ಇತ್ತೀಚಿನ ಮದುವೆಗಳು (Marriage) ಏನಾದರೊಂದು ವಿಭಿನ್ನವಾದ ವರ ಮತ್ತು ವಧು ಡಿಫರೆಂಟ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆಯಿಂದ ಮಾಡುವ ವಿನೂತನ ಪ್ರಯತ್ನಗಳಿಂದ ತುಂಬಾ ದಿನಗಳವರೆಗೆ ನೆನಪಿನಲ್ಲಿ ಉಳಿಯುತ್ತಿವೆ ಅಂತ ಹೇಳಬಹುದು. ಅದರಲ್ಲೂ ಈ ಮದುವೆಗಳಲ್ಲಿ ವಧು ಮತ್ತು ವರನ ಸ್ನೇಹಿತರು ತೊಡುವ ಬಟ್ಟೆಗಳು ತುಂಬಾನೇ ಅದ್ದೂರಿಯಾಗಿರುತ್ತವೆ. ಇವರ ಬಟ್ಟೆಗಳು (Clothes) ಮದುವೆಗೆ ಬೇರೆಯದ್ದೇ ಆದ ಒಂದು ಮೆರುಗನ್ನು ತಂದು ಕೊಡುತ್ತದೆ ಅಂತ ಹೇಳಬಹುದು. ಈಗಂತೂ ಈ ರೀತಿಯ ಸಂಭ್ರಮದ ಕ್ಷಣಗಳಲ್ಲಿ ಫ್ಯಾಷನ್ (Fasion) ವಿಷಯಕ್ಕೆ ಬಂದಾಗ ಮಾತ್ರ ಇದಕ್ಕೆ ಯಾವುದೇ ರೀತಿಯ ಇತಿ-ಮಿತಿಗಳು ಇರುವುದೇ ಇಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈಗಂತೂ ಮಹಿಳೆಯರು ಪುರುಷರ ಉಡುಪುಗಳೆಂದು ಬಿಂಬಿತವಾದ ಜೀನ್ಸ್ ಪ್ಯಾಂಟ್ ಮತ್ತು ಟೀ-ಶರ್ಟ್ ಗಳನ್ನು ಧರಿಸಿದರೆ, ಪುರುಷರು ಸಹ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ನಿಧಾನವಾಗಿ 'ಮಹಿಳೆಯರಿಗೆ ಮಾತ್ರ' ಎಂಬ ಟ್ಯಾಗ್ ನೊಂದಿಗೆ ಬರುವ ಉಡುಗೆಗಳನ್ನು ಹಾಕಿಕೊಳ್ಳುತ್ತಾ ಇದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಈಗಾಗಲೇ ಮದುವೆಯ ಸಂಭ್ರಮದ ಅನೇಕ ರೀತಿಯ ವಿಡಿಯೋಗಳನ್ನು ನೋಡಿದ್ದೇವೆ.
ಮದುವೆಗೆ ಸೀರೆ ಧರಿಸಿಕೊಂಡು ಬಂದ ವರನ ಸ್ನೇಹಿತರು..
ಶಿಕಾಗೋದಲ್ಲಿ ನಡೆದ ತಮ್ಮ ಭಾರತೀಯ ಸ್ನೇಹಿತನ ಮದುವೆಗೆ ಹೋಗುವಾಗ ಇಬ್ಬರು ಪುರುಷರು ಸೀರೆ ಉಟ್ಟಿರುವುದು ಕಂಡು ಬಂದಿದೆ. ಶಿಕಾಗೋ ಮೂಲದ ವೆಡ್ಡಿಂಗ್ ವಿಡಿಯೋಗ್ರಾಫರ್ ಆಗಿರುವ ಪ್ಯಾರಾಗೊನ್ಫಿಲ್ಮ್ಸ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: OMG, ಹುಡುಗಿಯರು ರಾತ್ರಿ ಇಂಟರ್ನೆಟ್ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!
"ವರನ ಇಬ್ಬರು ಅತ್ಯುತ್ತಮ ಸ್ನೇಹಿತರು ಸೀರೆಯನ್ನು ತೊಟ್ಟು ಮಿಚಿಗನ್ ಅವೆನ್ಯೂದಲ್ಲಿ ಮದುವೆಗೆ ಸಿದ್ದವಾಗಿ ಹೋಗುತ್ತಿರುವ ಒಂದು ಸಾಮಾನ್ಯ ದೃಶ್ಯ" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
ಈ ವಿಡಿಯೋದಲ್ಲಿ ಏನಿದೆ ನೋಡಿ..
ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಹುಡುಗರಿಗೆ ಸೀರೆಯನ್ನು ಧರಿಸಲು ಸಹಾಯ ಮಾಡುವುದನ್ನು ತೋರಿಸುತ್ತದೆ, ಏಕೆಂದರೆ ಅವರು ತಮ್ಮ ಸ್ನೇಹಿತನ ಮದುವೆಗೆ ಸಿದ್ಧರಾಗುತ್ತಿರುತ್ತಾರೆ. ನಂತರ ಇವರಿಬ್ಬರು ಶಿಕಾಗೋದ ಮಿಶಿಗನ್ ಅವೆನ್ಯೂದಲ್ಲಿ ವರ್ಣರಂಜಿತ ಸೀರೆಗಳನ್ನು ಧರಿಸಿ ಮದುವೆಗೆ ಹಾಜರಾಗಲು ಸೊಗಸಾಗಿ ನಡೆದುಕೊಂಡು ಹೋಗುವುದನ್ನು ಕಾಣಬಹುದು.
View this post on Instagram
28 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದ ವೀಡಿಯೋ
ಈ ಕ್ಲಿಪ್ ಇದುವರೆಗೆ 28,000ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು 150 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಸಂಗ್ರಹಿಸಿದೆ. ಇಡೀ ಹಾವಭಾವವು ಎಷ್ಟು ಆರಾಧ್ಯವಾಗಿದೆ ಎಂದರೆ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಇದರಿಂದ ಹೊರಬರಲು ಸಾಧ್ಯವಾಗಲಿಲ್ಲ.
ಈ ವಿಡಿಯೋಗೆ ಬಂದ ಕಮೆಂಟ್ಗಳು:
ಇಷ್ಟೇ ಅಲ್ಲದೆ ಈ ಉಡುಪುಗಳನ್ನು ಪುರುಷರು ಧರಿಸಿದ್ದಕ್ಕೆ ಕೆಲ ನೆಟ್ಟಿಗರು ಇದರ ಬಗ್ಗೆ ಚರ್ಚೆಯನ್ನು ಸಹ ಶುರು ಮಾಡಿದರು. ಅನೇಕರು ಇದನ್ನು ಅತ್ಯುತ್ತಮ ಆಶ್ಚರ್ಯ ಎಂದು ಕರೆದರೆ, ಇನ್ನೂ ಕೆಲವರು ತಮ್ಮ ಸ್ನೇಹಿತನ ಸಂಸ್ಕೃತಿಯನ್ನು ಅನುಕರಿಸಿದ್ದಕ್ಕೆ ಇಬ್ಬರೂ ಪುರುಷರನ್ನು ತುಂಬಾನೇ ಶ್ಲಾಘಿಸಿದರು.
"ಈ ವೀಡಿಯೋ ತುಂಬಾನೇ ಚೆನ್ನಾಗಿದೆ” ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದರೆ, ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಹುಡುಗರು ಹೆಚ್ಚು ಸೃಜನಶೀಲರಾಗುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ಮೂರನೆಯ ಬಳಕೆದಾರರು "ಬಿಳಿಯ ಪುರುಷರು ಎಲ್ಲದರಲ್ಲೂ ಸುಂದರವಾಗಿ ಕಾಣುತ್ತಾರೆ. ಸೀರೆಗಳಲ್ಲಿ ಅವರಿಬ್ಬರು ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದು ತುಂಬಾ ಆರೋಗ್ಯಕರವಾಗಿದೆ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ