• Home
  • »
  • News
  • »
  • trend
  • »
  • Viral Video: ವಿಚಿತ್ರವಾಗಿದೆ ಈ ಪ್ರೀ ವೆಡ್ಡಿಂಗ್​​ ಫೋಟೋಶೂಟ್​, ವೈರಲ್ ಆಯ್ತು ವಿಡಿಯೋ

Viral Video: ವಿಚಿತ್ರವಾಗಿದೆ ಈ ಪ್ರೀ ವೆಡ್ಡಿಂಗ್​​ ಫೋಟೋಶೂಟ್​, ವೈರಲ್ ಆಯ್ತು ವಿಡಿಯೋ

ಫೋಟೋ ಶೂಟ್

ಫೋಟೋ ಶೂಟ್

ವಿಭಿನ್ನವಾಗಿರಲೆಂದು ಇಲ್ಲೊಂದು ಜೋಡಿ ಒಳ್ಳೆ ಫಿಲ್ಮಿ ಸ್ಟೈಲ್ ನಲ್ಲಿ ಬೈಕ್ ಮೇಲೆ ಕುಳಿತು ಕ್ರೇನ್ ನ ಸಹಾಯದಿಂದ ಸ್ಟಂಟ್ ಮಾಡಿದೆ ನೋಡಿ.

  • Share this:

ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಸಭೆ ಮತ್ತು ಸಮಾರಂಭಗಳ ರೂಪರೇಷೆಗಳು ಸಂಪೂರ್ಣವಾಗಿ ಬದಲಾದವು ಅಂತ ಹೇಳಬಹುದು ನೋಡಿ. ಮೊದಲೆಲ್ಲಾ ತುಂಬಾ ಜನರಿಂದ ಕೂಡಿದ ಅದ್ದೂರಿ ಮದುವೆಗಳು (Wedding)  ಕೋವಿಡ್ ಸಮಯದಲ್ಲಿ ಮತ್ತು ಕೋವಿಡ್ (Covid) ಸೋಂಕಿನ ತೀವ್ರತೆ ಕಡಿಮೆ ಆದ ಸಮಯದಲ್ಲಿ (Time) ಅಷ್ಟೊಂದು ಅದ್ದೂರಿಯಾಗಿ ನಡೆಯದೆ ಇದ್ದರೂ ವಿಭಿನ್ನವಾಗಿರುತ್ತಿವೆ (Different)  ಅಂತ ಹೇಳಿದರೆ ತಪ್ಪಾಗುವುದಿಲ್ಲ.


ವಿಭಿನ್ನತೆ ಎಂದರೆ ವಧು ಮತ್ತು ವರರ ಮದುವೆ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ಆಗಿರಬಹುದು ಮತ್ತು ಮದುವೆ ಸಮಯದಲ್ಲಿ ತುಂಬಾ ದಿನಗಳ ಕಾಲದವರೆಗೆ ಎಲ್ಲರ ನೆನಪಿನಲ್ಲಿ ಉಳಿಯುವಂತೆ ಮಾಡಲು ಏನೋ ಒಂದು ಒಳ್ಳೆಯ ಐಡಿಯಾ ಮಾಡುವುದು ಸಹ ಆಗಿರುತ್ತದೆ ಎಂದು ಹೇಳಬಹುದು.


ಮದುವೆ ಮಂಟಪಕ್ಕೆ ವಿಭಿನ್ನವಾಗಿ ಎಂಟ್ರಿ ನೀಡುವ ವೀಡಿಯೋಗಳು


ವಧು, ವರನ ಮದುವೆ ಮಂಟಪಕ್ಕೆ ಎಂಟ್ರಿ ಎಂದರೆ ಹಲವು ವೈವಿಧ್ಯತೆಗಳಿವೆ, ಉದಾಹರಣೆಗೆ ವಧು ಬೈಕ್ ಮೇಲೆ ಕುಳಿತು ಅಥವಾ ಬೈಕ್ ಚಲಾಯಿಸಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದು, ಆಕಾಶದಿಂದ ಅನೇಕ ಬಲೂನ್ ಗಳಿಗೆ ಒಂದು ಉಯ್ಯಾಲೆಯನ್ನು ಕಟ್ಟಿ ಅದರಲ್ಲಿ ಕುಳಿತು ಕೆಳಕ್ಕೆ ಹಾಗೆ ನಿಧಾನವಾಗಿ ಬರುವುದು, ವರ ಸಹ ಪ್ರಾಣಿಗಳನ್ನು ನೋಯಿಸಬಾರದು ಅಂತ ಕುದುರೆ ಬಿಟ್ಟು ನಡೆದುಕೊಂಡೆ ಮದುವೆ ಮಂಟಪಕ್ಕೆ ಬಂದದ್ದು.. ಹೀಗೆ ಅನೇಕ ರೀತಿಯ ವಿಭಿನ್ನತೆಯಿಂದ ಕೂಡಿದ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಈ ಎರಡೂವರೆ ವರ್ಷಗಳಲ್ಲಿ ನೋಡಿದ್ದೇವೆ.


ಈ ವಿಭಿನ್ನತೆಯು ವಧು-ವರ ಮದುವೆ ಮಂಟಪಕ್ಕೆ ಎಂಟ್ರಿ ನೀಡುವುದಕ್ಕೆ ಸೀಮಿತವಾಗಿಲ್ಲ, ಇದು ಮದುವೆಗೂ ಮುಂಚೆ ಮಾಡಿಸಿಕೊಳ್ಳುವ ಫೋಟೋಶೂಟ್ ನಲ್ಲಿಯೂ ಸಹ ನಾವು ಕಾಣಬಹುದು.


ಮದುವೆಗೂ ಮುಂಚೆ ಮಾಡಿಸಿಕೊಳ್ಳುವ ಫೋಟೋಶೂಟ್ ಸಹ ವಿಭಿನ್ನ..


ವಧುವೊಬ್ಬಳು ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ ಅಂತ ತೋರಿಸುತ್ತಾ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಮಗೆ ಇಷ್ಟವಾದ ಸಹೋದರ ಸಹೋದರಿಯರ ಜೊತೆ ವಧುವೊಬ್ಬಳು ಫೋಟೋಶೂಟ್ ಮಾಡಿಸಿಕೊಂಡಿದ್ದೆಲ್ಲವನ್ನು ನಾವು ವೀಡಿಯೋಗಳಲ್ಲಿ ಇದುವರೆಗೆ ನೋಡಿದ್ದೇವೆ.


ಆದರೆ, ಇಲ್ಲೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ, ಅದರಲ್ಲಿ ವಧು ಮತ್ತು ವರರಿಬ್ಬರು ಒಂದು ಬೈಕ್ ಮೇಲೆ ಕುಳಿತು ಒಂದು ಕ್ರೇನ್ ನ ಸಹಾಯದಿಂದ ಅವರ ಬೈಕ್ ಅನ್ನು ಒಂದು ಜೀಪ್ ಮೇಲಿಂದ ಫಿಲ್ಮಿ ಸ್ಟೈಲ್ ನಲ್ಲಿ ಹಾರಿಸುವುದನ್ನು ನಾವು ನೋಡಬಹುದು.



ಈ ಹೊಸ ಫೋಟೋಶೂಟ್ ವೀಡಿಯೋದಲ್ಲಿ ಏನಿದೆ?


ರಮಣೀಯವಾದ ಸ್ಥಳಗಳಿಗೆ ಹೋಗಿ ವಧು ವರರು ಮದುವೆಗೂ ಮುಂಚಿತವಾಗಿ ಫೋಟೋಶೂಟ್ ಮಾಡಿಸಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ವಿಭಿನ್ನವಾಗಿರಲೆಂದು ಇಲ್ಲೊಂದು ಜೋಡಿ ಒಳ್ಳೆ ಫಿಲ್ಮಿ ಸ್ಟೈಲ್ ನಲ್ಲಿ ಬೈಕ್ ಮೇಲೆ ಕುಳಿತು ಕ್ರೇನ್ ನ ಸಹಾಯದಿಂದ ಸ್ಟಂಟ್ ಮಾಡಿದೆ ನೋಡಿ. ಆದರೆ ನೀವು ಇಂತಹ ಬಾಲಿವುಡ್ ಸ್ಟೈಲ್ ನಲ್ಲಿ ನಂಬಲಾಗದಷ್ಟು ಆಕ್ಷನ್ ಅನ್ನು ಒಳಗೊಂಡಿರುವ ಮದುವೆ ಪೂರ್ವದ ಫೋಟೋಶೂಟ್ ಅನ್ನು ನೀವು ನೋಡಿರಲು ಸಾಧ್ಯವೇ ಇಲ್ಲ ಅಂತ ಹೇಳಬಹುದು.


ಇದನ್ನೂ ಓದಿ: ಆಕೆ ಗರ್ಭಿಣಿ ಅಂತ ಗೊತ್ತಾದ ಎರಡೇ ದಿನಕ್ಕೆ ಹೆರಿಗೆ ಆಯ್ತು! ಅರೇ, ಇವೆಲ್ಲ ನಿಜಕ್ಕೂ ಸಾಧ್ಯನಾ?


ವಧು ಮತ್ತು ವರರು ಒಂದು ಬೈಕ್ ಮೇಲೆ ಕುಳಿತಿರುವುದನ್ನು ವೀಡಿಯೋದ ಆರಂಭದಲ್ಲಿ ತೋರಿಸಲಾಗಿದೆ. ಈ ಕ್ಲಿಪ್ ಮುಂದುವರಿಯುತ್ತಿದ್ದಂತೆ, ಛಾಯಾಗ್ರಾಹಕನು ಶಾಟ್ ತೆಗೆದುಕೊಳ್ಳುತ್ತಿದ್ದಂತೆ ಕ್ರೇನ್ ಸಂಪೂರ್ಣ ಫಿಲ್ಮಿ ರೀತಿಯಲ್ಲಿ ಜೀಪಿನ ಮೇಲೆ ಬೈಕನ್ನು ಎಳೆಯುತ್ತದೆ.


ವಧು ಮತ್ತು ವರರು ರೋಹಿತ್ ಶೆಟ್ಟಿಯ ಅಭಿಮಾನಿಗಳೇ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ನೀವು ಹಾಗೆ ಅಂದು ಕೊಳ್ಳುವವರಲ್ಲಿ ಒಬ್ಬಂಟಿಯಲ್ಲ ಎಂದು ನಾವು ನಿಮಗೆ ಹೇಳಲು ಇಷ್ಟಪಡುತ್ತೇವೆ.


ಇದನ್ನೂ ಓದಿ: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?


ಈ ವೀಡಿಯೋ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು, 14,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಅಷ್ಟೇ ಅಲ್ಲದೆ ವೀಡಿಯೋ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ಸಹ ಗಳಿಸಿದೆ ಅಂತ ಹೇಳಬಹುದು.

First published: