HOME » NEWS » Trend » GROOM STARTS DANCING IN MIDDLE OF WEDDING RITUALS VIDEO GOES VIRAL SESR

Viral Video: ಅಬ್ಬಾ! ಕಡೆಗೂ ಮದುವೆ ಆಯ್ತು: ಹಸೆಮಣೆಯಲ್ಲಿಯೇ ಕುಣಿದ ವರ ಮಹಾಶಯ

ಸಂಬಂಧಿಕರು ಎಷ್ಟೇ ಸಮಾಧಾನ ಪಡಿಸಿದರೂ ವರ ಮಾತ್ರ ಹೆಜ್ಜೆ ಹಾಕುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾನೆ.

news18-kannada
Updated:June 9, 2021, 4:48 PM IST
Viral Video: ಅಬ್ಬಾ! ಕಡೆಗೂ ಮದುವೆ ಆಯ್ತು: ಹಸೆಮಣೆಯಲ್ಲಿಯೇ ಕುಣಿದ ವರ ಮಹಾಶಯ
ವಿಡಿಯೋದ ದೃಶ್ಯ
  • Share this:
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅದರಲ್ಲೂ ಕೆಲ ವಿಡಿಯೋಗಳು ಜನರನ್ನು ಮನರಂಜಿಸುವುದು ಸುಳ್ಳಲ್ಲ. ಇಲ್ಲೊಂದು ವಿಡಿಯೋ ನೋಡಿದ ವೀಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ. ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ವರ ಮಹಾಶಯನೊಬ್ಬ ತಾಳಿ ಕಟ್ಟಿದ ಬಳಿಕ ಖುಷಿ ಯಿಂದ ಹಸೆಮಣೆ ಇಂದ ಎದ್ದು ಹೆಜ್ಜೆ ಹಾಕಿದ್ದು, ಆತನ ಖುಷಿ ನೋಡಿದ ಅನೇಕ ಮಂದಿ ಮುಸಿ ಮುಸಿ ನಕ್ಕಿದ್ದರೆ, ಕೆಲವು ಮಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಮದುವೆ ಸಂಭ್ರಮದ ಹರ್ಷ ವರನ ಪಾಲಿಗೆ ಎಷ್ಟು ಸಂಭ್ರಮ ತಂದಿದೆ ಎಂಬುದಾಗಿ ಕೆಲ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಮದುವೆ ಆಚರಣೆಯಲ್ಲಿದ್ದ ವರ ಈ ನಡುವೆಯೇ ಎದ್ದು ಕುಳಿದಿದ್ದಾನೆ. ಇದನ್ನು ಕಂಡ ವಧು ಕೂಡ ಕೆಲ ಕ್ಷಣ ಆಘಾತಕ್ಕೆ ಒಳಗಾಗಿದ್ದು, ಬಳಿಕ ಸಾವರಿಸಿಕೊಂಡು ಆತನ ಖುಷಿ ಕಂಡು ನಕ್ಕಿದ್ದಾಳೆ. ಸಂಬಂಧಿಕರು ಎಷ್ಟೇ ಸಮಾಧಾನ ಪಡಿಸಿದರೂ ವರ ಮಾತ್ರ ತನ್ನ ಹೆಜ್ಜೆ ಹಾಕುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾನೆ.

Youtube Video


ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿರುವ ವಿಡಿಯೋ ಎಲ್ಲಿಂದು ಎಂದು ತಿಳದು ಬಂದಿಲ್ಲ. ಮದುವೆಯಾಗಲು ಅನೇಕ ಕಾಲ ಕಾದ ಯುವಕನ ತಪಸ್ಸು ಕಡೆಗೂ ಈಡೇರಿದೆ. ಇದೇ ಕಾರಣದಿಂದ ವರ ಸಂತೋಷ ತಾಳದೇ ಈ ರೀತಿ ವರ್ತನೆ ಮಾಡಿದ್ದಾನೆ. ಕಡೆಗೂ ಏಕಾಂಗಿಯಾಗಿದ್ದ ಹುಡುಗ ಜೋಡಿಯಾಗಿದ್ದಾನೆ ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ಹುಡುಗರ ಪಾಡು ಹೀಗೆ ನೋಡಿ ಮದುವೆ ದಿನದಂದು ಮಾತ್ರ ಸಂಭ್ರಮವಷ್ಟೇ ಎಂದು ಮತ್ತಷ್ಟು ಮಂದಿ ನುಡಿದಿದ್ದಾರೆ. ವರನ ಖುಷಿಯ ಅಂತಿಮ ದಿನ ಇದು ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್​ ಮಾಡಿ ಆತನಿಗೆ ಶುಭ ಹಾರೈಸಿದ್ದಾರೆ.

ಕಳೆದ ಕೆಲವು ದಿನಗಳು ಹಿಂದೆ ವರನೊಬ್ಬ ವಿವಾಹದ ಕಾರ್ಯದ ವೇಳೆ ಮಹಿಳೆಯರ ಜೊತೆ ಹೆಜ್ಜೆ ಹಾಕಿದ್ದ ದೃಶ್ಯ ಸಾಕಷ್ಟು ವೈರಲ್​ ಆಗಿತ್ತು. ಭೋಜುಪುರಿ ವಿವಾಹ ಸಂದರ್ಭದಲ್ಲಿ ವರನೊಬ್ಬ ಮೆರವಣಿಗೆಯಿಂದ ಇಳಿದು ಮಹಿಳೆಯೊರಟ್ಟಿಗೆ ಹೆಜ್ಜೆ ಹಾಕಿದ್ದ ವಿಡಿಯೋ ಎಲ್ಲರ ಗಮನಸೆಳೆದಿತ್ತು
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 9, 2021, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories