ಕೈದಿಗಳ ಎದುರೇ ಟಿಕ್​ಟಾಕ್ ಮಾಡಿ ಸಸ್ಪೆಂಡ್ ಆದ ಲೇಡಿ ಪೊಲೀಸ್ ಈಗ ದೊಡ್ಡ ಸೆಲೆಬ್ರಿಟಿ!

ಕೆಲಸ ಕಳೆದುಕೊಂಡು ಅವಮಾನಕ್ಕೆ ಒಳಗಾದ ಅಲ್ಪಿತಾ ದೃತಿಗೆಡಲಿಲ್ಲ. ಟಿಕ್​ಟಾಕ್​ನಲ್ಲಿ ಅವರು ಮತ್ತಷ್ಟು ಆ್ಯಕ್ಟಿವ್​ ಆದರು. ಇದರಿಂದ ಒಂದೆರಡು ಆಲ್ಬಮ್​ ಸಾಂಗ್​ನಲ್ಲಿ ನಟಿಸಲು ಅವರಿಗೆ ಅವಕಾಶ ಒಲಿದು ಬಂತು.

Rajesh Duggumane | news18-kannada
Updated:March 10, 2020, 1:01 PM IST
ಕೈದಿಗಳ ಎದುರೇ ಟಿಕ್​ಟಾಕ್ ಮಾಡಿ ಸಸ್ಪೆಂಡ್ ಆದ ಲೇಡಿ ಪೊಲೀಸ್ ಈಗ ದೊಡ್ಡ ಸೆಲೆಬ್ರಿಟಿ!
ಅಲ್ಪಿತಾ ಚೌಧರಿ
  • Share this:
ಅವರು ದಕ್ಷ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​. ಆದರೆ, ಪೊಲೀಸ್​ ಠಾಣೆಯಲ್ಲೇ ಟಿಕ್​ಟಾಕ್​ ವಿಡಿಯೋ ಮಾಡಿದ್ದಕ್ಕೆ ಅವರನ್ನು ಅಮಾನತು ಮಾಡಲಾಗಿತ್ತು. ಹೀಗೆ ಸಸ್ಪೆಂಡ್​ ಆದ ಲೇಡಿ ಪೊಲೀಸ್​ ಈಗ ಗುಜರಾತ್​ನ ದೊಡ್ಡ ಸೆಲೆಬ್ರಿಟಿ!

ಅಲ್ಪಿತಾ ಚೌಧರಿ ಅಮಾನತುಗೊಂಡಿದ್ದ ಪೊಲೀಸ್​ ಕಾನ್ಸ್​ಟೇಬಲ್​. 2016ರಲ್ಲಿ ಅವರು ಲೋಕ​ ರಕ್ಷಕ ದಳಕ್ಕೆ ಸೇರ್ಪಡೆಯಾಗಿದ್ದರು. ಮೆಹ್ಸಾನ ಜಿಲ್ಲೆಯ ಲನ್​ಗಂಜ್​ನ ಪೊಲೀಸ್​ ಠಾಣೆಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಒಂದು ದಿನ ಪೊಲೀಸ್ ಠಾಣೆಯಲ್ಲಿ ಮೇಲಧಿಕಾರಿಗಳು ಇಲ್ಲದ ವೇಳೆ ಲಾಕಪ್​ ಒಳಗೆ ತೆರಳಿ ಟಿಕ್​ ಟಾಕ್​ ವಿಡಿಯೋ ಮಾಡಿದ್ದರು.

ಈ ಲಾಕಪ್​ ವಿಡಿಯೋ ಕೆಲವೇ ದಿನಗಳಲ್ಲಿ ಭಾರೀ ವೈರಲ್​ ಆಗಿತ್ತು. ಲಾಕಪ್​ ಒಳಗೆ ತೆರಳಿ ಪೊಲೀಸ್​ ಕಾನ್ಸ್​ಟೇಬಲ್​ ಡ್ಯಾನ್ಸ್​ ಮಾಡಿರುವ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಮೇಲಧಿಕಾರಿಗಳು ಅಲ್ಪಿತಾರನ್ನು ಒಂದು ತಿಂಗಳ ಕಾಲ ಸಸ್ಪೆಂಡ್​ ಮಾಡಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ; ರೈಲಿಗೆ ಡಿಕ್ಕಿ: ನುಜ್ಜುಗುಜ್ಜಾದ ಕಾರು; ಅದೃಷ್ಟವಶಾತ್ ಬದುಕಿದ ಚಾಲಕ; ವಿಡಿಯೋ ವೈರಲ್

ಕೆಲಸ ಕಳೆದುಕೊಂಡು ಅವಮಾನಕ್ಕೆ ಒಳಗಾದ ಅಲ್ಪಿತಾ ದೃತಿಗೆಡಲಿಲ್ಲ. ಟಿಕ್​ಟಾಕ್​ನಲ್ಲಿ ಅವರು ಮತ್ತಷ್ಟು ಆ್ಯಕ್ಟಿವ್​ ಆದರು. ಇದರಿಂದ ಒಂದೆರಡು ಆಲ್ಬಮ್​ ಸಾಂಗ್​ನಲ್ಲಿ ನಟಿಸಲು ಅವರಿಗೆ ಅವಕಾಶ ಒಲಿದು ಬಂತು. ಇತ್ತೀಚೆಗೆ ತೆರೆಕಂಡ ಗುಜರಾತಿ ಆಲ್ಬಮ್​ ಸಾಂಗ್​, ‘ಕಚಿ ಕೇರಿ ಪಕಿ ಕೇರಿ’ ಸಾಂಗ್​ನಲ್ಲಿ ಬಣ್ಣ ಹಚ್ಚಿದ್ದು, ಈ ಹಾಡು ಸಾಕಷ್ಟು ವೈರಲ್​ ಆಗಿದೆ.

ಸಿನಿಮಾದಲ್ಲೂ ಆಫರ್​!:

ಅಲ್ಪಿತಾ ಟಿಕ್​ಟಾಕ್​ ವಿಡಿಯೋ ಹಾಗೂ ಆಲ್ಬಮ್​ ಸಾಂಗ್​ಗಳನ್ನು ನೋಡಿ ಅನೇಕ ಗುಜರಾತಿ ನಿರ್ದೇಶಕರು ಸಿನಿಮಾದಲ್ಲಿ ನಟಿಸುವ ಆಫರ್​ ನೀಡುತ್ತಿದ್ದಾರಂತೆ. ಈಗ ಅವರು ಕೆಲಸಕ್ಕೆ ವಾಪಾಸಾಗಿದ್ದು, ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.ಜನರು ಸೆಲ್ಫಿ ಕೇಳುತ್ತಾರೆ!:

ಅಲ್ಪಿತಾ ಈಗ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ. ಎಂದಿನಂತೆ ಕಚೇರಿಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್​ ಕೆಲಸದ ನಿಮಿತ್ತ ಹೊರಗೆ ತೆರಳಿದರೆ ಸಾರ್ವಜನಿಕರು ಸೆಲ್ಫಿಗೆ ಮುಗಿಬೀಳುತ್ತಾರಂತೆ! ಇದು ಅವರಿಗೆ ಸಾಕಷ್ಟು ಖುಷಿ ನೀಡಿದೆಯಂತೆ.
First published: March 10, 2020, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading