Viral Video: ಪ್ರವಾಹಕ್ಕೆ ಅಂಜದೆ ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ!

ಬಿಹಾರದ ಕಿಶನ್‍ಗಂಜ್ ಜಿಲ್ಲೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವರನೊಬ್ಬ ತನ್ನ ವಧುವನ್ನು ಹೆಗಲ ಮೇಲೆ ಎತ್ತಿಕೊಂಡು, ಮಳೆಯಿಂದ ತುಂಬಿ ಹರಿಯುತ್ತಿರುವ ನದಿಯನ್ನು ದಾಟುತ್ತಿರುವ ದೃಶ್ಯವಿದೆ. ಈ ಘಟನೆ, ಸಿಂದ್ಗ್‌ಮರಿ ಘಾಟ್‍ನ ದಿಗಲ್‍ಬ್ಯಾಂಕ್ ಬ್ಲಾಕ್‍ನಲ್ಲಿ ನಡೆದಿದೆ. ಕಂಕೈ ನದಿಯಲ್ಲಿ ಪ್ರವಾಹ ಉಕ್ಕಿ ಹರಿದು, ಇಡೀ ಪ್ರದೇಶವು ನೀರಿನಿಂದ ತುಂಬಿ ಹೋಗಿತ್ತು.

ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ

ವಧುವನ್ನು ಹೆಗಲ ಮೇಲೆ ಹೊತ್ತು ನಡೆದ ವರ

  • Share this:
ವಧು ಪಲ್ಲಕ್ಕಿಯಲ್ಲಿ ಕುಳಿತು ತನ್ನ ಗಂಡನ ಮನೆಗೆ ಹೋಗುವುದನ್ನು ನೀವು ನೋಡಿರಬಹುದು, ಕೆಲವೊಂದೆಡೆ ವಧುವನ್ನು ಕುದುರೆಯ ಮೇಲೆ ಕುಳ್ಳಿರಿಸಿ ಅತ್ತೆ ಮನೆಗೆ ಕಳಿಸುವ ಸಂಪ್ರದಾಯವೂ ಉಂಟು. ಆದರೆ ಗಂಡನ ಹೆಗಲೇರಿ ಅತ್ತೆಮನೆಗೆ ಹೊರಟ ವಧುವನ್ನು ಎಂದಾದರೂ ಕಂಡಿದ್ದೀರಾ? ಇಲ್ಲವಾದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ನೀವು ಆ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಬಿಹಾರದ ಕಿಶನ್‍ಗಂಜ್ ಜಿಲ್ಲೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವರನೊಬ್ಬ ತನ್ನ ವಧುವನ್ನು ಹೆಗಲ ಮೇಲೆ ಎತ್ತಿಕೊಂಡು, ಮಳೆಯಿಂದ ತುಂಬಿ ಹರಿಯುತ್ತಿರುವ ನದಿಯನ್ನು ದಾಟುತ್ತಿರುವ ದೃಶ್ಯವಿದೆ. ಈ ಘಟನೆ, ಸಿಂದ್ಗ್‌ಮರಿ ಘಾಟ್‍ನ ದಿಗಲ್‍ಬ್ಯಾಂಕ್ ಬ್ಲಾಕ್‍ನಲ್ಲಿ ನಡೆದಿದೆ. ಕಂಕೈ ನದಿಯಲ್ಲಿ ಪ್ರವಾಹ ಉಕ್ಕಿ ಹರಿದು, ಇಡೀ ಪ್ರದೇಶವು ನೀರಿನಿಂದ ತುಂಬಿ ಹೋಗಿತ್ತು.

ಕಂಕೈ ನದಿಯ ಮತ್ತೊಂದು ತೀರದಲ್ಲಿರುವ ಪಾಲ್ಸಾ ಗ್ರಾಮದಲ್ಲಿ ಮದುವೆ ನಡೆದಿತ್ತು. ಮದುವೆ ಮುಗಿಸಿಕೊಂಡು ವರ ಶಿವಕುಮಾರ್ ಸಿಂಗ್, ಆತನ ವಧು ಮತ್ತು ಇತರ ಸಂಬಂಧಿಕರು, ದೋಣಿಯ ಮೂಲಕ ನದಿ ದಾಟಿ ತಮ್ಮ ಊರಿಗೆ ಹೋಗಬೇಕಿತ್ತು. ಮದುವೆ ಮುಗಿದ ಸಂಭ್ರಮದಲ್ಲಿ ಅವರೆಲ್ಲಾ ದೋಣಿಯಲ್ಲೇನೋ ಹೊರಟರು, ಆದರೆ ದೋಣಿಯಲ್ಲಿ ಸ್ವಲ್ಪ ದೂರ ಸಾಗಿದ ನಂತರ, ಅವರ ದೋಣಿ ಮರಳಿನಲ್ಲಿ ಸಿಕ್ಕಿ ಹಾಕಿಕೊಂಡಿತು. ನದಿ ತೀರದ ಒಣ ಪ್ರದೇಶದ ವರೆಗೆ ಹೋಗಬೇಕೆಂದರೆ ನೀರಿನಲ್ಲಿ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಸರ್ವಾಲಂಕೃತಳಾದ ತನ್ನ ನವವಧುವನ್ನು, ನೀರಿನಲ್ಲಿ ನಡೆಸಿ, ಬಟ್ಟೆ ಮತ್ತು ಕಾಲುಗಳನ್ನು ಒದ್ದೆ ಆಗಿಸಲು ವರ ಮಹಾಶಯ ಬಿಟ್ಟಾನೇ? ದೋಣಿ ಇಳಿದವನೇ, ತನ್ನ ವಧುವೆನೆಡೆ ಕೈ ನೀಡಿ, ಆಕೆಯನ್ನು ಹೆಗಲ ಮೇಲೆ ಹೊತ್ತುಕೊಂಡ. ನೆರೆದ ಸ್ನೇಹಿತರ ಕೇಕೆ, ಹರ್ಷದ ಉದ್ಘಾರಗಳ ನಡುವೆಯೇ ವಧುವನ್ನು ಹೊತ್ತುಕೊಂಡು ಮುನ್ನಡೆದ.

Dread: ಈ 5 ಸಂದರ್ಭಗಳಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಭಯಪಡುತ್ತಾರೆ

“ದೋಣಿಯಿಂದ ಇಳಿದು, ನದಿ ತೀರದ ಒಣ ಪ್ರದೇಶದ ವರೆಗೆ ನಡೆದು ಹೋಗುವುದನ್ನು ಬಿಟ್ಟರೆ ನಮಗೆ ಬೇರೆ ಆಯ್ಕೆಯೇ ಇರಲಿಲ್ಲ. ಹಾಗಾಗಿ ನಾನು ಕೂಡಲೇ, ಆಕೆಯನ್ನು ನನ್ನ ಹೆಗಲ ಮೇಲೆ ಎತ್ತಿಕೊಂಡು , ನಡೆದು ಸಾಗಲು ನಿರ್ಧರಿಸಿದೆ” ಎಂದು ವರ ಶಿವಕುಮಾರ್ ಸಿಂಗ್ ಹೇಳಿದ್ದಾರೆ.



“ಸುಮಾರು 10 ವರ್ಷಗಳ ಹಿಂದೆಯೇ , ಸಿಂದ್ಗ್‌ಮರಿಯಲ್ಲಿ ಕಂಕೈ ನದಿಗೆ ಸೇತುವೆ ಕಟ್ಟಲು ಪ್ರಸ್ತಾಪ ಸಲ್ಲಿಸಲಾಗಿತ್ತು. ಕಿಶನ್‍ಗಂಜ್ ಮತ್ತು ಅದರ ಸುತ್ತಲಿನ ಪ್ರದೇಶದ ಜನರು , ನದಿಯನ್ನು ದಾಟಬೇಕಾದರೆ ಅನಿವಾರ್ಯವಾಗಿ ದೋಣಿಯನ್ನು ಬಳಸಲೇಬೇಕಾಗಿದೆ. ರಾಜ್ಯ ಸರಕಾರವು ಈ ವಿಷಯದಲ್ಲಿ ಕಠಿಣವಾಗಿದೆ” ಎಂದು ವರನ ಸಂಬಂಧಿ ರಾಹುಲ್ ಸಿಂಗ್ ಹೇಳಿದ್ದಾರೆ.

Electricity Saving Tips: ವಿದ್ಯುತ್​ ಬಿಲ್ ಕಡಿಮೆ ಬರಬೇಕೆ? ಹಾಗಾದರೆ ಈ ನಾಲ್ಕು ವಿಧಾನವನ್ನು ಅನುಸರಿಸಿ ನೋಡಿ

“ಈ ಘಟನೆಯು, ನಿತೀಶದ ಕುಮಾರ್ ಸರಕಾರವು ಪ್ರತಿಪಾದಿಸಿರುವ ಬಿಹಾರದ ಅಭಿವೃದ್ಧಿಗೆ ಒಂದು ಉದಾಹರಣೆಯಾಗಿದೆ. ನದಿಯ ಸುತ್ತಮುತ್ತಲಿನ ಹೆಚ್ಚಿನ ಹಳ್ಳಿಗಳಿಗೆ ರಾಜ್ಯದ ರಸ್ತೆಗಳ ಸಂಪರ್ಕವು ಕಡಿತವಾಗಿದೆ. ಹಾಗಾಗಿ ದೋಣಿಗಳು ನಮ್ಮ ಏಕೈಕ ಆಯ್ಕೆಯಾಗಿವೆ. ಮಳೆಯ ಪ್ರವಾಹದಿಂದಾಗಿ, ಎಲ್ಲಾ ಪ್ರದೇಶಗಳಲ್ಲಿ ಇಂತಹದ್ದೇ ಪರಿಸ್ಥಿತಿ ಎದುರಾಗಿದೆ” ಎಂದು ರಾಹುಲ್ ಸಿಂಗ್ ಹೇಳಿದ್ದಾರೆ.
First published: