• Home
  • »
  • News
  • »
  • trend
  • »
  • Marriage Agreement: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್

Marriage Agreement: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್

ಮದುವೆ ಒಪ್ಪಂದ

ಮದುವೆ ಒಪ್ಪಂದ

Viral Story: ಮದುಮಗಳು ತನ್ನ ವರನಿಂದ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾಳೆ. ನವ ವಧು ನಸುನಗುತ್ತಾ ಒಪ್ಪಂದ ಕೊಟ್ಟರೆ ಯಾವ ಗಂಡು ತಾನೇ ಅದನ್ನು ಓದಿ ಸಹಿ ಮಾಡ್ತಾನೆ, ಈತನೂ ಸಹಿ ಮಾಡಿ ನಂತರ ಓದಿ ಶಾಕ್ ಆಗಿದ್ದಾನೆ.

  • Share this:

ಈ ಹಿಂದೆ ಮದುವೆ ದಿನ ಮದುಮಗಳು ಚಂದದ್ದೊಂದು ಎಗ್ರೀಮೆಂಟ್ (Agreement) ರೆಡಿ ಮಾಡಿದ್ದು ನೆನಪಿದೆಯಾ? ಕ್ಯೂಟ್ ಕ್ಯುಟ್ ಶರತ್ತುಗಳೊಂದಿಗೆ ಚಂದದ್ದೊಂದು ಎಗ್ರೀಮೆಂಟ್ ತಯಾರಿಸಿ ಕೈಯಲ್ಲೇ ಹಿಡಿದು ಓಡಾಡಿದ ವಧು  (Bride)ನಿಮಗೆ ನೆನಪಿದ್ದಾಳೆಯೇ? ಹಾಗಿದ್ರೆ ಆ ಸಾಲಿಗೆ ಇನ್ನೊಬ್ಬ ವಧು ಸೇರಿಕೊಂಡಿದ್ದಾಳೆ. ಹೌದು ಇದನ್ನೇನು ಟ್ರೆಂಡ್ (Trend) ಎಂತು ತಿಳಿದುಕೊಂಡು ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಇದು ಟ್ರೆಂಡ್ ಆಗುತ್ತಿದೆ. ಮದುಮಗಳು ತನ್ನ ವರನಿಂದ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾಳೆ. ನವ ವಧು ನಸುನಗುತ್ತಾ ಒಪ್ಪಂದ ಕೊಟ್ಟರೆ ಯಾವ ಗಂಡು ತಾನೇ ಅದನ್ನು ಓದಿ ಸಹಿ ಮಾಡ್ತಾನೆ, ಈತನೂ ಸಹಿ ಮಾಡಿ ನಂತರ ಓದಿ ಶಾಕ್ ಆಗಿದ್ದಾನೆ.


ವಧುವಿನ ನ್ಯೂಡ್ ಮೇಕಪ್‌ನಿಂದ ಹಿಡಿದು ಡ್ಯಾನ್ಸ್ ತನಕ ಭಾರತೀಯ ಮದುವೆಗಳಲ್ಲಿ ಟ್ರೆಂಡ್​ಗಳಿಗೆ ಬರವೇ ಇಲ್ಲ. ಇಂಟರ್ನೆಟ್ ಈ ದಿನಗಳಲ್ಲಿ ವೈರಲ್ ಭಾರತೀಯ ವಿವಾಹದ ವೀಡಿಯೊಗಳಿಂದ ತುಂಬಿದೆ. ಇಂತಹ ಮತ್ತೊಂದು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಇದು ಮದುವೆಗೆ ಬಂದ ಅತಿಥಿಗಳಲ್ಲದೇ ಎಲ್ಲಾ ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಬೆರಗುಗೊಳಿಸಿದೆ.


ವೈರಲ್ ವೀಡಿಯೊ ವಧು ತನ್ನ ವರನ ಎಲ್ಲಾ ಆಸೆಗಳನ್ನು ಒಪ್ಪಿಕೊಳ್ಳುವಂತೆ ಮನವೊಲಿಸುವ ವಿಶಿಷ್ಟ ವಿಧಾನವನ್ನು ತೋರಿಸುತ್ತದೆ. ಅವಳು ಅವಳ ವರನ ಸ್ನೇಹಿತರು ಮತ್ತು ಕುಟುಂಬದವರು ಸುತ್ತುವರೆದಿರುವಾಗ, ವಧು ವಿಶೇಷ ಒಪ್ಪಂದದ ಕಾಗದಕ್ಕೆ ಸಹಿ ಹಾಕುವಂತೆ ವರನನ್ನು ಕೇಳುತ್ತಾಳೆ.


ಇದನ್ನೂ ಓದಿ: Bakrid: ಇಂದು ಬಕ್ರೀದ್​ ಸಂಭ್ರಮ; ಹಬ್ಬದ ಆಚರಣೆ, ಮಹತ್ವದ ಕುರಿತು ಇಲ್ಲಿದೆ ಮಾಹಿತಿ


ವರಮಾಲೆ ಆಚರಣೆಯನ್ನು ಪೂರ್ಣಗೊಳಿಸಿದ ತಕ್ಷಣ, ವರನು ಈ ವಿಶೇಷ ಒಪ್ಪಂದಕ್ಕೆ ಸಹಿ ಹಾಕಬೇಕು, ಇದು ವಧು ತಮ್ಮ ಭವಿಷ್ಯದ ಭಾಗವಾಗಲು ಬಯಸುವ ಅನೇಕ ಸಿಹಿ ವಿಷಯಗಳನ್ನು ಒಪ್ಪಂದವಾಗಿತ್ತು.


ಒಪ್ಪಂದವು ವಧುವನ್ನು ಸಂತೋಷವಾಗಿರಿಸಲು ವರನು ಪೂರೈಸಬೇಕಾದ ಕೆಲವು ಷರತ್ತುಗಳ ಪಟ್ಟಿಯಾಗಿದೆ. ಮೊದಲ ಷರತ್ತು ಎಂದರೆ ಒಂದು ತಿಂಗಳಲ್ಲಿ ಒಂದು ಪಿಜ್ಜಾ ಮಾತ್ರ ತಿನ್ನಲಾಗುತ್ತದೆ. ಎರಡನೆಯದು ಮನೆಯ ಆಹಾರವು ಯಾವಾಗಲೂ ಓಕೆ.  ತಡರಾತ್ರಿಯ ಪಾರ್ಟಿಗಳನ್ನು ಅನುಮತಿಸಲಾಗುತ್ತದೆ, ಆದರೆ ಹೆಂಡತಿಯೊಂದಿಗೆ ಮಾತ್ರ ಎಂದು ಹೇಳುತ್ತಾರೆ. ಒಪ್ಪಂದದ ಇನ್ನೊಂದು ಷರತ್ತು ನೀವು ಭಾನುವಾರದ ಬ್ರೇಕ್​ಫಾಸ್ಟ್ ತಯಾರಿಸಬೇಕು ಎನ್ನುವುದಾಗಿದೆ.
ಕುತೂಹಲಕಾರಿ ವಿವಾಹ ಒಪ್ಪಂದವನ್ನು ನೋಡಿ ಇಂಟರ್​ನೆಟ್ ಖುಷ್ ಆಗಿದೆ. ತಮ್ಮನ್ನು ರಂಜಿಸಿದ ವೀಡಿಯೊಗೆ ನೆಟ್ಟಿಗರು ಸಾಕಷ್ಟು ಪ್ರೀತಿಯನ್ನು ತೋರಿಸಿ ಲೈಕ್ ಕಮೆಂಟ್ ಶೇರ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Viral Video: ವೇದಿಕೆ ಮೇಲೆ ಬರುತ್ತಿದ್ದ ವಧುವನ್ನ ನೋಡಿ ವರ ಕೊಟ್ಟ ರಿಯಾಕ್ಷನ್ ನೋಡಿ ಎಲ್ಲರೂ ಶಾಕ್!


ಈ ಹಿಂದೆಯೂ ವೈರಲ್ ಆಗಿತ್ತು ಇಂಥಾ ಒಪ್ಪಂದ


ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ವಧುವಿನ ಕಿರು ವೀಡಿಯೊವನ್ನು ಹಂಚಿಕೊಂಡಿದ್ದಾರೆ- ಮೇಕಪ್​ಬಯ್ ಭೂಮಿಕಾಸಾಜ್- 'ನೀವು ಎಂದಾದರೂ ಅಂತಹ ಒಪ್ಪಂದ ಆಧಾರಿತ ವಿವಾಹಗಳ ಬಗ್ಗೆ ಕೇಳಿದ್ದೀರಾ.' ಎಂದು ಕ್ಯಾಪ್ಶನ್ ಬರೆದು ರೇರ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.


ವೀಡಿಯೋದಲ್ಲಿ ವಧು ದೊಡ್ಡ ಕವರ್ ಹಿಡಿದಿದ್ದು ಅದರಲ್ಲಿ ಗೌಪ್ಯ ಎಂದು ಬರೆಯಲಾಗಿದೆ. ಲಕೋಟೆಯೊಳಗೆ ಏನು ಇಟ್ಟಿದ್ದೀರಿ ಎಂದು ಕೇಳಿದಾಗ ವರನಿಗೆ ಕರಾರು ಪತ್ರ ಇಟ್ಟಿರುವುದಾಗಿ ಹೇಳುತ್ತಿದ್ದಾರೆ. ಅವರು ಮದುವೆಗೆ ಮೊದಲು ಸಹಿ ಮಾಡಬೇಕಾಗಿರುವ ಕಾಗದ ಪತ್ರಗಳು ಅದರಲ್ಲಿವೆ.


'ಕರಣ್ ಮತ್ತು ಹರ್ಷು ನಡುವಿನ ಪ್ರೇಮ ಒಪ್ಪಂದ'


'ಕರಣ್ ಮತ್ತು ಹರ್ಷು ನಡುವಿನ ಪ್ರೇಮ ಒಪ್ಪಂದ' ಎಂಬ ಶೀರ್ಷಿಕೆಯ ಒಪ್ಪಂದದ ಪತ್ರದಲ್ಲಿ, ಅವರು ತಮ್ಮ ಮದುವೆಯ ನಂತರ ಈ ಕೆಳಗಿನ ಕೆಲಸಗಳನ್ನು ಮಾಡಲು ವರನನ್ನು (ಅವರ ಹೆಸರು ಕರಣ್) ಕೇಳಿದ್ದಾರೆ.


"ಐ ಲವ್ ಯು" ಎಂಬ ಮಂತ್ರವನ್ನು ದಿನಕ್ಕೆ ಕನಿಷ್ಠ ಮೂರು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸುವ ಭರವಸೆ ನೀಡಿ. ನೀನಿಲ್ಲದೆ ಬಟರ್ ಬೋನ್ ಲೆಸ್ ಚಿಕನ್ ಅನ್ನು ಎಂದಿಗೂ ತಿನ್ನುವುದಿಲ್ಲ ಎಂದು ಭರವಸೆ ನೀಡಿ. ನಮ್ಮ "ತೇರಿ ಕಸಮ್" ಯಾವಾಗಲೂ ನಂಬಿಕೆಯ ಕಾನೂನುಬದ್ಧ ಅಡಿಪಾಯವಾಗಿದೆ ಮತ್ತು ನಾವು ಅದನ್ನು ಎಂದಿಗೂ ಮುರಿಯುವುದಿಲ್ಲ ಎಂದು ಭರವಸೆ ನೀಡಿ. ಸಾಯುವವರೆಗೂ ಒಬ್ಬರನ್ನೊಬ್ಬರು ಪ್ರೀತಿಸುವ, ಮುದ್ದಿಸುವ, ಗೌರವಿಸುವ ಮತ್ತು ಅಮೂಲ್ಯವಾಗಿ ಕಾಣುವ ಭರವಸೆ ಎಂದು ಬರೆಯಲಾಗಿತ್ತು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು