Viral Video: ಹಾರ ಬದಲಿಸಿಕೊಳ್ಳುವ ಮೊದಲು ವಧುವಿನ ಈ ಕೆಲಸ ನೋಡಿ ನಾಚಿ ನೀರಾದ ವರ

ವೇದಿಕೆ ಮೇಲೆ ಹಾರ ಬದಲಿಸಿಕೊಳ್ಳುವ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿದೆ. ವರ ಅತೀಶ್ ಮಾತ್ರ ವಧು ಡ್ಯಾನ್ಸ್ ಮಾಡುತ್ತಿರೋದನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಸದ್ಯ ಭಾರತದಲ್ಲಿ ಕೋವಿಡ್ ಪಸರಿಸುವಿಕೆ (COVID Positivity Rate) ಪ್ರಮಾಣ ತಗ್ಗಿದ್ದು, ಅದ್ಧೂರಿ ಮದುವೆಗಳು (Marriages) ಕಳೆ ಕಟ್ಟಿವೆ. ಎರಡೂವರೆ ವರ್ಷಗಳ ಬಳಿಕ ಮದುವೆಗಳಲ್ಲಿ ಜನಜಂಗುಳಿ, ಆಪ್ತರ ಭೇಟಿಗಳು ನಡೆಯುತ್ತಿವೆ. ಎಷ್ಟೋ ಜನರು ಮದುವೆಯನ್ನು ಅದ್ಧೂರಿಯಾಗಿ (Grand Wedding) ಆಗಲು ದಿನಾಂಕ ಮುಂದೂಡುತ್ತಾ ಬಂದಿದ್ದರು. ಇದೀಗ ಮದುವೆ ಸೀಸನ್ (Marriage Season) ಆರಂಭಗೊಂಡಿದ್ದು, ವಧು-ವರ ತಮ್ಮಿಷ್ಟದಂತೆ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಮದುವೆಯಲ್ಲಿ ವರ-ವಧು (Bride and Groom) ನಾಚುತ್ತಾ ನಿಂತುಕೊಳ್ಳುವ ಕಾಲ ಅಲ್ಲ. ಈಗ ವರ ಮತ್ತು ವಧು ಜೊತೆಯಾಗಿ ವೇದಿಕೆ ಮೇಲೆ ಡ್ಯಾನ್ಸ್  (Dance) ಮಾಡುವ ಮೂಲಕ ಬಂದ ಅತಿಥಿಗಳನ್ನು ರಂಜಿಸುತ್ತಾರೆ. ವಧು ಸಹ ತನ್ನ ಎಂಟ್ರಿ ಹೀಗೆಯೇ ಇರಬೇಕೆಂದು ಪ್ಲಾನ್ ಮಾಡಿರುತ್ತಾರೆ. ಕೆಲ ಮದುವೆಯಲ್ಲಿ ವರ ವೇದಿಕೆ ಮೇಲೆ ನಿಂತಿದ್ರೆ, ವಧು ಮಾತ್ರ ತನ್ನ ಗೆಳತಿಯರ ಜೊತೆ ಹೆಜ್ಜೆ ಹಾಕುತ್ತಾ ಎಂಟ್ರಿ ಕೊಡುವ ವಿಡಿಯೋಗಳನ್ನು ನೋಡಿರುತ್ತವೆ. ಇದೀಗ ಅಂತಹುವುದೇ ಒಂದು ವಿಡಿಯೋ ವೈರಲ್ (Viral) ಆಗಿದೆ.

ವೇದಿಕೆ ಮೇಲೆ ವರ ನಾಚುತ್ತಾ ನಿಂತಿದ್ರೆ, ವಧು ಮಾತ್ರ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಹಾರ ಬದಲಿಸಿಕೊಳ್ಳಲು ವರ  ಸಿದ್ಧನಾಗಿ ನಿಂತಿದ್ರೂ, ವಧು ಮಾತ್ರ ಡ್ಯಾನ್ಸ್ ಮಾಡೋದನ್ನ ನಿಲ್ಲಿಸಿಲ್ಲ. ಈ ವಧು ಮತ್ಯಾರೋ ಅಲ್ಲ ಬದಲಾಗಿ ಬಾಲಿವುಡ್ ನಟಿ ಅನ್ಶುಲ್ ಚೌಹಾಣ್.

ನಟಿ ಅನ್ಶುಲ್ ಚೌಹಾಣ್ ಜೀರೋ (2018), ಬಿಚ್ಚೂ ಕಾ ಖೇಲ್ (2020), ಮತ್ತು ಶುಭ್ ಮಂಗಲ್ ಸಾವಧಾನ್ (2017) ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವೀಡಿಯೊವನ್ನು ಇನ್‌ ಸ್ಟಾಗ್ರಾಮ್‌ನಲ್ಲಿ 'ವಿಟ್ಟಿ_ವೆಡ್ಡಿಂಗ್' ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ಆರು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅನ್ಶುಲ್ ಸೂರ್ಯವಂಶ ಚಿತ್ರದ ದಲೇರ್ ಮೆಹಂದಿಯವರ ಐಲಾ ರೇ ಐಲಾ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ವೇದಿಕೆ ಮೇಲೆ ಹಾರ ಬದಲಿಸಿಕೊಳ್ಳುವ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿದೆ. ವರ ಅತೀಶ್ ಮಾತ್ರ ವಧು ಡ್ಯಾನ್ಸ್ ಮಾಡುತ್ತಿರೋದನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ:  Viral Story: ಈಕೆಯ ದೇಹದ ಕೂದಲಿಗೆ ವಿಶೇಷ ಬೇಡಿಕೆ! ಹಣ ಕೊಟ್ಟು ಖರೀದಿಸುತ್ತಿದ್ದಾರೆ ಜನರು!

ವೇದಿಕೆ ಮೇಲೆಯೇ ವಧು-ವರ ಡಿಶುಂ ಡಿಶುಂ; ಈಗಲೇ ಹಿಂಗಾದ್ರೆ ಮುಂದೇಗೆ?

ಮದುವೆ ದಿನ(Marriage)ಗಳನ್ನು ನೆನಪಿನಲ್ಲಿ ಉಳಿಯಬೇಕೆಂದು ಭಾವಿಸುತ್ತಾರೆ. ಹಾಗಾಗಿ ಎಲ್ಲ ಗಳಿಗೆಯನ್ನು ಸೆರೆ ಹಿಡಿಯಲು ವಿಡಿಯೋ ಗ್ರಾಫರ್ (Video ) ಗಳನ್ನು ನೇಮಿಸುತ್ತಾರೆ. ಆದ್ರೆ ಮದುವೆಯಲ್ಲಿ ನಡೆಯುವ ಎಡವಟ್ಟುಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral video) ಆಗಿರುತ್ತವೆ.

ಇನ್ನು ಮದುವೆಯ ಶಾಸ್ತ್ರಗಳು, ವಧು-ವರರ ಡ್ರೆಸ್, ಅವರ ಗ್ರಾಂಡ್ ವೆಲ್ ಕಮ್ ಸೇರಿದಂತೆ ಸುಂದರ ಕ್ಷಣಗಳ ರೀಲ್ ಗಳಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಇದೀಗ ಮದುವೆ ದಿನ ವೇದಿಕೆ ಮೇಲೆಯೇ ವಧು-ವರ (Groom And Bride) ಹೊಡೆದಾಡಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಫನ್ನಿ ಫನ್ನಿ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ವಧು ಮತ್ತು ವರ ಹಾರ ಬದಲಿಸಿಕೊಳ್ಳುತ್ತಿರುತ್ತಾರೆ. ಈ ಸಮಯದಲ್ಲಿ ವಧುವಿಗೆ ವರ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಿರೋದನ್ನು ನೋಡಬಹುದು. ಆದ್ರೆ ವಧು ಮಾತ್ರ ಸಿಹಿ ತಿನ್ನಲು ಮುಂದೆ ಬರಲ್ಲ.ಹೊಡೆಯಲು ಆರಂಭಿಸುತ್ತಾಳೆ. ಇತ್ತ ವರ ಸಹ ಹೊಡೆಯಲು ಮುಂದಾಗಿದ್ದಾನೆ. ಸದ್ಯ ಈ ವಿಡಿಯೋ ತುಣುಕು ಕಂಡವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Viral News: ವರನ ಬೊಕ್ಕತಲೆ ಕಂಡು ಮೂರ್ಛೆ ಹೋದ ವಧು! ಕೂದಲಿರದ ಹುಡ್ಗ ನಂಗೆ ಬ್ಯಾಡವೇ ಬೇಡ

ವಧುವಿಗೆ ಎರಡ್ಮರೂ ಬಾರಿ ವರ ಕಪಾಳಮೋಕ್ಷ ಮಾಡಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಷ್ಟಾಗುತ್ತಿದ್ದಂತೆ ಮದುವೆ ಮನೆಯಲ್ಲಿ ಕೋಲಾಹಲವೇ ಎದ್ದಿದೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
Published by:Mahmadrafik K
First published: