• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Uttar Pradesh: ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದ ವಧುವನ್ನು ಮದುವೆಯಾಗಲ್ಲ ಎಂದ ವರ! ಮಂಟಪದವರೆಗೆ ಬಂದ ಮದುವೆ ಕ್ಯಾನ್ಸಲ್​

Uttar Pradesh: ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದ ವಧುವನ್ನು ಮದುವೆಯಾಗಲ್ಲ ಎಂದ ವರ! ಮಂಟಪದವರೆಗೆ ಬಂದ ಮದುವೆ ಕ್ಯಾನ್ಸಲ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮದುವೆ ಸಮಾರಂಭದಲ್ಲಿ ಯಾವುದೋ ಒಂದು ಕಾರಣಕ್ಕೆ ವಧು-ವರನ ನಡುವೆ ಜಗಳ ಆಗಿದ್ದನ್ನು ನಾವು ನೋಡಿರುತ್ತೇವೆ. ಹೀಗೆ ಮದುವೆ ಸಮಾರಂಭದಲ್ಲಿ ಗಲಾಟೆ ನಡೆದು ಹಲವಾರು ಮದುವೆಗಳು ಆಗುವುದೇ ಇಲ್ಲ. ಇಲ್ಲೊಂದು ಇಂತಹದೇ ಒಂದು ಘಟನೆ ನಡೆದಿದ್ದು, ಮದುವೆ ರದ್ದಾಗುವುದಕ್ಕೆ ನೀಡಿರುವ ಕಾರಣ ಕೇಳಿದರೆ ನಿಮಗೆ ಹೀಗೂ ಇರ್ತಾರ ಜನರು ಅಂತ ಆಶ್ಚರ್ಯವಾಗುವುದಂತೂ ನಿಜ.

ಮುಂದೆ ಓದಿ ...
  • Share this:

    ಈಗಂತೂ ಮದುವೆ (Marriage) ಸಮಾರಂಭಗಳು ಪೂರ್ತಿಯಾಗಿ ಮುಗಿದು ವಧು ತನ್ನ ಪೋಷಕರ ಮನೆಯಿಂದ ತನ್ನ ಅತ್ತೆ ಮಾವನ ಮನೆಗೆ ಹೋದರೆ ಮಾತ್ರ ಮದುವೆ ಸಮಾರಂಭ ಮುಗೀತು ಅಂತ ಹೇಳಬಹುದು ಹಾಗಾಗಿದೆ ಪರಿಸ್ಥಿತಿ. ಹೌದು, ಮದುವೆಗೆ ವರ ಕುಡಿದು ಬಂದ ಅಂತ ವಧು ಮದುವೆಯನ್ನು ನಿರಾಕರಿಸಿದ ಘಟನೆಯನ್ನು ನಾವು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ (Social Media) ನೋಡಿದ್ದೆವು. ಮದುವೆ ಸಮಾರಂಭದಲ್ಲಿ ಯಾವುದೋ ಒಂದು ಕಾರಣಕ್ಕೆ ವಧು-ವರನ ನಡುವೆ ಜಗಳ ಆಗಿದ್ದನ್ನು ನಾವು ನೋಡಿರುತ್ತೇವೆ.


    ಹೀಗೆ ಮದುವೆ ಸಮಾರಂಭದಲ್ಲಿ ನಡೆಯುತ್ತಿರುವ ಗಲಾಟೆಗಳು ಒಂದೇ, ಎರಡೇ. ಕೆಲವು ಮದುವೆಗಳನ್ನು ವರನು ಮುರಿದರೆ, ಇನ್ನೂ ಕೆಲವು ಮದುವೆಗಳನ್ನು ವಧು ಅಥವಾ ಅವರ ಮನೆಯವರು ಮುರಿಯುತ್ತಾರೆ ಅಂತ ಹೇಳಬಹುದು. ಆದರೆ ಇದಕ್ಕೆಲ್ಲಾ ಅವರದ್ದೇ ಆದಂತಹ ಕೆಲವು ಕಾರಣಗಳು ಇರುತ್ತವೆ ಎಂಬುದಂತೂ ನಿಜ. ಇಲ್ಲೊಂದು ಇಂತಹದೇ ಒಂದು ಘಟನೆ ನಡೆದಿದ್ದು, ಮದುವೆ ರದ್ದಾಗುವುದಕ್ಕೆ ನೀಡಿರುವ ಕಾರಣ ಕೇಳಿದರೆ ನಿಮಗೆ ಹೀಗೂ ಇರ್ತಾರ ಜನರು ಅಂತ ಆಶ್ಚರ್ಯವಾಗುವುದಂತೂ ನಿಜ.


    ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ ಅಂತ ಮದುವೆಯೇ ರದ್ದ


    12ನೇ ತರಗತಿ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದ ಕಾರಣ ವರ ತನ್ನ ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಇಲ್ಲಿ ಆರೋಪಿಸಲಾಗಿದೆ. ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ವರದಿಯಾಗಿದೆ. ನಂತರ ಪೊಲೀಸರು ಎರಡು ಕುಟುಂಬಗಳನ್ನು ಕೂರಿಸಿಕೊಂಡು ಕೌನ್ಸೆಲಿಂಗ್ ಮಾಡುವ ಮೂಲಕ ಪ್ರಕರಣವನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಅಂತ ಹೇಳಲಾಗುತ್ತಿದೆ.


    ಇದನ್ನೂ ಓದಿ: ಕೇವಲ 18 ತಿಂಗಳ ಮಗುವಿನ ಕೈಯಲ್ಲಿ ಮೂಡಿತು 43 ಕಲಾಕೃತಿ! ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​​ಗೆ ಆಯ್ಕೆ


    ಆದಾಗ್ಯೂ, ಎರಡೂ ಕುಟುಂಬಗಳು ಒಮ್ಮತಕ್ಕೆ ಬರದಿದ್ದರೆ, ಪೊಲೀಸರು ಇವರ ವಿರುದ್ಧ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂತ ತ್ರಿವಾ ಕೊತ್ವಾಲಿ ಪ್ರದೇಶದ ಪೊಲೀಸ್ ಠಾಣೆಯ ಉಸ್ತುವಾರಿ ಪಿ.ಎನ್. ಬಾಜಪೈ ಹೇಳಿದ್ದರು. ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ವಧುವಿನ ಕುಟುಂಬವು ವರನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಆದಾಗ್ಯೂ, ಹುಡುಗಿ 12ನೇ ತರಗತಿಯ ಅಂಕಪಟ್ಟಿಯಲ್ಲಿ ಕಡಿಮೆ ಅಂಕಗಳನ್ನು ಹೊಂದಿರುವುದಕ್ಕೆ ಮದುವೆಯನ್ನು ರದ್ದುಗೊಳಿಸುತ್ತಿದ್ದೇವೆ ಅಂತ ವಧುವಿನ ಕಡೆಯವರಿಗೆ ವರನ ಕಡೆಯವರು ತಿಳಿಸಿದರು.


    ಸಾಂದರ್ಭಿಕ ಚಿತ್ರ


    ಮದುವೆಗೆ ವಧುವಿನ ಕಡೆಯವರು ಎಷ್ಟೆಲ್ಲಾ ಖರ್ಚು ಮಾಡಿದ್ದರು ನೋಡಿ


    ಬಗಾನ್ವಾ ಗ್ರಾಮದ ರಾಮಶಂಕರ್ ಅವರ ಪುತ್ರ ಸೋನು ಅವರೊಂದಿಗೆ ತಮ್ಮ ಮಗಳು ಸೋನಿ ಅವರ ವಿವಾಹವನ್ನು ನಿಶ್ಚಯಿಸಿದ್ದರು ಮತ್ತು ಅವರು ಮದುವೆ ಸಮಾರಂಭವನ್ನು ಆಯೋಜಿಸಿದ್ದರು, ಇದಕ್ಕೆ ಅವರು 60,000 ರೂಪಾಯಿಗಳನ್ನು ಖರ್ಚು ಮಾಡಿದ್ದರು ಮತ್ತು ವರನಿಗೆ 15,000 ರೂಪಾಯಿಗಳ ಚಿನ್ನದ ಉಂಗುರವನ್ನು ಸಹ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.


    ವರನ ಕುಟುಂಬವು ಮರುದಿನವೇ ವರದಕ್ಷಿಣೆಗಾಗಿ ಬೇಡಿಕೆಯನ್ನು ಎತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ನಿರಾಕರಿಸಿದಾಗ, ವರನ ಕುಟುಂಬವು ಹುಡುಗಿ ಪಿಯುಸಿಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಅಂತ ಹೇಳಿ ಮದುವೆಯನ್ನು ರದ್ದುಗೊಳಿಸಿದ್ದಾರೆ.


    ಈ ಹಿಂದೆ ಸಹ ಅನೇಕ ಕಾರಣಗಳಿಗಾಗಿ ಮದುವೆಗಳು ರದ್ದಾಗಿದ್ದವು..


    ಈ ಹಿಂದೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಒಂದು ಘಟನೆಯಲ್ಲಿ ಮದುವೆಗೂ ಮುಂಚೆ ವಧು ಮೇಕಪ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋಗಿದ್ದು, ಅಲ್ಲಿ ಬ್ಯೂಟಿ ಪಾರ್ಲರ್ ನಲ್ಲಿದ್ದ ಮಹಿಳೆ ಏನೋ ಹೊಸತಾಗಿ ಟ್ರೈ ಮಾಡಲು ಹೋಗಿ ವಧುವಿನ ಮುಖವನ್ನೇ ವಿರೂಪಗೊಳಿಸಿದ್ದಳು. ಆನಂತರ ಇದನ್ನು ಅರಿತ ವರ ಆ ಮದುವೆಯನ್ನೇ ರದ್ದುಗೊಳಿಸಿದ್ದರು.




    ನಂತರ ಚಿತ್ರಕೂಟದಲ್ಲಿ ನಡೆದ ಒಂದು ಘಟನೆಯಲ್ಲಿ ಮದುವೆಗೂ ಮುಂಚಿತವಾಗಿ ವರ ಪದೇ ಪದೇ ಎದ್ದು ವಧುವಿನ ಕೋಣೆಗೆ ಹೋಗುತ್ತಿರುವುದನ್ನು ನೋಡಿದ ವಧುವಿನ ತಂದೆ ಬೇಸತ್ತು ವರನ ಕಪಾಳಕ್ಕೆ ಹೊಡೆದಿದ್ದರು. ನಂತರ ಅಲ್ಲಿ ದೊಡ್ಡ ಜಗಳವೇ ಆಗಿ, ನಂತರ ಆ ಮದುವೆಯನ್ನು ವಧುವಿನ ಕಡೆಯವರು ರದ್ದುಗೊಳಿಸಿದ್ದರು.

    Published by:Prajwal B
    First published: