ಆಂಧ್ರದಲ್ಲಿ ಹಸಿರು ಕ್ರಾಂತಿ: ಗ್ರೀನ್​ ಚಾಲೆಂಜ್​ಗೆ ಕೈ ಜೋಡಿಸಿದ ಮಹೇಶ್​ಬಾಬು, ಮೆಗಾಸ್ಟಾರ್​, ಪವನ್​ ಕಲ್ಯಾಣ್..!​

news18
Updated:August 1, 2018, 5:50 PM IST
ಆಂಧ್ರದಲ್ಲಿ ಹಸಿರು ಕ್ರಾಂತಿ: ಗ್ರೀನ್​ ಚಾಲೆಂಜ್​ಗೆ ಕೈ ಜೋಡಿಸಿದ ಮಹೇಶ್​ಬಾಬು, ಮೆಗಾಸ್ಟಾರ್​, ಪವನ್​ ಕಲ್ಯಾಣ್..!​
news18
Updated: August 1, 2018, 5:50 PM IST
ಅನಿತಾ ಈ,  ನ್ಯೂಸ್​ 18 ಕನ್ನಡ

ಆಂಧ್ರದಲ್ಲಿ ಈಗ ಹಸಿರು ಕ್ರಾಂತಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಗ ಕೇವಲ ಈ ಹಸಿರು ಕ್ರಾಂತಿಯದ್ದೇ ಸದ್ದು. ಇದಕ್ಕೆ ಕೇವಲ ರಾಜಕಾರಣಗಳಲ್ಲದೆ, ಪೊಲೀಸ್​ ಅಧಿಕಾರಿಗಳು ಹಾಗೂ ಸಿನಿಮಾ ತಾರೆಯರು ಸಹ ಕೈ ಜೋಡಿಸಿದ್ದಾರೆ. ಹೌದು ಇದು ಯಾವ ಹೊಸ ಹಸಿರು ಕ್ರಾಂತಿ ಅಂತೀರಾ. ಇದನ್ನು ತಿಳಿಯೋಕೆ ಈ ವರದಿ ಓದಿ.

ಸದ್ಯಕ್ಕೆ ಜಗತ್ತಿನ ದೊಡ್ಡ ಸಮಸ್ಯೆ ಎಂದರೆ ಹಸಿರು ಮನೆ ಪರಿಣಾಮ. ಇದರಿಂದ ಭೂಮಿಯನ್ನು ಉಳಿಸಲು ಹಸಿರು ಹೊದಿಕೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕೆ ಆಂಧ್ರ ಸಹ ಹೊರತಾಗಿಲ್ಲ. ಅಲ್ಲಿಯೂ ಹಸಿರು ಹೊದಿಕೆಯ ಪ್ರಮಾಣ ಕಡಿಮೆ ಇದ್ದು, ಇದರಿಂದಾಗಿ ಅಲ್ಲಿನ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತಿಯಾದ ಉಷ್ಣಾಂಶ ಹಾಗೂ ಮಳೆ ಗಣನೀಯ ಪ್ರಮಾಣದಲ್ಲಿ ಇಳಿಯಾಗಿದೆ. ಇದರಿಂದ ಜನರು ಕುಡಿಯುವ ನೀರಿಗೂ ಒದ್ದಾಡುವಂತಾಗಿದೆ. ರೈತರು ಬೆಳೆ ಬೆಳೆಯಲು ಈಗ ಮಳೆಗಾಗಿ ಆಕಾಶ ನೋಡುತ್ತಾ ಕೂರುವ ಪರಿಸ್ಥಿತಿ ನಿಮಾರ್ಣವಾಗಿದೆ.

ಇದರಿಂದಾಗಿಯೇ ಇಗ್ನೈಟಿಂಗ್​ ಮೈಂಡ್ಸ್​ ಮತ್ತು ವಾಕ್​ ಫಾರ್ ವಾಟರ್​ ಸಂಸ್ಥೆಗಳು ಈಗ ಆಂಧ್ರದಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿದೆ. ಅದಕ್ಕಾಗಿಯೇ ಈ ಸಂಸ್ಥೆಗಳು  ಹರಾ ಹೈ ತೋ ಬರಾ ಹೈ ಎಂಬ ಅಡಿ ಬರಹದೊಂದಿಗೆ  ಗ್ರೀನ್​ ಚಾಲೆಂಜ್ ಅಭಿಯಾನ ಆರಂಭಿಸಿದ್ದಾರೆ. ಜುಲೈ29ಕ್ಕೆ ಆರಂಭಿಸಿರುವ ಈ ಅಭಿಯಾನಕ್ಕಾಗಿ ರಾಜಕಾರಣಿಗಳು, ಪೊಲೀಸ್​ ಅಧಿಕಾರಿಗಳು ಹಾಗೂ ಸಿನಿಮಾ ತಾರೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್​ ಮಾಡಲಾಗುತ್ತಿದೆ.

ಈ ಅಭಿಯಾನದಲ್ಲಿ ಹಸಿರು ಸವಾಲನ್ನು ಸ್ವೀಕರಿಸುವವರು ಮೂರು ಸಸಿಗಳನ್ನು ನೆಟ್ಟು ಅದನ್ನು ಮೂರು ವರ್ಷ ಪೋಷಿಸಬೇಕು. ಜತೆಗೆ ಮೂರು ಜನರಿಗೆ ಈ ಸವಾಲು ನೀಡಬೇಕು.

#HaraHaiTohBharaHai , Plant 3 Trees and Nurture them for 3 years, Pass the Challenge to 3 others, A Green Revolution, A Green Resolution. pic.twitter.com/Qd4IE8qD9P
Loading...
ಗ್ರೀನ್​ ಚಾಲೆಂಜ್ ಅನ್ನು ನಟ ಮಹೇಶ್​ ಬಾಬು ಅವರಿಗೆ ನೀಡಲಾಗಿತ್ತು. ಅದನ್ನು ಸ್ವೀಕರಿಸಿರುವ ಮಹೇಶ್​ ತಮ್ಮ ಮನೆಯಂಗಳದಲ್ಲೇ ಮೂರು ಸಸಿಗಳನ್ನು ನೆಟ್ಟು, ತಮ್ಮ ಮಗ ಗೌತಮ್​, ಮಗಳು ಸಿತಾರಾ ಹಾಗೂ ನಿರ್ದೇಶಕ ವಂಶಿ ಅವರಿಗೆ ಸವಾಲನ್ನು ನೀಡಿದ್ದಾರೆ.  ಮಹೇಶ್​ ಬಾಬು ಸಸಿ ನೆಡುವ ವಿಡಿಯೋ ನಿಮಗಾಗಿ...Challenge accepted, @KTRTRS & @RachakondaCop 😊 Thank you for nominating me...👍 #HarithaHaram is a great initiative taken towards a go green environment. I now nominate my daughter Sitara, my son Gautam and my @directorvamshi to take on the challenge. pic.twitter.com/SEhcuM4Dgy

ಮಹೇಶ್​ ಬಾಬು ಅವರ ಮಗಳು ಹಾಗೂ ನಿರ್ದೇಶಕ ವಂಶಿ ಹಸಿರು ಸವಾಲನ್ನು ಸ್ವೀಕರಿಸಿದ್ದು, ಅದನ್ನು ಮತ್ತೆ ಮೂವರಿಗೆ ಪಾಸ್​ ಮಾಡಿದ್ದಾರೆ.#HarithaHaram.. Challenge accepted.. Thank You @urstrulyMahesh garu for nominating me... This is the bare minimum we can do for the generations to come.. I now nominate @Samanthaprabhu2 , @MsKajalAggarwal & @ThisIsDSP to take it on... :) pic.twitter.com/1EGiuAuTqX 

ಇನ್ನೂ ಮೆಗಾಸ್ಟಾರ್​ ಚಿರಂಜೀವಿ ಸಹ ಎನ್​ಟಿವಿಯ ನರೇಂದ್ರ ಚೌಧರಿ ನೀಡಿರುವ ಹಸಿರು ಸವಾಲನ್ನು ಸ್ವೀಕರಿಸಿದ್ದು, ಅದನ್ನು ತಮ್ಮ ಪವನ್​ ಕಲ್ಯಾಣ್​, ಬಿ-ಟೌನ್​ನ ಬಿಗ್​ಬಿ ಅಮಿತಾಭ್​ ಬಚ್ಚನ್​ ಹಾಗೂ ನಿರ್ಮಾಪಕ ರಾಮೋಜಿ ರಾವ್ ಅವರಿಗೆ ಸವಾಲನ್ನು ನೀಡಿದ್ದಾರೆ.ಇನ್ನೂ ನಟ ಪವನ್​ ಕಲ್ಯಾಣ್​ ಸಹ ಅಣ್ಣ ನೀಡಿರುವ ಸವಾಲನ್ನು ಸ್ವೀಕರಿಸಿ ಅವರೂ ಸಹ ಸಸಿಗಳನ್ನು ನೆಟ್ಟು, ನೀರೆರೆದಿದ್ದಾರೆ.ಕೇಂದ್ರ ಸಚಿವ ರಾಜವರ್ಧನ್​​ ಸಿಂಗ್​ ರಾಥೋಡ್​ ಅವರು ಆರಂಭಿಸಿದ್ದ ಫಿಟ್​ನೆಸ್​ ಅಭಿಯಾನ ಚಿರಪರಿಚಿತ. ಇದಕ್ಕೆ ದೇಶದಾದ್ಯಂತ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಆಂಧ್ರದಲ್ಲಿ ಆರಂಭವಾಗಿರುವ ಈ ಗ್ರೀನ್​ ಚಾಲೆಂಜ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಆಂಧ್ರ ಹರಿಸಿನಿಂದ ಕಂಗೊಳಿಸಲಿ ಎಂದು ಹಾರೈಸೋಣ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...