• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಹಿಂದಿ ಹಾಡಿಗೆ ವಧುವಿನ ಮುಂದೆ ಸ್ಟೆಪ್ಸ್ ಹಾಕಿ ಅಚ್ಚರಿ ಮೂಡಿಸಿದ ವರ! ‘ವಾವ್ ಸೂಪರ್’ ಎಂದ್ರು ನೆಟ್ಟಿಗರು

Viral Video: ಹಿಂದಿ ಹಾಡಿಗೆ ವಧುವಿನ ಮುಂದೆ ಸ್ಟೆಪ್ಸ್ ಹಾಕಿ ಅಚ್ಚರಿ ಮೂಡಿಸಿದ ವರ! ‘ವಾವ್ ಸೂಪರ್’ ಎಂದ್ರು ನೆಟ್ಟಿಗರು

ವಧುವಿಗಾಗಿ ವರ ಏನು ಮಾಡಿದ ನೋಡಿ

ವಧುವಿಗಾಗಿ ವರ ಏನು ಮಾಡಿದ ನೋಡಿ

ಸಾಮಾಜಿಕ ಮಾಧ್ಯಮಗಳಲ್ಲಿ ಮನರಂಜನೆಗೇನು ಕೊರತೆ ಇಲ್ಲ ಬಿಡಿ. ದಿನಕ್ಕೊಂದು ವಿಡಿಯೋ ವೈರಲ್​ ಆಗ್ತಾನೇ ಇರುತ್ತೆ. ಇದೀಗ ಮದುವೆ ಮನೆಯ ಒಂದು ವಿಡಿಯೋ ವೈರಲ್​ ಆಗಿದೆ.

  • Trending Desk
  • 3-MIN READ
  • Last Updated :
  • Share this:

ಭಾರತೀಯ ಮದುವೆಗಳು ಒಂದು ರೀತಿಯ ಹಬ್ಬದಂತಿದ್ದು, ಇಡೀ ಮದುವೆ ಮನೆ ಒಂದು ವಾರದ ಮಟ್ಟಿಗೆ ಸಂತೋಷ ಮತ್ತು ಉತ್ಸಾಹದಿಂದ ತುಂಬಿರುತ್ತದೆ ಎಂದು ಹೇಳಬಹುದು. ಅದರಲ್ಲೂ ಸ್ವಲ್ಪ ಹೆಚ್ಚು ದುಡ್ಡಿರುವವರಾಗಿದ್ದರೆ, ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಮತ್ತು ಇನ್ನಿತರೆ ಮದುವೆ ಪೂರ್ವದ ಕಾರ್ಯಕ್ರಮಗಳು (Programme), ಮದುವೆ ಮನೆಯಲ್ಲಿ ಡ್ಯಾನ್ಸ್ ಮತ್ತು ಸಂಗೀತವಂತೂ ಇದ್ದೇ ಇರುತ್ತದೆ. ಇವೆರಡೂ ಇಲ್ಲದೆ ಮದುವೆ ಕಾರ್ಯಕ್ರಮಗಳು ಅಪೂರ್ಣ ಅಂತಾನೆ ಹೇಳಬಹುದು. ಮದುವೆ ಹಿಂದಿನ ದಿನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿಯೂ ಸಹ ಈ ಡ್ಯಾನ್ಸ್ (Dance) ಮತ್ತು ಸಂಗೀತ ತುಂಬಾನೇ ಜೋರಾಗಿರುತ್ತದೆ ಅಂತ ಹೇಳಬಹುದು. ಇನ್ನೂ ಸಂಗೀತ್ ಕಾರ್ಯಕ್ರಮವಂತೂ ಕೆಳೋದೆ ಬೇಡ, ಆ ರೀತಿಯಲ್ಲಿ ಜೋಶ್ (Josh) ಇರುತ್ತದೆ ಅಂತ ಹೇಳಬಹುದು.


ಈ ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ವಧು ಮತ್ತು ವರನ ಸ್ನೇಹಿತರು, ಸಹೋದರ ಮತ್ತು ಸಹೋದರಿಯರು ಎಲ್ಲರೂ ಅವರವರ ಆಯ್ಕೆಯ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ.


ಇಷ್ಟೇ ಅಲ್ಲದೆ ಎಷ್ಟೋ ಬಾರಿ ಮದುವೆ ಮಂಟಪದಲ್ಲಿ ಕುಳಿತ ವರ ತನ್ನ ವಧುವಿಗಾಗಿ ಅಥವಾ ವಧುವಿನ ಜೊತೆ ಹಾಡಿಗೆ ಡ್ಯಾನ್ಸ್ ಮಾಡಿ ಅಲ್ಲಿದ್ದ ಅತಿಥಿಗಳನ್ನು ಅಚ್ಚರಿಗೊಳಿಸಿರುವ ಅನೇಕ ಘಟನೆಗಳ ವೀಡಿಯೋಗಳನ್ನು ಸಹ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದು.


ವಧುವಿನ ಮುಂದೆ ಎಂತಹ ಪ್ರದರ್ಶನ ನೀಡಿದ್ದಾರೆ ನೋಡಿ ಈ ವರ


ಅನೇಕ ವಧು-ವರರು ತಮ್ಮ ಸಂಗಾತಿಗೆ ತಮ್ಮ ವಿಶೇಷ ದಿನದಂದು ಸರ್‌ಪ್ರೈಸ್ ನೀಡಬೇಕೆಂದು ಮುಂಚಿತವಾಗಿಯೇ ಯಾವ ರೀತಿಯ ಪ್ರದರ್ಶನಗಳನ್ನು ನೀಡಬೇಕು ಅನ್ನೋದನ್ನ ಯೋಜಿಸುತ್ತಾರೆ.


ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ, ಈ ವೀಡಿಯೋವನ್ನು ಈಗಾಗಲೇ ಹಲವಾರು ಬಾರಿ ಮರು ಹಂಚಿಕೊಳ್ಳಲಾಗಿದ್ದು, ಇತರ ವಿಧಾನಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


ವೀಡಿಯೋ ಕ್ಲಿಪ್ ನ ಆರಂಭದಲ್ಲಿ ವಧು ಮತ್ತು ವರರು ಇಬ್ಬರು ಒಂದು ಸೋಫಾದ ಮೇಲೆ ಕುಳಿತಿರುವುದನ್ನು ನೋಡಬಹುದು, ಅವರ ಸುತ್ತಲೂ ಮದುವೆಗೆ ಬಂದ ಅತಿಥಿಗಳು ನಿಂತಿರುವುದನ್ನು ಸಹ ನಾವು ನೋಡಬಹುದು.


ಕೆಲವು ಸೆಕೆಂಡುಗಳ ನಂತರ, ವರನು ಎದ್ದು ನಿಂತು ‘ಚಾಂದ್ ಸಿ ಮೆಹಬೂಬಾ ಹೋ ಮೇರಿ’ ಎಂಬ ಹಿಂದಿ ಹಾಡಿಗೆ ರೋಮ್ಯಾಂಟಿಕ್ ಆಗಿ ಚಿಕ್ಕ ಪ್ರದರ್ಶನವನ್ನು ನೀಡುತ್ತಾನೆ.


ಇದು ಆನ್ಲೈನ್ ನಲ್ಲಿ ಅನೇಕ ನೆಟ್ಟಿಗರ ಹೃದಯಗಳನ್ನು ಗೆಲ್ಲುತ್ತಿದೆ. ಇದನ್ನು ನೀವು ನೋಡಿದರೆ ನೀವು ಸಹ ಇಷ್ಟಪಡದೆ ಇರಲಾರಿರಿ ಅಂತ ಹೇಳಬಹುದು.


‘ಟೋಟಲ್ ಬರಾತಿ’ ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿದೆ ಈ ವೀಡಿಯೋ


ಟೋಟಲ್ ಬರಾತಿ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. "ವರನು ತನ್ನ ವಧುವನ್ನು ಆಶ್ಚರ್ಯಗೊಳಿಸಲು ನಿರ್ಧರಿಸಿದಾಗ ಈ ಡ್ಯಾನ್ಸ್ ಮಾಡಿದನು. ಅವರಿಬ್ಬರ ಕೆಮಿಸ್ಟ್ರಿಯನ್ನು ನೀವು ಎಷ್ಟು ಅಂಕ ನೀಡುತ್ತೀರಿ" ಎಂದು ಆನ್ಲೈನ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋಗೆ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ. ಅವರು ವಧು ಕೀರ್ತಿ ವಸಿಷ್ಠ್ ಮತ್ತು ವರ ಜತಿನ್ ನಾರಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.


ಇದನ್ನೂ ಓದಿ: ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ತಂದೆಗೆ ಕಾದಿತ್ತು ಮಗನಿಂದ ಶಾಕ್​!


ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಂತರ, ಈ ವೀಡಿಯೋ 3.5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಈ ಸಂಖ್ಯೆಗಳು ದಿನೇ ದಿನೇ ಇನ್ನೂ ಹೆಚ್ಚುತ್ತಿವೆ. ಅನೇಕರು ತಮ್ಮ ಆಲೋಚನೆಗಳನ್ನು ಕಾಮೆಂಟ್ ಗಳಲ್ಲಿ ಪೋಸ್ಟ್ ಮಾಡಿದ್ದಾರೆ.
"ವಧುವಿನ ಹಿಂದೆ ನಿಂತಿರುವ ಕ್ಯಾಮೆರಾಮ್ಯಾನ್ ನಗುವ ರೀತಿಯನ್ನು ಒಮ್ಮೆ ನೋಡಿ" ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.


"ಪ್ರತಿದಿನ 50 ಮದುವೆಗಳ ಕಥೆಗಳು ಮತ್ತು ರೀಲ್ ಗಳನ್ನು ನೋಡಿರುತ್ತೇವೆ, ಆದರೆ ಇದು ವಿಶಿಷ್ಟವಾಗಿದೆ. ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ" ಎಂದು ಇನ್ನೊಬ್ಬರು ಹೇಳಿದರು.


"ಇದು ನನ್ನ ನೆಚ್ಚಿನ ಹಾಡು, ನಾನು ಈ ಹಾಡನ್ನು ಪ್ರದರ್ಶಿಸಲು ಯಾರಾದರೂ ವಿಶೇಷವಾದವರು ಇರಬೇಕೆಂದು ಬಯಸುತ್ತೇನೆ" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

First published: