Viral News: ಹೆಂಡತಿ ಹೆಸರನ್ನು ನಾಯಿಗೆ ಇಟ್ಟಿದ್ದಕ್ಕೆ ಆಕ್ರೋಶ, ಮಹಿಳೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚೇ ಬಿಟ್ಟ..!

Gujarath: ಗುಜರಾತಿನ ಗಾಂಧಿನಗರದಲ್ಲಿ ನೀತಾಬೆನ್​ ಸರ್ವಿಯಾ ಎಂಬ ಮಹಿಳೆ ತನ್ನ ಮುದ್ದು ಶ್ವಾನಕ್ಕೆ ಪ್ರೀತಿಯಿಂದ ಸೋನು ಎಂದು ಹೆಸರಿಟ್ಟಿದ್ದರು.. ಪ್ರತಿನಿತ್ಯ ಆ ನಾಯಿಯನ್ನು ಸೋನು ಎಂದು ಮುದ್ದಾಗಿ ಕರೆಯುತ್ತಿದ್ದರು.. ಸೋನು ಸಹ ನೀತಾ ಕರೆದಾಗ ಬಾಲ ಅಲ್ಲಾಡಿಸುತ್ತಾ ಮುದ್ದಾಗಿ ಓಡಿ ಬಂದು ಆಕೆಯ ಜೊತೆಗೆ ಆಟವಾಡುತ್ತಿತ್ತು. ಆದರೆ ಇದನ್ನು ಕಂಡು ಕಿರಿಕಿರಿ ಪಟ್ಟ ಪಕ್ಕದ ಮನೆಯವ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆಮಾಡಲು ಯತ್ನಿಸಿದ್ದಾನೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ಮನುಷ್ಯನಿಗೆ(Human) ನಾಯಿಮರಿಗಳು(Puppy) ಅಂದ್ರೆ ತುಂಬಾ ಇಷ್ಟ.. ಹೀಗಾಗಿಯೇ ಬೇರೆಲ್ಲರಿಗಿಂತ ನಾಯಿಗಳನ್ನು(Dog) ತುಂಬಾ ಹಚ್ಚಿಕೊಂಡಿರುತ್ತಾರೆ.. ಅದ್ರಲ್ಲೂ ಕೆಲವರು ತಮ್ಮ ಮನೆಯಲ್ಲಿ(Home) ನಾಯಿಗಳನ್ನು ಸಾಕುವ ಹವ್ಯಾಸ(Habit) ಇಟ್ಟುಕೊಂಡಿರುತ್ತಾರೆ..ಮನೆ ತುಂಬೆಲ್ಲಾ ನಾಯಿಗಳದ್ದೇ ಕಾರುಬಾರು ಆಗಿರುತ್ತದೆ.. ಜೊತೆಗೆ ಮುದ್ದಾಗಿ ಅವುಗಳಿಗೆ ಚಿತ್ರ ವಿಚಿತ್ರ ಹೆಸರು ನೀಡಿ ಕರೆಯುವುದರ ಜೊತೆಗೆ ರಾಜ ವೈಭೋಗ ನೀಡಿ ಸಾಕುತ್ತಿರುತ್ತಾರೆ..ಆದರೆ ಈ ರೀತಿ ಕೆಲವರು ನಾಯಿಗಳನ್ನು ಸಾಕುವುದು, ಅವುಗಳಿಗೆ ಹೆಸರಿಟ್ಟು ಕರೆಯುವುದು ಕೆಲವರಿಗೆ ಕಿರಿಕಿರಿ ಅನ್ನಿಸಬಹುದು.. ಎಷ್ಟೋ ಕಡೆ ನಾಯಿಗಳ ವಿಚಾರಕ್ಕಾಗಿ ಜಗಳ ಮಿತಿಮೀರಿದ ಉದಾಹರಣೆಗಳು ಇವೆ.. ತಮ್ಮ ಮುದ್ದು ಶ್ವಾನ ಗಳಿಂದಲೇ ಮಾಲೀಕರು ಅಪಾಯ ತಂದುಕೊಂಡ ಹಲವಾರು ಘಟನೆಗಳು ಇವೆ.. ಅದೇ ರೀತಿ ಈಗ ತನ್ನ ಮುದ್ದು ನಾಯಿಗೆ ಮಾಲೀಕ ಇಟ್ಟ ಹೆಸರೇ ಆತನ ಪ್ರಾಣಕ್ಕೆ ಅಪಾಯ ತಂದೊಡ್ಡಿದೆ.

  ನಾಯಿಗೆ ಇಟ್ಟ ಹೆಸರಿನಿಂದಲೇ ಮಹಿಳೆಯ ಜೀವಕ್ಕೆ ಕುತ್ತು

  ಕೆಲವರು ತಮ್ಮ ಮುದ್ದು ನಾಯಿಗಳಿಗೆ ಜಿಮ್ಮಿ, ಪಮ್ಮಿ, ರೂಬಿ, ನಿಕ್ಕು, ಚಿನ್ನು, ಸೋನು ಎಂದು ಹೀಗೆ ನಾನಾ ರೀತಿಯ ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ.. ಅಲ್ಲದೆ ಪ್ರತಿನಿತ್ಯ ಇದೇ ಹೆಸರುಗಳಿಂದ ನಾಯಿಗಳನ್ನು ಕರೆಯುತ್ತಾರೆ.. ಆದರೆ ಪ್ರೀತಿ ಗುಜರಾತಿನಲ್ಲಿ ಮಹಿಳೆಯೊಬ್ಬಳು ತನ್ನ ಮುದ್ದು ನಾಯಿಗೆ ಸೋನು ಎಂದು ಹೆಸರಿಟ್ಟಿದ್ದು, ಅದೇ ಹೆಸರು ಆಕೆಯ ಜೀವಕ್ಕೆ ಕುತ್ತಾಗಿ ಪರಿಣಮಿಸಿದ್ದು, ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

  ಇದನ್ನೂ ಓದಿ: 15ವರ್ಷದ ಬಾಲಕಿ ಮದುವೆಯಾಗಿ ಗರ್ಭವತಿ ಮಾಡಿದ ಆರೋಪಿ ಬಂಧನ

  ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಯತ್ನ

  ಗುಜರಾತಿನ ಗಾಂಧಿನಗರದಲ್ಲಿ ನೀತಾಬೆನ್​ ಸರ್ವಿಯಾ ಎಂಬ ಮಹಿಳೆ ತನ್ನ ಮುದ್ದು ಶ್ವಾನಕ್ಕೆ ಪ್ರೀತಿಯಿಂದ ಸೋನು ಎಂದು ಹೆಸರಿಟ್ಟಿದ್ದರು.. ಪ್ರತಿನಿತ್ಯ ಆ ನಾಯಿಯನ್ನು ಸೋನು ಎಂದು ಮುದ್ದಾಗಿ ಕರೆಯುತ್ತಿದ್ದರು.. ಸೋನು ಸಹ ನೀತಾ ಕರೆದಾಗ ಬಾಲ ಅಲ್ಲಾಡಿಸುತ್ತಾ ಮುದ್ದಾಗಿ ಓಡಿ ಬಂದು ಆಕೆಯ ಜೊತೆಗೆ ಆಟವಾಡುತ್ತಿತ್ತು. ಆದರೆ ಇದನ್ನು ಕಂಡು ಕಿರಿಕಿರಿ ಪಟ್ಟ ಪಕ್ಕದ ಮನೆಯವ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆಮಾಡಲು ಯತ್ನಿಸಿದ್ದಾನೆ.

  ಹೆಂಡತಿ ಹೆಸರು ನಾಯಿಗೆ ಇಟ್ಟಿದ್ದಕ್ಕೆ ಆಕ್ರೋಶ

  ಇನ್ನು ಏನು ತಪ್ಪು ಮಾಡದ ನೀತಾ ಅವರು ತಮ್ಮ ನಾಯಿಗೆ ಸೋನು ಎಂದು ಹೆಸರಿಟ್ಟಿದ್ದರು.. ನೀತಾ ಅವರ ಪಕ್ಕದ ಮನೆಯ ಸುರಾಭಾಯ್​ ಭಾರ್ವಾದ್‌ ಕೂಡ ತನ್ನ ಹೆಂಡತಿಗೆ ಪ್ರೀತಿಯಿಂದ ಸೋನು ಎಂದು ಕರೆಯುತ್ತಿದ್ದ.. ತನ್ನ ಪತ್ನಿಯ ಹೆಸರನ್ನು ನಾಯಿಗೆ ಇಟ್ಟಿದ್ದಾಳೆ ಎಂದು ಸುರಾಭಾಯ್ ಸಿಟ್ಟು ನೆತ್ತಿಗೇರಿ ನೀತಾ ಬೇನ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಮೂರು ಮಕ್ಕಳ ತಾಯಿಯಾಗಿರುವ ನೀತಾಬೆನ್ ಈಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪತಿ ಮನೆಯಲ್ಲಿ ಇಲ್ಲದ ವೇಳೆ ಸುರಾಭಾಯ್​ ಭಾರ್ವಾದ್​ ಐದು ಮಂದಿಯನ್ನು ಕರೆದುಕೊಂಡು ಬಂದು ಮಹಿಳೆಯ ಮನೆಗೆ ನುಗ್ಗಿದ್ದಾನೆ, ಸೋನು ಎಂದು ನಾಯಿಗೆ ಹೆಸರು ಇಟ್ಟಿದ್ದಕ್ಕೆ ಜಗಳ ಮಾಡಿದ್ದಾನೆ. ನಂತರ ಮಾತಿನ ಚಕಮಕಿ ನಡೆದು ಅಲ್ಲಿಯೇ ಉರಿಯುತ್ತಿದ್ದ ಬೆಂಕಿ ಹಾಕಿ ಸುಡಲು ಪ್ರಯತ್ನಿಸಿದ್ದಾನೆ.

  ಇನ್ನು ಸೀಮೆಎಣ್ಣೆಯನ್ನು ಒಬ್ಬಾತ ಸುರಿದರೆ ಇನ್ನೊಬ್ಬ ಬೆಂಕಿಕಡ್ಡಿಯಿಂದ ಬೆಂಕಿಹಚ್ಚಿರುವುದಾಗಿ ಮಹಿಳೆ ಪೊಲೀಸರಲ್ಲಿ ದೂರಿದ್ದಾರೆ. ಕಿರುಚಾಟಕ್ಕೆ ಅಕ್ಕಪಕ್ಕದ ಮನೆಯವರು ಬಂದು ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಇನ್ನು ಈ ಹಿಂದೆಯೂ ನೀರಿನ ವಿಚಾರವಾಗಿ ನಿತಾಬೆನ್ ಮತ್ತು ಆರೋಪಿಗಳ ನಡುವೆ ಹಲವು ಬಾರಿ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  ಇದನ್ನೂ ಓದಿ: ಚೀನಾದಲ್ಲಿ 72 ಮಿಲಿಯನ್‌ ವರ್ಷದ ಡೈನೋಸಾರ್ ಭ್ರೂಣ ಪತ್ತೆ

  ಒಟ್ನಲ್ಲಿ ನಾಯಿಗಳಿಗೆ ಪ್ರೀತಿಯಿಂದ ಹೆಸರಿಟ್ಟು ಕರೆದಾಗ ಎಷ್ಟೋ ಬಾರಿ ಅವುಗಳು ಜೀವ ಉಳಿಸಿರುವ ಘಟನೆಗಳು ನಡೆದಿವೆ. ಆದರೆ ಗುಜರಾತಿನಲ್ಲಿ ನಾಯಿಗೆ ಸೋನು ಎಂದು ಹೆಸರಿಟ್ಟಿರುವುದು ಮಹಿಳೆ ಜೀವನ್ಮರಣದ ನಡುವೆ ಹೋರಾಟ ಮಾಡುವಂತೆ ಆಗಿದ್ದು ಮಾತ್ರ ದುರಾದೃಷ್ಟ.
  Published by:ranjumbkgowda1 ranjumbkgowda1
  First published: