• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ವೃಕ್ಷವನ್ನು ಹೆಗಲ ಮೇಲೆ ಹೊತ್ತು ಮರುನೆಟ್ಟ ಬಾಹುಬಲಿಗಳಿಗೆ ಆನ್​ಲೈನ್​ನಲ್ಲಿ ಪ್ರಶಂಸೆ

ವೃಕ್ಷವನ್ನು ಹೆಗಲ ಮೇಲೆ ಹೊತ್ತು ಮರುನೆಟ್ಟ ಬಾಹುಬಲಿಗಳಿಗೆ ಆನ್​ಲೈನ್​ನಲ್ಲಿ ಪ್ರಶಂಸೆ

ಬೇರು ಸಹಿತ ಕಿತ್ತ ಮರವನ್ನ ಸಾಗಿಸುತ್ತಿರುವ ಜಾರ್ಖಂಡ್ ಯುವಕರು

ಬೇರು ಸಹಿತ ಕಿತ್ತ ಮರವನ್ನ ಸಾಗಿಸುತ್ತಿರುವ ಜಾರ್ಖಂಡ್ ಯುವಕರು

ಯಂತ್ರಗಳ ಮೂಲಕ ಮಾಡಲಾಗುವ ಕೆಲಸವನ್ನ ಜಾರ್ಖಂಡ್​ನ ಯುವಕರು ಮಾಡಿದ್ಧಾರೆ. ಬೇರು ಸಹಿತ ಹೊರತೆಗೆದ ಮರವನ್ನ ಬೇರೆಡೆ ನೆಡಲು ಹೆಗಲ ಮೇಲೆ ಹೊತ್ತು ಸಾಗಿದ ಯುವಕರ ಚಿತ್ರ ಆನ್​ಲೈನ್​ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

  • Share this:

ವೃಕ್ಷಗಳೆಂದರೆ ಅವು ಮನುಕುಲದ ಸಂಜೀವಿನಿ. ಯುವಕರ ಗುಂಪೊಂದು ಈ ಮಾತನ್ನು ಅಕ್ಷರಶಃ ನಿಜ ಮಾಡಿದ್ದಾರೆ. ಹುಡುಗರ ಗುಂಪೊಂದು ಬೇರು ಸಹಿತ ಮರವೊಂದನ್ನು ಅಗೆದಿದ್ದಾರೆ. ಇನ್ನೊಂದು ಮರದ ದಿಮ್ಮಿಗೆ ಅದನ್ನು ಕಟ್ಟಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿ ಆ ಮರವನ್ನು ಇನ್ನೊಂದು ಸ್ಥಳದಲ್ಲಿ ನೆಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರ ಮನಸ್ಸು ಗೆದ್ದಿದೆ. ಜಾರ್ಖಂಡ್ ಮೂಲದ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಇದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.


ಪ್ರಸ್ತುತ ಯುವಕರ ಈ ನಡೆ ಮರ ಕಡಿಯುವವರಿಗೆ ಮರು ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ಮಾನವರು ತಮ್ಮ ಬದುಕಿನ ನಿರ್ವಹಣೆಗೆ ಮರ ಕಡಿಯುವುದಕ್ಕೆ ಮುಂದಾಗುತ್ತಾರೆ. ಹಾಗೆಂದು ಸಂಪೂರ್ಣ ಮರವನ್ನು ನಾಶ ಮಾಡಿ, ಪರಿಸರಕ್ಕೆ ಹಾನಿ ಮಾಡುವ ಬದಲಿಗೆ ಈ ರೀತಿ ಕಸಿ ವಿಧಾನವನ್ನು ಅನುಸರಿಸಿ ಮರವನ್ನು ಸಂರಕ್ಷಿಸುವ ಕೆಲಸ ಮಾಡಿದ್ದಾರೆ.


ಏನಿದು ಮರ ಕಸಿ?
ಈ ಪರಿಕಲ್ಪನೆಯನ್ನು ಪ್ರಪಂಚದಾದ್ಯಂತ ಅಭ್ಯಾಸ ಮಾಡಲಾಗುತ್ತಿದೆ ಮತ್ತು ದೇಶದ ವಿವಿಧ ನಾಗರಿಕ ಸಂಸ್ಥೆಗಳು ಇದನ್ನು ಪಡೆದುಕೊಂಡಿವೆ. ಯಂತ್ರಗಳ ಬೆಂಬಲ ಮತ್ತು ಬೃಹತ್ ಯಂತ್ರೋಪಕರಣಗಳ ಮೂಲಕ ಕಸಿಯನ್ನು ಕಾರ್ಯಗತಗೊಳಿಸಬಹುದು. ಅಲ್ಲದೇ ಈ ಪ್ರಕ್ರಿಯೆಯನ್ನು ವ್ಯಕ್ತಿಗಳ ಗುಂಪಿನಿಂದಲೂ ಕೈಗೊಳ್ಳಬಹುದು. ಜಾಗ್ರತೆಯಾಗಿ ಬೇರಿಗೆ ತೊಂದರೆಯಾಗದಂತೆ ಮರವನ್ನು ಬೇರ್ಪಡಿಸಬೇಕು. ಇಲ್ಲವಾದರೆ ಸಾಕಷ್ಟು ನಷ್ಟ, ವೈಫಲ್ಯಗಳು ಆಗುವ ಸಾಧ್ಯತೆಗಳಿರುತ್ತವೆ.


ಇದನ್ನೂ ಓದಿ: ಅಣ್ಣ ತಮ್ಮ ಸೇರಿ 50 ವೆರೈಟಿ ಮಾವು ಬೆಳೆದಿದ್ದಾರೆ, ಇವರ ಬಳಿ ಇರುವ ಮಾವಿನ ಬಗೆಗಳನ್ನು ನೋಡಿದ್ರೇ ಆಶ್ಚರ್ಯವಾಗುತ್ತೆ !


ಅರಣ್ಯನಾಶಕ್ಕೆ ಇನ್ನಾದ್ರೂ ಕಡಿವಾಣ ಬೀಳಲಿ:
ಇನ್ನು ಈ ಫೋಟೋಗಳನ್ನು ಹಂಚಿಕೊಂಡಿರುವ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಅವರು 'ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರವೇ ಹೇಳುತ್ತದೆ' ಎಂದು ಶೀರ್ಷಿಕೆ ನೀಡಿದ್ದಾರೆ.


ಅರಣ್ಯನಾಶವು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಮರಗಳ ಹನನ ನಡೆಯುತ್ತಿವೆ. ಮೆಟ್ರೋ ನಗರಗಳಲ್ಲಂತೂ ಲೆಕ್ಕವಿಲ್ಲದಷ್ಟು ಮರಗಳು ಬೆಳವಣಿಗೆಯ ಹೆಸರಿನಲ್ಲಿ ಧರೆಗುರುಳುತ್ತಿವೆ. ಇಂತಹ ಸಂದರ್ಭದಲ್ಲಿ ಹೊಸ ಗಿಡಗಳನ್ನು ನೆಟ್ಟು ಅವು ಮರವಾಗಿ ಬೆಳೆಯಲು ಸಾಕಷ್ಟು ವರ್ಷಗಳೇ ಬೇಕಾಗಬಹುದು. ಅಷ್ಟರಲ್ಲಿ ಪರಿಸರ ತೀರಾ ಹದಗೆಡಬಹುದು. ಆದ್ದರಿಂದ ಮರಗಳ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಈ ಫೋಟೋ ನಮ್ಮ ಭೂಮಿ ಅತ್ಯುತ್ತಮ ತಾಣವಾಗುವ ಎಲ್ಲಾ ಭರವಸೆಗಳನ್ನು ನೀಡುತ್ತಿದೆ.


ಇದನ್ನೂ ಓದಿ: Viral News: ಮದುವೆಮನೆಯಲ್ಲಿ ಊಟಕ್ಕಿಂತ ಮುಂಚೆ ಮೆನು ಕಾರ್ಡ್ ಕೊಡ್ತಿದ್ರಂತೆ, 90ರ ದಶಕದ ಔತಣಕೂಟದ ವೆರೈಟಿ ನೋಡಿ..


ಯಂತ್ರಗಳ ಬಳಕೆ ಇಲ್ಲದೇ ಕಸಿ ಮಾಡಿದ ಯುವಕರು


ಹಸಿರು ಯೋಧರು ವೃಕ್ಷವನ್ನು ಸಂರಕ್ಷಿಸುವ ಕಾರಣಕ್ಕಷ್ಟೇ ಈ ಚಿತ್ರ ವೈರಲ್ ಆಗಿಲ್ಲ. ಅದರ ಜೊತೆಗೆ ಯಾವುದೇ ಮೆಷಿನ್​ನ ಸಹಾಯವಿಲ್ಲದೇ ಈ ಮರವನ್ನು ಹುಡುಗರು ತಮ್ಮ ಭುಜದ ಮೇಲೆ ಹೊತ್ತು ನಡೆದಿರುವುದು ಶ್ಲಾಘನೆಗೆ ಒಳಗಾಗಿದೆ. ಕೇವಲ ಒಬ್ಬರೇ ಇದನ್ನು ಮಾಡಲು ಕಷ್ಟವಾಗುತ್ತಿತ್ತು. ಆದರೆ ಯುವಕರ ಗುಂಪು ಈ ಕೆಲಸವನ್ನು ಹೂವು ಎತ್ತಿದ್ದಷ್ಟು ಸರಾಗವಾಗಿ ಮಾಡಿ ಮುಗಿಸಿದ್ದಾರೆ. ಆ ಮೂಲಕ ಸಮುದಾಯವಾಗಿ ವೃಕ್ಷಗಳನ್ನು ಉಳಿಸುವ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ.


ಈ ಫೋಟೋಗೆ ಸಾಕಷ್ಟು ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಮಣ್ಣಿನೊಟ್ಟಿಗೆ ಬೇರು ಬಿಟ್ಟಿರುವ ಈ ಮರವು ಚೆನ್ನಾಗಿ ಬೆಳವಣಿಗೆಯಾದರೆ ಅದು ಪವಾಡ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ನಿಜಕ್ಕೂ ಇದೊಂದು ಅದ್ಭುತ ಪ್ರಯತ್ನ ಎಂದಿದ್ದಾರೆ.

- ಚೈತ್ರಾ ಎನ್ ಭವಾನಿ, ಏಜೆನ್ಸಿ

Published by:Vijayasarthy SN
First published: