• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Marriage: ತಾಳಿ ಕಟ್ಟುವ ಮುನ್ನವೇ ವಧು ರೂಮಿಗೆ ಬಂದಿದ್ದ ವರನಿಗೆ ಶಾಕ್! ಆ ಒಂದು ಕಾರಣಕ್ಕೆ ಮದುವೆಯೇ ಮುರಿದು ಬಿತ್ತು!

Viral Marriage: ತಾಳಿ ಕಟ್ಟುವ ಮುನ್ನವೇ ವಧು ರೂಮಿಗೆ ಬಂದಿದ್ದ ವರನಿಗೆ ಶಾಕ್! ಆ ಒಂದು ಕಾರಣಕ್ಕೆ ಮದುವೆಯೇ ಮುರಿದು ಬಿತ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮದುಮಗಳನ್ನು ನೋಡಲು ಬಂದ ಮದುಮಗನಿಗೆ ಕಾದಿತ್ತು ಒಂದು ಬಿಗ್​ ಶಾಕ್​! ಹಸೆಮಣೆ ಏರಬೇಕಾದ ಜೋಡಿಗಳು ಕೊನೆಗೆ ಹೋಗಿದ್ದು ಎಲ್ಲಿಗೆ ಗೊತ್ತಾ?

  • Share this:

ಮದುವೆಮನೆ (Marriage) ಅಂದ್ರೆ ಅದೊಂದು ರೀತಿಯ ಸಂತೋಷ ಸಂಭ್ರಮದ ದಿನಗಳು ಅಂತಲೇ ಹೇಳಬಹುದು. ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿ ಕಾತುರರಾಗಿರುತ್ತಾರೆ ವಧು ಮತ್ತು ವರರು. ಅದ್ರಲ್ಲೂ ಲವ್​  (Love) ಮ್ಯಾರೇಜ್​ ಆಗಿದ್ರಂತೂ ಕೇಳೋದೇ ಬೇಡ. ಅವರ ಖುಷಿಗೆ ಪಾರವೇ ಇರೋದಿಲ್ಲ. ಅದೆಷ್ಟೋ ದಿನಗಳ ಕಾಲ ಪ್ರೀತಿ ಮಾಡಿ ಇದೀಗ ಮದುವೆ ಆಗೋದು ಅಂತ ಆದಾಗ ಇದರ ಸಂತೋಷವೇ (Happiness) ಬೇರೆ. ಅದೇ ರೀತಿಯಾಗಿ ಮದುವೆ ಆಗಬೇಕಾದ್ರೆ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಾಗಿ ಶಾಸ್ತ್ರ ಸಂಪ್ರದಾಯಗಳು ಇರುತ್ತದೆ. ಇನ್ನು ಕೆಲವೊಂದು ಕಡೆಯಲ್ಲಿ ಚಿತ್ರ ವಿಚಿತ್ರವಾದ ಮದುವೆಗಳು ನಡೆಯುತ್ತದೆ. ಇದನ್ನು ಕೇಳುತ್ತಲೇ ನಮಗೆ ಒಂದು ರೀತಿಯಾಗಿ ಶಾಕ್​ ಆಗುತ್ತೆ.


ಈ ಮದುವೆ ಮನೆ ಅಂದ್ರೆ ಅಲ್ಲಿ ಎಲ್ಲರೂ ಸಖತ್​ ಬ್ಯುಸಿ ಇರ್ತಾರೆ. ಅವರವರ ಕೆಲಸಗಳಲ್ಲಿ ಎಲ್ರೂ ಬ್ಯುಸಿ ಇರ್ತಾರೆ.  ಯಾಕೆಂದರೆ  ಶಾಸ್ತ್ರ ಮತ್ತು ಮುಹೂರ್ತಕ್ಕೆ ಸರಿಯಾಗಿ ಕಾರ್ಯಗಳು ಆಗಬೇಕು ಅಂತ ಗಡಿಬಿಡಿಯಲ್ಲಿ ಇರುತ್ತಾರೆ.


ಹೆಣ್ಣು ಗಂಡು ಮಂಟಪದಲ್ಲಿಯೇ ಮಯಖವನ್ನು ನೋಡಿಕೊಳ್ಳಬೇಕು ಅಲ್ಲಿಯ ವರೆಗೆ ನೋಡಬಾರದು ಎಂಬ ಶಾಸ್ತ್ರಗಳು ಇರುತ್ತದೆ. ಮಂಟಪಕ್ಕೆ ಸೋದರ ಮಾವ ಮದುಮಗಳನ್ನು ಎತ್ತಿಕೊಂಡು ಬರುವುದು ಸಂಪ್ರದಾಯವೂ ಕೂಡ  ಇರುತ್ತದೆ. ಹೀಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಾಗಿ ಆಚಾರ ವಿಚಾರಗಳು ಅಂತಲೇ ಹೇಳಬಹುದು.


ಆದರೆ ಇದೀಗ ಒಂದು ವೈರಲ್​ ಆಗ್ತಾ ಇರುವಂತಹ ಸುದ್ದಿ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರ! ಯಾಕಂದ್ರೆ ಇದು ಮದುವೆಗೆ ಸಂಬಂಧ ಪಟ್ಟ ಸುದ್ದಿ ಆಗಿದೆ.


ಏನಿದು ವೈರಲ್​ ಸುದ್ಧಿ?


ಉತ್ತರ ಪ್ರದೇಶದಲ್ಲಿ ಒಂದು ಮದುವೆ ನಡೆಯುತ್ತಾ ಇರುತ್ತದೆ. ಇನ್ನೂ ಹಸಮಣೆಗೆ ವಧು ಮತ್ತು ವರನು ಬಂದಿರೋಲ್ಲ. ಮದುಮಗಳು ತನ್ನ ಡ್ರೆಸ್ಸಿಂಗ್​ ಕೋಣೆಯಲ್ಲಿ ರೆಡಿ ಆಗುತ್ತಾ ಇರುತ್ತಾಳೆ. ಆಗ ಮದುಮಗನಿಗೆ ತನ್ನ ಹುಡುಗಿಯನ್ನು ನೋಡಬೇಕು ಎಂಬ ಆಸೆ ಆಗುತ್ತೆ. ಆಗ ಒಂದು ಬಾರಿ ಡ್ರೆಸ್ಸಿಂಗ್​ ರೂಮ್​ನತ್ತ ವರನು ಬರುತ್ತಾನೆ. ಆಗ ಯಾರು ಏನು ಹೇಳೋದು ಇಲ್ಲ.


ಇದನ್ನೂ ಓದಿ: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!


ಇದಾದ ನಂತರ ಮತ್ತೊಮ್ಮೆ ಆ ಡ್ರೆಸ್ಸಿಂಗ್​ ರೂಮ್​ ಬಳಿ ಬರುತ್ತಾರೆ. ಆದರೆ, ನಿಜಕ್ಕೂ ಆತ ತನ್ನ ಮದುವೆ ಆಗುವ ಹುಡುಗಿಯನ್ನು ನೋಡೋ ಆತುರದಲ್ಲಿ ಬರುತ್ತಾನೆ. ಆದರೆ ಈಕೆಯ ಮನೆಯವರಿಗೆ ಮದುಮಗನ ನಡವಳಿಕೆ ಯಾಕೋ ಇಷ್ಟ ಆಗೋದಿಲ್ಲ. ಒಂದು ಬಾರಿ ಹೇಳುತ್ತಾರೆ. ಮುಹೂರ್ತ ಹತ್ತಿರ  ಬಂತು ಮಂಟಪದಲ್ಲಿಯೇ ನೋಡಿ, ರೂಮ್​ ಬಳಿ ಬರಬೇಡಿ ಎಂದು ಆದ್ರೂ ಕೂಡ ಪುನಃ ಪುನಃ ಬರುತ್ತಲೇ ಇರುತ್ತಾನೆ.


ಇದಾದ ನಂತರ ಹುಡುಗಿಯೇ ಒಂದು ಬಾರಿ ಜೋರು ಮಾಡುತ್ತಾಳೆ. ಮತ್ತೊಮ್ಮೆ ಹೋಗುವಾಗ ಹುಡುಗನ ತಂದೆ ಕಪಾಲ ಮೋಕ್ಷ ಮಾಡಿ ಬಿಡುತ್ತಾನೆ. ಎಲ್ಲರ ಮುಂದೆ ನನ್ನ ಮರ್ಯಾದೆಯನ್ನು ತೆಗೆಯಬೇಡ, ಮಂಟಪದಲ್ಲಿಯೇ ನೋಡು ಅಂತ ಎಲ್ಲರ ಸಮ್ಮುಖದಲ್ಲಿ ಕಪಾಲಕ್ಕೆ ಹೊಡೆಯುತ್ತಾನೆ.


ಇದರಿಂದ ಕೋಪಕ್ಕೆ ಒಳಗಾಗುತ್ತಾನೆ ವಧು ಮತ್ತು ಅಲ್ಲಿಯೊಂದು ದೊಡ್ಡದಾಗಿಯೇ ಜಗಳವಾಗುತ್ತದೆ. ಇದರಿಂದ ಮದುಮಗಳ ಕುಟುಂಬಕ್ಕೆ ಅಸಹ್ಯವಾಗುತ್ತೆ. ಹಾಗೆಯೇ ಈ ಮದುವೆ ಮನೆಯನ್ನು ರದ್ದು ಮಾಡಿ, ಮನೆಗೆ ಹೊರಡುತ್ತಾರೆ.




ಕೇವಲ ಹುಡುಗಿಯನ್ನು ನೋಡಲು ಬಂದ ಹುಡುಗನಿಗೆ ಏನೆಲ್ಲಾ ರಂಪಾಟ ಕಾದಿತ್ತು ಅಂತ ನೀವೇ ನೋಡಿದ್ರಿ ಅಲ್ವಾ? ನೀವು ಇನ್ನು ಮುಂದೆ ಮದುವೆ ಆಗಬೇಕು ಅಂತ ಇದ್ದಾಗ ಇಂತಹ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಲು ಹೋಗಲೇಬೇಡಿ. ಪಾಪ ಈ ಅಮಾಯಕನ ಕಥೆಯು ಚಿಂತಾಜನಕವಾಗಿದ್ದಂತು ನಿಜವೇ ಬಿಡಿ.

First published: