Viral Video: ಈ ಒಂದು ಕೊಡೆಯಲ್ಲಿ ಎಷ್ಟೊಂದು ಮಕ್ಕಳು ಹೋಗ್ತಿದಾರೆ ನೋಡಿ! ನಿಮ್ಗೂ ಬಾಲ್ಯ ನೆನಪಾಯ್ತ?

ಒಟ್ಟಿನಲ್ಲಿ ಈ ಬಾಲ್ಯದ ನೆನಪುಗಳು ನಮ್ಮ ಮನಸ್ಸಿನಲ್ಲಿ ಸದಾ ಅಚ್ಚಳಿಯದಂತೆ ಉಳಿದಿರುತ್ತವೆ. ಯಾವುದಾದರೂ ಒಂದು ಮಕ್ಕಳ ಫೋಟೋ ಅಥವಾ ವಿಡಿಯೋ ನೋಡಿದರೆ ನಾವು ತಕ್ಷಣವೇ ನಮ್ಮ ಬಾಲ್ಯದ ನೆನಪುಗಳಿಗೆ ಹೋಗುತ್ತೇವೆ.

ಒಂದು ಛತ್ರಿಯಲ್ಲಿ ಮಕ್ಕಳು ನಡೆದುಕೊಂಡು ಹೋಗುವ ದೃಶ್ಯ

ಒಂದು ಛತ್ರಿಯಲ್ಲಿ ಮಕ್ಕಳು ನಡೆದುಕೊಂಡು ಹೋಗುವ ದೃಶ್ಯ

  • Share this:
ಒಳ್ಳೆಯದು, ಕೆಟ್ಟದರ ನಡುವಿನ ವ್ಯತ್ಯಾಸ ಗೊತ್ತಿರದ ವಯಸ್ಸು ಎಂದರೆ ಅದು ಬಾಲ್ಯ (Childhood). ಹೌದು.. ಬಾಲ್ಯದಲ್ಲಿ ನಾವು ಎಲ್ಲಾದಕ್ಕೂ ಹೊಂದಿಕೊಳ್ಳುವ ಬುದ್ದಿ ಮತ್ತು ಅವರು, ಇವರು ಎನ್ನುವ ಯಾವುದೇ ಲೆಕ್ಕಾಚಾರ ಗೊತ್ತಿರದ ವಯಸ್ಸು ಅದು ಅಂತ ಹೇಳಬಹುದು. ಈ ಬಾಲ್ಯದ ನೆನಪುಗಳು (Childhood Memory) ಪ್ರತಿಯೊಬ್ಬರ ಬದುಕಿನಲ್ಲೂ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ತುಂಬಾನೇ ಗಾಢವಾದ ಪ್ರಭಾವವನ್ನು ಬೀರಿರುತ್ತವೆ. ಬಾಲ್ಯದಲ್ಲಿ ಆದಂತಹ ಸಿಹಿ ಘಟನೆಗಳು ತುಂಬಾನೇ ಖುಷಿ ಕೊಡುತ್ತವೆ, ಅಷ್ಟೇ ಅಲ್ಲದೆ ಕೆಟ್ಟ ಘಟನೆಗಳು ನಮಗೊಂದು ಒಳ್ಳೆಯ ಪಾಠವನ್ನು (Lessons) ಕಲಿಸಿರುತ್ತದೆ.

ಬಾಲ್ಯದ ನೆನಪನ್ನು ಮೆಲುಕು ಹಾಕುವ ವಿಡಿಯೋ ವೈರಲ್
ಒಟ್ಟಿನಲ್ಲಿ ಈ ಬಾಲ್ಯದ ನೆನಪುಗಳು ನಮ್ಮ ಮನಸ್ಸಿನಲ್ಲಿ ಸದಾ ಅಚ್ಚಳಿಯದಂತೆ ಉಳಿದಿರುತ್ತವೆ. ಯಾವುದಾದರೂ ಒಂದು ಮಕ್ಕಳ ಫೋಟೋ ಅಥವಾ ವಿಡಿಯೋ ನೋಡಿದರೆ ನಾವು ತಕ್ಷಣವೇ ನಮ್ಮ ಬಾಲ್ಯದ ನೆನಪುಗಳಿಗೆ ಹೋಗುತ್ತೇವೆ. ಇದನ್ನು ಆಂಗ್ಲ ಭಾಷೆಯಲ್ಲಿ ‘ನಾಸ್ಟಾಲ್ಜಿಕ್’ ಆಗುವುದು ಅಂತ ಹೇಳ್ತಾರೆ. ಇಲ್ಲೊಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಆ ವಿಡಿಯೋ ನಿಮ್ಮನ್ನು ನಿಮ್ಮ ಬಾಲ್ಯದ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡುತ್ತದೆ.

ಅಂಥದ್ದೇನಿದೆ ಈ ವಿಡಿಯೋದಲ್ಲಿ
ವಿಡಿಯೋದಲ್ಲಿ ಜಿಟಿ ಜಿಟಿ ಮಳೆ ಬರ್ತಾ ಇದೆ ಮತ್ತು ಒಂದೇ ಛತ್ರಿಯ ಅಡಿಯಲ್ಲಿ ಮಕ್ಕಳ ಗುಂಪೊಂದು ನಿಧಾನವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಅದರಲ್ಲಿ ನೋಡಬಹುದು. ಆ ಮಕ್ಕಳ ಗುಂಪು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಂತಹ ದೃಶ್ಯವನ್ನು ತೋರಿಸುವ ಈ ವಿಡಿಯೋ ಈಗಾಗಲೇ ಅಂತರ್ಜಾಲದಲ್ಲಿ ಅನೇಕ ನೆಟ್ಟಿಗರ ಮನಸ್ಸು ಮತ್ತು ಹೃದಯಗಳನ್ನು ಗೆದ್ದಿದೆ ಎಂದು ಹೇಳಿದರೆ ಸುಳ್ಳಾಗುವುದಿಲ್ಲ.

ಇದನ್ನೂ ಓದಿ: Viral Video: ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಯುವಕ! ಮುಂದೇನಾಯ್ತು ಗೊತ್ತಾ?

ಈ ಕ್ಲಿಪ್ ಅನ್ನು ಭಾರತೀಯ ಆಡಳಿತ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂದರೆ ಐಎಎಸ್ ಅಧಿಕಾರಿಯಾದ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳು ರಸ್ತೆಯ ಮೂಲಕ ನಡೆದು ಹೋಗುತ್ತಿರುವುದನ್ನು ಕಾಣುವ ಉಲ್ಲಾಸಭರಿತ ವಿಧಾನವು ಇಂಟರ್ನೆಟ್ ಬಳಕೆದಾರರನ್ನು ತಮ್ಮ ಬಾಲ್ಯದ ದಿನಗಳಿಗೆ ಮರಳಿ ತೆಗೆದುಕೊಂಡು ಹೋಗಿದೆ ಎಂದು ಹೇಳಬಹುದು.

ಒಂದೇ ಕೊಡೆಯಲ್ಲಿ ಎಷ್ಟು ಮಕ್ಕಳಿದ್ದಾರೆ ನೋಡಿ
ಈ ಸಣ್ಣ ಕ್ಲಿಪ್ ನಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಸುಮಾರು ಆರು ಮಕ್ಕಳು ಒಂದೇ ಛತ್ರಿಯ ಕೆಳಗೆ ನಡೆದುಕೊಂಡು ಹೋಗುತ್ತಿರುವುದನ್ನು ನಾವು ನೋಡಬಹುದು. ಅವರಲ್ಲಿ ಮೂವರು ಶಾಲಾ ಸಮವಸ್ತ್ರವನ್ನು ಧರಿಸಿರುವುದನ್ನು ಕಾಣಬಹುದು, ಅಲ್ಲಿ ಒಬ್ಬ ಚಿಕ್ಕ ಹುಡುಗನು ಬರವಣಿಗೆಯ ಸ್ಲೇಟ್ ಅನ್ನು ಕೈಯಲ್ಲಿ ಹಿಡಿದಿರುವುದು ಕಂಡು ಬರುತ್ತದೆ. ಮಕ್ಕಳ ಗುಂಪು ಛತ್ರಿಯನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಾ ಆ ಮಳೆಯ ತುಂತುರು ಹನಿಗಳು ತಮ್ಮ ಮೇಲೆ ಬೀಳದಂತೆ ನೋಡಿಕೊಂಡು ನಡೆದು ಹೋಗುತ್ತಿದ್ದಾರೆ.ವಿಡಿಯೋವನ್ನು ಹಂಚಿಕೊಂಡಾಗಿನಿಂದಲೂ 1.2 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸಾವಿರಾರು ಕಾಮೆಂಟ್ ಗಳೊಂದಿಗೆ ಈ ಪೋಸ್ಟ್ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಾಸ್ಟಾಲ್ಜಿಕ್ ಆಗಿ ಮಾಡಿದೆ.

ವಿಡಿಯೋ ನೋಡಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ನೆಟ್ಟಿಗರು
"ಈ ವಿಡಿಯೋ ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಮುಗ್ಧತೆ ಮತ್ತು ಸಂತೋಷ ಎರಡು ಅವರ ಮುಖದ ಮೇಲೆ ನೋಡಬಹುದು. ಇದನ್ನೇ ಬಾಲ್ಯ ಎಂದು ಕರೆಯಲಾಗುತ್ತದೆ. ಕಾಳಜಿಯನ್ನು ಹಂಚಿಕೊಳ್ಳುವುದು, ಯಾವುದೇ ದೂರುಗಳಿಲ್ಲ, ಅಹಂ ಅಂತೂ ಇಲ್ವೇ ಇಲ್ಲ" ಎಂದು ಇನ್ನೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ:  Viral Video: ಮಲಾಲಾ ಯೂಸುಫಾಯ್‌ಗೆ 'ಮಿಸ್ ಯೂ' ಎಂದ ಗೆಳತಿಯ ವೀಡಿಯೋ ಈಗ ಫುಲ್ ವೈರಲ್

ಮೂರನೇ ಬಳಕೆದಾರರು "ನನ್ನ ಬಾಲ್ಯದಲ್ಲಿ ಹೀಗೆ ಛತ್ರಿಯನ್ನು ಹೊಂದಿರುವ ಮಕ್ಕಳಲ್ಲಿ ನಾನೂ ಒಬ್ಬನಾಗಿದ್ದೆ ಮತ್ತು ನಾವೆಲ್ಲರೂ ಅದನ್ನು ಬಳಸುತ್ತಿದ್ದೆವು. ನನ್ನ ಬಾಲ್ಯದ ನೆನಪು ಮೆಲುಕು ಹಾಕುವಂತೆ ಮಾಡಿತು" ಎಂದು ಹೇಳಿದರು. "ನನ್ನ ಬಾಲ್ಯದಲ್ಲಿ ಸುಮಾರು 2 ಕಿಲೋ ಮೀಟರ್ ಕೆಸರು ತುಂಬಿದ ಹಳ್ಳಿಯ ರಸ್ತೆಗಳಲ್ಲಿ ನಾಲ್ಕೈದು ಸ್ನೇಹಿತರೊಂದಿಗೆ ಒಂದೇ ಛತ್ರಿಯ ಅಡಿಯಲ್ಲಿ ಹೀಗೆ ನಡೆದುಕೊಂಡು ಹೋಗುತ್ತಿದ್ದೆವು. ಆದರೆ ಆಗ ನಮಗೆ ಕಾಲಿಗೆ ಹಾಕಿಕೊಳ್ಳಲು ಚಪ್ಪಲಿಗಳು ಸಹ ಇರಲಿಲ್ಲ" ಎಂದು ನಾಲ್ಕನೇಯವರು ಬರೆದಿದ್ದಾರೆ.
Published by:Ashwini Prabhu
First published: