VIDEO: ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆಯ ಭರ್ಜರಿ ಡ್ಯಾನ್ಸ್​

2016ರಲ್ಲಿ ಪೊಲೀಸ್ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದ ಅರ್ಪಿತಾ 2018ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾವಣೆ ಆಗಿದ್ದರು. ಇದೀಗ ಡಿವೈಎಸ್ಪಿ ವಿಡಿಯೋ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

news18
Updated:July 26, 2019, 5:01 PM IST
VIDEO: ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆಯ ಭರ್ಜರಿ ಡ್ಯಾನ್ಸ್​
arpita
news18
Updated: July 26, 2019, 5:01 PM IST
ಟಿಕ್​ ಟಾಕ್ ವಿಡಿಯೋ ಹುಚ್ಚಿಗೆ ಜೀವ ಕಳೆದುಕೊಂಡವರ ಬಗ್ಗೆ ಕೇಳಿರುತ್ತೀರಿ. ಹಾಗೆಯೇ ಕೆಲದಿನಗಳ ಹಿಂದೆ  ರೋಗಿಗಳ ಪಾಲನೆ ಮಾಡಬೇಕಾದ ನರ್ಸ್​ಗಳು ಕರ್ತವ್ಯ ಮರೆತು ಆಸ್ಪತ್ರೆಯಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿ ಕುಣಿದು ಕುಪ್ಪಳಿಸಿದನ್ನು ನೋಡುತ್ತೀರಿ. ಇಂತಹ  ಹುಚ್ಚಾಟಕ್ಕೆ ಹೊಸ ಸೇರ್ಪಡೆ ಗುಜರಾತ್ ರಾಜ್ಯದ ಲಂಗ್ನಾಜ್ ಪೊಲೀಸ್ ಠಾಣೆಯ ಮಹಿಳಾ ಪೇದೆ ಅರ್ಪಿತಾ ಚೌಧರಿ.

ಟಿಕ್ ಟಾಕ್ ವಿಡಿಯೋ ಗುಂಗಿಗೆ ಬಿದ್ದಿದ್ದ ಪೇದೆ ಅರ್ಪಿತಾ ಕೆಲ ದಿನಗಳ ಹಿಂದೆ ಸಿವಿಲ್ ಡ್ರೆಸ್​ನಲ್ಲಿ ಲಾಕಪ್ ಪಕ್ಕದಲ್ಲಿ ನಿಂತು ಭರ್ಜರಿ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡಿದ್ದರು. ಪೊಲೀಸ್ ಪೇದೆಯ ವಿಡಿಯೋಗೆ ಲೈಕ್-ಶೇರ್​ಗಳ ಸುರಿಮಳೆ ಆಗುತ್ತಿದ್ದಂತೆ ಅತ್ತ ಕಡೆಯಿಂದ ನೊಟೀಸ್ ಕೂಡ ಬಂದಿತ್ತು.

ವಿಡಿಯೋದಲ್ಲಿ ವೈಯ್ಯಾರ ತೋರಿಸಿದ್ದ ಅರ್ಪಿತಾ ಚೌಧರಿ ವಿಡಿಯೋವನ್ನು ಹಿರಿಯ ಅಧಿಕಾರಿಗಳಿಗೂ ನೋಡಿದ್ದಾರೆ. ಈ ಹಿನ್ನಲೆಯಲ್ಲಿ ಗುಜರಾತ್ ಡಿವೈಎಸ್ಪಿ ಮಂಜಿತಾ ವಂಜಾರ ಅವರು ಮಹಿಳಾ ಪೇದೆಯನ್ನು ಅಮಾನತು ಮಾಡುವಂತೆ ಠಾಣಾಧಿಕಾರಿಗೆ ಆದೇಶ ಹೊರಡಿಸಿದ್ದಾರೆ.




2016ರಲ್ಲಿ ಪೊಲೀಸ್ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದ ಅರ್ಪಿತಾ 2018ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾವಣೆ ಆಗಿದ್ದರು. ಇದೀಗ ಡಿವೈಎಸ್ಪಿ ವಿಡಿಯೋ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ಹೊರಡಿಸಿರುವುದರಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

First published:July 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...