Marriage: ಸರ್ವಂ ಆನ್​ಲೈನ್​ಮಯ: Google Meetನಲ್ಲಿ ಮದುವೆ, Zomato ಮೂಲಕ ಊಟ

Pandemic wedding: ಆಯ್ದ 450 ಸಂಬಂಧಿಕರ ಸಮ್ಮುಖದಲ್ಲಿ ಗೂಗಲ್ ಮೀಟ್ ಮೂಲಕ ಆಹ್ವಾನ ನೀಡಿ, ಈ ಜೋಡಿ ಜನವರಿ 24ರಂದು ಸಪ್ತಪದಿ ತುಳಿಯಲಿದ್ದಾರೆ.. ವಿಶೇಷ ಅಂದರೆ ಅಂದು ಮದುವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಝೋಮ್ಯಾಟೋ ಮೂಲಕ ಮದುವೆಯ ಊಟ ಕಳಿಸಲು ಕೂಡ ಈ ಜೋಡಿ ಈಗಾಗಲೇ ಸಿದ್ಧತೆ ಮಾಡಿದೆ.

ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್

ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್

 • Share this:
  ಸದ್ಯ ಸರ್ವಂ ಆನ್ಲೈನ್(Online) ಮಯ ಎನ್ನುವಂತೆ ಆಗಿದೆ.. ಮನೆಗೆ(Home) ಬೇಕಾದ ವಸ್ತುಗಳು ಬಟ್ಟೆಗಳು(Dress) ತರಕಾರಿಗಳ(Vegetables) ಖರೀದಿಯಿಂದ ಹಿಡಿದು ಆಹಾರವನ್ನು(Food) ಕೂಡ ಆನ್ಲೈನ್ ಮೂಲಕ ಖರೀದಿ ಮಾಡುವಾಗ ಜಮಾನ ಇದಾಗಿದೆ.ಅದರಲ್ಲೂ ಸಾಂಕ್ರಮಿಕ ರೋಗದ ಹಾವಳಿ ಹೆಚ್ಚಾದಾಗ ಬಳಿಕ ಸಂಬಂಧಗಳು ಕೇವಲ ಆನ್ಲೈನ್ಗೆ ಸೀಮಿತವಾಗಿವೆ.. ಶಿಕ್ಷಣದಲ್ಲಿಯೂ(Education) ಕೂಡ ಮಹತ್ತರ ಬದಲಾವಣೆಗಳು ಆಗಿದ್ದು ಆನ್ಲೈನ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.. ವಿಶೇಷ ಅಂದ್ರೆ ಈ ಸಾಂಕ್ರಮಿಕ ರೋಗದ ಹಾವಳಿ ತೀವ್ರವಾದ ಬಳಿಕ ಮದುವೆಗಳು(Marriage) ಕೂಡ ಆನ್ಲೈನ್ ಮಾಯವಾಗಿವೆ.. ದೂರದ ಯಾವುದೋ ದೇಶದಲ್ಲಿ ಇರುವ ವರ ಮತ್ಯಾವುದೋ ದೇಶದಲ್ಲಿ ಇರುವ ವಧು ಆನ್ಲೈನ್ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನೇಕ ಘಟನೆಗಳು ನಮ್ಮ ಮುಂದೆಯೇ ಇವೆ.. ಈಗ ಅದೇ ರೀತಿಯ ವಿಚಿತ್ರ ಘಟನೆ ಯೊಂದು ನಮ್ಮ ದೇಶದಲ್ಲಿ ನಡೆದಿದ್ದು, ಆನ್ಲೈನ್ ಮೂಲಕ ಮದುವೆಯಲ್ಲಿ ಭಾಗಿಯಾದವರಿಗೆ ಆನ್ ಲೈನ್ ಮೂಲಕವೇ ಊಟ ಕಳಿಸಿರುವ ಘಟನೆ ನಡೆದಿದೆ.

  ಗೂಗಲ್ ಮೀಟ್ ಮೂಲಕ ಮದುವೆ, ಝೋಮ್ಯಾಟೋ ಮೂಲಕ ಊಟ

  ಸಾಮಾನ್ಯವಾಗಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಉದ್ಯೋಗಿಗಳು, ಆನ್ಲೈನ್ ಕ್ಲಾಸ್ ಕೇಳುತ್ತಿರುವ ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಪಾಠ ಕೇಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.. ಆದರೆ ಈ ಸಾಂಕ್ರಮಿಕ ರೋಗದ ಹಾವಳಿ ಹೆಚ್ಚಾಗಿರುವುದರಿಂದ ಪಶ್ಚಿಮ ಬಂಗಾಳದ ಜೋಡಿಯೊಂದು ಗೂಗಲ್ ಮೂಲಕ ಸಂಬಂಧಿಕರ ಮದುವೆಗೆ ಆಮಂತ್ರಣ ನೀಡಿದೆ.. ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಗೂಗಲ್ ಮೀಟ್ ಮೂಲಕ ಮದುವೆಯಾಗುತ್ತಿರುವ ಈ ಜೋಡಿ, ಮದುವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಕೂಡ, ಫುಡ್ ಆರ್ಡರ್ ಮಾಡುವ ಆನ್ಲೈನ್ ಫುಡ್ ಕಂಪನಿ ಝೋಮ್ಯಾಟೋ ಮೂಲಕ ಊಟ ತಲುಪಿಸಲು ಸಜ್ಜಾಗಿದೆ .

  ಇದನ್ನೂ ಓದಿ: ಪಿಂಕ್‌ ಬಣ್ಣದ ಜೊತೆಗೆ 40 ವರ್ಷ ಡೇಟಿಂಗ್, ನಂತರ ಮದುವೆ! ಹೀಗೂ ಇರ್ತಾರೆ

  ಜನವರಿ 24 ರಂದು ನಡೆಯಲಿರುವ ಮದುವೆ..

  ಪಶ್ಚಿಮ ಬಂಗಾಳದ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಜನವರಿ 24 ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.. ಕಳೆದ ವರ್ಷದಿಂದಲೇ ಮದುವೆಯಾದ ಬಂಧನಕ್ಕೆ ಒಳಗಾಗಲು ಚಿಂತೆ ಮಾಡಿದ್ದಾರೆ ಜೋಡಿಗೆ ಸಾಂಕ್ರಮಿಕ ರೋಗದ ಪಿಡುಗು ಕಾಡುತ್ತಿತ್ತು.ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕು ಎಂದುಕೊಂಡಿದ್ದೆ ಜೋಡಿಗೆ ಪದೇಪದೇ ಹಲವಾರು ನಿಯಮಗಳು ಅಡ್ಡಿ ಮಾಡಿದ ಕಾರಣ, ಹೊಸ ಐಡಿಯಾ ಒಂದು ತಲೆಗೆ ಹೊಳೆದಿದೆ.. ಅದರಂತೆ ಆಯ್ದ 450 ಸಂಬಂಧಿಕರ ಸಮ್ಮುಖದಲ್ಲಿ ಗೂಗಲ್ ಮೀಟ್ ಮೂಲಕ ಆಹ್ವಾನ ನೀಡಿ, ಈ ಜೋಡಿ ಜನವರಿ 24ರಂದು ಸಪ್ತಪದಿ ತುಳಿಯಲಿದ್ದಾರೆ.. ವಿಶೇಷ ಅಂದರೆ ಅಂದು ಮದುವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಝೋಮ್ಯಾಟೋ ಮೂಲಕ ಮದುವೆಯ ಊಟ ಕಳಿಸಲು ಕೂಡ ಈ ಜೋಡಿ ಈಗಾಗಲೇ ಸಿದ್ಧತೆ ಮಾಡಿದೆ.

  ಕೋವಿಡ್ ವೇಳೆ ಹೊಳೆದ ಡಿಜಿಟಲ್ ಮದುವೆ ಪರಿಕಲ್ಪನೆ

  ಸಂದೀಪನ್ ಸರ್ಕಾರ್ ಅವರಿಗೆ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಕೋವಿಡ್ ಸೋಂಕಿನಿಂದ ನಾನಾ ಕಷ್ಟಗಳನ್ನು ಅನುಭವಿಸಿದ ಬಳಿಕ ಹೆಚ್ಚು ಜನ ಸೇರುವುದು ಎಷ್ಟು ಅಪಾಯ ಎಂದು ಅರಿತ ಸರ್ಕಾರ್ ಅವರು ತಮ್ಮ ಮದುವೆಯಲ್ಲಿ ಜನದಟ್ಟನೆ ತಪ್ಪಿಸಲು ಈ ಡಿಜಿಟಲ್ ಮದುವೆ ಐಡಿಯಾ ಪ್ರಸ್ತಾಪನೆಯನ್ನು ತಮ್ಮ ಸಂಗಾತಿಯ ಮುಂದೆ ಇಟ್ಟಿದ್ದಾರೆ.. ಇದಕ್ಕೆ ಅದಿತಿ ದಾಸ್ ಕೂಡ ಒಪ್ಪಿಗೆ ಸೂಚಿಸಿದ ಹಿನ್ನೆಲೆ ಜನವರಿ 24ರಂದು ಡಿಜಿಟಲ್ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.. 100ರಿಂದ 150 ಜನರು ಮಾತ್ರ ಅದಿತಿ ಹಾಗೂ ಸರ್ಕಾರ್ ಮದುವೆಯಲ್ಲಿ ದೈಹಿಕವಾಗಿ ಉಪಸ್ಥಿತರಿದ್ರೆ, ಉಳಿದವರು ಆನ್ಲೈನ್ ಮೂಲಕ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

  ಹೊಸ ರೀತಿಯ ಮದುವೆಗೆ ಹೊಸರೀತಿಯಲ್ಲಿ ಸಜ್ಜಾದ ಝೋಮ್ಯಾಟೋ

  ಇನ್ನು ಗೂಗಲ್ ಮೀಟ್ ಮೂಲಕ ನಡೆಯುತ್ತಿರುವ ಅದಿತಿ ದಾಸ್ ಹಾಗೂ ಸರ್ಕಾರ್ ಮದುವೆಯಲ್ಲಿ ಏಕಕಾಲಕ್ಕೆ ಊಟ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡಿರುವ ಝೋಮ್ಯಾಟೋ ಕಂಪನಿ, ವಿನೂತನ ಐಡಿಯಾವನ್ನು ಸ್ವಾಗತ ಮಾಡಿದೆ.. ಮದುವೆಯಲ್ಲಿ ಭಾಗಿಯಾಗುವ ಅತಿಥಿಗಳಿಗೆ ಏಕಕಾಲಕ್ಕೆ ಊಟ ತಲುಪಿಸಲು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಸಕಲ ಸಿದ್ಧತೆಗಳನ್ನು ಝೋಮ್ಯಾಟೋ ಕಂಪನಿಯ ಅಧಿಕಾರಿಗಳು ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: ಮದುವೆಗೂ ಮುನ್ನ ತಪ್ಪದೇ ನಿಮ್ಮ ಸಂಗಾತಿ ಜೊತೆಗೆ ಈ ವಿಷಯ ಚರ್ಚಿಸಿ

  ಈ ಹಿಂದೆಯೂ ನಡೆದಿತ್ತು ಆನ್ಲೈನ್ ಮದುವೆ..

  ಕೊರೊನಾ ಹಾವಳಿ ಹೆಚ್ಚಾದ ಬಳಿಕ ನಡೆಯುತ್ತಿರುವ ಆನ್ಲೈನ್ ಮದುವೆ ಇದೇ ಮೊದಲೇನಲ್ಲ.ವಿದ್ಯಾಭ್ಯಾಸಕ್ಕೆ ಹೋಗಿ ಇಂಗ್ಲೆಂಡ್‌ನಲ್ಲಿ ಸಿಕ್ಕಿ ಬಿದ್ದಿದ್ದ ವರ ಅನಂತ ಕೃಷ್ಣ ಹರಿ ಕುಮಾರನ್‌ ನಾಯರ್‌ ಅವರು ಕೇರಳಕ್ಕೆ ವಾಪಸಾಗಲು ಓಮಿಕ್ರಾನ್‌ ಅಡ್ಡಿ ಕಾಡಿದೆ. ಹೀಗಾಗಿ ಕೊಚ್ಚಿಯಲ್ಲಿಯೇ ಇರುವ ವಧು ರಿಂತು ಥಾಮಸ್‌ ಕೆಲವು ದಿನಗಳ ಹಿಂದೆ ಆನ್ಲೈನ್ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು
  Published by:ranjumbkgowda1 ranjumbkgowda1
  First published: