ಲೈಗಿಂಕ ಆನಂದಕ್ಕಾಗಿ ಯಡವಟ್ಟು ಮಾಡಿಕೊಂಡ ವ್ಯಕ್ತಿ; ಮೂತ್ರಕೋಶದಲ್ಲಿತ್ತು 2 ಅಡಿ ಉದ್ದದ ಕೇಬಲ್​!

Video: ಲೈಗಿಂಕ ಆನಂದವನ್ನು ಪಡೆಯಲು ವ್ಯಕ್ತಿ ಕೇಬಲ್​​ ಬಳಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕೇಬಲ್​ ಮೂತ್ರ ಕೋಶವನ್ನು ತಲುಪಿದೆ ಎಂದು ತಿಳಿದುಬಂದಿದೆ.

Image credits: Wallie Islam / Facebook.

Image credits: Wallie Islam / Facebook.

 • Share this:
  ಹೊಟ್ಟೆ ನೋವೆಂದು ಆಸ್ಪತ್ರೆಯಲ್ಲಿ ಸೇರಿಕೊಂಡ ವ್ಯಕ್ತಿಯೊಬ್ಬನ ಮೂತ್ರಕೋಶದಲ್ಲಿ ಮೊಬೈಲ್​ ಚಾರ್ಜರ್​ ಕೇಬಲ್​ ನೋಡಿ ವೈದ್ಯರೇ ಅಚ್ಚರಿಕೊಂಡಿದ್ದಾರೆ. ಅಸ್ಸಾಂ ಅಸ್ಪತ್ರೆಯೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

  30 ವರ್ಷದ ವ್ಯಕ್ತಿಯೊಬ್ಬ ಮೊಬೈಲ್​ ಕೇಬಲ್​ ಅನ್ನು ಸೇವಿಸಿದ್ದೇನೆಂದು ಹೇಳಿ ಅಸ್ಸಾಂ ಆಸ್ಪತ್ರೆ ಸೇರಿಕೊಂಡಿದ್ದರು. ಆದರೆ ವೈದ್ಯರು ಪರಿಶೀಲನೆ ನಡೆಸಿದ ವೇಳೆ ಮೂತ್ರಕೋಶದಲ್ಲಿ ಮೊಬೈಲ್​ ಕೇಬಲ್​​ ಇರುವುದು ಬೆಳಕಿಗೆ ಬಂದಿದೆ. ನಂತರ ಸುದೀರ್ಘವಾಗಿ ಆಪರೇಶನ್​ ನಡೆಸಿ ಎರಡು ಅಡಿ ಉದ್ದದ ಮೊಬೈಲ್​ ಕೇಬಲ್​ ಅನ್ನು ಹೊರತೆಗೆದಿದ್ದಾರೆ.

  ‘ ವ್ಯಕ್ತಿ ತೀರ್ವ ಹೊಟ್ಟೆನೋವಿನಿಂದ ನನ್ನ ಬಳಿ ಬಂದು ಕೇಬಲ್​ ಅನ್ನು ಸೇವಿಸಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಆತನನ್ನು ಪರೀಕ್ಷೆ ನಡೆಸಿದೆ. ಆದರೆ, ಹೊಟ್ಟೆಯಲ್ಲಿ ಯಾವುದೇ ಕೇಬಲ್​ ಸಿಕ್ಕಿರಲಿಲ್ಲ. ಅದಕ್ಕಾಗಿ ಎಂಡೋಸ್ಕೋಪಿಯ ನಡೆಸಿದೆ. ಆ ವೇಳೆಯು ಹೊಟ್ಟೆಯಲ್ಲಿ ಕೇಬಲ್​ ಇರವುದು ಪತ್ತೆಯಾಗಲಿಲ್ಲ. ನಂತರ ಆತನನ್ನು ಆಪರೇಷನ್​ ಥಿಯೇಟರ್​ಗೆ ಕಳುಹಿಸುವ ಮುಂಚೆ ಎಕ್ಸ್​​ರೇ ತೆಗೆಯಲಾಯಿತು. ಈ ವೇಳೆ ಕೇಬಲ್​ ಮೂತ್ರಕೋಶದಲ್ಲಿ ಇರುವುದು ಕಂಡುಬಂದಿದೆ. ನಂತರ ಶಸ್ತ್ರ ಚಿಕಿತ್ಸೆ ನಡೆಸಿ ಕೇಬಲ್​ ಹೊರತೆಗೆಯಬೇಕಾಯಿತು‘ ಎಂದಿದ್ದಾರೆ ಗುವಾಹಟಿಯ ಖ್ಯಾತ ಶಸ್ತ್ರಚಿಕಿತ್ಸಕ ಡಾ.ವಾಲಿಯುಲ್​​​ ಇಸ್ಲಾಂ.  ‘ಆತ ಆಸ್ಪತ್ರೆ ಸೇರಿಕೊಂಡಾಗ ಬಾಯಿಯ ಮೂಲಕ ಕೇಬಲ್​​ ಸೇವಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ಆತ ಶಿಶ್ನದ ಮೂಲಕ ಮೊಬೈಲ್​ ಕೇಬಲ್​​ ಹಾಕಿಕೊಂಡಿದ್ದಾನೆ. ನಾನು 25 ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದೇನೆ ಆದರೆ ಆಪರೇಷನ್​ ಥಿಯೇಟರ್​ನಲ್ಲಿ ಇಂತಹ ಪ್ರಕರಣ ನಡೆದಿರುವುದು ಇದೇ ಮೊದಲು‘ ಎಂದಿದ್ದಾರೆ ಡಾ. ವಾಲಿಯುಲ್​​​ ಇಸ್ಲಾಂ.  ಲೈಗಿಂಕ ಆನಂದವನ್ನು ಪಡೆಯಲು ಆತ ಕೇಬಲ್​​ ಬಳಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕೇಬಲ್​ ಮೂತ್ರ ಕೋಶವನ್ನು ತಲುಪಿದೆ ಎಂದು ತಿಳಿದುಬಂತು. ಆತ ಸತ್ಯವನ್ನು ಹೇಳಿದ್ದರೆ ಬೇರೆ ರೀತಿಯಲ್ಲಿ ಕೇಬಲ್​ ಹೊರ ತೆಗೆಯಬಹುದಾಗಿತ್ತು. ಆದರೆ ಆತ ಸುಳ್ಳು ಹೇಳಿರುವ ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬಂತು ಎಂದರು.

  ಇನ್ನು ಆ ವ್ಯಕ್ತಿ ಯಾವುದೇ ಮಾನಸಿಕ ಅಸ್ವಸ್ಥತೆಯನ್ನು ಹೊಂದಿಲ್ಲ. ಲೈಗಿಂಕ ಸಂತೋಷಕ್ಕಾಗಿ ಈ ಕೃತ್ಯವನ್ನು ಮಾಡಿದ್ದಾನೆ ಎಂದರು. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.

  ಒಂದೇ IMEI ಸಂಖ್ಯೆಯಲ್ಲಿ 13,500 ಸ್ಮಾರ್ಟ್​ಫೋನ್​​​ ಉತ್ಪಾದಿಸಿದ ವಿವೋ; ಪ್ರಕರಣ ದಾಖಲು

  ಮುಖಕ್ಕೆ ಕಪ್ಪು ಬಣ್ಣ ಬಳಿದಿರುವ ಫೋಟೋ ಹಾಕಿಕೊಂಡ ತಮನ್ನಾ; ಕಾರಣವೇನು ಗೊತ್ತಾ?

   
  First published: