Dowry: ಚಿನ್ನ, ಹಣ ಇನ್ನೂ ಕೊಟ್ಟಿಲ್ಲ, ನನಗೆ ಸರ್ಕಾರಿ ನೌಕರಿ ಇದೆ: ಮೂರು ಬಿಟ್ಟು ವರದಕ್ಷಿಣೆ ಕೇಳಿದ ವರನ ವಿಡಿಯೋ ನೋಡಿ

ಒಂದಿಷ್ಟು ಮಂದಿ ಮೂರು ಇಲ್ಲದವರಂತೆ ಮದುವೆ ವೇದಿಕೆ ಮೇಲೆಯೇ ಹಣ (Money) ನೀಡಬೇಕು ಎಂದು ಧೈರ್ಯವಾಗಿ ಕೇಳುತ್ತಾರೆ. ಇದೀಗ ಇಂತಹವುದೇ ಒಂದು ವಿಡಿಯೋ (Video) ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ.

ವರದಕ್ಷಿಣೆ ಕೇಳಿದ ವರ

ವರದಕ್ಷಿಣೆ ಕೇಳಿದ ವರ

  • Share this:
ಮದುವೆ (Marriage) ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತ ಹೇಳ್ತಾರೆ. 90ರ ದಶಕದಲ್ಲಿ ಮದುವೆ ಅನ್ನೋದು ವ್ಯಾಪಾರ (Business) ಎಂಬಂತೆ ಆಗಿತ್ತು. ವರದಕ್ಷಿಣೆ (Dowry) ಅನ್ನೋ ಪಿಡುಗಿಗೆ ಎಷ್ಟೋ ಮದುವೆಗಳು ನಿಂತು ಹೋಗಿವೆ. ಇನ್ನು ಅದೆಷ್ಟು ಜನ ಮಹಿಳೆಯರು (Women) ಪತಿ ಕುಟುಂಬಸ್ಥರ ವರದಕ್ಷಿಣೆ ದಾಹಕ್ಕೆ (Dowry Harassment) ಬಲಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ವರದಕ್ಷಿಣೆ ತೆಗೆದುಕೊಳ್ಳುವವರ  ಪ್ರಮಾಣ ಕಡಿಮೆ ಆಗಿದೆ ಅನ್ನಬಹುದು. ವರದಕ್ಷಿಣೆ ಸಂಬಂಧ ಸರ್ಕಾರಗಳು ಸಹ ಕಠಿಣ ಕಾನೂನುಗಳನ್ನು (Law) ತಂದಿವೆ. ಆದ್ರೂ ಒಂದಿಷ್ಟು ಜನರು ಯಾರಿಗೂ ತಿಳಿಯದಂತೆ ವರದಕ್ಷಿಣೆಗೆ ಭಿಕ್ಷುಕರಂತೆ (Beggars) ಕೈ ಚಾಚುತ್ತಾರೆ. ನಾಚಿಕೆ ಇಲ್ಲದ ಇಂತಹ ವರದಕ್ಷಿಣೆಗೆ ತಮ್ಮದೇ ಆದ ವ್ಯಾಖ್ಯಾನ ನೀಡಿ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಇನ್ನೂ ಒಂದಿಷ್ಟು ಮಂದಿ ಮೂರು ಇಲ್ಲದವರಂತೆ ಮದುವೆ ವೇದಿಕೆ ಮೇಲೆಯೇ ಹಣ (Money) ನೀಡಬೇಕು ಎಂದು ಧೈರ್ಯವಾಗಿ ಕೇಳುತ್ತಾರೆ. ಇದೀಗ ಇಂತಹವುದೇ ಒಂದು ವಿಡಿಯೋ (Video) ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ.

ವರನೋರ್ವ ವೇದಿಕೆ ಮೇಲೆ ಕುಳಿತು ವರದಕ್ಷಿಣೆಗೆ ಬೇಡಿಕೆ ಇರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ನಾನು ಸರ್ಕಾರಿ ಉದ್ಯೋಗಿಯಾಗಿದ್ದರಿಂದ ನನ್ನ ಡಿಮ್ಯಾಂಡ್ ಗಳು ಇವತ್ತೇ ಈಡೇರಬೇಕೆಂದು ವರ ಹೇಳಿದ್ದಾನೆ. ಇಲ್ಲವಾದ್ರೆ ನಾವು ವಾಪಸ್ ಹೋಗುತ್ತೇವೆ. ವರದಕ್ಷಿಣೆ ನೀಡಲು ಆಗದಿದ್ರೆ, ನಿಮ್ಮ ಯೋಗ್ಯತೆಗೆ ಹೊಂದುವ ಜನರ ಜೊತೆ ಸಂಬಂಧ ಬೆಳೆಸಬೇಕು ಎಂದು ಸೊಕ್ಕಿನ ಮಾತುಗಳನ್ನು ಆಡಿದ್ದಾನೆ.

ಇದನ್ನೂ ಓದಿ:  Bride Groom: ಮದುವೆಗೆ ಮುಂಚೆಯೇ ವರನ ಪರೀಕ್ಷೆ ನಡೆಸಿದ ವಧು: ಯುವತಿ ಹೀಗೆ ಮಾಡ್ತಾಳೆ ಅಂತ ಗೊತ್ತಿರಲಿಲ್ಲ!

ವಿಡಿಯೋದಲ್ಲಿ ವರ ಹೇಳಿದ್ದೇನು?

ನನಗೆ ಇದುವರೆಗೂ ಕ್ಯಾಶ್ ಸಿಕ್ಕಿಲ್ಲ. ಮಾತುಕತೆಯಂತೆ ತೀರ್ಮಾನಿಸಿದ್ದ ಯಾವ ವಸ್ತುಗಳು ಇನ್ನು ನಮಗೆ ಸೇರಿಲ್ಲ. ಒಂದು ಚೈನ್ ಸಹ ಕೊಡ್ತೀವಿ ಅಂತ ಹೇಳಿದ್ದರು. ಅದನ್ನು ಸಹ ಕೊಟ್ಟಿಲ್ಲ. ಕೊಟ್ಟ ಮಾತನ್ನು ತಪ್ಪಿದ್ದಾರೆ ಅಂತ ಹೇಳಿದ್ದಾನೆ. ಇನ್ನೂ ವಿಡಿಯೋ ಮಾಡುತ್ತಿರುವ ವ್ಯಕ್ತಿ, ನೀವೆಲ್ಲ ಓದಿದವರು. ಹೀಗೆ ಬಹಿರಂಗವಾಗಿ ವರದಕ್ಷಿಣೆ ಕೇಳೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾನೆ. ಆದ್ರೆ ವರ ಮಾತ್ರ ತಾನು ಸರ್ಕಾರಿ ಉದ್ಯೋಗಿ ಎಂದು ಹೇಳುತ್ತಾನೆ.

ನಿಮಗೆ ಹಣ ಬೇಕಿದ್ರೆ ಇಲ್ಲಿಗೆ ಯಾಕೆ ಬರಬೇಕಿತ್ತು ಎಂದು ವ್ಯಕ್ತಿ ಪ್ರಶ್ನೆ ಮಾಡುತ್ತಾನೆ. ಫೋನ್ ಮಾಡಿದಾಗ ಎಲ್ಲವೂ ರೆಡಿ ಇದೆ ಬನ್ನಿ ಅಂತ  ಹೇಳಿದ್ರು. ಆದ್ರೆ ಈಗ ಇಲ್ಲ ಅಂತ ಹೇಳುತ್ತಿದ್ದಾರೆ.

ಮನವೊಲಿಸಲು ಮುಂದಾದ ವಧು

ಈ ವೇಳೆ ಪಕ್ಕದಲ್ಲಿ ನಿಂತಿದ್ದ ವಧು, ನಿಮಗೆ ಒಂದು ಲಕ್ಷ ನಗದು ಮತ್ತು ಚಿನ್ನ ಸಹ ಸಿಗುತ್ತೆ ಎಂದು ಮನವೊಲಿಸಲು ಪ್ರಯತ್ನ ಮಾಡೋದನ್ನು ಕಾಣಬಹುದು. ಕೊನೆಗೆ ವರ ನಾನು ನಮ್ಮ ತಂದೆ ಜೊತೆ ಮಾತನಾಡಬೇಕು ಎಂದು ವೇದಿಕೆಯಿಂದ ಕೆಳಗೆ ಇಳಿಯುತ್ತಾನೆ.ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ತಿಳಿದು ಬಂದಿಲ್ಲ. ಕೊನೆಗೆ ಮದುವೆ ನಡೆದಿದೆಯಾ ಅಥವಾ ಇಲ್ಲ ಎಂದು ಮಾಹಿತಿ ಲಭ್ಯವಾಗಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ, ಕಟು ಪದಗಳಲ್ಲಿ ವರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಡಿಯೋ ನೋಡಿದವರು ಹೇಳಿದ್ದೇನು?

ಈ ವರ ಮತ್ತು ಆತನ ಕುಟುಂಬದ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ಒಂದು ವೇಳೆ ಮದುವೆ ನಡೆದಿದ್ರೆ ಪಡೆದ ವರದಕ್ಷಿಣೆಯನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.ಇದನ್ನೂ ಓದಿ:  Triple Marriage: ‘ಮೂವರು ಹೆಂಡತಿಯರ ಮುದ್ದಿನ ಗಂಡ’, ಇದು ಸಹೋದರಿಯರ ಪ್ರೇಮ್​ ಕಹಾನಿ

ಒಂದಿಷ್ಟು ನೆಟ್ಟಿಗರು, ಅಲ್ಲೇ ಇರೋ ಯಾರಾದ್ರೂ ಅವನ ಕೆನ್ನೆಗೆ ನಾಲ್ಕು ಏಟು ನೀಡಬೇಕಿತ್ತು. ಅವನು ಸರ್ಕಾರಿ ಉದ್ಯೋಗ ಹೋಗುವಂತೆ ಪೊಲೀಸರು ಮಾಡಬೇಕಿದೆ. ಇಂತಹ ಮದುವೆಯನ್ನು ವಧು ವಿರೋಧಿಸಬೇಕಿತ್ತು ಎಂಬ ಮಾತುಗಳ ಸಹ ಕೇಳಿ ಬಂದಿವೆ.
Published by:Mahmadrafik K
First published: