ಆಹಾರ ಕೊಟ್ಟ ಸಾಧ್ವಿಯನ್ನು ನೆನೆಯುತ್ತಾ 5 ಕಿ.ಮೀ ಅಂತಿಮ ಯಾತ್ರೆಯಲ್ಲಿ ನಡೆದ ನಾಯಿ..!

ನಂತರ ಶಿಷ್ಯಂದಿರು ಪಾಲ್ಕಿ ಯಾತ್ರಾ ಪ್ರಾರಂಭಿಸಿದಾಗ ನಾಯಿಯೂ ಸಹ ಅವರೊಟ್ಟಿಗೆ ಹೆಜ್ಜೆ ಹಾಕಿತು. ನಾಯಿ ಹೊರಟಾಗ ಅದು ಸ್ವಲ್ಪ ದೂರ ನಮ್ಮ ಜೊತೆ ಬರುತ್ತದೆ. ನಂತರ ಅದರ ಪಾಡಿಗೆ ಅದು ಹೋಗುತ್ತದೆ ಎಂದೇ ಭಾವಿಸಿದ್ದರು. ಆದರೆ ಆ ನಾಯಿ ಮಾತ್ರ ಶವಾಗಾರದವರೆಗೂ ನಡೆದು ಬಂದಿತು.

ತನ್ನನ್ನು ಸಾಕಿದ ಸಾಧ್ವಿ ಶವಯಾತ್ರೆಯಲ್ಲಿ ನಾಯಿ.

ತನ್ನನ್ನು ಸಾಕಿದ ಸಾಧ್ವಿ ಶವಯಾತ್ರೆಯಲ್ಲಿ ನಾಯಿ.

  • Share this:
ಜಗತ್ತಿನಲ್ಲಿ ನಿಯತ್ತು, ನಿಷ್ಠೆ ಹೆಸರುವಾಸಿಯಾಗಿರುವುದು ಶ್ವಾನ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಮನುಷ್ಯರು ದ್ರೋಹ ಬಗೆಯಬಹುದು. ಆದರೆ ನಾಯಿ ಯಾವುದೇ ಕಾರಣಕ್ಕೂ ದ್ರೋಹ ಬಗೆಯುವುದಿಲ್ಲ ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಹಾಗಾಗಿ ಬಹಳಷ್ಟು ಮಂದಿ ನಾಯಿಯನ್ನು ಸ್ವಂತ ಮಕ್ಕಳಂತೆ ಸಲಹುತ್ತಾರೆ, ಆರೈಕೆ ಮಾಡುತ್ತಾರೆ. ಮನೆಯ ಕಾವಲುಗಾರನಂತೆ ಭಾಸವಾದರೂ ಕೆಲವರು ಮನೆಯ ರಾಜನಂತೆ ನಡೆಸಿಕೊಳ್ಳುತ್ತಾರೆ. ಹೀಗಿರುವಾಗಲೂ ನಾಯಿಯ ನಿಷ್ಠೆ ಪ್ರತಿ ಸಮಯದಲ್ಲೂ ಸಾಬೀತಾಗುತ್ತಲೇ ಹೋಗುತ್ತದೆ. ಇದಕ್ಕೆ ಮತ್ತೊಂದು ತಾಜಾ ನಿದರ್ಶನ ಗುಜರಾತಿನಲ್ಲಿ ನಡೆದ ಈ ಘಟನೆ.

ಸುಮಾರು 100 ವರ್ಷದ ಜೈನ ಸಾಧ್ವಿಯೊಬ್ಬರು ಗುಜರಾತಿನ ಸೂರತ್‍ನ ವೇಸು ಎಂಬ ಪ್ರದೇಶದಲ್ಲಿ ದೈವಾಧೀನರಾದರು. ಇವರ ಅಂತಿಮ ವಿದಾಯದ ಮುನ್ನ ಸುಮಾರು 5 ಕಿ.ಮೀ ಪಾಲ್ಕಿ ಯಾತ್ರೆ ನಡೆಸಲಾಯಿತು. ನಾಯಿ ಕೂಡ ಜನರೊಟ್ಟಿಗೆ ಈ 5 ಕಿ.ಮೀ ದೂರದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಉಮಾರಾ ಎಂಬ ಶವಾಗಾರ ತಲುಪಿದೆ. ಎಲ್ಲಾ ಕ್ರಿಯಾವಿಧಿ ವಿಧಾನಗಳು ಮುಗಿದ ಬಳಿಕ ಶಿಷ್ಯಂದಿರು ಆ ನಾಯಿಯನ್ನು ಕಾರಿನಲ್ಲಿ ಎತ್ತಿಕೊಂಡು ಹೋಗಿ ವೇಸುವಿನಲ್ಲಿ ಬಿಟ್ಟರು.

ಕಾಲೈಕ್ಯರಾದ ಪಿಯೂಷ್ ವರ್ಷಾ ಸಾಧ್ವಿ ಮಹಾರಾಜರು ವೇಸುವಿನ ರಾಮೇಶ್ವರಂ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದರು. ವೆಸು ಪ್ರದೇಶದಲ್ಲಿ ಈ ನಾಯಿ ಸುತ್ತಾಡುತ್ತಿತ್ತು. ಅವರು ಕೆಲವು ವರ್ಷಗಳ ಹಿಂದೆಯಷ್ಟೇ ವೆಸುವಿಗೆ ಸ್ಥಳಾಂತರಗೊಂಡಿದ್ದರು. ಇವರು ಅಲ್ಲಲ್ಲಿ ಸುತ್ತಾಡಿಕೊಂಡಿದ್ದ ಈ ನಾಯಿಗೆ ಆಗಾಗ್ಗೆ ಆಹಾರವನ್ನು ನೀಡುತ್ತಿದ್ದರು. ಸಾಧ್ವಿ ನಿಧನರಾದಾಗ, ಕೆಲವು ಸ್ಥಳೀಯರು ಮತ್ತು ಅವರ ಶಿಷ್ಯರು ಕೊನೆಯ ವಿಧಿಗಳಿಗೆ ತಯಾರಿ ಮಾಡಿಕೊಂಡರು.

ನಂತರ ಶಿಷ್ಯಂದಿರು ಪಾಲ್ಕಿ ಯಾತ್ರಾ ಪ್ರಾರಂಭಿಸಿದಾಗ ನಾಯಿಯೂ ಸಹ ಅವರೊಟ್ಟಿಗೆ ಹೆಜ್ಜೆ ಹಾಕಿತು. ನಾಯಿ ಹೊರಟಾಗ ಅದು ಸ್ವಲ್ಪ ದೂರ ನಮ್ಮ ಜೊತೆ ಬರುತ್ತದೆ. ನಂತರ ಅದರ ಪಾಡಿಗೆ ಅದು ಹೋಗುತ್ತದೆ ಎಂದೇ ಭಾವಿಸಿದ್ದರು. ಆದರೆ ಆ ನಾಯಿ ಮಾತ್ರ ಶವಾಗಾರದವರೆಗೂ ನಡೆದು ಬಂದಿತು. ಇದನ್ನು ಕಂಡು ಅಲ್ಲಿ ನೆರೆದಿದ್ದ ಜನ ಆಶ್ಚರ್ಯ ಚಕಿತರಾದರು.

ಇದನ್ನೂ ಓದಿ: ಮುಂಬೈನಲ್ಲಿ ವೃದ್ಧರು, ದಿವ್ಯಾಂಗ ನಾಗರಿಕರಿಗಾಗಿ ಡ್ರೈವ್-ಇನ್ ಲಸಿಕೆ ಕೇಂದ್ರ: ಆನಂದ್ ಮಹೀಂದ್ರಾ ಅವರಿಂದ ಪ್ರಶಂಸೆ

ಯಾತ್ರೆಯು ಉಮ್ರಾ ಶವಾಗಾರವನ್ನು ತಲುಪುವವರೆಗೆ ಸಾಧ್ವಿಯ ಮೃತ ದೇಹದ ಯಾತ್ರೆಯ ಜೊತೆಯೇ ನಡೆದು ಬಂದಿತು. ಸಾಧ್ವಿಯ ಮೃತದೇಹವನ್ನು ಅಗ್ನಿ ಸ್ಪರ್ಶ ಮಾಡುವಾಗಲೂ, ನಾಯಿ ಅಲ್ಲಿಂದ ಕದಲಲಿಲ್ಲ. ಅಲ್ಲಿಯೇ ನಿಂತಿತ್ತು. ಅದು ಮುಗಿಯುವವರೆಗೂ ಎಲ್ಲವನ್ನೂ ನೋಡುತ್ತಿತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ನಂತರ ಇದೆಲ್ಲಾ ಮುಗಿದ ಬಳಿಕ ಕಾರಿನಲ್ಲಿ ಕರೆದುಕೊಂಡು ಅದು ಮೊದಲು ವಾಸವಿದ್ದ ವೇಸು ಪ್ರದೇಶಕ್ಕೆ ತಂದು ಬಿಡಲಾಯಿತು ಎಂದು ಹೇಳಿದರು.

ಹೀಗೆ ಮನುಷ್ಯ ಕೇಡು ಬಗೆಯಬಹುದು. ಆದರೆ ನಾಯಿ ಎಂದಿಗೂ ಉಂಡ ಮನೆಗೆ ಕೇಡು ಬಗೆಯುವುದಿಲ್ಲ. ಪ್ರೀತಿ ಹಂಚಿದಷ್ಟು ಜೊತೆಯಲ್ಲಿದ್ದಷ್ಟು ಪ್ರಾಮಾಣಿಕವಾಗಿರುವ ನಾಯಿ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿಯಾಗಿ ಉಳಿದುಕೊಂಡಿದೆ. ಎಷ್ಟೋ ಪ್ರದೇಶಗಳಲ್ಲಿ ಜನರ ಪ್ರಾಣ ಉಳಿಸಿವೆ ನಾಯಿಗಳು. ಕಳ್ಳ ಕಾಕರನ್ನು ಓಡಿಸಿ ಮನೆಯನ್ನು ಸುರಕ್ಷಿತವಾಗಿರಿಸಿದೆ. ಹಾಗಾಗಿ ಮನೆಯಲ್ಲಿ ಮನುಷ್ಯರನ್ನು ಸಾಕುವುದಕ್ಕಿಂತ ನಾಯಿಯನ್ನು ಸಾಕಿದರೆ ಎಷ್ಟೋ ಮೇಲು ಎಂದು ಜನರು ನುಡಿಯುತ್ತಾರೆ.
Published by:MAshok Kumar
First published: