ಈಗಂತೂ ಈ ಮದುವೆ ಮನೆಗಳಲ್ಲಿ ಮತ್ತು ಸಮಾರಂಭಗಳಲ್ಲಿ (Celrbrations) ನಡೆಯುತ್ತಿರುವ ಘಟನೆಗಳು ಮದುವೆಗೆ ಬಂದ ಅತಿಥಿಗಳನ್ನು ತುಂಬಾನೇ ಮನರಂಜಿಸುತ್ತಿವೆ ಮತ್ತು ಅಷ್ಟೇ ಅಲ್ಲದೆ ಕೆಲವು ಸಲ ಈ ಘಟನೆಗಳು ಬೆರಗುಗೊಳಿಸುತ್ತಿವೆ ಅಂತ ಸಹ ಹೇಳಬಹುದು. ಮದುವೆಯಲ್ಲಿ ವಧು-ವರರು ಗ್ರ್ಯಾಂಡ್ (Grand) ಆದ ಉಡುಪಿನಲ್ಲಿ ಒಳ್ಳೆ ಗ್ರ್ಯಾಂಡ್ ಆಗಿ ಅದ್ದೂರಿಯಿಂದ ಮದುವೆ ಸಮಾರಂಭದಲ್ಲಿ ಕೊಡುವ ಎಂಟ್ರಿ (Entry) ಆಗಿರಬಹುದು ಮತ್ತು ಮದುವೆ ಸಮಾರಂಭಗಳಲ್ಲಿ ನಡೆಯುವ ಎಡವಟ್ಟುಗಳಿಂದಾಗಿ ಈಗಿನ ಮದುವೆಗಳು ತುಂಬಾನೇ ಸುದ್ದಿಯಲ್ಲಿ ಇರುತ್ತಿವೆ ಅಂತ ಹೇಳಬಹುದು. ಅದರಲ್ಲೂ ಈ ಮದುವೆ ಸಮಾರಂಭಗಳಲ್ಲಿ ಏನಾದರೊಂದು ವಿಭಿನ್ನವಾಗಿ ಮಾಡಿ ಅದರಿಂದ ವಿಶ್ವ ದಾಖಲೆಯನ್ನು ಎಂದರೆ ಹೊಸ ಗಿನ್ನಿಸ್ ದಾಖಲೆಯನ್ನು ನಿರ್ಮಿಸಬೇಕೆಂದು ಪಟ್ಟು ಹಿಡಿದು ಕುಳಿತಿರುವ ಕೆಲವರು ಹೇಗಪ್ಪಾ ಹೊಸದಾಗಿ ವಿಶ್ವ ದಾಖಲೆಯನ್ನು ನಿರ್ಮಿಸಬೇಕು ಅಂತ ಹಗಲು ರಾತ್ರಿ ಎನ್ನದೆ ಅದರ ಬಗ್ಗೆ ಕ್ರಿಯೆಟಿವ್ ಆಗಿ ಯೋಚಿಸುತ್ತಲೇ ಇರುತ್ತಾರೆ ಅಂತ ಹೇಳಬಹುದು.
ವೆಡ್ಡಿಂಗ್ ಡ್ರೆಸ್ ಕೇಕ್ ತಯಾರಿಸಿದ ಸ್ವೀಡಿಷ್ ಬೇಕರ್
ಹೀಗೆ ಯೋಚಿಸುತ್ತಾ ಕುಳಿತ ಒಬ್ಬ ಸ್ವೀಡಿಷ್ ಬೇಕರ್ ಮದುವೆ ಮೇಳದಲ್ಲಿ ಏನು ಮಾಡಿದ್ದಾರೆ ನೋಡಿ. ಇವರು ಒಂದು ಕೇಕ್ ನಿಂದ ಮಾಡಿದ ಮೃದುವಾದ, ಬಿಳಿ ಗೌನ್ ಧರಿಸಿ ಮದುವೆ ಮೇಳದಲ್ಲಿ ಕಾಣಿಸಿಕೊಂಡರು.
ಅಲ್ಲಿ ನೆರೆದಿದ್ದಂತಹ ಪ್ರೇಕ್ಷಕರು ಈ ಕೇಕ್ ನಿಂದ ಮಾಡಿದ ವೆಡ್ಡಿಂಗ್ ಡ್ರೆಸ್ ಅನ್ನು ನೋಡಿ ತುಂಬಾನೇ ಸಂತೋಷ ಪಟ್ಟರು ಮತ್ತು ಇದೆಲ್ಲದರ ಜೊತೆಗೆ ಇವರು ಗಿನ್ನಿಸ್ ವಿಶ್ವ ದಾಖಲೆಯನ್ನು ಸಹ ಗಳಿಸಿದರು.
ವೆಡ್ಡಿಂಗ್ ಡ್ರೆಸ್ ಕೇಕ್ 131 ಕೆಜಿ ತೂಕವಿದೆಯಂತೆ..
ನತಾಶಾ ಕೊಲಿನ್ ಎಂಬ ಸ್ವೀಡಿಷ್ ಬೇಕರ್ ಅವರು ಒಟ್ಟು 131.15 ಕಿಲೋಗ್ರಾಂಗಳಷ್ಟು ತೂಕದ ವೆಡ್ಡಿಂಗ್ ಡ್ರೆಸ್ ಕೇಕ್ ಅನ್ನು ಧರಿಸಿದ್ದರು. ಲೇಯರ್ಡ್ ಕೇಕ್ ಅನ್ನು ಬೆಂಬಲಿಸುವ ಕಾರ್ಸೇಜ್ ಮತ್ತು ಲೋಹದ ಬೋಲ್ಟ್ ಗಳನ್ನು ಹೊರತುಪಡಿಸಿ ಈ ಕೇಕ್ ನ ತೂಕ ಬರೋಬ್ಬರಿ 131.15 ಕಿಲೋಗ್ರಾಂ ತೂಕ ಹೊಂದಿತ್ತು ಅಂತ ಹೇಳಲಾಗುತ್ತಿದೆ.
View this post on Instagram
ಮೊದಲು ತನ್ನ ಮಗಳ ಮೇಲೆ ಈ ರೀತಿಯ ಕೇಕ್ ಡ್ರೆಸ್ ಪ್ರಯತ್ನಿಸಿದ್ದರಂತೆ..
ನತಾಶಾ ಅವರು ಇದಕ್ಕೂ ಮೊದಲು ತಮ್ಮ ಮಗಳ ಮೇಲೆ ಈ ಕಲ್ಪನೆಯನ್ನು ಪ್ರಯತ್ನಿಸಿದ್ದರಂತೆ. "ಇದು ಪರಿಪೂರ್ಣವಾಗಿರಲಿಲ್ಲ, ಆದರೆ ನಂತರ ಮಾಡಿದ್ದು ಪರಿಪೂರ್ಣವಾಗಿತ್ತು" ಎಂದು ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೆ ತಿಳಿಸಿದ್ದಾರೆ. "ಈ ಪ್ರಯತ್ನವು ನನಗೆ ಒಂದು ಸವಾಲಾಗಿತ್ತು ಮತ್ತು ಅದನ್ನು ಅಧಿಕೃತವಾಗಿ ದೃಢಪಡಿಸುವುದು ಇನ್ನೂ ಸಂತೋಷ ತಂದಿದೆ" ಎಂದು ಹೇಳಿದರು.
ಕೊಲಿನ್ ಮತ್ತು ಅವರ ತಂಡವು ರಚಿಸಿದ ದಾಖಲೆ ಮುರಿಯುವ ಕೇಕ್ ಅನ್ನು ಅಲ್ಯೂಮಿನಿಯಂ ಫ್ರೇಮ್ ಬಳಸಿ ಮಾಡಲಾಗಿದೆ. ಮೇಲ್ಭಾಗದಲ್ಲಿ ಪ್ಲಾಸ್ಟರ್ ಕಾರ್ಸೇಜ್ ಇತ್ತು. ಸಕ್ಕರೆ ಪೇಸ್ಟ್, ಫಾಂಡಂಟ್ ಮತ್ತು ರಾಯಲ್ ಐಸಿಂಗ್ ಅನ್ನು ಇವರ ನೆಕ್ಲೈನ್ ನೊಂದಿಗೆ ಸಂಪೂರ್ಣವಾದ ಸಾಂಪ್ರದಾಯಿಕ ಮದುವೆಯ ಉಡುಗೆಯಂತೆ ಕಾಣುವಂತೆ ಮಾಡಲು ಬಳಸಲಾಯಿತು.
ಇದನ್ನೂ ಓದಿ: ಈ ದೇಶದಲ್ಲಿ ಶವವನ್ನು ಎತ್ತಿಕೊಂಡು ಡ್ಯಾನ್ಸ್ ಮಾಡ್ತಾರೆ, ಇದು ಅವರ ಸಂಪ್ರದಾಯವಂತೆ!
ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್ ಉಡುಪಿನಲ್ಲಿ ನಡೆದಿದ್ದಕ್ಕಾಗಿ ಅವರಿಗೆ ಪ್ರಮಾಣಪತ್ರವನ್ನು ಸಹ ನೀಡಿ ಬೆಂಬಲಿಸಲಾಗಿದೆ.
ಈ ಮದುವೆ ಮೇಳದಲ್ಲಿ, ಜನರು ಆ ಕೇಕ್ ಉಡುಪಿನಿಂದ ತುಂಡುಗಳನ್ನು ಮಾಡಲು ಸಹಾಯ ಮಾಡುತ್ತಿರುವುದು ಕಂಡು ಬಂದಿದೆ. 131 ಕೆಜಿ ತೂಕದ ಕೇಕ್ ನಲ್ಲಿ ಉಳಿದಿದ್ದನ್ನು ನಂತರ ಕೊಲಿನ್ ಅವರು ತಮ್ಮ ಬೇಕರಿಯಲ್ಲಿಟ್ಟು ಜನರಿಗೆ ಉಚಿತವಾಗಿ ವಿತರಿಸಿದರು ಅಂತ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ