• Home
  • »
  • News
  • »
  • trend
  • »
  • ಟೈಗರ್​ ಶ್ರಾಫ್​ ಹಾಡಿಗೆ ಸಖತ್ ಸ್ಟೆಪ್​ ಹಾಕಿದ 23ರ ಹರೆಯದ ವೇಟರ್: ವಿಡಿಯೋ ವೈರಲ್​​..!

ಟೈಗರ್​ ಶ್ರಾಫ್​ ಹಾಡಿಗೆ ಸಖತ್ ಸ್ಟೆಪ್​ ಹಾಕಿದ 23ರ ಹರೆಯದ ವೇಟರ್: ವಿಡಿಯೋ ವೈರಲ್​​..!

ಸುರಜಿತ್​ ತ್ರಿಪುರ-ಟೈಗರ್​ ಶ್ರಾಫ್​

ಸುರಜಿತ್​ ತ್ರಿಪುರ-ಟೈಗರ್​ ಶ್ರಾಫ್​

ಗುವಾಹಟಿಯ ರೆಸ್ಟೊರೆಂಟ್ ಒಂದರಲ್ಲಿ ವೇಟರ್​ ಆಗಿ ಕೆಲಸ ಮಾಡುತ್ತಿರುವ ಸುರಜಿತ್​ ಅವರ ಡ್ಯಾನ್ಸಿಂಗ್​ ವಿಡಿಯೋ ನೋಡಿದವರು, ಈ ಯುವಕ ನೃತ್ಯದ ವಿಷಯದಲ್ಲಿ ಟೈಗರ್ ಶ್ರಾಫ್​ಗೆ ಟಕ್ಕರ್​ ಕೊಡುವ ಸಾಮರ್ಥ್ಯ ಇದೆ ಎನ್ನುತ್ತಿದ್ದಾರೆ. ಬಾಲಿವುಡ್​ನ ಬಾಗಿ ಸಿನಿಮಾದ ‘ಗರ್ಲ್ ಐ ನೀಡ್ ಯೂ’ ಹಾಡಿಗೆ ಸುರಜಿತ್ ಸಖತ್​ ಸ್ಟೆಪ್​ ಹಾಕುವ ಮೂಲಕ ಮನರಂಜಿಸಿದ್ದಾರೆ.

ಮುಂದೆ ಓದಿ ...
  • Share this:

ಎಲೆ ಮರೆ ಕಾಯಿಯಂತಿರುವ ಸಾಕಷ್ಟು ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಜಾಲತಾಣ ನಿಜಕ್ಕೂ ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಇದರಿಂದಾಗಿ ಸಾಕಷ್ಟು ಮಂದಿ ಜನಪ್ರಿಯರಾಗುವುದರೊಂದಿಗೆ ವೃತ್ತಿ ಬದುಕಿಗೆ ದಾರಿ ಕಂಡುಕೊಂಡಿದ್ದಾರೆ. ಇನ್ನು ಎಲ್ಲೋ ಯಾವುದೋ ಮೂಲೆಯಲ್ಲಿರುವ ಪುಟ್ಟ ಗ್ರಾಮದಲ್ಲಿರುವವರು ರಾತ್ರೋರಾತ್ರಿ ಸ್ಟಾರ್​ ಆಗುತ್ತಿದ್ದಾರೆ. ಹೊಸ ಹೊಸ ಸ್ಟಾರ್​ಗಳು ಹುಟ್ಟಿಕೊಳ್ಳಲು ಇದು ಕಾರಣವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಮಂದಿ ತಮ್ಮ ಮಧುರವಾದ ಕಂಠದಿಂದ ಹಾಡುವ ಹಾಡುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂತೆಯೇ ಡ್ಯಾನ್ಸ್​ ಮಾಡುವವರೂ ಸಹ ತಮ್ಮ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಮತ್ತೆ ಕೆಲವರು ಬೇರೆಯವರ ಪ್ರತಿಭೆಯನ್ನು ವಿಡಿಯೋದಲ್ಲಿ ರೆಕಾರ್ಡ್​ ಮಾಡಿ, ಅದನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗೆ ಹಂಚಿಕೊಳ್ಳುವ ವಿಡಿಯೋಗಳಲ್ಲಿ ಕೆಲವು ವೈರಲ್​ ಆಗಿ ಆ ಕಲಾವಿದ ರಾತ್ರೋರಾತರಿ ಸ್ಟಾರ್ ಆಗುತ್ತಾನೆ. ಈಗಲೂ ಸಹ ಆಗಿದ್ದು ಇದೆ. 


ವೃತ್ತಿಯಲ್ಲಿ ವೇಟರ್​ ಆಗಿರುವ ಗುವಾಹಟಿಯ ಸುರಜಿತ್​ ತ್ರಿಪುರ ಈಗ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿರುವ ಹೆಸರು. 23 ವರ್ಷದ ಸುರಜಿತ್ ತಮ್ಮ ಅದ್ಭುತವಾದ ಡ್ಯಾನ್ಸಿಂಗ್​ ಮೂವ್ಸ್​ನಿಂದ ಸದ್ಯ ನೆಟ್ಟಿಗರ ಹಾಟ್​ ಫೇವರಿಟ್​ ಆಗಿದ್ದಾರೆ. ಬಾಲಿವುಟ್​ ನಟ ಟೈಗರ್​ ಶ್ರಾಫ್​ ಹೆಜ್ಜೆ ಹಾಕಿರುವ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ.
ಗುವಾಹಟಿಯ ರೆಸ್ಟೊರೆಂಟ್ ಒಂದರಲ್ಲಿ ವೇಟರ್​ ಆಗಿ ಕೆಲಸ ಮಾಡುತ್ತಿರುವ ಸುರಜಿತ್​ ಅವರ ಡ್ಯಾನ್ಸಿಂಗ್​ ವಿಡಿಯೋ ನೋಡಿದವರು, ಈ ಯುವಕ ನೃತ್ಯದ ವಿಷಯದಲ್ಲಿ ಟೈಗರ್ ಶ್ರಾಫ್​ಗೆ ಟಕ್ಕರ್​ ಕೊಡುವ ಸಾಮರ್ಥ್ಯ ಇದೆ ಎನ್ನುತ್ತಿದ್ದಾರೆ. ಬಾಲಿವುಡ್​ನ ಬಾಗಿ ಸಿನಿಮಾದ ‘ಗರ್ಲ್ ಐ ನೀಡ್ ಯೂ’ ಹಾಡಿಗೆ ಸುರಜಿತ್ ಸಖತ್​ ಸ್ಟೆಪ್​ ಹಾಕುವ ಮೂಲಕ ಮನರಂಜಿಸಿದ್ದಾರೆ.


ಇದನ್ನೂ ಓದಿ: Happy Birthday Jagapathi Babu: ರಿವೀಲ್​ ಆಯ್ತು ರಾಬರ್ಟ್​ ಚಿತ್ರದಲ್ಲಿ ಜಗಪತಿ ಬಾಬು ಫಸ್ಟ್​ಲುಕ್​..!


ಸುರಜಿತ್ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಗುವಾಹಟಿಯ ‘ಅಬ್ಸಲ್ಯೂಟ್ ಬಾರ್ಬಿಕ್ಯು' ಎಂಬ ರೆಸ್ಟೊರೆಂಟ್​ನಲ್ಲಿ ಕೆಲಸ ಮಾಡುವ ಸುರಜಿತ್ ಡಾನ್ಸ್ ಮಾಡುವ ದೃಶ್ಯವನ್ನು ಸೆರೆಹಿಡಿದ ಅಲ್ಲಿನ ಸಿಬ್ಬಂದಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.


ಕೆಲಸ ಮಾಡುವ ರೆಸ್ಟೊರೆಂಟ್​ಗೆ ಬಂದಿದ್ದ ಗ್ರಾಹಕರೊಬ್ಬರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ವೇಳೆ ಸುರಜಿತ್ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಡ್ಯಾನ್ಸ್ ಮಾಡಿದ್ದಾರೆ. ಜನಪ್ರಿಯತೆಯ ಅಲೆಯಲ್ಲಿ ತೇಲುತ್ತಿರುವ ಸುರಜಿತ್ ಏಕೆ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅದ್ಭುತ ಪ್ರತಿಭೆಗೆ ಸರಿಯಾದ ಅವಕಾಶವನ್ನು ನೀಡಬೇಕು. ಆತನ ಪ್ರತಿಭೆ ಕುಂದು ಹೋಗದಂತೆ ಸಂಬಂಧಪಟ್ಟವರು ದಯವಿಟ್ಟು ಗಮನಿಸಿ ಸರಿಯಾದ ವೇದಿಕೆಯನ್ನು ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ: ಡಾರ್ಲಿಂಗ್​ ಕೃಷ್ಣನ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ


‘ನಾನು 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ಗುವಾಹಟಿಗೆ ಬಂದಿದ್ದೇನೆ. ನಾನು ಈಗ ಅಬ್ಸೊಲಟ್ ಬಾರ್ಬೆಕ್ಯುನಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಹಕರ ವಿನಂತಿ ಮೇರೆಗೆ ನಾನು ಅವರನ್ನು ಮನರಂಜಿಸಲು ಡ್ಯಾನ್ಸ್ ಮಾಡುತ್ತೇನೆ’ ಎಂದು ಸುರಜಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Published by:Anitha E
First published: