Viral Video: ಪ್ಯಾರಾಸೈಲಿಂಗ್ ಮಾಡುವಾಗ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ; ವೈರಲ್ ವಿಡಿಯೋ ನೋಡಿ

ನಂತರ ಪ್ಯಾರಾಸೈಲಿಂಗ್ ಸೇವೆಯನ್ನು ನಡೆಸುತ್ತಿರುವ ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕಂಪನಿಯ ಲೈಫ್ ಗಾರ್ಡ್‌ಗಳು ದಂಪತಿಗಳನ್ನು ರಕ್ಷಿಸಿದರು.

ಹಗ್ಗ ತುಂಡಾಗಿರುವ ದೃಶ್ಯ

ಹಗ್ಗ ತುಂಡಾಗಿರುವ ದೃಶ್ಯ

  • Share this:
ಕೆಲವೊಮ್ಮೆ ನಾವು ಯಾವುದೋ ಊರಿಗೆ ಪ್ರವಾಸ(Tour)ಕ್ಕೆಂದು ಹೋದಾಗ ಅಲ್ಲಿನ ಸಾಹಸಮಯ ಆಟಗಳನ್ನು ನೋಡಿ ಆಡಲು ಬಯಸುತ್ತೇವೆ. ಆದರೆ ಮೋಜಿಗಾಗಿ ಈ ಆಟಗಳನ್ನು ಆಡುವ ಮೊದಲು ಅಗತ್ಯ ಜಾಗರೂಕತೆಗಳನ್ನು ಅಳವಡಿಸುವುದು ಒಳ್ಳೆಯದು. ಏಕೆಂದರೆಈ ರೀತಿಯ ಸಾಹಸಮಯ ಆಟ(Games)ಗಳನ್ನು ಆಡಿ ಅನೇಕ ಜನರು ಸಂಕಷ್ಟಕ್ಕೆ ಸಿಲುಕುವುದನ್ನು ನಾವು ಅನೇಕ ಬಾರಿ ಟಿವಿ(TV)ಯಲ್ಲಿ ನೋಡಿರುತ್ತೇವೆ ಹಾಗೂ ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಕೂಡ ವೈರಲ್(Viral) ಆದ ವಿಡಿಯೋ(Video)ಗಳಲ್ಲಿ ನೋಡಿರುತ್ತೇವೆ.

ಇಲ್ಲಿಯೂ ಸಹ ಅಂತಹದ್ದೇ ಒಂದು ಘಟನೆ ನಡೆದಿದ್ದು, ಪ್ಯಾರಾಸೈಲಿಂಗ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ ದಂಪತಿಗಳ ಪರಿಸ್ಥಿತಿ ನೋಡಿದರೆ ಒಮ್ಮೆ ಮೈ ಝುಮ್ ಎನ್ನುತ್ತದೆ. ಹೌದು ಇವರು ಹೇಗೆ ಅಪಾಯ ಸಿಲುಕಿದರು ನಡೆದದ್ದಾರೂ ಏನು ಎಂಬುದನ್ನು ವಿವರಿಸುವ ವಿಡಿಯೋವನ್ನು ದೊರಕಿದ್ದು ಪ್ಯಾರಾಸೈಲಿಂಗ್ ಮಾಡುವಾಗ ಏನಾಯಿತು ಎಂಬುದನ್ನು ನಾವು ವೀಕ್ಷಿಸಬಹುದಾಗಿದೆ.

ಪ್ಯಾರಾಸೈಲಿಂಗ್ ಮಾಡುವಾಗ ಏನಾಯ್ತು?

ದಂಪತಿಗಳು ಪ್ಯಾರಾಸೈಲಿಂಗ್ ಮಾಡುವಾಗ ಇವರ ಪ್ಯಾರಾಚೂಟ್ ನ ಹಗ್ಗವು ಇದ್ದಕ್ಕಿದ್ದಂತೆ ಕತ್ತರಿಸಿಕೊಂಡಿದೆ ನಂತರ ದಂಪತಿಗಳ ಪ್ಯಾರಾಸೈಲಿಂಗ್ ಸವಾರಿ ದುಃಸ್ವಪ್ನವಾಗಿ ಬದಲಾಯಿತು ಎಂದೇ ಹೇಳಬಹುದು. ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಧ್ಯ ಗಾಳಿಯಲ್ಲಿ ಸಂಭವಿಸಿದಂತಹ ಅಪಘಾತವನ್ನು ಸೆರೆಹಿಡಿಯಲಾಗಿದೆ.

ಇದನ್ನೂ ಓದಿ: Secret Photos of China: ಜಿರಳೆಗಳನ್ನು ಸಾಕ್ತಾರೆ, ಶವಗಳನ್ನು ಕದೀತಾರೆ; ಚೀನಾದ 10 ರಹಸ್ಯ ಫೋಟೋಗಳು ಇಲ್ಲಿವೆ

ದಿಯುಗೆ ಪ್ರವಾಸ ಹೋಗಿದ್ದ ದಂಪತಿ

ಮೂಲತಃ ಜುನಾಗಢದವರಾದ ಈ ದಂಪತಿಗಳು ಪ್ಯಾರಾಸೈಲಿಂಗ್ ಸವಾರಿ ಮಾಡಲು ಭಾನುವಾರ ದಿಯುಗೆ ಹೋಗಿದ್ದರು. ಜೀವಮಾನದಲ್ಲಿ ಒಮ್ಮೆಯೂ ಅನುಭವಿಸಿದ ಒಂದು ಸಾಹಸಮಯ ಅನುಭವದ ಬಗ್ಗೆ ಅವರು ತುಂಬಾನೇ ಉತ್ಸುಕರಾಗಿದ್ದರು. ಆದಾಗ್ಯೂ, ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತ ಅಜಿತ್ ಕಾಥಡ್ ಮತ್ತು ಅವರ ಪತ್ನಿ ಸರಳಾ ಅವರು ಅನುಭವಿಸಿದ್ದು ದುಃಸ್ವಪ್ನಕ್ಕಿಂತ ಕಡಿಮೆಯೇನಲ್ಲ.

ತುಂಡಾದ ಹಗ್ಗ

ಸುದ್ದಿ ಮಾಧ್ಯಮದ ಪ್ರಕಾರ, ಅಜಿತ್ ಮತ್ತು ಅವರ ಪತ್ನಿ ಭಾನುವಾರ ದಿಯುನ ನಗೋವಾ ಕಡಲ ತೀರದಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದರು. ಸವಾರಿ ಹೊರಟ ಕೆಲವೇ ನಿಮಿಷಗಳಲ್ಲಿ ಅವರ ಪ್ಯಾರಾಚೂಟ್‌ನ ಹಗ್ಗವು ಇದ್ದಕ್ಕಿದ್ದಂತೆ ತುಂಡಾಯಿತು.

ಪ್ರಾಣಾಪಾಯದಿಂದ ಪಾರು 

ಅದೃಷ್ಟವಶಾತ್, ಅಜಿತ್ ಅಥವಾ ಅವರ ಪತ್ನಿಗೆ ಈ ಅಪಘಾತದಲ್ಲಿ ಯಾವುದೇ ಗಾಯವಾಗಲಿ ಪ್ರಾಣಹಾನಿಯಾಗಲೀ ಸಂಭವಿಸಲಿಲ್ಲ. ಅವರು ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು ಮತ್ತು ಬೀಚ್‌ನಲ್ಲಿ ನಿಯೋಜಿಸಲಾದ ಲೈಫ್ ಗಾರ್ಡ್ ಗಳು ಅವರನ್ನು ರಕ್ಷಿಸಿದರು. ಟ್ವಿಟರ್ ಬಳಕೆದಾರ ರಾಹುಲ್ ಧರೇಚಾ ಹಂಚಿಕೊಂಡ ಭಯ ಬೀಳಿಸುವಂತಹ ಈ 1 ನಿಮಿಷ 28 ಸೆಕೆಂಡಿನ ವೀಡಿಯೋ ಇಡೀ ಘಟನೆಯನ್ನೇ ಸೆರೆ ಹಿಡಿದಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇದುವರೆಗೂ 10,000 ಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಈಗ ವೈರಲ್ ಆಗಿರುವ ವೀಡಿಯೋ, ಪ್ಯಾರಾಚೂಟ್ ಅನ್ನು ಪವರ್ ಬೋಟ್ ಗೆ ಸಂಪರ್ಕಿಸುವ ಹಗ್ಗವು ಅವರ ಪ್ಯಾರಾಸೈಲಿಂಗ್ ಸವಾರಿ ಶುರುವಾದ ಕೆಲವೇ ನಿಮಿಷಗಳ ನಂತರ ಇದ್ದಕ್ಕಿದ್ದಂತೆ ತುಂಡಾಗುತ್ತದೆ. ಇದರಿಂದ ದಂಪತಿಗಳು ಅಪಾಯಕ್ಕೆ ಸಿಲುಕುತ್ತಾರೆ ಎಂಬುದನ್ನು ವಿಡಿಯೋದಲ್ಲಿರುವ ದೃಶ್ಯಾವಳಿಗಳು ತೋರಿಸುತ್ತದೆ. ವೀಡಿಯೋ ರೆಕಾರ್ಡ್ ಮಾಡುವ ಸಮಯದಲ್ಲಿ ದೋಣಿಯಲ್ಲಿದ್ದ ಅಜಿತ್ ಅವರ ಅಣ್ಣ ರಾಕೇಶ್ ಈ ಭಯಾನಕ ಘಟನೆಗೆ ಸಾಕ್ಷಿಯಾಗಿದ್ದು, ಕೂಡಲೇ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದರು.ಇದನ್ನೂ ಓದಿ: Chicken/ Egg: ಕೋಳಿ ಮೊದಲಾ, ಮೊಟ್ಟೆ ಮೊದಲಾ..? ಪ್ರಶ್ನೆಗೆ ಅಂತೂ ಇಂತೂ ಸಿಕ್ತು ಉತ್ತರ..!

"ನಾನು ವೀಡಿಯೋ ರೆಕಾರ್ಡ್ ಮಾಡುತ್ತಿದ್ದೆ ಮತ್ತು ಹಗ್ಗ ಏಕಾಏಕಿಯಾಗಿ ತುಂಡಾಯಿತು ಆಗ ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ನನ್ನ ಸಹೋದರ ಮತ್ತು ಅತ್ತಿಗೆ ತುಂಬಾ ಎತ್ತರದಿಂದ ಬೀಳುವುದನ್ನು ನಾನು ನೋಡಿದೆ. ಆದರೆ ಆ ಕ್ಷಣದಲ್ಲಿ ನಾನು ತುಂಬಾನೇ ಅಸಹಾಯಕನಾಗಿದ್ದೆ" ಎಂದು ರಾಕೇಶ್ ಹೇಳಿದರು.

ನಂತರ ಪ್ಯಾರಾಸೈಲಿಂಗ್ ಸೇವೆಯನ್ನು ನಡೆಸುತ್ತಿರುವ ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕಂಪನಿಯ ಲೈಫ್ ಗಾರ್ಡ್‌ಗಳು ದಂಪತಿಗಳನ್ನು ರಕ್ಷಿಸಿದರು.
Published by:Latha CG
First published: