Teacher's Day 2022: ಮೀಮ್ಸ್ ಮೂಲಕ ಟ್ವಿಟರ್‌ನಲ್ಲಿ ಗುರುವಂದನೆ! ಇಲ್ಲಿ ಯಾರಿಗೆ ಯಾರು ಶಿಕ್ಷಕರು ಅಂತ ನೋಡಿ

ಇಂದು ಶಿಕ್ಷಕರ ದಿನಚರಣೆ. ವಿವಿಧ ಕ್ಷೇತ್ರಗಳಲ್ಲಿ ಗುರುವಾಗಿ ಕಾಣಿಸಿಕೊಂಡ ಹಲವು ಗುರುವರ್ಯರಿಗೆ ಕೃತಜ್ಞತೆ ತಿಳಿಸುವ ಸಲುವಾಗಿ ಮೀಮ್ಸ್ ಗಳ ಮೂಲಕ ಇಂಟರ್‌ನೆಟ್‌ ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಯಾರ‍್ಯಾರು ಯಾರಿಗೆಲ್ಲಾ ಕೃತಜ್ಞತೆ ಸಲ್ಲಿಸಿದ್ದಾರೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
 ʼಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ್‌ ಪರಬ್ರಹ್ಮ, ತಸ್ಮಯೇ ಶ್ರೀ ಗುರುವೇ ನಮಃʼ ಎಂಬ ನಮ್ಮ ಸಂಸ್ಕೃತ ಶ್ಲೋಕವು ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತಿಳಿಸಿ ಕೊಡುತ್ತದೆ. ಒಂದು ಮಗು (Child), ಒಬ್ಬ ಶಿಕ್ಷಕ/ಶಿಕ್ಷಕಿ (Teacher), ಒಂದು ಪೆನ್ (Pen) ಮತ್ತು ಒಂದು ಪುಸ್ತಕ ಇಡೀ ವಿಶ್ವವನ್ನೇ ಬದಲಾಯಿಸಬಹುದು. ಅಂತಹ ಶಕ್ತಿ ಇವುಗಳಿಗೆ ಇದೆ. ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ (World) ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕ ಮಾತ್ರ. ನಮ್ಮ ಜ್ಞಾನದ ಹಸಿವನ್ನು ನೀಗಿಸುವ ಶಿಕ್ಷಕರ ಸೇವೆಯನ್ನು (Teacher Service) ಸ್ಮರಿಸಲೆಂದೇ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಭಾರತದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಈ ದಿನ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುವ ಅವಕಾಶವಾದರೆ ಶಿಕ್ಷಕರಿಗೂ ತಾವು ವಿದ್ಯಾರ್ಥಿಗಳ ವಲಯದಲ್ಲಿ ಎಷ್ಟು ಜನಪ್ರಿಯರಾಗಿದ್ದೇವೆ ಎಂದು ಅರಿಯಲು ಸಾಧ್ಯವಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ತಮ್ಮ ನೆಚ್ಚಿನ ಶಿಕ್ಷಕರಿಗಾಗಿ ಕವನಗಳನ್ನೂ ಶುಭಸಂದೇಶಗಳನ್ನೂ ಬರೆದು ಪ್ರಕಟಿಸುವುದೂ ಇದೆ.

ಗುರುವಾಗಿ ಕಾಣಿಸಿಕೊಂಡ ಹಲವು ಗುರುವರ್ಯರಿಗೆ ಕೃತಜ್ಞತೆ ತಿಳಿಸುವ ದಿನ
ಇಂದು ಶಿಕ್ಷಕರ ದಿನಚರಣೆ. ವಿವಿಧ ಕ್ಷೇತ್ರಗಳಲ್ಲಿ ಗುರುವಾಗಿ ಕಾಣಿಸಿಕೊಂಡ ಹಲವು ಗುರುವರ್ಯರಿಗೆ ಕೃತಜ್ಞತೆ ತಿಳಿಸುವ ಸಲುವಾಗಿ ಮೀಮ್ಸ್ ಮೂಲಕ ಇಂಟರ್‌ನೆಟ್‌ ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತದ ಮೊದಲ ಉಪರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಅವರು ತಮ್ಮ ಶಿಕ್ಷಣದಿಂದ ಯುವಜನಕರಿಗೆ ದಾರಿ ದೀಪವಾಗಿದ್ದರು. ಆದ್ದರಿಂದ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆ ಎಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ಐಸಾಕ್ ನ್ಯೂಟನ್ ಅವರೇ ಇವರಿಗೆ ಗುರು ಅಂತೆ
ಪ್ರತಿಯೊಬ್ಬರಿಂದ ಕಲಿಯಲು ಏನಾದರೂ ಇದ್ದೆ ಇರುತ್ತದೆ. ನಮ್ಮ ಜೀವನವೇ ನಮಗೆ ಗುರುವಾಗುವ ಅದೇಷ್ಟೊ ಸಂದರ್ಭಗಳು ಬಂದು ಹೋಗಿರುತ್ತವೆ. ಅಂತಹ ಕೆಲವು ಜೀವನದ ಕಥೆಗಳು, ಐಸಾಕ್ ನ್ಯೂಟನ್ ಅವರು ಭೌತಶಾಸ್ತ್ರಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ ಟ್ವಿಟರ್‌ನಲ್ಲಿ ಮೀಮ್ಸ್ ಮೂಲಕ ಅವರು ಭೌತಶಾಸ್ತ್ರದ ಗುರು ಎಂದು ಟ್ವೀಟ್‌ ಮಾಡಿದ್ದಾರೆ.ಇದನ್ನೂ ಓದಿ: Fitness: ಜಿಮ್‌ಗೆ ಹೋಗದೆ ಫಿಟ್ನೆಸ್‌ನಲ್ಲಿ ವಿಶ್ವ ದಾಖಲೆ ಬರೆದ ಪಂಜಾಬ್ ಯುವಕ! ಸಾಧನೆ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಿಂಗ್‌

ನಟಿ ಸಾಯಿ ಪಲ್ಲವಿ ಶಿಕ್ಷಕರ ದಿನದ ಶುಭಾಶಯ! 
ಇನ್ನು ತೆಲುಗು ಮತ್ತು ಮಲಯಾಳಿ ಸಿನಿಮಾದಲ್ಲಿ ಸಕತ್‌ ಹೆಸರು ಮಾಡುತ್ತಿರುವ ನಟಿ ಸಾಯಿ ಪಲ್ಲವಿ ಅವರು ಕಲಾಸರಸ್ವತಿ ಇದ್ದ ಹಾಗೆ ಎಂದು ಅವರ ಪ್ರತಿಭೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ಅವರ ಪೋಟೋ ಹಾಕಿ ಶಿಕ್ಷಕರ ದಿನಾಚರಣೆ ಶುಭಾಶಯ ಕೋರಿದ್ದಾರೆ.ಸೋಶಿಯಲ್ ಮೀಡಿಯಾಕ್ಕೆ ಧನ್ಯವಾದಗಳು
ಟ್ವೀಟರ್‌ನ ಬಳಕೆದಾರರೊಬ್ಬರು ಮೀಮ್ಸ್ ಗಳೊಂದಿಗೆ ನಗಲು ನನಗೆ ಸಹಾಯ ಮಾಡಿದ ಇನ್ಸಸ್ಟಾಗ್ರಾಮ್, ಚೆನ್ನಾಗಿ ಸಂವಹನ ಮಾಡಲು ನನಗೆ ಸಹಾಯ ಮಾಡುವ ವಾಟ್ಸಾಪ್, ಸಂಗೀತದೊಂದಿಗೆ ವಿಶ್ರಾಂತಿ ಪಡೆಯಲು ನನಗೆ ಸಹಾಯ ಮಾಡುವ ಸ್ಪಾಟಿಫೈ, ಹೊಸ ಜನರನ್ನು ಭೇಟಿ ಮಾಡಲು ನನಗೆ ಸಹಾಯ ಮಾಡುವ ಫೇಸ್‍ಬುಕ್, ಸುದ್ದಿಗಳೊಂದಿಗೆ ನವೀಕರಿಸಲು ನನಗೆ ಸಹಾಯ ಮಾಡುವ ಟ್ವಿಟರ್‌, ನನ್ನ ಬುದ್ಧಿಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಗೂಗಲ್‌, ಇವೆಲ್ಲವೂ ಈಗ ಪ್ರತಿಯೊಬ್ಬರ ಬಾಳಿನ ಶ್ರೇಷ್ಠ ಡಿಜಿಟಲ್‌ ಗುರುವಾಗಿವೆ. ಇವೆಲ್ಲವೂಗಳಿಗೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದಾರೆ.ವಿಶ್ವ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಉದ್ದೇಶವೇನು?
ವಿಶ್ವ ಶಿಕ್ಷಕರ ದಿನಾಚರಣೆಗೆ ಒಂದು ತಿಂಗಳ ಮೊದಲು ಭಾರತವು ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಹಕಾರದೊಂದಿಗೆ ಶಿಕ್ಷಕರ ಸ್ಥಾನಮಾನಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಸ್ಮರಿಸಲು ಯುನೆಸ್ಕೋ ಅಕ್ಟೋಬರ್ 5 ಅನ್ನು ವಿಶ್ವ ಶಿಕ್ಷಕರ ದಿನವೆಂದು ಘೋಷಣೆ ಮಾಡಿದೆ.ಇದನ್ನೂ ಓದಿ:  Food Rating: ಅರೇ, ಜೈಲಿನ ಊಟಕ್ಕೂ 5 ಸ್ಟಾರ್ ರೇಟಿಂಗ್! ಅಷ್ಟಕ್ಕೂ ಏನಿದೆ ಇದರಲ್ಲಿ?

1962 ರಲ್ಲಿ, ಡಾ. ರಾಧಾಕೃಷ್ಣನ್ ಆಗಿನ ರಾಷ್ಟ್ರಪತಿ ಆಗಿ ಅಧಿಕಾರ ವಹಿಸಿಕೊಂಡ ನಂತರ ಒಮ್ಮೆ ಅವರ ವಿದ್ಯಾರ್ಥಿಗಳು ಬಳಿಬಂದು ತಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸಲಿದ್ದೇವೆ, ತಾವು ಖಂಡಿತಾ ಬರಬೇಕು ಎಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಡಾ. ರಾಧಾಕೃಷ್ಣನ್ ರವರು ಈ ದಿನವನ್ನು ತನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು 'ಶಿಕ್ಷಕರ ದಿನ'ವೆಂದೇಕೆ ಆಚರಿಸಬಾರದು? ಇದರಿಂದ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರಂತೆ. ಇದೇ ಇಂದಿನ ಶಿಕ್ಷಕರ ದಿನಾಚರಣೆ ಆಗಿ ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
Published by:Ashwini Prabhu
First published: