Video: ವಧುವಿನ ಮೂರು ಷರತ್ತಿಗೆ ಸಹಿ ಹಾಕಿದ ವರ! ಇಂತಹ ವಿವಾಹ ಒಪ್ಪಂದ ಎಲ್ಲಿಯೂ ನೋಡಿರಲು ಸಾಧ್ಯವಿಲ್ಲ

ವೈರಲ್ ಆದ ವಿಡಿಯೋದಲ್ಲಿ ರಾಧಿಕಾ ಮತ್ತು ಆಯುಷ್ ಇಬ್ಬರೂ ಮದುವೆಯಾಗಿ ಮನೆಗೆ ಬರುತ್ತಾರೆ, ಬಂದಾಗ ಅವರನ್ನು ತಡೆದು ವಧು ರಾಧಿಕಾ ಅವರ ಮನೆಯವರು ಒಂದು ದೊಡ್ಡ ರಟ್ಟಿನ ಬೋರ್ಡ್ ನಲ್ಲಿ ಸುಮಾರು ಮೂರು ಷರತ್ತುಗಳನ್ನು ಬರೆದು ಅದರ ಮೇಲೆ ಆಯುಷ್ ಈ ಎಲ್ಲಾ ಷರತ್ತುಗಳಿಗೆ ಒಪ್ಪಿದ್ದಾರೆ ಎಂದು ಬರೆದು ಪೂರ್ತಿ ಕೆಳಗೆ ಅವರಿಗೆ ಸಹಿ ಮಾಡಲು ಸ್ಥಳವನ್ನು ಬಿಟ್ಟಿದ್ದಾರೆ.

ರಾಧಿಕಾ ಮತ್ತು ಆಯುಷ್

ರಾಧಿಕಾ ಮತ್ತು ಆಯುಷ್

  • Share this:
ವರ ಮತ್ತು ವಧುವಿನ ಮಧ್ಯೆ ವಿವಾಹಕ್ಕೂ ಮುಂಚಿತವಾಗಿ ಕೆಲವು ಷರತ್ತುಗಳನ್ನು ಹಾಕಿಕೊಂಡು ಒಪ್ಪಂದವನ್ನು ಮಾಡಿಕೊಂಡು ಅದಕ್ಕೆ ಇಬ್ಬರೂ ಸಮ್ಮತಿಯನ್ನು ಸೂಚಿಸಿದ ನಂತರವೇ ಪರಸ್ಪರರು ಮದುವೆ ಆಗುವುದನ್ನು ನಾವು ಕೆಲವು ಸಿನೆಮಾಗಳಲ್ಲಿ ಮತ್ತು ನೈಜವಾಗಿಯೂ ನೋಡಿರುತ್ತೇವೆ.


ಆದರೆ ಇಲ್ಲಿ ನಡೆದ ಒಂದು ತಮಾಷೆ ಘಟನೆಯಲ್ಲಿ ವಧುವಿನ ಮನೆಯವರು ವರನಿಗೆ ಕೆಲವು ತಮಾಷೆಯ ಷರತ್ತುಗಳನ್ನು ಹಾಕಿ ಅದಕ್ಕೆ ಒಪ್ಪಿ ಸಹಿ ಹಾಕುವಂತೆ ಕೋರಿದ್ದಾರೆ. ಆ ವೀಡಿಯೊ ನೋಡಲು ತುಂಬಾ ತಮಾಷೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮದುವೆ ಎಂದರೆ ಒಂದರ್ಥದಲ್ಲಿ ಇಬ್ಬರೂ ಜೊತೆಗೆ ಸುಖ ಶಾಂತಿಯಿಂದ ಬಾಳ್ವೆ ನಡೆಸುತ್ತೇವೆ ಎಂದು ಮಾಡಿಕೊಳ್ಳುವ ಒಪ್ಪಂದ, ಆದರೆ ಇಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ ಇರಬಹುದು, ಆದರೆ ಸಾಂಪ್ರದಾಯಿಕವಾಗಿ ಮದುವೆಯಾದಾಗ ಇದು ಒಂದು ತರಹದ ಒಪ್ಪಂದಕ್ಕೆ ಸಹಿ ಹಾಕಿದಂತೆ ಅಲ್ಲವೇ.


ಇಲ್ಲಿ ವೈರಲ್ ಆದ ವಿಡಿಯೋದಲ್ಲಿ ರಾಧಿಕಾ ಮತ್ತು ಆಯುಷ್ ಇಬ್ಬರೂ ಮದುವೆಯಾಗಿ ಮನೆಗೆ ಬರುತ್ತಾರೆ, ಬಂದಾಗ ಅವರನ್ನು ತಡೆದು ವಧು ರಾಧಿಕಾ ಅವರ ಮನೆಯವರು ಒಂದು ದೊಡ್ಡ ರಟ್ಟಿನ ಬೋರ್ಡ್ ನಲ್ಲಿ ಸುಮಾರು ಮೂರು ಷರತ್ತುಗಳನ್ನು ಬರೆದು ಅದರ ಮೇಲೆ ಆಯುಷ್ ಈ ಎಲ್ಲಾ ಷರತ್ತುಗಳಿಗೆ ಒಪ್ಪಿದ್ದಾರೆ ಎಂದು ಬರೆದು ಪೂರ್ತಿ ಕೆಳಗೆ ಅವರಿಗೆ ಸಹಿ ಮಾಡಲು ಸ್ಥಳವನ್ನು ಬಿಟ್ಟಿದ್ದಾರೆ.


ಮದುವೆಯ ಒಪ್ಪಂದ ಎಂದು ಮೇಲೆ ಬರೆಯಲಾಗಿದ್ದು ಮದುವೆ ಆಮಂತ್ರಣ ಪತ್ರಿಕೆಯಂತೆ ಡಿಸೈನ್ ಮಾಡಿದ್ದು ತುಂಬಾ ವಿಶೇಷವಾಗಿತ್ತು, ಅದರ ಕೆಳಗೆ ಆಯುಷ್ ಮತ್ತು ರಾಧಿಕಾ ಇಬ್ಬರು ಒಪ್ಪಂದಕ್ಕೆ ಒಳಪಡುವವರಾಗಿದ್ದು, ರಾಧಿಕಾ ಯಾವಾಗಲೂ ಸರಿಯಾಗಿರುತ್ತಾರೆ, ರಾಧಿಕಾ ಅವರನ್ನು ವರ್ಷದಲ್ಲಿ 2-3 ಬಾರಿಯಾದರೂ ವಿದೇಶಕ್ಕೆ ಪ್ರವಾಸಕ್ಕೆ ತಪ್ಪದೆ ಕರೆದುಕೊಂಡು ಹೋಗಬೇಕು ಮತ್ತು ರಾಧಿಕಾಗೆ ಏನೇ ಇಷ್ಟವಾದರೂ, ಯಾವಾಗ ಇಷ್ಟವಾದರೂ ಅದನ್ನು ತಕ್ಷಣ ಕೊಡಿಸಬೇಕು, ಇಲ್ಲ ಅನ್ನಬಾರದು ಎಂದು ಹೀಗೆ ಷರತ್ತುಗಳನ್ನು ಅದರಲ್ಲಿ ಹಾಸ್ಯಸ್ಪದವಾಗಿ ಬರೆಯಲಾಗಿತ್ತು. ಅದನ್ನು ಓದಿ ವರನು ನಗುತ್ತಾ ಸಹಿ ಹಾಕಿದ್ದು ಮತ್ತು ಅಲ್ಲಿದ್ದವರು ಅದನ್ನು ನೋಡಿ ಜೋರಾಗಿ ನಕ್ಕಿದ್ದು ತುಂಬಾನೇ ಕ್ಯೂಟ್ ಆಗಿತ್ತು.


ಅದರ ಕೆಳಗೆ "ಈ ಮೇಲಿನ ಷರತ್ತುಗಳನ್ನು ಒಪ್ಪಿ ಸಹಿ ಹಾಕಿದರೆ ಮಾತ್ರ ನಿಮಗೆ ಒಳಗೆ ಪ್ರವೇಶವಿರುತ್ತದೆ" ಎಂದು ಸಹ ಬರೆಯಾಗಿತ್ತು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿರುವ ಹ್ಯಾಪಿ ಫ್ರೆಮ್ಸ್ ಎನ್ನುವ ಒಂದು ಪೇಜ್ ನಲ್ಲಿ ಹಂಚಿಕೊಡಿದ್ದು, ತುಂಬಾ ಜನರು ಇದನ್ನು ವೀಕ್ಷಿಸಿ ಇಷ್ಟ ಪಟ್ಟಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭಗಳಲ್ಲಿ ಅನೇಕ ಹೊಸ ರೀತಿಯ ಮತ್ತು ವಿಚಿತ್ರವೆನಿಸುವ ಘಟನೆಗಳು ನಡೆಯುತ್ತಿದ್ದು ಜನರು ಆ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದು ಅದನ್ನು ನೋಡಿದ ಜನರು ಸಹ ಹೀಗೂ ನಡೆಯಬಹುದೇ ಎಂದು ಅಂದುಕೊಳ್ಳುತ್ತಿದ್ದಾರೆ.










View this post on Instagram






A post shared by Happyframes (@happyframes_)







ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಮದುವೆಯಲ್ಲಿಯೂ ಸಹ ಈ ರೀತಿಯಲ್ಲಿ ಬೇರೆ ಬೇರೆ ತಮಗೆ ಬೇಕಾದಂತಹ ಷರತ್ತುಗಳನ್ನು ಹಾಕಿ ವಧು ಅಥವಾ ವರನ ಕೈಯಿಂದ ಸಹಿ ಹಾಕಿಸಿಕೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ಕೊಂಡಿದ್ದಾರೆ.

First published: