ಮದುವೆ (Marriage) ಅನ್ನೋದು ಎಲ್ಲರ ಬಾಳಲ್ಲಿ (Life) ತುಂಬಾ ಸಂತೋಷದ (Happy) ಮತ್ತು ಮರೆಯಲಾರದ ದಿನ (Memorable Day). ಈ ದಿನ ವಧು ವರರು (Bride And Groom) ತಮ್ಮ ನೂತನ ಬಾಳಿಗೆ ಕಾಲಿಡುತ್ತಾರೆ. ಈ ದಿನವು ಎಲ್ಲದ್ದಕ್ಕಿಂತ ವಿಶೇಷವಾಗಿರಬೇಕು ಅಂತಾ ಲಕ್ಷ ಲಕ್ಷ ಖರ್ಚು ಮಾಡ್ತಾರೆ. ಮೇಕಪ್, ಹೇರ್ ಸ್ಟೈಲ್, ಬಟ್ಟೆ, ಒಡವೆ, ಅಲಂಕಾರ, ಅಡುಗೆ ಹೀಗೆ ಒಂದಾ ಎರಡಾ.. ತಮ್ಮ ಮದುವೆ ಸಖತ್ ಆಗಿರಬೇಕು. ಗ್ರ್ಯಾಂಡ್ ಆಗಿರಬೇಕು ಅಂತಾ ಅಂದುಕೊಳ್ತಾರೆ. ಯಾವುದೇ ಕೆಲಸ ಇರಲಿ, ಎಲ್ಲೆ ಇರಲಿ ಮದುವೆ ಫಿಕ್ಸ್ ಆದ್ರೆ ಸಾಕು ಹುಡುಗ ಹುಡುಗಿ ಕೆಲಸಕ್ಕೆ ರಜೆ ಹಾಕಿ, ಮನೆಯಲ್ಲಿ ಎಲ್ಲರೊಂದಿಗೆ ಖುಷಿಯಾಗಿ ತಯಾರಿಯಲ್ಲಿ ತೊಡಗಿಸಿಕೊಳ್ತಾರೆ.
ಮದುವೆ ದಿನವೂ ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದಿದ್ದ ವರ
ಆದ್ರೆ ಇಲ್ಲೊಬ್ಬ ವರ ಮಾತ್ರ ವಿಚಿತ್ರವಾಗಿ ಮದುವೆ ಆಗಿದ್ದಾನೆ. ಈಗ ಈ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯ ದಿನವು ಭಾರತೀಯರ ಜೀವನದ ಅತ್ಯಂತ ವಿಶೇಷ ದಿನ. ಈ ದಿನವನ್ನು ಎಲ್ಲರೂ ಸಂಪೂರ್ಣವಾಗಿ ಪರಿಪೂರ್ಣವಾಗಿ ಎಂಜಾಯ್ ಮಾಡ್ತಾರೆ. ಭಾರತೀಯರು ಮದುವೆಗೆ ಹಣವನ್ನು ನೀರಿನಂತೆ ಖರ್ಚು ಮಾಡ್ತಾರೆ.
ವಿವಿಧ ಪದ್ಧತಿ, ಸಂಪ್ರದಾಯ ಎಲ್ಲವೂ ಕಳೆಗಟ್ಟುತ್ತೆ. ಆದ್ರೆ ಇದೀಗ ವರನೊಬ್ಬನ ಮದುವೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆತ ತನ್ನ ಮದುವೆ ದಿನವೂ ಮಂಟಪದಲ್ಲಿ ಮದುವೆ ವಿಧಿವಿಧಾನ ನಡೆಯುವಾಗ ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗ ವರನ ಈ ಚಿತ್ರವನ್ನು ನೋಡಿ ಜನರು ಮನಸೋತಿದ್ದಾರೆ. ವಿಚಿತ್ರ ಅಂದ್ರೆ ಈ ವಿಚಿತ್ರವಾದ ಮದುವೆ ವರನ ಫೋಟೋ ವೈರಲ್ ಆಗ್ತಿದ್ದರೆ ನೆಟ್ಟಿಗರು ಬಳಕೆದಾರರು ಹಲವರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಫೋಟೋ ತಮಾಷೆಯಾಗಿದೆ ಅಂದಿದ್ದಾರೆ. ಇನ್ನು ಕೆಲವರು ನಕ್ಕಿದ್ದಾರೆ. ಮತ್ತೂ ಕೆಲವರು ಈ ಕೆಲಸದ ಸಂಸ್ಕೃತಿ ಸರಿಯಲ್ಲ ಎಂದು ಹೇಳಿದ್ದಾರೆ.
'ವರ್ಕ್ ಫ್ರಮ್ ಹೋಮ್' ಶೀರ್ಷಿಕೆಯಡಿ ಫೋಟೋ ಶೇರ್
ನವೆಂಬರ್ 25 ರಂದು ಇನ್ಸ್ಟಾಗ್ರಾಮ್ ಪುಟ calcutta ನಿಂದ ಈ ಫೋಟೋ ಹಂಚಿಕೊಳ್ಳಲಾಗಿದೆ. ಇದು ಇದುವರೆಗೆ 10,000 ಕ್ಕೂ ಹೆಚ್ಚು ಲೈಕ್ಸ್, ಮತ್ತು ನೂರಾರು ಕಾಮೆಂಟ್ ಪಡೆದಿದೆ. ಫೋಟೋವನ್ನು ಶೇರ್ ಮಾಡುವಾಗ 'ವರ್ಕ್ ಫ್ರಮ್ ಹೋಮ್' ನಿಮ್ಮನ್ನು ಬೇರೆ ಹಂತಕ್ಕೆ ಕೊಂಡೊಯ್ಯುತ್ತದೆ! ಎಂದು ಬರೆಯಲಾಗಿದೆ.
ಮದುಮಗನ ವೇಷ ಧರಿಸಿದ ವ್ಯಕ್ತಿ ಮಂಟಪದಲ್ಲಿ ಕುಳಿತಿದ್ದಾರೆ. ಅವರು ಮದುವೆ ವಿಧಿವಿಧಾನ ಮಾಡುತ್ತಿರುವಾಗಲೂ ಮಂಟಪದಲ್ಲಿ ಕುಳಿತು ಲ್ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಿರುವುದು ಫೋಟೋದಲ್ಲಿ ಕಂಡು ಬಂದಿದೆ. ಇಬ್ಬರು ವೃದ್ಧರು ವಿಧಿ ವಿಧಾನಗಳನ್ನು ನಡೆಸುತ್ತಿರುವುದು ಕಾಣಿಸುತ್ತದೆ.
ಕೋವಿಡ್ ಸಮಯ ಪ್ರತಿಯೊಬ್ಬರ ಜೀವನವನ್ನು ದುಸ್ತರ ಮಾಡಿದೆ. ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿದ್ದವು. ಆದರೆ ಇತ್ತೀಚಿಗೆ ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ಬಂದ್ ಮಾಡಿ, ಕೆಲಸಗಾರರನ್ನು ಆಫೀಸೀಗೆ ಕರೆಯಿಸಿಕೊಂಡಿವೆ. ಇನ್ನು ಇಂದಿಗೂ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಿವೆ. ಹಾಗಾಗಿ ಈ ಚಿತ್ರವು ಕೆಲವು ಜನರಿಗೆ ಸವಾಲಾಗಿ ಉಳಿದಿದೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!
ಈ ಚಿತ್ರವನ್ನು 'ವರ್ಕ್ ಫ್ರಮ್ ಹೋಮ್' ಎಂಬುದು ವಿಷಕಾರಿ ಸಂಸ್ಕೃತಿ ಎಂದು ಹಲವು ಬಳಕೆದಾರರು ಬಣ್ಣಿಸಿದ್ದಾರೆ. ಅದೇ ವೇಳೆ ಕೆಲವರು ಈ ಚಿತ್ರವನ್ನು ಉದ್ದೇಶಪೂರ್ವಕವಾಗಿ ಹೀಗೆ ಬಿಡಿಸಲಾಗಿದೆ ಎಂದಿದ್ದಾರೆ. ಈ ಪೋಟೋ ಯಾಕೆ ಹೀಗಿದೆ? ಇದರ ಹಿಂದಿನ ನಿಜವಾದ ಕಾರಣ ತಿಳಿದು ಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ