• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಹುಡುಗನಿಗೆ ಸರ್ಕಾರಿ ಉದ್ಯೋಗವೆಂದು ಮದುವೆ ಮಾಡಿಕೊಟ್ಟ ಹುಡುಗಿ ಮನೆಯವರು, ಮಾರನೇ ದಿನ ಕಾದಿತ್ತು ಬಿಗ್​ ಶಾಕ್​!

Viral News: ಹುಡುಗನಿಗೆ ಸರ್ಕಾರಿ ಉದ್ಯೋಗವೆಂದು ಮದುವೆ ಮಾಡಿಕೊಟ್ಟ ಹುಡುಗಿ ಮನೆಯವರು, ಮಾರನೇ ದಿನ ಕಾದಿತ್ತು ಬಿಗ್​ ಶಾಕ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮದುವೆ ಮಾಡಿಕೊಡ್ತ ಹುಡುಗನಿಗೆ ಸರ್ಕಾರಿ ನೌಕರಿ ಇದ್ರೆ ಒಳ್ಳೆದು ಅಂತ ಹುಡುಗಿಯ ಮನೆಯಲ್ಲಿ ತುಂಬಾ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅದೇ ರೀತಿಯಾಗಿ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

  • Local18
  • 4-MIN READ
  • Last Updated :
  • Share this:

ಪ್ರತಿಯೊಬ್ಬರೂ ತಮ್ಮ ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ಆ ಹುಡುಗನಿಗೆ ಸರ್ಕಾರಿ ನೌಕರಿಯಿದ್ದರೆ ಸಿಗುವ ಖುಷಿಯೇ ಬೇರೆ. ಯಾಕಂದ್ರೆ ಲೈಫ್​ ಸೆಟಲ್ (Life Settlement​) ಆಗಿ ಇರುತ್ತದೆ ಎಂಬ ಕಾರಣಕ್ಕಾಗಿ, ಅಳಿಯನಿಗೆ ಸರ್ಕಾರಿ ಕೆಲಸ ಇರಲಿ ಅಂತ ಆದಷ್ಟು ಯೋಚನೆ ಮಾಡುತ್ತಾರೆ. ಇದೀಗ ಇಂತದ್ದೇ ಒಂದು ಕುಟುಂಬದ ರೋಧನೆ ಕಥೆಯು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಕೂಚ್ ವಿಹಾರ್‌ನಲ್ಲಿರುವ ಕುಟುಂಬವೊಂದು ಇದೇ ರೀತಿಯ ಆಸೆಯನ್ನು ಹೊಂದಿತ್ತು. ಮಗಳ ಮದುವೆಯನ್ನು ಸರ್ಕಾರಿ ಶಿಕ್ಷಕನೊಂದಿಗೆ ಏರ್ಪಡಿಸಿದರು. ತನ್ನ ಮಗಳನ್ನು ಸರ್ಕಾರಿ ನೌಕರನಿಗೆ (Government Employee) ಮದುವೆ ಮಾಡಿ ಕೊಡುತ್ತೇವೆ ಎಂದುಕೊಂಡು ಹುಡುಗಿಯ ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷಪಟ್ಟಿದ್ದರು. ಆದುದರಿಂದಲೇ ಮದುವೆಯ (Marriage) ತಯಾರಿಯಲ್ಲಿ ಜೋರಾಗಿಯೇ ಇತ್ತು. ಆದರೆ ಆನಂದ ಮೂಲಿ ಅವರ ಮನೆಯಲ್ಲಿ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಯಾಕೆ ಎಂದು ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.


ವರನ ಹೆಸರು ಪ್ರಣವ್ ರಾಯ್. ಅವರು 2017 ರಿಂದ ಜಲ್ಪೈಗುರಿಯ ರಾಜದಂಗ ಕೆಂಡಾ ಮೊಹಮ್ಮದ್ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನು ನೋಡಿದ ಹುಡುಗಿಯ ಮನೆಯವರು ಹುಡುಗಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಎರಡೂ ಕುಟುಂಬಗಳು ತುಂಬಾ ಸಂತೋಷದಿಂದ ಇದ್ದವು. ಕಳೆದ ಗುರುವಾರ ಇಬ್ಬರೂ ಅದ್ಧೂರಿಯಾಗಿ ವಿವಾಹವಾದರು. ಪ್ರಣವ್ ಶುಕ್ರವಾರ ಪತ್ನಿಯೊಂದಿಗೆ ಮನೆಗೆ ಮರಳಿದ್ದರು. ಆದರೆ ಅದೇ ದಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿ 842 ಶಿಕ್ಷಕರ ನೇಮಕಾತಿ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಪಟ್ಟಿಯನ್ನು ಸಾರ್ವಜನಿಕಗೊಳಿಸಿದಾಗ ಅದರಲ್ಲಿ ಪ್ರಣವ್ ರಾಯ್ ಹೆಸರೂ ಇತ್ತು. ಕೆಲಸ ಕಳೆದುಕೊಂಡ ಸುದ್ದಿ ತಿಳಿದ ತಕ್ಷಣ ಮನೆಯಲ್ಲಿ ಶೋಕ ಮಡುಗಟ್ಟಿದೆ.


ಅಷ್ಟರಲ್ಲಾಗಲೇ ಪ್ರಣವ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಜನರು ವಿವಿಧ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದರು. ಒಬ್ಬರು ಬರೆದರು, 'ಗುರುವಾರ ಮದುವೆಯಾಯಿತು, ಶುಕ್ರವಾರ ಕೆಲಸ ಸಿಕ್ಕಿತು' ಅಂತ ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ಈ ಘಟನೆ ಇತಿಹಾಸದ ಪುಟಗಳಲ್ಲಿ ಬರೆಯಲ್ಪಡುತ್ತದೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.


ಇದನ್ನೂ ಓದಿ: ವೀಕೆಂಡ್​ನಲ್ಲಿ ಮಾತ್ರ ಇವ್ರು ಗಂಡ-ಹೆಂಡತಿ, ಉಳಿದ ದಿನಗಳಲ್ಲಿ ಸಿಂಗಲ್​ ಲೈಫ್​!


ಆದರೆ, ಇಡೀ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ವಧು ಅಥವಾ ವರ ಸಿದ್ಧರಿರಲಿಲ್ಲ. ನವ ದಂಪತಿಗಳು ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ. ಹಣ ಕೊಟ್ಟು ಕೆಲಸ ಕೊಟ್ಟಿರುವುದಕ್ಕೆ ಸಾಕ್ಷಿಯೂ ಸಿಕ್ಕಿದೆ. ಇದಾದ ಬಳಿಕ ಹೈಕೋರ್ಟ್ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿತ್ತು. ಪ್ರೌಢ ಶಿಕ್ಷಣ ಮಂಡಳಿಯ 57 ಮತ್ತು 785 ರ ಒಟ್ಟು 842 ನೇಮಕಾತಿಗಳನ್ನು ರದ್ದುಪಡಿಸಲು ಸೂಚಿಸಲಾಗಿದೆ. ಅವರಲ್ಲಿ ಯಾರಿಗೂ ಶಾಲೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಅವರು ಶಾಲೆಯಲ್ಲಿ ಏನನ್ನೂ ಮುಟ್ಟುವಂತಿಲ್ಲ.
ಅವರ ಸಂಬಳವನ್ನು ಮರುಪಾವತಿ ಮಾಡುವ ವಿಷಯದ ಬಗ್ಗೆ ನ್ಯಾಯಾಲಯವು ನಂತರ ನಿರ್ಧರಿಸುತ್ತದೆ. ಗ್ರೂಪ್ ಸಿ ಪ್ರಕರಣಗಳಲ್ಲಿ ಶಿಫಾರಸು ಮಾಡಿದ ಎಷ್ಟು ವ್ಯಕ್ತಿಗಳು ಒಎಂಆರ್ ಅನ್ನು ತಿದ್ದಿದ್ದಾರೆ ಎಂದು ನ್ಯಾಯಾಲಯ ಕೇಳಿದೆ. ಪ್ರಣವ್ ರಾಯ್ ಮಾತ್ರವಲ್ಲದೆ ಮದುವೆಯಾದ ಕೆಲವೇ ದಿನಗಳಲ್ಲಿ ವರ ಕೆಲಸ ಕಳೆದುಕೊಂಡ ಪ್ರಕರಣಗಳು ಇವೆ.


ಈ ರೀತಿಯ ಘಟನೆಗಳು ಸಮಾಜದಲ್ಲಿ ಎಂದಿಗೂ ನಡೆಯುತ್ತಲೇ ಇರುತ್ತವೆ. ಆದರೆ, ಅಚಾನಕವಾಗಿ ನಡೆಯುವ ಘಟನೆಗಳಿಗೆ ಯಾರು ಹೊಣೆ ಹೇಳಿ?

First published: