಿ ವೆಚ್ಚದ ಶಾಲೆ ಮತ್ತು ಶಿಕ್ಷಣ, ಕಷ್ಟಗಳಿಲ್ಲದ ಹೂವಿನ ಹಾಸಿಗೆಯಂತಹ ಬದುಕನ್ನು ನೀಡಿರುವ ಪೋಷಕರ ವಿರುದ್ಧ ಸಿಡಿಮಿಡಿಗೊಂಡಿದ್ದಾನೆ. ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಮೈಕ್ರೋಬ್ಲಾಗಿಂಗ್​ ಓದುಗರನ್ನು ಅಚ್ಚರಿಗೊಳಿಸಿದ್ದಾನೆ. ನನ್ನನ್ನು ನನ್ನ ಪೋಷಕರು ಹಾಳು ಮಾಡಿದ್ದಾರೆ ಎಂದು ಕೋಪ ತೋರಿಸಿಕೊಂಡಿದ್ದಾನೆ.ಕಿಯೋಚು ಯುವಾನ್ ಕಳೆದ ವರ್ಷ ಜನ್ಮದಿನದಂದು ಅವರ ತಾಯಿ ನೀಡಿದ 100,000 ಡಾಲರ್ (ರೂ. 74 ಲಕ್ಷ) ಹಣದ ಬಗ್ಗೆ ವಿವರಣೆ ನೀಡಿದ್ದಾನೆ. ಅವರ ತಾಯಿ ಹೇಗೆ ನೀಡಿದರು ಈತನ ಅಸಮಾಧಾನ ಜೊತೆಗೆ ಅದನ್ನು ಶಮನ ಮಾಡಿದ್ದರ ವರದಿ ಇದೆ.ಮೂರು ವರ್ಷದಿಂದ ನಿರುದ್ಯೋಗಿಯಾಗಿದ್ದಾಗ ಅವರ ಹೆತ್ತವರು ಆರ್ಥಿಕ ಸಹಕಾರ ನೀಡಿದ್ದಾರೆ. ಮಕ್ಕಳ ಹಣ ಪೋಷಕರ ಹಣ ಬೇರೆ ಎನ್ನುವಂತಿರದೇ ತಾಯಿ 100,000 ಡಾಲರ್​ ನೀಡಿದ್ದಾರೆ. ಅಲ್ಲದೇ ತಾನು ಮನೆ ಕೆಲಸ ಕೂಡ ಮಾಡಲಿಲ್ಲ. ಜೀವನೋಪಾಯವನ್ನು ಮಾಡುವ ಮಾರ್ಗವೆಂದರೆ ಕೆಲಸ ಮಾಡುವುದು ಮತ್ತು ನ್ಯಾಯಯುತ ವೇತನವನ್ನು ಪಡೆಯುವುದು. ಜೊತೆಗೆ ಅಸ್ತಿತ್ವದ ಹಕ್ಕನ್ನು ಗಳಿಸಿ ಸಮಾಜದ ಸದಸ್ಯರಾಗಿರುವುದು ಸಮಾಜವು ನಮಗೆ ಕಲಿಸಿದೆ ಎಂಬ ಅಭಿಪ್ರಾಯ ನಮ್ಮಲ್ಲಿದೆ. ಇದನ್ನೆಲ್ಲಾ ಮಾಡದಿರುವುದು ಪಾಪಾ ಪ್ರಜ್ಞೆಗೆ ಕಾರಣವಾಗಿದೆ ಎಂದಿದ್ದಾರೆ.


'ನೀವು 3 ವರ್ಷ ಕೆಲಸವಿಲ್ಲದಿದ್ದರೂ ಹಸಿವಿನಿಂದ ಸಾಯುವುದಿಲ್ಲ. ನಿಮ್ಮನ್ನು ಪ್ರೀತಿಸುವ ಪೋಷಕರು ನಿಮ್ಮನ್ನು ಸಲಹುತ್ತಾರೆ ಇದಕ್ಕೆ ಅಸ್ಥಿತ್ವದ ಹಕ್ಕು ಬೇಕಿಲ್ಲ. ನನ್ನ ಹೆತ್ತವರ ಪ್ರೀತಿಯಿಂದ ನಾನು ಹಣದ ರೂಪದಲ್ಲಿ ಪ್ರಾಮಾಣಿಕವಾಗಿ ರಕ್ಷಿಸಲ್ಪಟ್ಟಿದ್ದೇನೆ ಮತ್ತು ನಾನು ಯಾವಾಗಲೂ ಇದ್ದೇನೆ' ಎನ್ನುತ್ತಾನೆ. ಹಣವು ಅವನ ಮತ್ತು ಹೆತ್ತವರ ನಡುವಿನ ಕ್ರೀಡೆಯಂತಿದೆ 'ಓ ದೇವರೇ, ನಾನು ಸವಲತ್ತು ಪಡೆದು ಹಾಳಾದ ಮುದ್ದು ಮಗು ???' ಎಂದು ಬರೆದುಕೊಂಡಿದ್ದಾರೆ.


ಎಂಐಟಿ ವಿಶ್ವವಿದ್ಯಾನಿಲಯದಲ್ಲಿದ್ದ ಸಮಯದಲ್ಲಿ 5,000 175,000 (ರೂ. 1.17 ಕೋಟಿ) ಬೋಧನಾ ಶುಲ್ಕವನ್ನು ಪೋಷಕರು ಖರ್ಚು ಮಾಡಿದ್ದಾರೆ. ಕಾಲೇಜು ಮತ್ತು ಗ್ರೇಡ್​ ಶಾಲೆಯಲ್ಲಿ ಪೋಷಕರೇ ಹಣ ನೀಡಿದ್ದಾರೆ. 'ಅಲ್ಲಿ ಹಣದ ಸಮಸ್ಯೆ ಬಗ್ಗೆ ಸ್ನೇಹಿತರು ಚರ್ಚಿಸುತ್ತಿದ್ದರು. ನನಗೆ ಅದು ಏನೆಂದು ತಿಳಿದಿರಲಿಲ್ಲ. ನಾನು ಅವರ ಬಳಿ ಕೇಳಲು ಮುಜುಗರ ಮಾಡಿಕೊಳ್ಳುತ್ತಿದ್ದೆ' ಎಂದು ಅಳಲು ತೋಡಿಕೊಂಡಿದ್ದಾನೆ.


ಇದನ್ನೂ ಓದಿ: ನನ್ನ ಫ್ಯಾಮಿಲಿ ಸೇಫ್ ಕಣೋ.. ಮನೆಗೆ ನುಗ್ಗುತ್ತಿದ್ದ ಹಾವನ್ನು ತಡೆದು ನಿಲ್ಲಿಸಿದ ಸಾಕಿದ ಬೆಕ್ಕು..!

ನಾನು ಕಡಿಮೆ ಹಣ ಸಂಪಾದಿಸಿದರೆ ನನ್ನ ಹೆತ್ತವರಿಗೆ ನಿವೃತ್ತಿಯಾಗಲು ಕಷ್ಟವಾಗುತ್ತದೆ. ಅದು ನನ್ನ ತಂದೆ ನಿಜವಾಗಿ ಹೇಳಿದ್ದ ವಿಷಯ. ಅವರು ನನ್ನ ಬಗ್ಗೆ ಕಾಳಜಿ ವಹಿಸಿದ್ದರಿಂದ ಅವರು ನಿವೃತ್ತಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

'ಉಳಿದ ಜೀವನ ತನ್ನ ಪಾಡಿಗೆ ತಾನು ಹೋಗುತ್ತಲೇ ಇರುತ್ತದೆ. ಸುಮ್ಮನೇ ಬರೆಯುತ್ತಾ ಇರಬೇಕು' ಎಂದಿದ್ದಾನೆ ಯುವಾನ್.ಯುವಾನ್‌ನ ಮಾತಿಗೆ ನೆಟ್ಟಿಗರು ಕೆರಳಿದ್ದಾರೆ ಹಣವನ್ನು ಹೂಡಿಕೆ ಮಾಡಬಹುದಿತ್ತು. ಕೆಲಸ ಹುಡುಕಬಹುದಿತ್ತು ಇಲ್ಲವೇ ಅಗತ್ಯವಿರುವವರಿಗೆ ಸಹಾಯ ಮಾಡಬಹುದು ಎಂದಿದ್ದಾರೆ.


ಒಬ್ಬ ಬಳಕೆದಾರರು ಹೇಳಿದಂತೆ, 'ಇದು ನನ್ನ ಸಮಸ್ಯೆಗಳಲ್ಲಿ ಅತ್ಯಂತ ಕಡಿಮೆ ಎಂದು ನಾನು ಭಾವಿಸುತ್ತೇನೆ. ಆದರೂ, ನನ್ನ ಹೆತ್ತವರ ಸಾಲವನ್ನು ನಾನು ಅನುವಂಶಿಕವಾಗಿ ಪಡೆದ ಕಾರಣ, ನನ್ನ ಹಣಕಾಸು ಅವಿನಾಭಾವ ಸಂಬಂಧ ಹೊಂದಿದೆ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ 'ನಿಜವಾದ ಶ್ರೀಮಂತ ವ್ಯಕ್ತಿ ಕಣ್ಣೀರು ಹಾಕುತ್ತಾನೆ, ಇದು ಕರಡುಗಳಲ್ಲಿ ಉಳಿಯಬೇಕು' ಎಂದು ಬರೆದಿದ್ದಾರೆ.


ಮೂರನೇ ಬಳಕೆದಾರರು 'ನಾನು ವಾವ್ ಎನ್ನುತ್ತಿದ್ದೇನೆ. ಅವನ ದೃಷ್ಟಿಯಿಂದ ನೋಡಲಾರೆ. ಆದರೆ ಅಷ್ಟೂ ಹಣವನ್ನು ಪಡೆದುದ್ದಕ್ಕೆ ಬಲಿಪಶು ಎನ್ನುವ ಭಾವನೆ ಹೊಂದುವುದು ಅಷ್ಟು ಸೂಕ್ತವಲ್ಲ' ಎಂದಿದ್ದಾರೆ. ಮತ್ತೊಬ್ಬರು 'ನಾನು ಬಡವ, ನೊಂದಿದ್ದೇನೆ. ನನಗೆ ಹಣದ ಅಗತ್ಯವಿದೆ. ನಿಮ್ಮ ಸ್ವಲ್ಪ ಹಣವನ್ನು ನಾನು ಪಡೆದುಕೊಳ್ಳಬಹುದೇ? ಇದರಿಂದ ನಿಮ್ಮ ಪಾಪಾ ಪ್ರಜ್ಞೆ ಕಡಿಮೆಯಾಗಬಹುದು ' ಎಂದಿದ್ದಾರೆ.

First published: July 22, 2021, 11:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories