Viral Video : ವಧುವನ್ನು ನೋಡುತ್ತಲೇ ಮದುವೆ ಮಂಟಪದಿಂದ ಎದ್ನೋಬಿದ್ನೋ ಅಂತ ಓಡಿ ಹೋದ ವರ!

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧುವಿನ ಮುಖ ನೋಡಿ ವರ ಓಡಿ ಹೋಗಿದ್ದಾನೆ. ವಿಡಿಯೋ ವೈರಲ್​ ಆಗಿದ್ದು ನೋಡಿದವರು ಬಿದ್ದು ಬಿದ್ದು ನಗುತ್ತಿದ್ದಾರೆ.

ಮದುವೆ ಮಂಟಪದಲ್ಲಿ ವರ

ಮದುವೆ ಮಂಟಪದಲ್ಲಿ ವರ

 • Share this:

  ಮದುವೆ ಸಮಾರಂಭ ಎಂದರೆ ಸಾಕು, ಸರ್ವಾಲಂಕೃತ ವರ,ವಧು, ಬಂಧು ಬಳಗ ಮತ್ತು ಸ್ನೇಹಿತರ ಗಡಿಬಿಡಿ, ಅಲಂಕೃತ ಮಂಟಪ ಮತ್ತು ರುಚಿಯಾದ ಭೋಜನ ಕಣ್ಣ ಮುಂದೆ ಹಾದು ಹೋಗುತ್ತದೆ. ಹಾಗಂತ ಎಲ್ಲಾ ಮದುವೆಗಳು ವರ ,ವಧು ಮತ್ತು ಅವರ ಕುಟುಂಬ, ಬಂಧು ವರ್ಗದವರ ಪಾಲಿಗೆ ಸಂಭ್ರಮದ ಕ್ಷಣವಾಗಿರುವುದಿಲ್ಲ. ಹಾಗಾಗಿದ್ದರೆ, ಅಂತವರು ನಿಜಕ್ಕೂ ಪುಣ್ಯವಂತರೆ ಬಿಡಿ. ಆದರೆ ಹೆಚ್ಚಿನ ಮದುವೆ ಸಮಾರಂಭಗಳಲ್ಲಿ ಸಂತಸ, ಸಡಗರದ ಜೊತೆ ಕಿತ್ತಾಟ, ಗೊಂದಲ, ಹಾಸ್ಯ, ನೋವು , ಅಚ್ಚರಿ, ಆಘಾತ ಮುಂತಾದವುಗಳಲ್ಲಿ ಒಂದೆರಡಾದರೂ ಭಾವಗಳುಳ್ಳ ಸನ್ನಿವೇಶಗಳು ಸಿನಿಮಾ ರೀಲಿನಂತೆ ಹಾದು ಹೋಗುವುದುಂಟು.


  ಇನ್ನು ಕೆಲವು ಮದುವೆಗಳಂತೂ ನವರಸಗಳ ಸಂಗಮದಂತಿರುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲೂ ಹೀಗೆ, ವರನೊಬ್ಬ ಗಾಬರಿಯಿಂದ ಮದುವೆ ಮಂಟಪ ಬಿಟ್ಟು ಓಡುವ ದೃಶ್ಯವಿದೆ. ಆ ಪುಣ್ಯಾತ್ಮ ಅದ್ಯಾಕೆ ಗಾಬರಿಯಾದ? ಮದುವೆಯಾಗದೇ ಯಾಕೆ ಓಡಿದ? ಎಂಬುದಕ್ಕೆ ಕಾರಣ ತಿಳಿಯದೆ ನೆಟ್ಟಿಗರು ಗೊಂದಲದಲ್ಲಿದ್ದಾರೆ. ಕಾರಣ ತಿಳಿಯಲಿ, ಬಿಡಲಿ, ವಿಡಿಯೋ ನೋಡಿದ ಪ್ರತಿಯೊಬ್ಬರು ವರನ ವರ್ತನೆ ನೋಡಿ ಬಿದ್ದು ಬಿದ್ದು ನಕ್ಕಿರುವುದಂತೂ ಸತ್ಯ.


  ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ನೋಡಿ , ನೆಟ್ಟಿಗರಿಗೆ ನಗು ಬಂದರೂ, ಜೊತೆಗೆ ಅಚ್ಚರಿ ಕೂಡ ಮೂಡಿದ್ದು ಯಾಕೆ ಅಂತೀರಾ?


  ವಿಡಿಯೋದಲ್ಲಿರುವ ದೃಶ್ಯ ಹೀಗಿದೆ: ಮದುವೆ ಮಂಟಪದಲ್ಲಿ, ವರ ಮತ್ತು ವಧು ಇದ್ದಾರೆ. ಅವರಿಬ್ಬರನ್ನು ಬಂಧು ಬಳಗದವರು ಸುತ್ತುವರೆದಿದ್ದಾರೆ. ಪುರೋಹಿತರು ಮದುವೆಯ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ವರ ವಧುವಿನ ಹಣೆಗೆ ಸಿಂಧೂರ ಇಡಲು ಎದ್ದು ನಿಲ್ಲುತ್ತಾನೆ, ಅವನು ಸಿಂಧೂರವಿಡಲು ವಧುವಿನ ತಲೆಯ ಮೇಲಿದ್ದ ಸೆರಗನ್ನು ಸರಿಸಿದ್ದೇ ತಡ, ಕೂತಿದ್ದ ವಧು ಒಂದು ಕಡೆ ವಾಲಿ ಬೀಳುತ್ತಾಳೆ! ಅದನ್ನು ನೋಡಿದವನೇ ವರ, ಯಾವುದೋ ದೆವ್ವವನ್ನೋ ಅಥವಾ ಏನೋ ವಿಚಿತ್ರ ಸಂಗತಿಯನ್ನು ಕಂಡವನಂತೆ ಗಾಬರಿಯಾಗುತ್ತಾನೆ. ಕೂಡಲೇ ತರಾತುರಿಯಲ್ಲಿ ಪೇಟ, ಹಾರ ಮತ್ತು ಹೆಗಲ ಮೇಲಿದ್ದ ಶಾಲು ಎಲ್ಲವನ್ನೂ ಒಂದೊಂದಾಗಿ ಕಿತ್ತೆಸೆಯುತ್ತಾ, ಅಲ್ಲಿಂದ ಓಡಲು ಸಜ್ಜಾಗುತ್ತಾನೆ. ಅಕ್ಕಪಕ್ಕ ನಿಂತಿದ್ದವರು ನಿಲ್ಲಿಸಲು ನೋಡಿದರೂ, ಅಲ್ಲಿದ್ದ ಒಬ್ಬ ಮಹಿಳೆ ಬಲವಂತವಾಗಿ ಅವನ ಕೈ ಎಳೆದು ನಿಲ್ಲಿಸಲು ಪ್ರಯತ್ನಿಸಿದರೂ ವರ ನಿಲ್ಲದೇ ತಪ್ಪಿಸಿಕೊಂಡು ಹೋಗುತ್ತಾನೆ.


  ಆ ಸಮಾರಂಭದಲ್ಲಿ ಅಸಲಿಗೆ ನಡೆದಿದ್ದಾರೂ ಏನು? ವರ ಅಷ್ಟೊಂದು ಗಾಬರಿ ಆಗಲು ಏನು ಕಾರಣ? ವಧು ವಾಲಿ ಬಿದ್ದದ್ದೇಕೆ? ಎಂಬ ಕುರಿತು ಯಾವ ಮಾಹಿತಿಯೂ ಸಿಕ್ಕಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವಂತಹ, ಅದರಲ್ಲೂ ಹೆಚ್ಚಾಗಿ ಮದುವೆ ಹಾಸ್ಯಮಯ ದೃಶ್ಯಗಳುಳ್ಳ ವಿಡಿಯೋಗಳನ್ನು ಪೋಸ್ಟ್ ಮಾಡುವ ನಿರಂಜನ ಮೊಹಾಪಾತ್ರ ಅವರೇ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಮೆಚ್ಚಿದ್ದಾರೆ.

  First published: