ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೊಂದು ವಿಡಿಯೋಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ ಇಲ್ಲವೇ ಕಣ್ಣಂಚಲ್ಲಿ ನೀರು ತರಿಸುತ್ತವೆ. ಮದುವೆ ಸಮಾರಂಭವೊಂದರಲ್ಲಿ ಸಂಭ್ರಮ, ಖುಷಿಯಿಂದ ಭಾಗಿಯಾಗಿದ್ದ ಬಂಧುಗಳು ಈ ಘಟನೆಯಿಂದಾಗಿ ಬಿದ್ದು ಬಿದ್ದು ನಕ್ಕಿದ್ದಾರೆ. ಮದುವೆ ಫೋಟೋಶೂಟ್ ನಡೆಯವಾಗ ಫೋಟೋಗ್ರಾಫರ್ ಮಾಡಿದ ಕೆಲಸ ಎಲ್ಲರನ್ನೂ ನಗಿಸಿದೆ. ಜೊತೆಗೆ ವಧು ಕೂಡ ನಗು ತಡೆಯಲಾಗದೇ ಸ್ಟೇಜ್ ಮೇಲೆಯೇ ಕುಳಿತುಕೊಂಡು ಬಿದ್ದು ಬಿದ್ದು ನಕ್ಕಿದ್ದಾಳೆ. ಈ ವಿಡಿಯೋವನ್ನು ರೇಣುಕಾ ಮೋಹನ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈವರೆಗೆ ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ನೋಡಿದ್ದಾರೆ. ಏನ್ ವಿಡಿಯೋ? ಫೋಟೋಗ್ರಾಫರ್ ಮಾಡಿದ ಕೆಲಸವೇನು ಅಂತೀರಾ? ಮುಂದೆ ಓದಿ.
ವಧು-ವರರು ಮದುವೆ ಉಡುಗೆ ತೊಟ್ಟು ಫೋಟೋಶೂಟ್ಗೆ ಪೋಸ್ ನೀಡುತ್ತಿದ್ದರು. ಫೋಟೋಗ್ರಾಫರ್ ಈ ಶುಭ ದಿನದಂದು ಬೇರೆ ಬೇರೆ ಆ್ಯಂಗಲ್ನಲ್ಲಿ ನಜಜೋಡಿಯ ಫೋಟೋ ತೆಗೆಯುತ್ತಿದ್ದ. ಬಳಿಕ ವಧುವಿನ ಫೋಟೋ ಮಾತ್ರ ತೆಗೆಯಲು ಮುಂದಾದ. ಹೀಗಾಗಿ ವರನನ್ನು ಪಕ್ಕಕ್ಕೆ ಸರಿಸಿ, ವಧುವಿನ ಫೋಟೋ ತೆಗೆಯಲು ಯತ್ನಿಸುತ್ತಿದ್ದ.
ಸಾಂಪ್ರದಾಯಿಕ ಉಡುಗೆ ತೊಟ್ಟು ಅಮೆರಿಕದಲ್ಲಿ ಸ್ಕೀಯಿಂಗ್ ಮಾಡಿದ ಭಾರತೀಯ ಮೂಲದ ದಂಪತಿ; ವಿಡಿಯೋ ವೈರಲ್
ಹೀಗೆ ಮಾಡುವಾಗ, ಫೋಟೋಗ್ರಾಫರ್ ವಧುವಿನ ಸನಿಹಕ್ಕೆ ಹೋದ. ತೀರಾ ಹತ್ತಿರ ಹೋಗಿ, ಫೋಟೋಗೆ ಪೋಸ್ ಕೊಡುವ ರೀತಿಯನ್ನು ಹೇಳಿಕೊಡುತ್ತಿದ್ದ. ಇದು ಅಲ್ಲೇ ಪಕ್ಕದಲ್ಲಿ ನಿಂತಿದ್ದ ವರನಿಗೆ ತೀರಾ ಇರಿಸು ಮುರಿಸು ತಂದಿತು. ಇದನ್ನು ಸಹಿಸದ ವರ, ಫೋಟೋಗ್ರಾಫರ್ಗೆ ಒಂದು ಏಟು ಬಾರಿಸಿದ. ಈ ವೇಳೆ ವಧು ಬಿದ್ದು ಬಿದ್ದು ನಕ್ಕಿದ್ದಾಳೆ. ಕೊನೆಎಗ ನಗು ತಡೆಯಲಾಗದೆ ಸ್ಟೇಜ್ ಮೇಲೆಯೇ ಕುಳಿತು ಅಕ್ಷರಶಃ ಹೊಟ್ಟೆ ಹುಣ್ಣಾಗುವಷ್ಟು ನಕ್ಕು-ನಕ್ಕು ಸಾಕಾಗಿದ್ದಾಳೆ.
I just love this Bride 👇😛😂😂😂😂 pic.twitter.com/UE1qRbx4tv
— Renuka Mohan (@Ease2Ease) February 5, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ