Marriage Function: ಮದುವೆಯ ಊಟಕ್ಕಾಗಿ ಓಡೋಡಿ ಬಂದ ಅತಿಥಿಗಳು! ನಗು ತರಿಸುತ್ತದೆ ಈ ವೈರಲ್ ವಿಡಿಯೋ

ಇಲ್ಲಿ ವೈರಲ್ ಆದ ವೀಡಿಯೋದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅತಿಥಿಗಳು ಊಟ ತಯಾರಾಗಿದೆ ಎಂದು ತಿಳಿದ ತಕ್ಷಣವೇ ಬಫೆ ಇರುವ ಸ್ಥಳಕ್ಕೆ ಹೇಗೆ ಓಡಿಕೊಂಡು ಹೋಗಿದ್ದಾರೆ ಎಂಬುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಾಮಾಣಿಕವಾಗಿ ಹೇಳುವುದಾದರೇ ಈ ಮದುವೆ ಸಮಾರಂಭಗಳಲ್ಲಿ (Marriage Function) ಬಂದಿರುವ ಬಹುತೇಕ ಅತಿಥಿಗಳು ಮೊದಲು ಎದುರು ನೋಡುವುದೇ ಯಾವಾಗ ಅಕ್ಷತೆ ಬೀಳುತ್ತದೆ, ಯಾವಾಗ ವಧು-ವರರನ್ನು (Bride and Groom) ಭೇಟಿ ಮಾಡಿ ಹಾರೈಸಿ, ಅಭಿನಂದಿಸಿ ಊಟ (Meal) ಇರುವ ಸ್ಥಳಕ್ಕೆ ಹೋಗಿ ಆರಾಮಾಗಿ ಕುಳಿತುಕೊಂಡು ಊಟವನ್ನು ಮಾಡುತ್ತೇವೆ ಎಂದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಾಮಾನ್ಯವಾಗಿ ಮದುವೆಗೆ ಹೋದಾಗ ನಾವು ಸ್ವಲ್ಪ ಹೊತ್ತು ಕಾಯ್ದು, ನಂತರ ವೇದಿಕೆಯ ಮೇಲೆ ಹೋಗಿ ನವ ವಧು-ವರರಿಬ್ಬರಿಗೂ ಅಭಿನಂದಿಸಿ, ಹಾರೈಸಿ ಅವರಿಗೆ ಉಡುಗೊರೆಯನ್ನು ನೀಡಿ ಅವರೊಂದಿಗೆ ಒಂದು ಫೋಟೋವನ್ನು (Photo) ಕ್ಲಿಕ್ಕಿಸಿಕೊಂಡು ಆನಂತರ ಊಟದ ಸ್ಥಳಕ್ಕೆ ಹೋಗಿ ಊಟ ಮಾಡಿ ಬರುವುದು ವಾಡಿಕೆಯಾಗಿರುತ್ತದೆ.

ಆದರೆ ಎಷ್ಟೋ ಮದುವೆಗಳಲ್ಲಿ ಅತಿಥಿಗಳು ಅಕ್ಷತೆ ಬೀಳುವುದು ತಡವಾಗುತ್ತಿದೆ, ವೇದಿಕೆಯ ಮೇಲೆ ನವ ವಧು-ವರರನ್ನು ಭೇಟಿ ಮಾಡಲು ತುಂಬಾ ಉದ್ದವಾದ ಸಾಲು ಇದೆ, ತುಂಬಾ ಸಮಯ ವ್ಯರ್ಥವಾಗುತ್ತದೆ, ಬೇರೆ ಕೆಲಸಗಳು ಇವೆ ಎಂದು ಅನೇಕ ರೀತಿಯ ಕಾರಣಗಳಿಗಾಗಿ ಅತಿಥಿಗಳು ಕಾದು ಕುಳಿತುಕೊಳ್ಳದೆ ಮೊದಲಿಗೆ ಊಟ ಇರುವ ಸ್ಥಳಕ್ಕೆ ಹೋಗಿ ಒಂದು ಸುತ್ತು ಊಟ ಮುಗಿಸಿಕೊಂಡು ಬರುವುದನ್ನು ನಾವು ಅನೇಕ ಬಾರಿ ನೋಡುತ್ತೇವೆ.

ಮದುವೆಯಲ್ಲಿ ಪ್ರಮುಖ ಆಕರ್ಷಣೆಗಳಲ್ಲೊಂದು ಆಹಾರ
ಈ ಮದುವೆಯ ಪಾರ್ಟಿಯಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಆಹಾರವೂ ಒಂದು . ಯಾವುದೇ ಮದುವೆಯ ಆರತಕ್ಷತೆಗೆ ಭೇಟಿ ನೀಡಿ, ಜನರು ಚಾಟ್ ಮತ್ತು ಕಬಾಬ್ ಇರುವ ಸ್ಥಳದಲ್ಲಿ ಮೂಲೆಗಳಲ್ಲಿ ಗುಂಪು ಗೂಡುವುದನ್ನು ನೀವು ಕಾಣಬಹುದು. ಹಾಗೆಯೇ ಚಾಟ್ ಗಳಾದ ಪಾನಿಪುರಿ, ಚಿಕನ್ ಕಬಾಬ್, ಪನೀರ್ ಟಿಕ್ಕಾ ಮತ್ತು ಇನ್ನೂ ಹೆಚ್ಚಿನವುಗಳನ್ನು ತಿನ್ನಲು ದೊಡ್ಡ ಸಾಲು ಇರುತ್ತದೆ ಎಂದು ಹೇಳಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ
ಈ ಮದುವೆ ಸಮಾರಂಭದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ನೋಡುತ್ತೇವೆ. ಆದರೆ ಮದುವೆ ಮನೆಯ ಊಟದ ಸ್ಥಳದ ವೀಡಿಯೋಗಳು ನಮಗೆ ನೋಡಲು ತುಂಬಾನೇ ಕಡಿಮೆ ಸಿಗುತ್ತವೆ.
ಇಲ್ಲಿ ವೈರಲ್ ಆದ ವೀಡಿಯೋದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅತಿಥಿಗಳು ಊಟ ತಯಾರಾಗಿದೆ ಎಂದು ತಿಳಿದ ತಕ್ಷಣವೇ ಬಫೆ ಇರುವ ಸ್ಥಳಕ್ಕೆ ಹೇಗೆ ಓಡಿಕೊಂಡು ಹೋಗಿದ್ದಾರೆ ಎಂಬುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: Viral Tips: ಹಣೆಗೆ ಸಿಂಧೂರ ಇಟ್ರೆ ಲೈಂಗಿಕಾಸಕ್ತಿ ಹೆಚ್ಚುತ್ತೆ ಎಂದ ಮಹಿಳೆ, ನೆಟ್ಟಿಗರ ರಿಯಾಕ್ಷನ್ ಹೀಗಿತ್ತು

ಈ ಉಲ್ಲಾಸ ಭರಿತ ವೀಡಿಯೋ ಹಲವಾರು ಕಣ್ಣುಗಳನ್ನು ಸೆಳೆದಿದ್ದು, ಇಲ್ಲಿಯವರೆಗೆ 33 ಮಿಲಿಯನ್ ವೀಕ್ಷಣೆಗಳು, 1.8 ಮಿಲಿಯನ್ ಲೈಕ್ ಗಳು ಮತ್ತು ಸಾವಿರಾರು ಕಾಮೆಂಟ್ ಗಳನ್ನು ಗಳಿಸಿದೆ. ‘ಬಾಗಡಿ ಬಾಟಾ' ಎಂಬ ಹ್ಯಾಂಡಲ್ ನಿಂದ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. "ಒಬ್ಬ ಸ್ನೇಹಿತ ಇದನ್ನು ಹಂಚಿ ಕೊಂಡಿದ್ದಾನೆ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವಿಡಿಯೋಗೆ ಹರಿದು ಬಂದ ಕಾಮೆಂಟ್ ಗಳು
ಈ ವೀಡಿಯೋದಲ್ಲಿ, ಆತಂಕಗೊಂಡ ಅತಿಥಿಗಳು ಊಟದ ಬಫೆ ಇರುವ ಸ್ಥಳಕ್ಕೆ ಧಾವಿಸುತ್ತಿದ್ದಂತೆ ವೇಟರ್ ಆತುರಾತುರವಾಗಿ ತನ್ನ ಸಹೋದ್ಯೋಗಿಗಳನ್ನು ತಮ್ಮ ಸ್ಥಾನಗಳಿಂದ ದೂರ ಸರಿಯುವಂತೆ ಕೇಳುತ್ತಿರುವುದನ್ನು ನಾವು ನೋಡಬಹುದು. ವೀಡಿಯೋದಲ್ಲಿ ವಯಸ್ಸಾದ ವ್ಯಕ್ತಿಯಂತೆ ಕಾಣುವ ಒಬ್ಬ ವ್ಯಕ್ತಿಯು ಮೊದಲ ಕೌಂಟರ್ ಕಡೆಗೆ ಧಾವಿಸಿ, ಒಂದು ತಟ್ಟೆಯನ್ನು ಎತ್ತಿಕೊಂಡು ತಕ್ಷಣವೇ ಅದರಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ತಟ್ಟೆಯಲ್ಲಿ ಹಾಕುವುದಕ್ಕೆ ಪ್ರಾರಂಭಿಸಿದನು. ಆಹಾರವು ಖಾಲಿಯಾಗುವ ಮೊದಲೇ ತಮ್ಮ ತಟ್ಟೆಗೆ ಹಾಕಿಕೊಳ್ಳಬೇಕೆಂದು ಅನೇಕರು ಅವನನ್ನು ಹಿಂಬಾಲಿಸಿದರು.

ಇದನ್ನೂ ಓದಿ: Golden Man: ಮೈಮೇಲೆ 5 ಕೆಜಿ ಚಿನ್ನ ಇಲ್ದೇ ಈತ ಮನೆಯಿಂದ ಹೊರಹೋಗಲ್ವಂತೆ

ಇಂಟರ್ನೆಟ್ ನಲ್ಲಿ ಈ ವೀಡಿಯೋ ನೋಡಿದ ಜನರು ಸ್ವಲ್ಪ ಸಮಯದಲ್ಲೇ ಈ ಉನ್ಮಾದದ ವೀಡಿಯೋಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಒಬ್ಬರು ಇದನ್ನು ಅಂತಿಮ "ಮದುವೆಯ ಗುರಿ" ಎಂದು ಕರೆದರು. ಇನ್ನೊಬ್ಬ ವ್ಯಕ್ತಿ "ಮದುವೆಗಳಲ್ಲಿ ನಮ್ಮ ಸ್ನೇಹಿತರು" ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯ ಕಾಮೆಂಟ್ “ಹಸಿದ ಜನರು" ಎಂದು ಹೇಳಿದ್ದಾರೆ. "ಇವರು ಯಾವ ರೀತಿಯ ಮದುವೆಯ ಅತಿಥಿಗಳು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಅನೇಕರು ಇದನ್ನು ನೋಡಿ ತುಂಬಾನೇ ನಕ್ಕಿದ್ದಂತು ಗ್ಯಾರಂಟಿ.
Published by:Ashwini Prabhu
First published: