• Home
 • »
 • News
 • »
 • trend
 • »
 • Surprise: ವಧುವಿನ ಮುಂದೆ ಆಕೆಯ ಚಿತ್ರ ಬಿಡಿಸಿ ಭೇಷ್ ಎನಿಸಿಕೊಂಡ ವರ; ನೀವು ನೆಕ್ಸ್ಟ್ ಲೆವೆಲ್ ಎಂದು ಕೊಂಡಾಡಿದ ನೆಟ್ಟಿಗರು

Surprise: ವಧುವಿನ ಮುಂದೆ ಆಕೆಯ ಚಿತ್ರ ಬಿಡಿಸಿ ಭೇಷ್ ಎನಿಸಿಕೊಂಡ ವರ; ನೀವು ನೆಕ್ಸ್ಟ್ ಲೆವೆಲ್ ಎಂದು ಕೊಂಡಾಡಿದ ನೆಟ್ಟಿಗರು

ವಧುವಿನ ಚಿತ್ರ ಬಿಡಿಸಿದ ವರ

ವಧುವಿನ ಚಿತ್ರ ಬಿಡಿಸಿದ ವರ

ಕಲಾವಿದ ವರುಣ್ ಜರ್ಸಾನಿಯಾ ತಮ್ಮ ಪ್ರೀತಿಯ ವಧುವಿನ ಮುಂದೆಯೇ ಆಕೆಯ ಸುಂದರ ಚಿತ್ರವನ್ನು ಬಿಡಿಸಿದ್ದು, ಕಪ್ಪು ಬಣ್ಣದ ಕುಂಚದಲ್ಲಿ ತಮ್ಮ ಮನದರಸಿಯ ಚಿತ್ರವನ್ನು ಬಿಡಿಸಿದ್ದಾರೆ. ಈತ ಎಷ್ಟು ನಿಪುಣ ಕಲಾವಿದ ಎಂದರೆ ತಲೆಕೆಳಗಾಗಿ ಚಿತ್ರ ಬಿಡಿಸಿದ್ದಾರೆ.

 • News18 Kannada
 • 2-MIN READ
 • Last Updated :
 • New Delhi, India
 • Share this:

ಇತ್ತೀಚೆಗೆ ವಿವಾಹವಾಗುತ್ತಿರುವವರು (Marriage) ಒಂದಿಲ್ಲೊಂದು ಕಾರಣಗಳಿಂದ ತಾಣದಲ್ಲಿ ವೈರಲ್ (Viral) ಆಗುತ್ತಿರುವುದನ್ನು ನೀವು ನೋಡಿರಬಹುದು. ವಿವಾಹದ ದಿನವೆಂದರೆ ಪ್ರತಿಯೊಬ್ಬರ ಜೀವನದಲ್ಲಿ (Life) ಅತ್ಯಂತ ಮಹತ್ವದ ದಿನವಾಗಿರುತ್ತದೆ. ಈ ದಿನವನ್ನು ಇನ್ನಷ್ಟು ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಕಷ್ಟು ವಧು ವರರು ಅವರ ಕುಟುಂಬಸ್ಥರು (Family), ಸ್ನೇಹಿತರು ಏನಾದರೂ ಆಶ್ಚರ್ಯಕರ ಸಂಗತಿಗಳನ್ನು ಮಾಡುತ್ತಿರುತ್ತಾರೆ. ಆರತಕ್ಷತೆ ದಿನ, ವಿವಾಹದ ದಿನ ವಧು ವರರು ಜೊತೆಯಾಗಿ ನೃತ್ಯ ಮಾಡುವುದು, ಹಾಡು (Singing) ಹಾಡುವುದು, ಸ್ನೇಹಿತರೊಂದಿಗೆ ನರ್ತಿಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಪ್ರತಿಯೊಬ್ಬ ವರನು ತಮ್ಮ ವಧುವನ್ನು ಅತ್ಯಂತ ವಿಶೇಷವಾಗಿ ಕಾಣುತ್ತಾರೆ ಎಂಬ ಮಾತಂತೂ ನಿಜವಾಗಿದೆ.


ವಿವಾಹದ ದಿನ ನೀಡುವ ಉಡುಗೊರೆ ಹೆಚ್ಚು ಸ್ಮರಣೀಯ


ವಧು ವರರು ಪರಸ್ಪರ ಉಡುಗೊರೆ ನೀಡುವುದೂ ಕೂಡ ವಿವಾಹ ದಿನದಂದು ಅಷ್ಟೇ ಮಹತ್ವಪೂರ್ಣವಾಗಿದೆ. ವಿವಾಹದ ದಿನ ನೀಡುವ ಉಡುಗೊರೆ ಎಷ್ಟೇ ಸಣ್ಣದಾಗಿದ್ದರೂ ಹೆಚ್ಚು ಮಹತ್ವಪೂರ್ಣ ಹಾಗೂ ನೆನಪಿನಲ್ಲಿ ಉಳಿಯುವಂತಹದ್ದು ಎಂಬುದಂತೂ ಸತ್ಯ.


ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಯಿತು ವರ ಬಿಡಿಸಿದ ವಧುವಿನ ಚಿತ್ರ


ಇಂದಿನ ಲೇಖನದಲ್ಲಿ ಕೂಡ ತನ್ನ ಮನದರಸಿಗೆ ಉಡುಗೊರೆ ನೀಡಿದ ವರ ಹಾಗೂ ಆ ಉಡುಗೊರೆ ಪಡೆದ ವಧು ಎಷ್ಟು ಹರ್ಷಚಿತ್ತರಾಗಿದ್ದರು ಹಾಗೂ ಈ ಉಡುಗೊರೆ ಇಂಟರ್ನೆಟ್‌ನಲ್ಲಿ ಏಕಿಷ್ಟು ಟ್ರೆಂಡ್ ಆಯಿತು ಎಂಬುದನ್ನು ಹೇಳುತ್ತೇವೆ ನೋಡಿ. ವೈರಲ್ ಆಗಿರುವ ವಿಡಿಯೋದಲ್ಲಿ ವರ ಸ್ವತಃ ಚಿತ್ರಗಾರನಾಗಿದ್ದು ತಮ್ಮ ಕೌಶಲ್ಯಗಳಿಂದ ವಧುವಿನ ಅಂದವಾದ ಚಿತ್ರ ಬಿಡಿಸಿ ಆಕೆಗೆ ಗಿಫ್ಟ್ ಮಾಡಿದ್ದಾರೆ.


ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ವರ


ವರುಣ್ ಜರ್ಸಾನಿಯಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ತಮ್ಮ ಮಡದಿಗೆ ಅತ್ಯಂತ ಸ್ಮರಣೀಯ ರೂಪದಲ್ಲಿ ಈ ಉಡುಗೊರೆಯನ್ನು ನೀಡಿದ್ದು, ವೇದಿಕೆಯಲ್ಲಿ ವಧುವಿನ ಮುಂದೆಯೇ ಆಕೆಯ ಸುಂದರ ಚಿತ್ರವನ್ನು ಬಿಡಿಸಿ ವಧುವಿನ ಕೆನ್ನೆಯನ್ನು ಕೆಂಪಗಾಗಿಸಿದ್ದಾರೆ ಹಾಗೂ ಆಕೆಯ ಸಂತೋಷವನ್ನು ಇಮ್ಮಡಿಗೊಳಿಸಿದ್ದಾರೆ. ಎಲ್ಲರೂ ತಮ್ಮ ಭಾವಿ ಪತ್ನಿಗಾಗಿ ನೃತ್ಯಗೈಯ್ಯುತ್ತಾರೆ ಹಾಡು ಹಾಡುತ್ತಾರೆ ಆದರೆ ನನ್ನ ಪ್ರೀತಿಯ ಹೆಂಡತಿಗೆ ಪೇಂಟಿಂಗ್ ಮೂಲಕ ಪ್ರೀತಿ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Viral Video: ಅತ್ತೆಗಾಗಿ ಡ್ಯಾನ್ಸ್​ ಮಾಡಿದ ಸೊಸೆಮುದ್ದು! ಸಖತ್​ ವೈರಲ್​ ಆಯ್ತು ವಿಡಿಯೋ


ತಲೆಕೆಳಗಾಗಿ ಚಿತ್ರಬಿಡಿಸಿ ಭಾವೀ ಪತ್ನಿಯ ಕೆನ್ನೆ ಕೆಂಪಗಾಗಿಸಿದ ಪತಿರಾಯ


ಕಲಾವಿದ ವರುಣ್ ಜರ್ಸಾನಿಯಾ ತಮ್ಮ ಪ್ರೀತಿಯ ವಧುವಿನ ಮುಂದೆಯೇ ಆಕೆಯ ಸುಂದರ ಚಿತ್ರವನ್ನು ಬಿಡಿಸಿದ್ದು, ಕಪ್ಪು ಬಣ್ಣದ ಕುಂಚದಲ್ಲಿ ತಮ್ಮ ಮನದರಸಿಯ ಚಿತ್ರವನ್ನು ಬಿಡಿಸಿದ್ದಾರೆ. ಈತ ಎಷ್ಟು ನಿಪುಣ ಕಲಾವಿದ ಎಂದರೆ ತಲೆಕೆಳಗಾಗಿ ಚಿತ್ರ ಬಿಡಿಸಿದ್ದು, ವಧು ತನ್ನ ಪತಿಯ ಚಾಣಾಕ್ಷತನಕ್ಕೆ ನಿಬ್ಬೆರಗಾಗಿ ಕುಳಿತಿದ್ದರು ಹಾಗೂ ಆ ಕ್ಷಣವನ್ನು ಆನಂದಿಸುತ್ತಿದ್ದರು ಎಂಬುದು ವರುಣ್ ಹಂಚಿಕೊಂಡ ವಿಡಿಯೋದಿಂದ ತಿಳಿದುಬರುತ್ತದೆ. ಪ್ರತಿಯೊಬ್ಬರೂ ತಮ್ಮ ಮಡದಿಗಾಗಿ ಏನೇನಲ್ಲಾ ಮಾಡುತ್ತಾರೆ ಆದರೆ ವರುಣ್ ತಮ್ಮ ಮನದಲ್ಲಿ ಚಿತ್ರಿತವಾಗಿರುವ ತಮ್ಮ ಪತ್ನಿಯನ್ನು ಹಾಗೆಯೇ ಕುಂಚದಲ್ಲಿ ಅರಳಿಸಿದ್ದಾರೆ.
ಪ್ರೀತಿಯನ್ನು ಚಿತ್ರದ ಮೂಲಕ ಅರುಹಿದ ಕಲಾಕಾರ


ಚಿತ್ರ ಪೂರ್ಣಗೊಂಡ ನಂತರ ವಧುವನ್ನು ಕರೆದು ಚುಂಬಿಸಿದ ವರ ವರುಣ್ ತಮ್ಮ ಪತ್ನಿ ಎಷ್ಟು ಸ್ಪೆಶಲ್ ಹಾಗೂ ಆಕೆಯನ್ನು ತಾನೆಷ್ಟು ಪ್ರೀತಿಸುತ್ತಿದ್ದೇನೆ ಎಂಬುದನ್ನು ವಿವಾಹದಲ್ಲಿ ಭಾಗಿಯಾದವರ ಮುಂದೆ ತಮ್ಮ ಅದ್ಭುತ ಚಿತ್ರಗಾರಿಕೆಯ ಮೂಲಕ ತಿಳಿಸಿದ್ದಾರೆ.


ಇಂಟರ್ನೆಟ್‌ನಲ್ಲಿ ವೈರಲ್ ಆಯಿತು ಈ ವಿಡಿಯೋ


ವರ ಹಂಚಿಕೊಂಡ ಈ ಅದ್ಭುತ ವಿಡಿಯೋಗೆ ಇಂಟರ್ನೆಟ್ ಬಳಕೆದಾರರು ಅಷ್ಟೇ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಹುಡುಗಿಗೆ ನೀವು ನೀಡಿದ ಕೊಡುಗೆ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇತರರಿಗೂ ಈ ವರ ಮಾದರಿಯಾಗಿದ್ದಾನೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದು ಈತನ ಬುದ್ಧಿವಂತಿಕೆ ಬೇರೆಯೇ ಲೆವೆಲ್ ಎಂದು ಕೊಂಡಾಡಿದ್ದಾರೆ. ಈತನನ್ನು ಪಡೆದ ಹುಡುಗಿ ಅದೃಷ್ಟವಂತೆ ಎಂಬ ಕಾಮೆಂಟ್‌ಗಳೂ ಕಂಡುಬಂದಿದ್ದು ವರನ ಕಾರ್ಯಕ್ಕೆ ಪ್ರತಿಯೊಬ್ಬರೂ ಮೆಚ್ಚುಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

First published: