ಮದುವೆ ಎಂಬುದು ಗಂಡು - ಹೆಣ್ಣಿನ ಒಂದು ಮುಖ್ಯ ಘಟ್ಟ. ವಧು - ವರ ಮದುವೆಯ (Marriage) ಬಗ್ಗೆ ತನ್ನದೇ ಆದ ಕನಸು (Dream)ಕಾಣುತ್ತಿರುತ್ತಾರೆ. ಮದುಮಗಳು ಮತ್ತು ಮದುಮಗ ಕಲ್ಯಾಣ ಮಂಟಪಕ್ಕೆ ಡಿಫ್ರೆಂಟ್ ಆಗಿ ಎಂಟ್ರಿ ಕೊಡುವುದು ಹೊಸದೇನೂ ಅಲ್ಲ. ಇಂತಹ ವಿಡಿಯೋ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ಅದರಲ್ಲೂ ಮದುಮಕ್ಕಳ ಕತೆ ಕೇಳ್ಬೇಕಾ. ಕೆಲವರು ಕುದುರೆ ಏರಿ ಬಂದರೆ, ಇನ್ನು ಕೆಲವರು ಕಾರು, ಬೈಕ್ ಏರಿ ಬರುವುದುಂಟು. ಆದರೆ ಇಲ್ಲೊಬ್ಬ ವರ ತನ್ನ ಮುದ್ದಿನ ಶ್ವಾನದೊಂದಿಗೆ ಬೈಕ್ (Bike) ಏರಿ ಮದುವೆ ಮಂಟಪಕ್ಕೆ ಬಂದಿದ್ದಾನೆ. ಶ್ವಾನ ಎಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆಮಾಲೀಕರು ಅವುಗಳನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಶ್ವಾನವು ಅಷ್ಟೇ ಮನೆ ಮಾಲೀಕನ ಋಣವನ್ನು ಯಾವತ್ತೂ ಮರೆಯಲ್ಲ. ಇದೀಗ ಶ್ವಾನ (Dog) ಮತ್ತು ಮದುಮಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.
ಶ್ವಾನದ ಜೊತೆ ಬಂದ ಮದುಮಗ
ಮದುವೆ ಸಿಂಗಾರದಲ್ಲಿ ನಗುತ್ತಾ ಬೈಕ್ ಏರಿರುವ ಮದುಮಗ ತನ್ನ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಮುದ್ದಿನ ಶ್ವಾನ ಹಾಯಾಗಿ ಕುಳಿತಿದೆ. ಇದಲ್ಲದೆ ಶ್ವಾನ ಕೂಡ ಹೊಸ ಬಟ್ಟೆಯಲ್ಲಿ ಮಿಂಚಿದೆ. ತನ್ನ ಪಾಡಿಗೆ ಹಾಯಾಗಿ ಕುಳಿದ್ದ ಶ್ವಾನ ನೋಡಲು ಮುದ್ದಾಗಿ ಕಾಣುತ್ತಿತ್ತು. ಇಷ್ಟು ಮಾತ್ರವಲ್ಲದೆ ಈ ಅಪೂರ್ವ ಘಳಿಗೆ ಅತಿಥಿಗಳು ಸಾಕ್ಷಿಯಾಗಿದ್ದರು. ಈ ಡಿಫರೆಂಟ್ ಕ್ಷಣವನ್ನು ಈ ಡಿಫ್ರೆಂಟ್ ಎಂಟ್ರಿಯನ್ನು ಅಲ್ಲಿದ್ದವರು ವಿಶೇಷವಾಗಿ ಕಣ್ತುಂಬಿಕೊಂಡರು. ಈ ವಿಡಿಯೋವನ್ನು supremebakarwadi ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram
ಇದನ್ನೂ ಓದಿ: Viral Post: ಬುದ್ಧಿವಂತಿಕೆಗೊಂದು ಸವಾಲ್! ಕಾಣೆಯಾಗಿರುವ 1 ಡಾಲರ್ ಹುಡುಕಿ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರ ಗಮನ ಸೆಳೆದಿದೆ. ಶ್ವಾನ ಮತ್ತು ಮದುಮಗನ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹೀಗಾಗಿ, ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.
ಇದನ್ನೂ ಓದಿ: Viral Video: ಅಳುತ್ತಿರುವ ಅಕ್ಕನನ್ನ ಸಂತೈಸಿದ ತಮ್ಮ; ಕ್ಯೂಟ್ ವಿಡಿಯೋ ನೋಡಿದವರ ಕಣ್ಣಾಲಿಗಳು ತೇವ
ಕೆಲವರು ಶ್ವಾನದ ಹುಟ್ಟುಹಬ್ಬ ಮಾಡುತ್ತಾರೆ. ಇನ್ನು ಕೆಲವರು ಶ್ವಾನದ ಮದುವೆ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಮದುವೆಗೆ ಮದುಮಗಳೊಂದಿಗೆ ಬರುವುದಕ್ಕಿಂತ ನಾಯಿಯ ಜೊತೆ ಬರುತ್ತಾರೆ. ಒಟ್ಟಿನಲ್ಲಿ ಈ ವಿಡಿಯೋ ಮಾತ್ರ ಪ್ರಾಣಿಪ್ರೇಮವನ್ನು ತೋರಿಸುತ್ತದೆ. ಇದಲ್ಲದೆ ಈ ವಿಡಿಯೋ ಪ್ರಾಣಿಪ್ರಿಯರಿಗೆ ಖಂಡಿತಾ ಇಷ್ಟವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ