ಆನೇಕಲ್: ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಅಪರೂಪದ ಸಂಭ್ರಮ. ಹಾಗಾಗಿ ಪ್ರತಿಯೊಬ್ಬರಿಗು ಸಹ ನಾನು ಒಂದು ರೀತಿಯಲ್ಲಿ ವಿಭಿನ್ನವಾಗಿ ಮತ್ತು ವಿಶೇಷವಾಗಿ ಮದುವೆ ಆಗಬೇಕು ಎಂಬಾ ಕನಸು ಇರತ್ತೆ. ಕೊರೋನಾ ನಡುವೆಯು ಅಂತಹದೊಂದು ವಿಶೇಷವಾದ ಮದುವೆಗೆ ಇಂದು ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದ್ದು, ನೋಡಗರ ಕಣ್ಣು ಹುಬ್ಬೇರುವಂತೆ ಮಾಡಿದೆ. ಇವತ್ತು ಹೀರೋ ರೀತಿಯಲ್ಲಿ ಹೆಲಿಕಾಪ್ಟರ್ನಲ್ಲಿ ಎಂಟ್ರಿ ಕೊಟ್ಟಿದ್ದು ಮದುವೆ ಗಂಡು ನಿರೂಪ್. ಮೂಲತಃ ತುಮಕೂರಿನ ಈ ನಿರೂಪ್ ಗೆ ಬೆಂಗಳೂರು ಐಶ್ವರ್ಯಾ ಜೋಡಿಯಾಗಿದ್ದಾರೆ. ಇಂದು ಬೆಂಗಳೂರಿನ ತಲಘಟ್ಟಪುರದಲ್ಲಿರುವ ಬಿ ಆರ್ ಎಸ್ ಗ್ರಾಂಡ್ಯುರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ರಿಸೆಪ್ಷನ್ ಗೆ ಇಂದು ವರ ನಿರೂಪ್ ಹೆಲಿಕಾಪ್ಟರ್ನಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಇನ್ನು ವರನ ತಂದೆ ಬಲರಾಮ್ ಶೆಟ್ಟಿ ಮತ್ತು ತಾಯಿ ರಮಾದೇವಿ ಮತ್ತು ವರ ನಿರೂಪ್ ಮೂಲತಃ ತುಮಕೂರಿನವರಾಗಿದ್ದು, ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಎಪಿಎಂಸಿಯಲ್ಲಿ ಕೆಲ ಮಂಡಿಗಳು ಸೇರಿದಂತೆ ರೈಸ್ ಮಿಲ್ ಗಳನ್ನು ಸಹ ಹೊಂದಿದ್ದಾರೆ.
ವಧುವಿನ ತಂದೆ ಕಿಶೋರ್ ಮತ್ತು ತಾಯಿ ಮಾದವಿ ಮೂಲತಃ ಬೆಂಗಳೂರಿನವರಾಗಿದ್ದು, ವಧು ಐಶ್ವರ್ಯಾ ಬಿ ಟೆಕ್ ಮಾಡಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಂದು ವಧುವಿನ ಕಡೆಯವರು ವರನನ್ನು ಬರ ಮಾಡಿಕೊಡಲು ಈ ರೀತಿಯಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದು, ತುಮಕೂರಿನಿಂದ ಬೆಂಗಳೂರಿನ ತಲಘಟ್ಟಪುರಕ್ಕೆ ಬರುವುದಕ್ಕೆ 80 ಸಾವಿರ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಅಭಿವೃದ್ಧಿ ಕೆಲಸಗಳು ಹಿಂದೆ ಕಾಗದದ ಮೇಲಿದ್ದವು, ಈಗ ಕಣ್ಣಿಗೆ ಕಾಣುತ್ತಿವೆ: ಡಿಸಿಎಂ ಅಶ್ವತ್ಥನಾರಾಯಣ
ಇನ್ನು ಈ ಅದ್ಧೂರಿಯಾದ ಮದುವೆಗೆ ಸರಿ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಿದ್ದು, ವರನ ಪ್ರವೇಶಕ್ಕೆ ಅಲ್ಲಿನ ಏರಿಯಾದವರೆಲ್ಲಾ ತಬ್ಬಿಬ್ಬಾಗಿದ್ದು ಯಾರಪ್ಪಾ ಇದು ಹೀರೋ ಬರ್ತಾಯಿದ್ದಾನ ಅಂತ ಬಾಯಿ ಮೇಲೆ ಬೆರಳಿಟ್ಟಿಕೊಂಡು ಯೋಚನೆ ಜೊತೆಗೆ ನೆರೆದವರೆಲ್ಲರು ಸಹ ಸಂತಸ ವ್ಯಕ್ತ ಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ