ಐಷಾರಾಮಿ ಬ್ರಾಂಡ್ ಲೇಬಲ್ ಗುಚ್ಚಿ (Gucci)ಮತ್ತು ಸ್ಪೋರ್ಟ್ಸ್ ವೇರ್ ದೈತ್ಯ ಅಡಿಡಾಸ್ (Adidas )ಎಜಿಯು ಜಲನಿರೋಧಕ (ವಾಟರ್ ಪ್ರೂಫ್) (Water proof) ಆಗಿರದ $1,644 (₹1.27 ಲಕ್ಷ) ಕೊಡೆಯನ್ನು ಮಾರಾಟ ಮಾಡಿದ್ದಕ್ಕಾಗಿ ಚೀನಾದಲ್ಲಿ (China) ಭಾರಿ ಟೀಕೆಗೆ ಒಳಗಾಗಿದೆ. ಸಾಮಾನ್ಯವಾಗಿ ಮಳೆ (Rain), ಬಿಸಿಲಿನಿಂದ ರಕ್ಷಿಸಿಕೊಳ್ಳಲು ಇನ್ನೂರು, ಮುನ್ನೂರು ಬೆಲೆತೆತ್ತು ಕೊಡೆ ತೆಗೆದುಕೊಳ್ಳುತ್ತೇವೆ. ಕಡಿಮೆ ಬೆಲೆಯಲ್ಲಿಯೇ ಕೆಲವು ಕಂಪನಿಗಳ (Company) ಕೊಡೆಗಳು ನಮ್ಮನ್ನು ಬಿಸಿಲು, ಮಳೆಯಿಂದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಪ್ರತಿಷ್ಠಿತ ಗುಚ್ಚಿ ಮತ್ತು ಅಡಿಡಾಸ್ ಕಂಪನಿ ಹೊರತಂದ ಕೊಡೆಯು ಮಳೆಯಿಂದ ರಕ್ಷಣೆ ನೀಡುವುದಿಲ್ಲವಂತೆ. ಹೀಗಾಗಿ ಎರಡು ಸಂಸ್ಥೆಗಳ ವಿರುದ್ಧ ಹಲವಾರು ವಿರೋಧಗಳು ವ್ಯಕ್ತವಾಗಿವೆ.
ಗುಚ್ಚಿ ಮತ್ತು ಅಡಿಡಾಸ್ ಜಲನಿರೋಧಕ ಕೊಡೆ
ಪ್ಯಾರಾಸೋಲ್ ಜಂಟಿ ಸಂಗ್ರಹದ ಭಾಗವಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಮುನ್ನ ಆನ್ಲೈನ್ನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಗುಚ್ಚಿ ಮತ್ತು ಅಡಿಡಾಸ್ ಚೀನಾದಲ್ಲಿ ಮಳೆಯನ್ನು ತಡೆಯದ ಕೊಡೆಯನ್ನು ಮಾರಾಟ ಮಾಡಲು ಹಿನ್ನಡೆಯನ್ನು ಎದುರಿಸುತ್ತಿದೆ. ಸರಿಸುಮಾರು ರೂ.1 ಲಕ್ಷದ ಬೆಲೆಯಲ್ಲಿ ಹೊರಬಂದಿರುವ ಕೊಡೆಯನ್ನು ಗ್ರಾಹಕರು ಜಲನಿರೋಧಕವಾಗಿದೆ ಎಂದು ನಿರೀಕ್ಷಿಸಿದ್ದರು.
ಆದಾಗ್ಯೂ, ಬ್ರ್ಯಾಂಡ್ಗಳು ಕೊಡೆಯನ್ನು ಸೂರ್ಯನಿಂದ ರಕ್ಷಿಸಲು ಅಥವಾ ಅಲಂಕಾರಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಬದಲಾಗಿ ಮಳೆಯಲ್ಲಿ ಇದು ನಿಮಗೆ ಯಾವುದೇ ಉತ್ತಮ ರಕ್ಷಣೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಈ ಹೇಳಿಕೆ ಗ್ರಾಹಕರನ್ನು ಆಶ್ಚರ್ಯಗೊಳಿಸಿದ್ದಲ್ಲದೇ ಲಕ್ಷ ಲಕ್ಷ ಬೆಲೆ ನೀಡಿದರೂ ಕೊಡೆಯಿಂದ ಯಾವುದೇ ಉಪಯೋಗಗಳಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Mercedes-Benz: 1955ರ ಮರ್ಸಿಡಿಸ್-ಬೆಂಜ್ 300 SLR; ಈ ಕಾರು ಮಾರಾಟವಾದ ಮೊತ್ತ ಕೇಳಿದರೆ ನೀವು ಶಾಕ್ ಆಗೋದು ಗ್ಯಾರೆಂಟಿ!
ಪ್ಯಾರಾಸೋಲ್ ಮಳೆಯನ್ನು ತಡೆಯುವುದಿಲ್ಲ, ಬದಲಿಗೆ ಸೂರ್ಯನಿಂದ ನೆರಳು ಮತ್ತು ಫ್ಯಾಷನ್ ಉದ್ದೇಶಗಳಿಗಾಗಿ ಬಳಸಬೇಕು ಎಂಬ ಹಕ್ಕು ನಿರಾಕರಣೆಯ ಮೇಲೆ ಬ್ರಾಂಡ್ ಗಳ ಸಹಯೋಗದ ಪೋಸ್ಟ್ ಕೇಂದ್ರೀಕರಿಸುತ್ತದೆ.
ಗುಚ್ಚಿ ಮತ್ತು ಅಡಿಡಾಸ್ ಸಹಯೋಗದಲ್ಲಿ ಛತ್ರಿ ಮಾರಾಟ
ಇಟಾಲಿಯನ್ ಹೈ-ಎಂಡ್ ಐಷಾರಾಮಿ ಫ್ಯಾಶನ್ ಹೌಸ್ ಗುಚ್ಚಿ ಮತ್ತು ಸ್ಪೋರ್ಟ್ಸ್ ವೇರ್ ಬ್ರಾಂಡ್ ಅಡಿಡಾಸ್ ನಡುವಿನ ಸಹಯೋಗದ ಭಾಗವಾಗಿ ಛತ್ರಿಯನ್ನು ಮಾರಾಟ ಮಾಡಲಾಗುತ್ತಿದೆ. ಕಂಪನಿ ತನ್ನ ವೆಬ್ಸೈಟ್ನಲ್ಲಿ, ಗುಚ್ಚಿ “ಅಡೀಡಸ್ ಮತ್ತು ಗುಚ್ಚಿ ಸಂಗ್ರಹದ ಭಾಗವಾಗಿ, ಈ ಸನ್ ಅಂಬ್ರೆಲಾ ಇಂಟರ್ಲಾಕಿಂಗ್ ಜಿ ಮತ್ತು ಟ್ರೆಫಾಯಿಲ್ ಪ್ರಿಂಟ್ ಅನ್ನು ಒಳಗೊಂಡಿದೆ.
"ದಯವಿಟ್ಟು ಗಮನಿಸಿ, ಈ ಉತ್ಪನ್ನ ಜಲನಿರೋಧಕವಲ್ಲ ಮತ್ತು ಸೂರ್ಯನ ರಕ್ಷಣೆ ಅಥವಾ ಅಲಂಕಾರಿಕ ಬಳಕೆಗಾಗಿ ಮಾತ್ರ ಉದ್ದೇಶಿಸಲಾಗಿದೆ." ಎಂದು ಕಂಪನಿ ಉಲ್ಲೇಖಿಸಿದೆ. ಬ್ರಾಂಡ್ ಗಳ ಉಲ್ಲೇಖದ ನಂತರ ಟ್ವಿಟ್ಟರ್ ನಲ್ಲಿ ಛತ್ರಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಬಳಕೆದಾರರು ಟೀಕಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರ ಕ್ಯೂಬಿಸ್ಟ್ “ಎಚ್ಚರಿಕೆ! ಛತ್ರಿಗಳು ಜಲನಿರೋಧಕವಲ್ಲ! ” ಮತ್ತು ಬ್ರ್ಯಾಂಡ್ಗಳನ್ನು ಟ್ಯಾಗ್ ಮಾಡಲಾಗಿದೆ. ಅದರ ಪ್ರಾಥಮಿಕ ಕಾರ್ಯವನ್ನು ಪೂರೈಸದ ಛತ್ರಿಗೆ ಒಬ್ಬರು ಪಾವತಿಸಬೇಕಾದ ಅತಿಯಾದ ಬೆಲೆ ಅನೇಕರನ್ನು ಕೆರಳಿಸುತ್ತದೆ“ ಎಂದು ಬರೆದಿದ್ದಾರೆ. ಛತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಮೂಡಿಸಿದೆ. "$1600 ಛತ್ರಿಯನ್ನು ಸ್ಟೇಟಸ್ ಸಿಂಬಲ್ ಆಗಿ ಖರೀದಿಸಬೇಕೆ ಹೊರತಾಗಿ ಇದು ಮಳೆ ನೀರಿನಿಂದ ರಕ್ಷಿಸುವುದಿಲ್ಲ" ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ: Youngest CEO: ಬೋಟ್ ಸಂಸ್ಥೆಗೆ ಒಂದು ದಿನ ಸಿಇಒ ಆದ 11 ವರ್ಷದ ದೃಷ್ಟಿಹೀನ ಬಾಲಕ ಪ್ರಥಮೇಶ್ ಸಿನ್ಹಾ
ಇನ್ನೊಬ್ಬ ಬಳಕೆದಾರರು ಕೋಲಾಬರೇಷನ್ ತಪ್ಪಾಗಿದೆ ಎಂದು ಬರೆದುಕೊಂಡಿದ್ದಾರೆ. ಬಿಬಿಸಿ ಮಾಡಿರುವ ವರದಿ ಪ್ರಕಾರ, ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ವೈಬೊದಲ್ಲಿ ಛತ್ರಿಯ ಟೀಕೆಗಳು ಭಾರಿ ವೈರಲ್ ಆಗಿದೆ. "11,100 ಯುವಾನ್ಗೆ ಮಾರಾಟವಾಗುತ್ತಿರುವ ಗುಚ್ಚಿ ಮತ್ತು ಅಡಿಡಾಸ್ ಸಹಯೋಗದ ಛತ್ರಿ ಜಲನಿರೋಧಕವಲ್ಲ" ಎಂದು ಭಾಷಾಂತರಿಸುವ ಹ್ಯಾಶ್ಟ್ಯಾಗ್ ವೈಬೊದಲ್ಲಿ 140 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ದೈನಂದಿನ ಪರಿಕರವಾಗಿ ಬಳಸಲು ಸೂಕ್ತವಾದ ಪ್ಯಾರಾಸೋಲ್ ಬಿಡುಗಡೆಗೆ ನಿರ್ಧಾರ
ಆದಾಗ್ಯೂ, ಗುಚ್ಚಿ ವಕ್ತಾರರು ಬೀಜಿಂಗ್ ಮೂಲದ ಮ್ಯಾಗಜೀನ್ ಕೈಜಿಂಗ್ಗೆ ಉತ್ಪನ್ನವನ್ನು "ದೈನಂದಿನ ಛತ್ರಿಯಾಗಿ ಬಳಸಲು ಶಿಫಾರಸು ಮಾಡಲಾಗಿಲ್ಲ" ಎಂದು ಹೇಳಿದರು. ಐಷಾರಾಮಿ ಬ್ರಾಂಡ್ ಗುಚ್ಚಿ ಮತ್ತು ಸ್ಪೋರ್ಟ್ಸ್ ದೈತ್ಯ ಅಡಿಡಾಸ್ನ ಹೊಸ ಸಂಗ್ರಹದ ಭಾಗವಾಗಿ ಪ್ಯಾರಾಸೋಲ್ ಅನ್ನು ಜೂನ್ 7 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು "ಉತ್ತಮ ಸಂಗ್ರಾಹಕ ಮೌಲ್ಯವನ್ನು ಹೊಂದಿದೆ ಮತ್ತು ದೈನಂದಿನ ಪರಿಕರವಾಗಿ ಬಳಸಲು ಸೂಕ್ತವಾಗಿದೆ" ಎಂದು ಅವರು ಸೇರಿಸಿದರು. ಚೀನಾ ಪ್ರಮುಖ ಐಷಾರಾಮಿ ಬ್ರಾಂಡ್ಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ