ಈಗಂತೂ ಮದುವೆ (Marriage) ಸಮಾರಂಭಗಳು ಒಂದು ರೀತಿಯ ವಿಶಿಷ್ಟವಾದ ಅನುಭವಕ್ಕೆ ಕಾರಣವಾಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ವಧು (Bride) ಮತ್ತು ವರರು ಮದುವೆಯಲ್ಲಿ ವಿಭಿನ್ನವಾದ ಉಡುಪುಗಳನ್ನು ಧರಿಸುವುದರಿಂದ ಹಿಡಿದು ಅವರ ಮದುವೆ ಮಂಟಪಕ್ಕೆ ನೀಡುವ ಎಂಟ್ರಿ (Entry) ಆಗಿರಬಹುದು, ಮದುವೆ ಸಮಾರಂಭದ ನಂತರದಲ್ಲಿ ವಿಭಿನ್ನವಾಗಿ ಮಾಡಿಸಿಕೊಳ್ಳುವಂತಹ ಫೋಟೋಶೂಟ್ (Photoshoot) ಆಗಿರಬಹುದು ಎಲ್ಲವೂ ವಿಶಿಷ್ಟವಾಗಿರುತ್ತವೆ. ಇಂತಹ ವಿಶಿಷ್ಟವಾದ ಸನ್ನಿವೇಶಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುವುದರ ಮೂಲಕ ರೆಕಾರ್ಡ್ ಮಾಡಿ ಆ ವೀಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಳ್ಳುತ್ತಿದ್ದಾರೆ ಅಂತ ಹೇಳಿದರೆ ಸುಳ್ಳಲ್ಲ.
ಇಂತಹ ವೀಡಿಯೋಗಳು ನಮಗೆ ಈ ಕೋವಿಡ್-19 ಹಾವಳಿ ಶುರುವಾದಾಗಿನಿಂದಲೂ ನೋಡಲು ಸಿಗುತ್ತಿವೆ ಅಂತ ಹೇಳಬಹುದು. ಇತ್ತೀಚೆಗೆ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ವಿವಾಹಗಳ ತುಂಬಾ ವಿಭಿನ್ನವಾದ ಮತ್ತು ಮೋಡಿ ಮಾಡುವಂತಹ ವೀಡಿಯೋ ಕ್ಲಿಪ್ಸ್ ನೋಡುತ್ತಿದ್ದೇವೆ.
ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಈ ವೀಡಿಯೋ ಕೇವಲ ವಿನೋದ ಮಾತ್ರವಲ್ಲದೆ, ಭಾವನಾತ್ಮಕ ಅಂಶವನ್ನು ಸಹ ಹೊಂದಿದೆ ಅಂತ ಹೇಳಬಹುದು.
ಮದುವೆ ಮಂಟಪದಲ್ಲಿ ವಧುವನ್ನ ನೋಡಿ ಭಾವುಕರಾದ್ರಂತೆ ವರ!
ಈ ವೀಡಿಯೋದಲ್ಲಿ ವಧು-ವರರು ತಮ್ಮ ಜೀವನದ ಸುಂದರ ಕ್ಷಣಗಳಲ್ಲಿ ಒಂದಾದ ಮದುವೆ ದಿನದಂದು ಸ್ವಲ್ಪ ಹೆಚ್ಚು ಭಾವುಕರಾಗಿರುತ್ತಾರೆ. ವಧು ತನ್ನ ಮದುವೆ ಮುಗಿಸಿಕೊಂಡು ಗಂಡನ ಮನೆಗೆ ಹೋಗುವಾಗ ತನ್ನ ತಂದೆ ಮತ್ತು ತಾಯಿಯನ್ನು ನೋಡಿ ಭಾವುಕರಾಗುವುದನ್ನು ನಾವೆಲ್ಲಾ ನೋಡಿರುತ್ತೇವೆ.
ಆದರೆ ಇಲ್ಲಿ ತುಂಬಾನೇ ಅಪರೂಪವಾದ ದೃಶ್ಯವಿದೆ ನೋಡಿ. ವರನು ತನ್ನ ವಿವಾಹದ ದಿನದಂದು ವಧುವನ್ನು ನೋಡಿ ಭಾವುಕರಾಗುತ್ತಾರೆ. ಅಷ್ಟೇ ಅಲ್ಲದೆ ಕಣ್ಣೀರಿಡುವುದನ್ನು ಸಹ ಇಲ್ಲಿ ನಾವು ನೋಡಬಹುದು.
ಇದೇಕೆ ವರ ವಧುವನ್ನ ನೋಡಿ ಅತ್ತಿದ್ದು ಅಂತ ನೀವು ಕೇಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಈ ವರನು ತನ್ನ ಸುಂದರವಾದ ವಧುವನ್ನು ನೋಡಿದ ನಂತರ ಪ್ರೀತಿಯಿಂದ ಮತ್ತು ಖುಷಿಯಿಂದ ಕಣ್ಣೀರು ಸುರಿಸುವ ವೀಡಿಯೋ ಇದಾಗಿದ್ದು, ಈಗ ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ನೀವು ಅದನ್ನು ಸರಿಯಾಗಿಯೇ ಕೇಳಿದ್ದೀರಿ. ಮದುವೆಯ ವೇದಿಕೆಯಲ್ಲಿ ವರ ಅಳುತ್ತಿರುವುದು ಕಂಡು ಬಂದಿದೆ.
ವರನ ಕಣ್ಣೀರು ಒರೆಸಿದ ವಧು
ಈ ವೈರಲ್ ಕ್ಲಿಪ್ ನಲ್ಲಿ ಸುಂದರವಾದ ವರನು ತನ್ನ ವಧುವು ವೇದಿಕೆಗೆ ಪ್ರವೇಶಿಸುವುದನ್ನು ನೋಡುತ್ತಿದ್ದಂತೆ ಮದುವೆ ಮಂಟಪದ ವೇದಿಕೆಯ ಮೇಲೆ ತುಂಬಾನೇ ಭಾವುಕರಾಗುವುದನ್ನು ನಾವು ನೋಡುತ್ತೇವೆ.
शादी के दिन सिर्फ लड़कियां ही नहीं
खुशी के आंसू लड़कों के भी निकलते हैं 🥺 pic.twitter.com/e8AaXIir8v
— ज़िन्दगी गुलज़ार है ! (@Gulzar_sahab) November 25, 2022
ಮತ್ತೊಂದೆಡೆ, ವಧುವು ತನ್ನ ವರ ಅಳುವುದನ್ನು ನೋಡಿ ಭಾವುಕರಾಗುವುದನ್ನು ಸಹ ಕಾಣಬಹುದು ಮತ್ತು ವರನನ್ನು ಸಂತೈಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವರನ ಸಂಬಂಧಿಕರು ಸಹ ವೇದಿಕೆಗೆ ಬಂದು ವರನನ್ನು ಹುರಿದುಂಬಿಸಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: Viral Video: ಸಂಬಂಧಿಕರು, ಸ್ನೇಹಿತರಿಗಾಗಿ ವಿಮಾನವನ್ನೇ ಬುಕ್ ಮಾಡಿದ ವಧು, ವರ: ವಿಡಿಯೋ ನೋಡಿದವರು ಫುಲ್ ಶಾಕ್!
ಗುಲ್ಜಾರ್ ಸಾಹಬ್ ಎಂಬ ಹೆಸರಿನ ಖಾತೆಯಿಂದ ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಪ್ಲೋಡ್ ಮಾಡಿದ ನಂತರ ಈ ವೀಡಿಯೊವು 21,000 ಕ್ಕೂ ಹೆಚ್ಚು ವೀಕ್ಷಣೆಗಳು, 977 ಲೈಕ್ ಗಳು ಮತ್ತು ಹಾಗೆಯೇ ನೂರಾರು ರೀಟ್ವೀಟ್ ಗಳನ್ನು ಸಹ ಗಳಿಸಿದೆ ಎಂದು ಹೇಳಬಹುದು.
ವೀಡಿಯೋದಲ್ಲಿರುವ ನಿಜವಾದ ಪ್ರೀತಿಯನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಬೆರಗುಗೊಂಡಿದ್ದರೂ ಸಹ ವರನು ಎಲ್ಲರ ಹೃದಯಗಳನ್ನು ಗೆದ್ದಿದ್ದಾನೆ ಅಂತಾನೆ ಹೇಳಬಹುದು.
"ನಿಜವಾದ ಪ್ರೀತಿಯನ್ನು ವೀಡಿಯೋದಲ್ಲಿ ತೋರಿಸಲಾಗಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಕೃತಜ್ಞತೆಯ ಕಣ್ಣೀರು" ಎಂದು ಬರೆದಿದ್ದಾರೆ. ಮೂರನೆಯವರು "ಇದು ನಿಜವಾದ ಪ್ರೀತಿ" ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ