ಸೆಕ್ಸ್​ ಮಾಡುವಾಗ ಕಾಂಡೋಮ್ ಬದಲಿಗೆ ಗಮ್ ಹಚ್ಚಿ ಪ್ರಾಣವನ್ನೇ ಕಳೆದುಕೊಂಡ..!

ಆತನ ಪರಿಚಯಸ್ಥರ ಪ್ರಕಾರ, ಸಲ್ಮಾನ್ ಮತ್ತು ಆತನ ಮಾಜಿ ಭಾವಿಪತ್ನಿ ಇಬ್ಬರು ನಿರ್ದಿಷ್ಟ ಮಾದಕ ವ್ಯಸನಿಯಾಗಿದ್ದರು ಮತ್ತು ಕಾಂಡೋಮ್ ಬದಲಿಗೆ ಅಂಟನ್ನು (ಎಪೋಕ್ಸಿ ಅಡೆಸಿವ್) ಬಳಸಲು ನಿರ್ಧರಿಸಿದಾಗ ಅವರು ಅಮಲಿನಲ್ಲಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಲೈಂಗಿಕ ಕ್ರಿಯೆ ನಡೆಸಲು ಕಾಂಡೋಮ್ ಬದಲು ಎಪೋಕ್ಸಿ ಅಡೆಸಿವ್ ಎಂಬ ಗಮ್ (ಅಂಟು) ರೂಪದ ಪದಾರ್ಥ ಬಳಸಿ ಮೃತಪಟ್ಟಿರುವ ಆಶ್ಚರ್ಯಕರವಾದ ಘಟನೆ ಗುಜರಾತಿನಲ್ಲಿ ಜೂನ್ 22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮೃತ ವ್ಯಕ್ತಿಯನ್ನು ಸಲ್ಮಾನ್ ಮಿರ್ಜಾ ಎಂದು ತಿಳಿದು ಬಂದಿದೆ. ಈತ ಮೂಲತಃ ಅಹಮದಾಬಾದ್‍ನ ಫತೇವಾದಿ ಪ್ರದೇದವರೆಂದು ತಿಳಿದು ಬಂದಿದೆ.


ಸಲ್ಮಾನ್ ತನ್ನ ಮಾಜಿ ಪ್ರಿಯತಮೆಯೊಂದಿಗೆ ಹೋಟೆಲ್‍ಗೆ ಹೋಗಿದ್ದರು. ಇವರಿಬ್ಬರು ಲೈಂಗಿಕ ಕ್ರಿಯೆ ನಡೆಸಲು ಇಚ್ಛಿಸಿದ್ದಾರೆ. ಆದರೆ ಕಾಂಡೋಮ್ ಇಲ್ಲದ ಕಾರಣ ಸಲ್ಮಾನ್ ಖಾಸಗಿ ಅಂಗಕ್ಕೆ ಎಪೋಕ್ಸಿ ಅಡೆಸಿವ್ ಎಂಬ ಗಮ್ ರೂಪದ ವಸ್ತು ಹಚ್ಚಿದ್ದಾನೆ. ಗರ್ಭಾವತಿಯಾಗಬಾರದೆಂಬ ಕಾರಣಕ್ಕೆ ಎಚ್ಚರವಹಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಇದೇ ಸಲ್ಮಾನ್‍ನ ಪ್ರಾಣ ತೆಗೆದಿದೆ.


ಸಲ್ಮಾನ್ ಜುಹಾಪುರದ ಹೋಟೆಲ್ ಬಳಿ ಪೊದೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು. ಆತನ ಸ್ನೇಹಿತ ಫಿರೋಜ್ ಶೇಖ್ ಆತನನ್ನು ಕಂಡು ಮನೆಗೆ ಕರೆತಂದನು. ಇದರ ನಂತರ, ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಈತನ ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರುವವರೆಗೆ ಕಾಯುತ್ತಿದ್ದೇವೆ ಎಂದು ಡಿಸಿಪಿ ಪ್ರೇಮ್‍ಸುಖ್ ದೇಲು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.


ಆತನ ಪರಿಚಯಸ್ಥರ ಪ್ರಕಾರ, ಸಲ್ಮಾನ್ ಮತ್ತು ಆತನ ಮಾಜಿ ಭಾವಿಪತ್ನಿ ಇಬ್ಬರು ನಿರ್ದಿಷ್ಟ ಮಾದಕ ವ್ಯಸನಿಯಾಗಿದ್ದರು ಮತ್ತು ಕಾಂಡೋಮ್ ಬದಲಿಗೆ ಅಂಟನ್ನು (ಎಪೋಕ್ಸಿ ಅಡೆಸಿವ್) ಬಳಸಲು ನಿರ್ಧರಿಸಿದಾಗ ಅವರು ಅಮಲಿನಲ್ಲಿದ್ದರು.


ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ, "ಅವರು ಒಂದು ವೈಟ್ನರ್ ಮತ್ತು ಅಂಟನ್ನು ಒಳಗೊಂಡಿರುವ ಮಾದಕದ್ರವ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು, ಇದನ್ನು ಕಿಕ್ ಪಡೆಯಲು ಬಳಸುತ್ತಿದ್ದರು. ಅಲ್ಲದೇ ಗರ್ಭಧಾರಣೆ ತಪ್ಪಿಸಲು ಅವರು ಖಾಸಗಿ ಅಂಗಕ್ಕೆ ಅಂಟನ್ನು ಬಳಸಿದರು. ದುರದೃಷ್ಟವಶಾತ್ ಸಲ್ಮಾನ್ ಅಂಗಗಳು ಹಾನಿಗೊಳಗಾಯಿತು ಮತ್ತು ಅವರು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದರು.


ನಾವು ಹೋಟೆಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡಿದ್ದೇವೆ ಮತ್ತು ಸಲ್ಮಾನ್ ತನ್ನ ಮಾಜಿ ಭಾವಿಪತ್ನಿಯೊಂದಿಗೆ ಹೋಟೆಲ್ ಒಳಗೆ ಪ್ರವೇಶಿಸುವುದನ್ನು ನೋಡಿದ್ದೇವೆ ಎಂದು ತಿಳಿಸಿದರು.


ಸಲ್ಮಾನ್ ಅವರು ಮನೆಗೆ ಒಬ್ಬನೇ ಮಗ. ಅವರೇ ಮನೆಯನ್ನು ನಿರ್ವಹಿಸುತ್ತಿದ್ದರು. ಇವರಿಗೆ ವಯಸ್ಸಾದ ಪೋಷಕರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಸಲ್ಮಾನ್ ಸಂಬಂಧಿ ಸಾಯಿರಾಬಾನು ಮಿರ್ಜಾ ಜೂನ್ 25ರಂದು ವೆಜಲ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಲ್ಮಾನ್ ಸ್ನೇಹಿತರ ಪ್ರಕಾರ, ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ಮಾದಕ ದ್ರವ್ಯಗಳನ್ನು ಅತಿಯಾಗಿ ಸೇವಿಸುತ್ತಿದ್ದರು. ಈ ಕಾರಣದಿಂದಾಗಿ ಪ್ರಜ್ಞೆ ಕಳೆದುಕೊಂಡಿರಬಹುದು ಮತ್ತು ಎಪಾಕ್ಸಿ ಅಂಟನ್ನು ಬಳಸಿರುವುದು ಸಲ್ಮಾನ್ ಸಾವಿಗೆ ಕಾರಣವಾಗಿರಬಹುದು ಎಂದು ಹೇಳುತ್ತಾರೆ.


Published by:Latha CG
First published: