Viral Vedio: ಮದುವೆ ಆರತಕ್ಷತೆಯ ವೇದಿಕೆ ಮೇಲೆಯೇ ಹೆಂಡತಿಗೆ ಅವಮಾನ ಮಾಡಿದ ಗಂಡ!

ವಧು ವರನಿಗೆ ಗೌರವದಿಂದ ಹಾರ ಹಾಕಿದರೆ, ವರನು ಧಿಮಾಕಿನಿಂದ ಹಾರವನ್ನು ವಧುವಿನ ಕೊರಳಿಗೆ ಹಾಕದೇ ಬಿಸಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ನಿಗೆ ಅವಮಾನ ಮಾಡಿದ ಪತಿ

ಪತ್ನಿಗೆ ಅವಮಾನ ಮಾಡಿದ ಪತಿ

  • Share this:
     ಯಾವುದೇ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಗೌರವ ಮತ್ತು ಪ್ರೀತಿ. ಯಾವುದೇ ಸಂಬಂಧ ದೀರ್ಘ ಕಾಲದ ವರೆಗೆ ಜೀವಿಸುವುದು ಕೇವಲ ನಾವು ನಮ್ಮ ಎದುರಿಗಿರುವಂತಹ ವ್ಯಕ್ತಿಗೆ ಎಷ್ಟು ಗೌರವ ಮತ್ತು ಪ್ರೀತಿಯಿಂದ ಕಾಣುತ್ತೇವೆ ಎನ್ನುವುದರ ಮೇಲೆ ಎಂದರೆ ಸುಳ್ಳಲ್ಲ. ನಾವು ಬೇರೆಯವರಿಗೆ ಏನು ನೀಡುತ್ತೇವೆಯೋ ನಮಗೆ ತಿರುಗಿ ಅದೇ ಬರುತ್ತದೆ. ಗೌರವ, ಪ್ರೀತಿ ನೀಡಿದರೆ ಅದೇ ತಿರುಗಿ ಬರುತ್ತದೆ, ಒಂದು ವೇಳೆ ನಾವು ಅಸೂಯೆ, ದ್ವೇಷ ಮತ್ತು ಅವಮಾನ ಮಾಡಿದರೆ ನಮಗೆ ತಿರುಗಿ ಇವೆಲ್ಲವೂ ಬರುತ್ತವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.


    ತುಂಬ ಸಂಬಂಧಗಳು ಗೌರವ ಸೂಚಿಸದೆ ಅವಮಾನ ಮಾಡಿದ್ದಕ್ಕೆ ಹಾಳಾಗುತ್ತಿದ್ದು, ಈ ವೈರಲ್ ವಿಡಿಯೋ ಸಹ ಅದೇ ಸಾಲಿಗೆ ಸೇರುತ್ತದೆ. ಇಲ್ಲೊಬ್ಬ ಪತಿರಾಯ ತನ್ನ ಮದುವೆಯ ಸಮಾರಂಭದಲ್ಲಿ  ಪತ್ನಿಗೆ ಹಾರ ಹಾಕುವ ಬದಲು ಕೈಯಿಂದ ಕೆಳಗೆ ಬೀಳಿಸಿ ಅವಮಾನ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೋಡುಗರಿಂದ ವರನು ತೀವ್ರವಾದ ಟೀಕೆಗೆ ಗುರಿಯಾಗಿದ್ದಾನೆ.


    ಈ ವೈರಲ್ ವಿಡಿಯೋದಲ್ಲಿ ಇಬ್ಬರು ನವ ವಧು ಮತ್ತು ವರರು ಪರಸ್ಪರ ಹಾರವನ್ನು ಬದಲಾಯಿಸಿಕೊಳ್ಳುವ ಸಮಯದಲ್ಲಿ ವಧು ವರನಿಗೆ ಗೌರವದಿಂದ ಹಾರ ಹಾಕಿದರೆ, ವರನು ತುಂಬಾ ಧಿಮಾಕಿನಿಂದ ಹಾರವನ್ನು ವಧುವಿನ ಕೊರಳಿಗೆ ಹಾಕದೇ ಬಿಸಾಡಿರುವುದು ತುಂಬಾ ಶಾಕಿಂಗ್ ಆಗಿದ್ದು ಮದುವೆಗೆ ಬಂದ ಎಲ್ಲ ಅಥಿತಿಗಳು ವರನ ಈ ವರ್ತನೆಯನ್ನು ನೋಡಿ ಬೇಸರಗೊಂಡಿದ್ದಾರೆ.


    ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು 8000 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ವರನ ಈ ವರ್ತನೆಗೆ ತೀವ್ರವಾಗಿ ಟೀಕಿಸಿದ್ದಾರೆ ಮತ್ತು ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಎಂತಹ ಅವಮಾನ ಆ ಹೆಣ್ಣಿಗೆ", "ನಾನು ಅಲ್ಲೇ ಬಂದು ನಿಂತು ನಿನಗೆ ಹೊಡೆದರೆ ನೀನು ನಿಲ್ಲುವುದೇ ಇಲ್ಲ", "ಎಂತಾ ಕ್ರೂರಿ" ಮತ್ತು "ಇಂತವನ ಜೊತೆ ಮದುವೆ ಮಾಡಿಕೊಳ್ಳುವುದಕ್ಕಿಂತಲೂ ಬ್ರೇಕ್ ಅಪ್ ಮಾಡಿಕೊಳ್ಳುವುದು ಉತ್ತಮ" ಎಂದು ಬರೆದು ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


    ನಿಮ್ಮ ಪತ್ನಿಯು ನಿಮಗೆ ಗೌರವ, ಪ್ರೀತಿ ತೋರಿಸಬೇಕು ಎಂದರೆ ನೀವು ಆಕೆಗೆ ಅದನ್ನೇ ಕೊಡಬೇಕಾಗುತ್ತೆ ಅಲ್ಲವೇ? ನೀವು ಹೆಣ್ಣಿಗೆ ಗೌರವ ಕೊಟ್ಟರೆ ಆ ಹೆಣ್ಣು ನಿಮಗೆ ಹತ್ತು ಪಟ್ಟು ಹೆಚ್ಚು ಗೌರವ, ಪ್ರೀತಿ ಕೊಡುತ್ತಾಳೆ ಎನ್ನುವುದು ಎಲ್ಲರು ನೆನಪಿಡಬೇಕಾದ ವಿಷಯ ಆಗಿದೆ.






    ಇದಲ್ಲದೆ ಇನ್ನೊಂದು ಘಟನೆಯಲ್ಲಿ ಮದುವೆಯ ದಿನವೇ ವಧು ವರ ಇಬ್ಬರು ಸೇರಿ ಡಿಜೆ ಗೆ ಹೆಜ್ಜೆ ಹಾಕಿದ ವಿಡಿಯೋ ಸಹ ವೈರಲ್ ಆಗಿದ್ದು, ವರನು ನೀಲಿ ಬಣ್ಣದ ಸೂಟ್ ಧರಿಸಿ ಗೋವಿಂದ ಮತ್ತು ರಾಣಿ ಮುಖರ್ಜಿ ಅವರ ಹಾಡು "ತುಜಕೊಯಿ ದುಲ್ಹನ್ ಬನಾವುಂಗ" ಗೆ ಹೆಜ್ಜೆ ಹಾಕಿ ವೈರಲ್ ಆಗಿದೆ. ವಧುವು ಸಹ ನಾನೇನೂ ಕಮ್ಮಿ ಇಲ್ಲ ಅಂತ ಕೆಂಪು ಲೆಹಂಗಾ ಚೋಲಿ ಧರಿಸಿ ಹಾಡಿಗೆ ಹೆಜ್ಜೆ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೈರಲ್ ವಿಡಿಯೋ ವನ್ನು ಜನರು ತುಂಬಾ ಇಷ್ಟ ಪಟ್ಟಿದ್ದಾರೆ.
    Published by:Kavya V
    First published: