Election: ಈ ಅಭ್ಯರ್ಥಿಯ ಮನೆಯಲ್ಲಿ 12 ಜನ ಇದ್ದಾರೆ, ಆದ್ರೆ ಚುನಾವಣೆಯಲ್ಲಿ ಬಿದ್ದಿದ್ದು ಮಾತ್ರ ಒಂದೇ ಮತ - ಅದೂ ಅವ್ರದ್ದೇ!

ಗ್ರಾಮಸ್ಥರು ತಮಗೆ ಮತ ಹಾಕದಿರುವ ಬಗ್ಗೆ ತಮಗೆ ಅಭ್ಯಂತರವಿಲ್ಲ, ಆದರೆ ಅವರ ಕುಟುಂಬದ ಒಬ್ಬ ಸದಸ್ಯನು ತಮ್ಮ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಲಿಲ್ಲವಲ್ಲ ಎಂಬುದಕ್ಕೆ ನನಗೆ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಮ್ಮೆ ಯಾರು ನಮ್ಮವರು ಎಂದು ನಿಜವಾಗಿ ತಿಳಿದುಕೊಳ್ಳಲು ನಾವು ಕೆಲವು ಜೀವನದ ಪರೀಕ್ಷೆಗಳನ್ನು( Life Tests) ತೆಗೆದುಕೊಳ್ಳಲೇ ಬೇಕಾಗುತ್ತದೆ, ಆಗಲೇ ನಮಗೆ ಸತ್ಯದ ದರ್ಶನ ಆಗುತ್ತದೆ ಮತ್ತು ನಮ್ಮನ್ನು ನಿಜವಾಗಿ(Truth) ಇಷ್ಟ ಪಡುವವರು ಎಷ್ಟು ಜನರಿದ್ದಾರೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆ ಸತ್ಯ ಕೆಲವೊಮ್ಮೆ ಕಹಿಯಾಗಿದ್ದರೂ(Bitter) ಅದು ನಮಗೆ ಜೀವನದ ( Life lesson) ಪಾಠವೊಂದನ್ನು ಕಲಿಸುತ್ತದೆ(Teaches) ಎಂದರೆ ತಪ್ಪಾಗುವುದಿಲ್ಲ.ಇದೇ ರೀತಿಯ ಪಾಠವೊಂದನ್ನು ಗುಜುರಾತಿನಲ್ಲಿರುವ ಒಬ್ಬ(Gujarat man) ವ್ಯಕ್ತಿ ಕಲಿತುಕೊಂಡಿದ್ದಾರೆ.

ಚಾವ್ಲಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ
ಏನಪ್ಪಾ ಅದು ಅಂತೀರಾ? ಇತ್ತೀಚೆಗೆ ನಡೆದಂತಹ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗುಜರಾತಿನ ವ್ಯಕ್ತಿ ಪಡೆದ ಮತಗಳನ್ನು ಎಣಿಸಿದಾಗ ಭಾರಿ ಆಘಾತಕ್ಕೊಳಗಾಗಿದ್ದಾರೆ. ವರದಿಗಳ ಪ್ರಕಾರ, ಗುಜರಾತಿನ ವಾಪಿ ಜಿಲ್ಲೆಯಲ್ಲಿ ಇರುವ ಚಾವ್ಲಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹುದ್ದೆಗೆ ಸಂತೋಷ್ ಅಭ್ಯರ್ಥಿಯಾಗಿದ್ದರು.

ಇದನ್ನೂ ಓದಿ: ಕೊನೆವರೆಗೂ ಪತ್ತೆ ಆಗಲೇ ಇಲ್ಲ ಒಂದು ಮತ: ಬಾಕ್ಸ್ ಜಾಲಾಡಿದ್ರೂ ಸಿಗಲಿಲ್ಲ

12 ಕುಟುಂಬ ಸದಸ್ಯರು
ಇವರು ಚುನಾವಣೆಯಲ್ಲಿ ಪಡೆದ ಮತಗಳನ್ನು ನಿಮಗೆ ಹೇಳುವ ಮೊದಲು ನಾವು ನಿಮಗೆ ಅವರ ಮನೆಯಲ್ಲಿ ಎಷ್ಟು ಜನರು ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ ಎಂದು ಹೇಳುತ್ತೇವೆ ಕೇಳಿ. ಆ ವ್ಯಕ್ತಿಯು ಮತ ಚಲಾಯಿಸಲು ಅರ್ಹರಾದ 12 ಕುಟುಂಬ ಸದಸ್ಯರನ್ನು ಹೊಂದಿದ್ದನು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಅಂದರೆ ಈ ವ್ಯಕ್ತಿಗೆ ಕನಿಷ್ಠವಾಗಿ 12 ಮತಗಳಾದರೂ ಬಿದ್ದಿರಬೇಕು ಎಂದು ನಾವು ನೀವೆಲ್ಲಾ ಸುಲಭವಾಗಿ ಊಹಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಊಹೆ ತಲೆ ಕೆಳಗಾಗುವುದು ಸಹಜ, ಇಲ್ಲೂ ಅದೇ ರೀತಿ ಆಗಿದೆ ನೋಡಿ.

ಫಲಿತಾಂಶ ನಂತರ ಆಶ್ಚರ್ಯ
ಈ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ನಂತರ, ಫಲಿತಾಂಶ ಘೋಷಣೆ ಮಾಡುವಾಗ ಅವರು ಪಡೆದಿದ್ದು ಕೇವಲ ಒಂದು ಮತ ಮಾತ್ರ ಎಂದು ತಿಳಿದು ಸಂತೋಷ್ ತುಂಬಾನೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಂತೋಷ್ ಕನಿಷ್ಠ ತನ್ನ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಅವನನ್ನು ಬೆಂಬಲಿಸುತ್ತಾರೆ ಎಂದು ನಿರೀಕ್ಷಿಸಿದ್ದರು ಎಂದು ಹೇಳಲಾಗುತ್ತಿದೆ.

ಈ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಗ್ರಾಮಸ್ಥರು ತಮಗೆ ಮತ ಹಾಕದಿರುವ ಬಗ್ಗೆ ತಮಗೆ ಅಭ್ಯಂತರವಿಲ್ಲ, ಆದರೆ ಅವರ ಕುಟುಂಬದ ಒಬ್ಬ ಸದಸ್ಯನು ತಮ್ಮ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಲಿಲ್ಲವಲ್ಲ ಎಂಬುದಕ್ಕೆ ನನಗೆ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರು.

ಅಸಮಾಧಾನಗೊಂಡ ಅಭ್ಯರ್ಥಿ
ಅವರ ಮನೆಯಲ್ಲಿದ್ದ 12 ಜನರಲ್ಲಿ ಯಾರೂ ಈ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲಿಲ್ಲ. ಸಂತೋಷ್ ಪಡೆದ ಒಂದು ಮತ ಅವರದೇ ಆಗಿತ್ತು. ಫಲಿತಾಂಶಗಳು ಹೊರ ಬಂದ ನಂತರ, ಅದನ್ನು ಕೇಳಿ ಅವರು ತುಂಬಾ ಅಸಮಾಧಾನಗೊಂಡರು ಎಂದು ಹೇಳಲಾಗುತ್ತಿದೆ.

 ಇದನ್ನೂ ಓದಿ: Illegal Immigrant: ಅಸ್ಸಾಂನಲ್ಲಿ 20 ವರ್ಷಗಳಿಂದ ಮತ ಚಲಾಯಿಸುತ್ತಿದ್ದ ವಿದೇಶಿಗ; ಸಿಕ್ಕಿಬಿದ್ದಿದ್ದು ಹೇಗೆ?

ಈ ವರ್ಷ 8,686 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, 48,573 ವಾರ್ಡ್‌ಗಳಿದ್ದವು, ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಗಳಿಗೆ ಸುಮಾರು 27,200 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸುಮಾರು 37,000 ಮತದಾನ ಪೆಟ್ಟಿಗೆಗಳನ್ನು ಮತದಾನಕ್ಕಾಗಿ ನಿಯೋಜಿಸಲಾಗಿತ್ತು ಮತ್ತು ಸುಮಾರು 1,19,998 ಅಭ್ಯರ್ಥಿಗಳು ಪಂಚಾಯಿತಿ ಸದಸ್ಯರಾಗಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಹೇಳಲಾಗುತ್ತಿದೆ.ಇತರೆ ಘಟನೆ
ನಮ್ಮ ದೇಶದ ಚುನಾವಣಾ ಆಯೋಗದ ಪ್ರಕಾರ ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು. ಆದರೆ ಇದೇ ವಯಸ್ಸಿನ ಆರುಷಿ ಸಿಂಗ್ ಎಂಬುವವರು ಗ್ರಾಮ ಸಭಾಗೆ ಆಯ್ಕೆಯಾಗಿದ್ದಾರೆ. ಇವರು ಉತ್ತರಪ್ರದೇಶದ ಗೋಂಡಾ ಜಿಲ್ಲೆಯ ವಾಜೀರ್‌ ಘರ್‌ನ ಸೆಹೆರಿಯಾ ಎಂಬ ಗ್ರಾಮಕ್ಕೆ ಚುನಾಯಿತರಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ಸಿಂಗ್ ಎಂಬುವರು ಮಾಹಿತಿ ನೀಡಿದ್ದಾರೆ. ಆರುಷಿ ಸಿಂಗ್ ಸುಮಾರು 384 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಎದುರು ಜಯಶಾಲಿಯಾಗಿ ಗ್ರಾಮ ಸಭಾಗೆ ಪ್ರಧಾನ್‍ಗೆ ಆಯ್ಕೆಯಾದಾಗ ಕಂಡ ಕನಸು ನನಸಾದಂತಾಗಿ ಖುಷಿ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಇನ್ನು ಸೆಹೆರಿಯಾ ಗ್ರಾಮವನ್ನು ಸ್ಮಾರ್ಟ್ ಗ್ರಾಮವಾಗಿ ಮಾಡುವ, ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವ, ಉತ್ತಮ ಸಾರ್ವಜನಿಕ ಸೇವೆ ಒದಗಿಸುವುದು ನನ್ನ ಕರ್ತವ್ಯ ಎಂದು ಹೇಳುತ್ತಾರೆ ಆರುಷಿ. ಇವರು ಲಖನೌ ವಿಶ್ವವಿದ್ಯಾಲಯದ ಸಿಟಿ ಲಾ ಕಾಲೇಜಿನಲ್ಲಿ ಎಲ್‍ಎಲ್‍ಬಿ ಓದುತ್ತಿದ್ದಾರೆ. ಈ ಕಾಲೇಜು ಅವರ ಊರಿನಿಂದ 50 ಕಿ.ಮೀ ದೂರದಲ್ಲಿದೆ. ಲಾ ಮುಗಿದ ಮೇಲೆ ಪ್ರಾವಿನ್ಶಿಯಲ್ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವ ಆಕಾಂಕ್ಷೆ ಹೊಂದಿದ್ದಾರೆ.
Published by:vanithasanjevani vanithasanjevani
First published: