• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಹಾಡುಹಗಲೇ ದರೋಡೆ ನಡೀತಿದ್ರೂ ಆರಾಮಾಗಿ ನಿದ್ದೆ ಮಾಡಿದ ಸಾಕು ನಾಯಿ..!; ಇಲ್ಲಿದೆ ನೋಡಿ ವೈರಲ್ ವಿಡಿಯೋ

ಹಾಡುಹಗಲೇ ದರೋಡೆ ನಡೀತಿದ್ರೂ ಆರಾಮಾಗಿ ನಿದ್ದೆ ಮಾಡಿದ ಸಾಕು ನಾಯಿ..!; ಇಲ್ಲಿದೆ ನೋಡಿ ವೈರಲ್ ವಿಡಿಯೋ

ದರೋಡೆ ನಡೆಯುತ್ತಿದ್ದರೂ ನಿದ್ರೆ ಮಾಡುತ್ತಿರುವ ಸಾಕು ನಾಯಿ

ದರೋಡೆ ನಡೆಯುತ್ತಿದ್ದರೂ ನಿದ್ರೆ ಮಾಡುತ್ತಿರುವ ಸಾಕು ನಾಯಿ

ಅಂಗಡಿಯ ಮಾಲೀಕ ವೊರಾವುಟ್ ಲೋಮ್ವಾನಾವೊಂಗ್ ತನ್ನ ನಾಯಿ ಲಕ್ಕಿಗೆ ಪ್ರತಿಕೂಲ ಸಂದರ್ಭಗಳ ಬಗ್ಗೆ ತರಬೇತಿ ನೀಡುತ್ತಿದ್ದಾನೆ. "ಸಶಸ್ತ್ರಧಾರಿ''ಗಳು ಅಂಗಡಿಗೆ ಬಂದಾಗ, ಅದಕ್ಕೆ ಬೆದರಿಕೆ ಹಾಕಿದಾಗ, ಹಿಂಸಾಚಾರದಲ್ಲಿ ತೊಡಗಿದಾಗ , ತನ್ನ ಲಕ್ಕಿ ಹಲ್ಲೆಕೋರರ ವಿರುದ್ಧ ಫೈಟ್ ಮಾಡುತ್ತೆ ಎಂದು ಮಾಲೀಕರು ಅಂದುಕೊಂಡಿದ್ದರು

ಮುಂದೆ ಓದಿ ...
  • Share this:

ನಾಯಿಗಳು ಮುದ್ದಾದ, ಸ್ನೇಹಶೀಲ ಒಡನಾಡಿಗಳು ಮತ್ತು ಮನುಷ್ಯರಿಗೆ ಸ್ನೇಹಿತರು ಎಂಬುದು ಬಹುತೇಕರು ನಿರಾಕರಿಸಲಾರರು. ಆದರೆ, ಹೆಚ್ಚಿನ ಸಂಖ್ಯೆಯ ಜನರು ಕೇವಲ ಮುದ್ದಾದ ಸ್ನೇಹಿತನನ್ನು ಹೊಂದುವ ಬದಲು ಸುರಕ್ಷತಾ ಕಾರಣಗಳಿಗಾಗಿ ಶ್ವಾನಗಳನ್ನು ಇಟ್ಟುಕೊಳ್ಳುತ್ತಾರೆ. ಜಮೀನುಗಳಲ್ಲಿ ಕೆಲವರು ನಾಯಿ ಸಾಕಿದ್ರೆ, ಕೆಲವು ಭದ್ರತಾ ಸಿಬ್ಬಂದಿ ಕಾವಲು ಕಾಯಲು ಹಾಗೂ ಕಳ್ಳರು, ದರೋಡೆಕೋರರ ವಿರುದ್ಧ ಆಕ್ರಮಣ ಮಾಡಲು ಶ್ವಾನವನ್ನು ಇಟ್ಟುಕೊಳ್ಳುತ್ತಾರೆ. ಆದರೆ, ನಾವು ಈ ಹೇಳಲು ಹೊರಟಿರುವ ಈ ಸ್ಟೋರಿಯಲ್ಲಿ ಥೈಲ್ಯಾಂಡ್ನಲ್ಲಿ ನಡೆದಿದ್ದು, ಸೈಬೀರಿಯನ್ ಹಸ್ಕಿ ಶ್ವಾನ, ತನ್ನ ಕರ್ತವ್ಯ ಮಾಡುವ ಬದಲು ಆರಾಮಾಗಿ ನಿದ್ರೆ ಮಾಡುತ್ತಿದೆ.


ಫೇಸ್​ಬುಕ್​ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ನಾಯಿಯು ದರೋಡೆ ನಡೆಯುತ್ತಿದ್ದರೂ ನಿದ್ರಿಸುವುದನ್ನು ಕಾಣಬಹುದು. ಆದರೆ, ಈ ಶಸ್ತ್ರಸಜ್ಜಿತ ದರೋಡೆ ನಕಲಿಯಾಗಿದ್ದು, ಶೀಘ್ರದಲ್ಲೇ ಆಭರಣ ಅಂಗಡಿಯಲ್ಲಿ ಭದ್ರತಾ ಕ್ರಮವಾಗಿ ಆ ಶ್ವಾನವನ್ನು ನೇಮಕ ಮಾಡಿಕೊಳ್ಳಲು ನಡೆದ ಟೆಸ್ಟ್ ಆಗಿದೆ. ಆದರೆ ಆ ಟೆಸ್ಟ್​​ನಲ್ಲಿ ಶ್ವಾನ ಫೇಲ್ ಆಗಿದೆ.


ಕೆಲಸ ಕೊಡಿ, ಇಲ್ಲವೇ ದಯಾಮರಣ ನೀಡಿ; ವಿದ್ಯುತ್​ ಸ್ಥಾವರಕ್ಕಾಗಿ ಭೂಮಿ ಕಳೆದುಕೊಂಡ ಯುವಕರ ಅಳಲು


ಅಂಗಡಿಯ ಮಾಲೀಕ ವೊರಾವುಟ್ ಲೋಮ್ವಾನಾವೊಂಗ್ ತನ್ನ ನಾಯಿ ಲಕ್ಕಿಗೆ ಪ್ರತಿಕೂಲ ಸಂದರ್ಭಗಳ ಬಗ್ಗೆ ತರಬೇತಿ ನೀಡುತ್ತಿದ್ದಾನೆ. "ಸಶಸ್ತ್ರಧಾರಿ''ಗಳು ಅಂಗಡಿಗೆ ಬಂದಾಗ, ಅದಕ್ಕೆ ಬೆದರಿಕೆ ಹಾಕಿದಾಗ, ಹಿಂಸಾಚಾರದಲ್ಲಿ ತೊಡಗಿದಾಗ , ತನ್ನ ಲಕ್ಕಿ ಹಲ್ಲೆಕೋರರ ವಿರುದ್ಧ ಫೈಟ್ ಮಾಡುತ್ತೆ ಎಂದು ಮಾಲೀಕರು ಅಂದುಕೊಂಡಿದ್ದರು. ಆದರೆ, "ಶಸ್ತ್ರಸಜ್ಜಿತ" ವ್ಯಕ್ತಿ ಸ್ವಯಂಚಾಲಿತ ಹ್ಯಾಂಡ್​​​ಗನ್​ನ ಪ್ರತಿಕೃತಿಯನ್ನು ಹಿಡಿದು ಆಭರಣ ಅಂಗಡಿಯನ್ನು ಪ್ರವೇಶಿಸಿ ಅದನ್ನು ಲೋಮ್ವಾನಾವಾಂಗ್ಗೆ ತೋರಿಸಿದರು. ಫೆಬ್ರವರಿ 16 ರಂದು ಚಿಯಾಂಗ್ ಮಾದಲ್ಲಿನ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಕಾರ್ಯವಿಧಾನ ಸೆರೆಹಿಡಿಯಲಾಗಿದೆ.




ಲೋಮ್ವಾನಾವೊಂಗ್ ಲಕ್ಕಿಯನ್ನು ಹಲವಾರು ಬಾರಿ ನೋಡಿದರು, ಎಬ್ಬಿಸಲು ಪಿಸುಗುಟ್ಟಿದರು. ಆದರೆ, ಅಷ್ಟರಲ್ಲಿ ಆ ವ್ಯಕ್ತಿ ಅಂಗಡಿಯ ಮಾಲೀಕನಿಗೆ ಬೆದರಿಕೆ ಹಾಕುತ್ತಾ ಗದ್ದಲ ಸೃಷ್ಟಿಸಿದರು. ಆದರೆ, ಪಾಪ ಅದ್ಯಾವುದೂ ಆ ಶ್ವಾನವನ್ನು ಎಬ್ಬಿಸಲು ಸಾಧ್ಯವಾಗಲೇ ಇಲ್ಲ. ಕನಸಿನ ಲೋಕದಲ್ಲಿತ್ತೇನೋ ಅಲ್ವ..! ಇನ್ನು, ಈ ನಕಲಿ ಕಳ್ಳತನದ ಡ್ರಾಮಾದಲ್ಲಿದ್ದ ಆ ಕಳ್ಳ ಕಳ್ಳತನ ಮಾಡಿ ಹಣದ ಬ್ಯಾಗ್ನೊಂದಿಗೆ ಪರಾರಿಯಾದರೂ ಶ್ವಾನಕ್ಕೆ ಅದರ ಪರಿವೆಯೇ ಇಲ್ಲ.


ತನ್ನ ನಾಯಿ ಬಹುಶಃ "ವಿಭಿನ್ನ ಆದ್ಯತೆಗಳನ್ನು" ಹೊಂದಿದೆ ಎಂದು ಲೋಮ್ವಾನಾವೊಂಗ್ ಉಲ್ಲೇಖಿಸಿದ್ದಾರೆ.


ಆದರೆ ಚಿಂತಿಸಬೇಡಿ. ಈ ರೀತಿಯ ಸನ್ನಿವೇಶಗಳಿಗೆ ತರಬೇತಿ ಪಡೆದ ಮತ್ತು ಅದರಲ್ಲಿ ವಿಫಲವಾದ ನಾಯಿ ಯಾವುದೇ ಶಿಕ್ಷೆಯನ್ನು ಪಡೆಯಲಿಲ್ಲ. ಲೋಮ್ವಾನಾವೊಂಗ್ ಅವರು ಮೊದಲಿನಂತೆಯೇ ಲಕ್ಕಿಯನ್ನು ಈಗಲೂ ಪ್ರೀತಿಸುತ್ತಾರೆ. 'ಅದು ನನಗೆ ಅದೃಷ್ಟ ತಂದುಕೊಟ್ಟ ಕಾರಣ ನಾನು ಅವನಿಗೆ ಲಕ್ಕಿ ಎಂದು ಹೆಸರಿಟ್ಟೆ. ಅವನ ಸುತ್ತಲಿರುವ ಪ್ರತಿಯೊಬ್ಬರನ್ನು ಸಂತೋಷಪಡಿಸುವುದು ಮತ್ತು ಅಂಗಡಿಗಳನ್ನು ಕಾಪಾಡದಿರುವುದು ಅವನ ಉದ್ದೇಶವಾಗಿರಬಹುದು, ” ಎಂದು ಅವರು ಹೇಳಿದರು.

First published: