ಈಗಂತೂ ಕೆಲವು ಜನರು ಸರ್ಕಾರಕ್ಕೆ(Government) ಹೇಗೆ? ಎಲ್ಲಿ? ಯಾವಾಗ ಮೋಸ ಮಾಡಿ ದುಡ್ಡು ಉಳಿಸಿಕೊಳ್ಳಬಹುದು ಎಂದು ಯೋಚಿಸುತ್ತಲೇ ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಅದರಲ್ಲೂ ಜಿಎಸ್ಟಿಯಲ್ಲಿ ಮತ್ತು ತೆರಿಗೆ ಕಟ್ಟುವಲ್ಲಿ ಮಧ್ಯಮ ವರ್ಗದ (Middle Class) ಜನರು ಅಲ್ಲದೆ, ಅನೇಕ ಪ್ರಭಾವಿ ಜನರು ಸಹ ತಮ್ಮ ಮೇಲಿನ ತೆರಿಗೆ ಹಣದ (Tax Money) ಭಾರವನ್ನು ಕಡಿಮೆ ಮಾಡಿಕೊಳ್ಳಲು ಸರ್ಕಾರಕ್ಕೆ ಅನೇಕ ರೀತಿಯಲ್ಲಿ ಮೋಸ ಮಾಡಲು (Ambushing) ಹೊಂಚು ಹಾಕುತ್ತಲೇ ಇರುವುದನ್ನು ಮತ್ತು ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಿರುವುದನ್ನು ಸಹ ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ.
1,000 ಕೋಟಿ ರೂಪಾಯಿ ಬೊಗಸ್ ಬಿಲ್
ಇಲ್ಲಿಯೂ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಈ ಅಕೌಂಟೆಂಟ್ ಒಂದಲ್ಲ, ಎರಡಲ್ಲ ಬರೋಬ್ಬರಿ 1,000 ಕೋಟಿ ರೂಪಾಯಿಯ ಬೊಗಸ್ ಬಿಲ್ಗಳನ್ನು ಜನರಿಗೆ ನೀಡುವ ಮೂಲಕ ವಂಚನೆ ಮಾಡಿದ್ದು, ಈಗ ಜಿಎಸ್ಟಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ.
1,000 ಕೋಟಿ ರೂಪಾಯಿ ಮೌಲ್ಯದ ನಕಲಿ ಬಿಲ್ಗಳನ್ನು ನೀಡಿದ ಮತ್ತು 181 ಕೋಟಿ ರೂಪಾಯಿಯ ಇನ್ಪುಟ್ ತೆರಿಗೆ ಕ್ರೆಡಿಟ್ ವಂಚನೆ ಮಾಡಿದ ಆರೋಪದ ಮೇಲೆ 'ಅಕೌಂಟೆಂಟ್' ನನ್ನು ಬಂಧಿಸಲಾಗಿದೆ ಎಂದು ಜಿಎಸ್ಟಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಅಕೌಂಟೆಂಟ್ ತುಂಬಾ ಏನು ಓದಿದವನಲ್ಲ, ಬರೀ 12ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದವನು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: GST: ವರ್ಷಾಂತ್ಯದಲ್ಲಿ 1.29 ಲಕ್ಷ ಕೋಟಿಯಷ್ಟು ಜಿಎಸ್ಟಿ ಹಣ ಸಂಗ್ರಹ
ಜಿಎಸ್ಟಿ ಸಲಹೆಗಾರರಾಗಿ
ಅಕೌಂಟೆಂಟ್ ಮತ್ತು ಜಿಎಸ್ಟಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ 27 ವರ್ಷದ ವ್ಯಕ್ತಿಯನ್ನು ಮುಂಬೈ ವಲಯದ ಪಾಲ್ಘರ್ ಸಿಜಿಎಸ್ಟಿ ಕಮಿಷನರೇಟ್ನ ಅಧಿಕಾರಿಗಳು ಬಂಧಿಸಿದ್ದಾರೆ.
ಡೇಟಾ ವಿಶ್ಲೇಷಣೆ ಮಾಡುತ್ತಿರುವಾಗ ಜಿಎಸ್ಟಿ ಅಧಿಕಾರಿಗಳಿಗೆ ಸಂಶಯ ಬಂದಿದ್ದು, ನಿರ್ದಿಷ್ಟ ಮಾಹಿತಿಗಳ ಆಧಾರದ ಮೇಲೆ ಈ ವಿಷಯದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇದು ಸರಕುಗಳು ಅಥವಾ ಸೇವೆಗಳನ್ನು ಸ್ವೀಕರಿಸದೆ ನಕಲಿ ಬಿಲ್ಗಳನ್ನು ನೀಡುವ ಮೂಲಕ ನಕಲಿ ಇನ್ಪುಟ್ ತೆರಿಗೆ ಕ್ರೆಡಿಟ್ ಯನ್ನು ಪಡೆಯಲು ಮತ್ತು ರವಾನಿಸಲು ನಿಥಿಲಾನ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಸಣ್ಣ ಕಚೇರಿಯೊಂದು ನಿರತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಬಿಲ್ ಅಪರಾಧ
ಸಿಕ್ಕಿ ಬಿದ್ದಂತಹ ಅಕೌಂಟೆಂಟ್ನ ಗುರುತನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ, ವಿತ್ತೀಯ ಲಾಭಕ್ಕಾಗಿ ಜಿಎಸ್ಟಿ ವಂಚನೆ ಮಾಡಿದ್ದಕ್ಕಾಗಿ ತನ್ನ ಗ್ರಾಹಕರಲ್ಲಿ ಒಬ್ಬರ ಗುರುತನ್ನು ಕದ್ದಿದ್ದಾರೆ ಎಂದು ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಹೇಳಿಕೆ ತಿಳಿಸಿದೆ. ಅಧಿಕಾರಿಗಳು ಭೌತಿಕ ಪುರಾವೆಗಳನ್ನು ಮುಂದಿಟ್ಟಾಗ ಅಕೌಂಟೆಂಟ್ ತಾನು 1,000 ಕೋಟಿ ರೂಪಾಯಿಗೂ ಹೆಚ್ಚು ನಕಲಿ ಬಿಲ್ಗಳನ್ನು ನೀಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು 181 ಕೋಟಿ ರೂಪಾಯಿಯ ನಕಲಿ ಐಟಿಸಿಯನ್ನು ಪಡೆದು ಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: GST New Rules: ಜಿಎಸ್ಟಿ ಬಗ್ಗೆ ಚೆಕ್ ಮಾಡೋಕೆ ಅಧಿಕಾರಿಗಳು ಇನ್ಮೇಲೆ ಯಾವಾಗ ಬೇಕಿದ್ರೂ ಮನೆ ಬಾಗಿಲಿಗೇ ಬರ್ತಾರೆ, ಹುಷಾರ್!
ದೊಡ್ಡ ಜಾಲದ ಭಾಗ
ಸ್ಥಳೀಯ ನ್ಯಾಯಾಲಯ ಬಂಧಿತ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯು ಜಿಎಸ್ಟಿ ನೋಂದಣಿಯನ್ನು ಪಡೆಯಲು ಮುಗ್ಧ ಜನರನ್ನು ಆಕರ್ಷಿಸುವ ದೊಡ್ಡ ಜಾಲದ ಭಾಗವಾಗಿದ್ದಾನೆ ಎಂದು ಶಂಕಿಸಲಾಗಿದೆ ಮತ್ತು ಈ ನೋಂದಣಿಯನ್ನು ಕದಿಯುತ್ತಿದ್ದನು ಎಂದು ಹೇಳಿಕೆ ತಿಳಿಸಿದೆ, ನಂತರ ಇದನ್ನು ನಕಲಿ ಐಟಿಸಿಗಾಗಿ ಬಳಸಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ.
ಈ ಜಾಲದ ಕಿಂಗ್ ಪಿನ್ ಮತ್ತು ಈ ಜಾಲದ ಇತರ ಫಲಾನುಭವಿಗಳನ್ನು ಗುರುತಿಸುವ ಪ್ರಯತ್ನಗಳು ಅಧಿಕಾರಿಗಳಿಂದ ನಡೆಯುತ್ತಿವೆ ಎಂದು ಹೇಳಿಕೆ ತಿಳಿಸಿದೆ. ಪಾಲ್ಘರ್ ಸಿಜಿಎಸ್ಟಿ ಕಮಿಷನರೇಟ್ 460 ಕೋಟಿ ರೂಪಾಯಿಯ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದು, 12 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದೆ ಮತ್ತು ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಿದೆ ಎಂದು ಹೇಳಿಕೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ