ಇತ್ತೀಚೆಗೆ ನಾಯಿ (Dog) ಸಾಕುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಎಲ್ಲರೂ ನನಗೆ ನಾಯಿಗಳೆಂದ್ರೆ, ಪೆಟ್ಸ್‌ಗಳೆಂದ್ರೆ ಬಹಳ ಪ್ರೀತಿ ಅಂತ ಹೇಳ್ತಾನೆ ಇರ್ತಾರೆ. ನಾಯಿಗಳಿಗೆ ಕೊಡೋ ಪ್ರೀತಿಯಲ್ಲಿ ಅರ್ಧದಷ್ಟು ಪ್ರೀತಿಯನ್ನು ತಮ್ಮ ಮಕ್ಕಳಿಗೂ ನೀಡದೇ ಇರೋರು ಕೂಡ ನಮ್ಮ ಮಧ್ಯೆ ಇದ್ದಾರೆ. ಇನ್ನು ಮಕ್ಕಳಿಗಂತೂ ನಾಯಿಗಳು, ಬೆಕ್ಕುಗಳಂದ್ರೆ ತುಂಬಾ ಇಷ್ಟ.
ನಾಯಿ ಮೇಲೆ ಹೆಚ್ಚು ಪ್ರೀತಿ ತೋರುತ್ತಿರೋ ಪೆಟ್ಸ್ ಲವರ್ಸ್
ನಾಯಿಗಳಿಗೆ ಹೊಸ ಡ್ರೆಸ್ ಹಾಕೋದು, ಅವುಗಳಿಗೆ ತರಹೇವಾರಿ ಹೇರ್ ಡ್ರೆಸ್ ಮಾಡಿಸೊದು, ಅವುಗಳಿಗೆ ಇರಲು ಎ.ಸಿ ರೂಮ್ , ಹೀಗೆ ಹೇಳ್ತಾ ಹೋದರೆ ಪೆಟ್ಸ್ ಲವರ್ ಕಥೆ ಮುಗಿಯೋದೇ ಇಲ್ಲ. ಇದರ ಜೊತೆಗೆ ಇತ್ತಿಚೀಗೆ ಟ್ರೆಂಡ್ ಅಲ್ಲಿರೋದು ನಾಯಿಗಳಿಗೂ ಹುಟ್ಟಿದ ಹಬ್ಬ ಮಾಡೋದು. ಅದು ತುಂಬಾ ಗ್ರ್ಯಾಂಡ್ ಆಗಿಯೇ ಮಾಡೋದು. ಪೋಟೋ ಶೂಟ್ ಮಾಡಿಸೋದು. ಅಯ್ಯೊ ದೇವರೇ! ಏನಪ್ಪ ಇದು ಕಥೆ ಅಂದ್ರೆ ಪೆಟ್ಸ್ ಲವ್ ಈಗೀಗ ಬಹುತೇಕ ಎಲ್ಲರಲ್ಲೂ ಹೆಚ್ಚಾಗುತ್ತಿದೆ.
ಓಲ್ಡೆಸ್ಟ್ ಡಾಗ್ ಎವರ್ ಎಂದು ಗಿನ್ನೆಸ್ ದಾಖಲೆ ಬರೆದ ನಾಯಿ
ಆಗೆಯೇ ಬೇರೆ ದೇಶದಲ್ಲೂ ಪೆಟ್ಸ್ ಲವರ್ಸ್‌ಗೆ ಏನೂ ಕಮ್ಮಿ ಇಲ್ಲ. ಪೋರ್ಚುಗಲ್ ದೇಶದಲ್ಲಿ ಬೋಬಿ ಎಂಬ ಫಾರ್ಮ್ ನಾಯಿ ತನ್ನ ಜೀವನದ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಅದು ಹೇಗಂದ್ರೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ಈ ನಾಯಿ ಜಗತ್ತಿನಲ್ಲಿ ಇದುವರೆಗೆ ಜೀವಂತವಾಗಿರುವ ಅತ್ಯಂತ ಹಳೆಯ ನಾಯಿ (ಓಲ್ಡೆಸ್ಟ್ ಡಾಗ್ ಎವರ್) ಎಂಬ ಬಿರುದನ್ನು ಈ ನಾಯಿ ಪಡೆದಿದೆ.
ಕಳೆದ ಗುರುವಾರದಂದು ಬೋಬಿ ನಾಯಿಗೆ 31 ವರ್ಷ ತುಂಬಿದೆ. ಅಬ್ಬಾ ಈ ನಾಯಿಗೆ 31 ವರ್ಷವೇ ಅಂತ ಹುಬ್ಬೇರಿಸಬೇಡಿ. ಹೌದು ಈ ನಾಯಿಗೆ ಈಗ ಬರೋಬ್ಬರಿ 31 ರ ವಸಂತ. ಅದಕ್ಕೆ ಈ ನಾಯಿಗೆ ಓಲ್ಡೆಸ್ಟ್ ಡಾಗ್ ಎವರ್ ಅಂತ ಗಿನ್ನೆಸ್ ದಾಖಲೆ ನೀಡಿರೋದು. ಬಾಬಿಯ 31 ನೇ ವರ್ಷದ ವಿಶೇಷ ಸಂದರ್ಭಕ್ಕೆ ಸದರ ಮಾಲೀಕರು ಒಂದು ಸ್ಪೆಷಲ್ ಪಾರ್ಟಿಯನ್ನು ಅಯೋಜಿಸಿ, ಧಾಮ್ ದೂಮ್ ಆಗಿ ಪಾರ್ಟಿಯನ್ನು ಮಾಡಿ ಕುಣಿದು ಕುಪ್ಪಳಿಸಿದ್ದಾರೆ.
ಓಲ್ಡೆಸ್ಟ್ ಡಾಗ್‌ನ ಮಾಲೀಕ ಯಾರು?
ಈ ಓಲ್ಡೆಸ್ಟ್ ಡಾಗ್‌ನ ಪೂರ್ತಿ ಹೆಸರು ರಾಫೀರೊ ಡೊ ಅಲೆಂಟೆಜೊ ಎಂಬುದಾಗಿದೆ. ಇದು ಮೇ 11, 1992 ರಂದು ಹುಟ್ಟಿದೆ. ಈ ಓಲ್ಡೆಸ್ಟ್ ಡಾಗ್ ಪೋರ್ಚುಗಲ್‌ನ ಲೀರಾ ಜಿಲ್ಲೆಯಲ್ಲಿ ಅದರ ಮಾಲೀಕ ಲಿಯೋನೆಲ್ ಕೋಸ್ಟಾ ಅವರೊಂದಿಗೆ ವಾಸ ಮಾಡುತ್ತಿದೆ.
ಈ ಬೋಬಿಯ ಜನ್ಮ ದಿನಾಂಕವನ್ನು ಸರ್ವಿಕೊ ಮೆಡಿಕೊ-ವೆಟರ್ನರಿಯೊ ಡೊ ಮುನಿಸಿಪಿಯೊ ಡಿ ಲೀರಿಯಾ (ಲೀರಿಯಾ ಪುರಸಭೆಯ ಪಶುವೈದ್ಯಕೀಯ ವೈದ್ಯಕೀಯ ಸೇವೆ) ಅವರು ದೃಢಪಡಿಸಿದ್ದಾರೆ.
ಬೋಬಿಯ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಲಾಗುವ ಪಾರ್ಟಿಯ ಬಗ್ಗೆ ಮಾಲೀಕರು ವಿವರವಾದ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪಾರ್ಟಿಯನ್ನು ಶನಿವಾರದಂದು ಅಯೋಜಿಸಲಾಗಿದ್ದು, ಬಾಬಿಯ ಹುಟ್ಟುಹಬ್ಬಕ್ಕೆ 100 ಪೆಟ್ಸ್ ಫ್ಯಾನ್‌ಗಳು ಮತ್ತು ಮಾಲೀಕ ತನ್ನ ಸ್ನೇಹಿತರನ್ನು ಆಹ್ವಾನಿಸಿದ್ದೇವೆ ಎಂದು ಬಾಬಿಯ ಮಾಲೀಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಸಂಸ್ಥೆಗೆ ಈ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಆ ಉಲ್ಲೇಖದಲ್ಲಿ ಇತರ ದೇಶಗಳ ಜನರು ಕೂಡ ಸೇರಿದ್ದಾರೆ.
“ಬೋಬಿಯ ಈ ಸೊಗಸನ್ನು ನೋಡುವುದು ಸಂತೋಷದ ವಿಷಯವಾಗಿದೆ. ಇದನ್ನು ನೋಡದೇ ತೀರಿಕೊಂಡ ಅನೇಕರನ್ನು ಈಗ ನೆನಪಿಸಿಕೊಳ್ಳುವುದು ನಮ್ಮ ದುರದೃಷ್ಟ ಸಂಗತಿ. ನನ್ನ ತಂದೆ, ನನ್ನ ಸಹೋದರ ಅಥವಾ ಈಗಾಗಲೇ ಇಹಲೋಕ ತ್ಯಜಿಸಿರುವ ನನ್ನ ಅಜ್ಜಿಯರಂತೆ, ಇತರರನ್ನು ನೆನಪಿಸಿಕೊಳ್ಳುವಂತೆ ಆಗಿದೆ" ಎಂದು ಕೋಸ್ಟಾ ಗಿನ್ನೆಸ್ ಸಂಸ್ಥೆಗೆ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ.
"ಬೋಬಿ ಆ ಪೀಳಿಗೆಯನ್ನು ಪ್ರತಿನಿಧಿಸುತ್ತಾನೆ. ನನ್ನ ತಂದೆ, ತಾಯಿ, ಅಜ್ಜ ಅಜ್ಜಿಯರ ಕಾಲವನ್ನು ನೆನಪಿಸುತ್ತಾನೆ. ಈಗ ಅವರಿಲ್ಲ. ಪುಣ್ಯಕ್ಕೆ ಇವನಾದ್ರೂ ನಮ್ಮ ಜೊತೆ ಇದ್ದಾನೆ. ಬೋಬಿಯ ತಾಯಿ ಗಿರಾ ಸುಮಾರು 18 ವರ್ಷದವರೆಗೆ ಬದುಕಿತ್ತು. ಅದರ ಜೊತೆಗೆ ಇತರ ನಾಯಿಗಳು ಸಹ ಇದ್ದವು. ಆದರೆ ಗಿರಾಳ ನಾಯಿ ಮರಿ ಮೂವತ್ತರ ಹರೆಯವನ್ನು ತಲುಪುತ್ತದೆ ಎಂದು ನಾನು ಊಹೆ ಕೂಡ ಮಾಡಿಕೊಂಡಿರಲಿಲ್ಲ” ಎಂದು ಕೋಸ್ಟಾ ತಿಳಿಸುತ್ತಾರೆ.
“ಇದೇ ವರ್ಷ ಫೆಬ್ರವರಿಯಲ್ಲಿ ಬೋಬಿ ನಾಯಿಯು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದಾಗಿನಿಂದ ಬೋಬಿಯ ಜೀವನವು ಮತ್ತಷ್ಟು ಕಲರ್‌ಪುಲ್ ಆಗಿದೆ. ಈಗ ಜಗತ್ತಿನಾದ್ಯಂತ ಬಾಬಿಯನ್ನು ಸಂದರ್ಶನ ಮಾಡೋದು ಅದರ ಜೊತೆಗೆ ಪೋಟೋ ಕ್ಲಿಕ್ಕಿಸೋದು ಹೀಗೆ ಬೋಬಿ ಜೀವನ ಸೆಲೆಬ್ರೆಟಿ ಲೈಪ್ ಆಗಿದೆ ಅಂತ ಹೇಳಬಹುದು. ಬಾಬಿ ಈಗ ಸೆಲೆಬ್ರೆಟಿ ಆಗಿದೆ” ಎಂದು ಕೋಸ್ಟಾ ಹೇಳಿದರು.
"ಬೋಬಿಯನ್ನು ನೋಡಲುಯುರೋಪ್‌ನಾದ್ಯಂತ ಮತ್ತು ಯುಎಸ್‌ಎ, ಜಪಾನ್‌ನಿಂದಲೂ ಬರುತ್ತಿದ್ದಾರೆ. ಎಂದು ಅವರು ಹೇಳಿದರು. 31 ವರ್ಷ ವಯಸ್ಸಿನ ಬಾಬಿ ಆರೋಗ್ಯವಾಗಿದೆ. ಆದರೂ ಸಹ ಇತ್ತಿಚೀಗೆ ಮತ್ತೊಮ್ಮೆ ಪಶುವೈದ್ಯರನ್ನು ತಪಾಸಣೆಗಾಗಿ ಕರೆದುಕೊಂಡು ಹೋಗಲಾಗಿತ್ತು” ಕೋಸ್ಟಾ ಅವರು ಬೋಬಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ