Green Canteen: ಕಾಮಕಸ್ತೂರಿ ಟೀ ಕುಡಿದಿದ್ದೀರಾ? ಗ್ರಾಹಕರ ಸೆಳೆಯುತ್ತಿದೆ ಹಸಿರು ಕ್ಯಾಂಟೀನ್!

ಈ ಕ್ಯಾಂಟೀನ್ ಕಮ್ ನರ್ಸರಿಯಲ್ಲಿ (Nursery) ಕೊಡುವ ಒಂದೊಂದು ಪಾನೀಯಕ್ಕೂ ಔಷಧೀಯ ಗುಣವಿದೆ. ಬ್ಯಾಂಬೂ ಟೀ, ಮಸಾಲಾ ಟೀ, ಗಾಂಧಾರಿ ಲೈಮ್ ಸೋಡಾ, ಏಲಕ್ಕೀ ಟೀ, ಲೆಮೆನ್ ಗ್ರಾಸ್ ಟೀ, ವೀಳ್ಯ, ಕಾಮಕಸ್ತೂರಿ, ತುಳಸಿ ಹೀಗೆ ಪರಿಸರದಲ್ಲಿ ದೊರಕುವ ಎಲ್ಲಾ ಗಿಡಗಳ ಟೀ ಈ ಕ್ಯಾಂಟೀನ್ ನಲ್ಲಿ ದೊರೆಯುತ್ತೆ.

ಗ್ರೀನ್ ಕ್ಯಾಂಟೀನ್

ಗ್ರೀನ್ ಕ್ಯಾಂಟೀನ್

  • Share this:
ಸಾಮಾನ್ಯವಾಗಿ ಹೋಟೇಲ್, ಕ್ಯಾಂಟೀನ್ ಗಳಲ್ಲಿ (Canteen) ಎಲ್ಲೋ ಬೆಳೆದ ಚಾ ಮತ್ತು ಕಾಫಿ ಹುಡಿಯನ್ನು ಬಳಸಿ ಗ್ರಾಹಕನಿಗೆ ಕಾಫಿ,ಟೀ ಮಾಡಿ ಕೊಡಲಾಗುತ್ತದೆ. ಆದರೆ ಈ ಕ್ಯಾಂಟೀನ್ ಇದರಿಂದ ಸಾಕಷ್ಟು ಡಿಫೆರೆಂಟ್. ಈ ಕ್ಯಾಂಟೀನ್ ಕಮ್ ನರ್ಸರಿಯಲ್ಲಿ (Nursery) ಕೊಡುವ ಒಂದೊಂದು ಪಾನೀಯಕ್ಕೂ(Drinks) ಔಷಧೀಯ ಗುಣವಿದೆ. ಬ್ಯಾಂಬೂ ಟೀ, ಮಸಾಲಾ ಟೀ, ಗಾಂಧಾರಿ ಲೈಮ್ ಸೋಡಾ, ಏಲಕ್ಕೀ ಟೀ, ಲೆಮೆನ್ ಗ್ರಾಸ್ ಟೀ, ವೀಳ್ಯ, ಕಾಮಕಸ್ತೂರಿ, ತುಳಸಿ ಹೀಗೆ ಪರಿಸರದಲ್ಲಿ ದೊರಕುವ ಎಲ್ಲಾ ಗಿಡಗಳ ಟೀ ಈ ಕ್ಯಾಂಟೀನ್ ನಲ್ಲಿ ದೊರೆಯುತ್ತೆ.

ಇತ್ತೀಚಿನ ದಿನಗಳಲ್ಲಿ ಕ್ಯಾಂಟೀನ್, ಹೋಟೆಲ್ ಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ಐಷಾರಾಮಿ ವ್ಯವಸ್ಥೆಗಳ ಮೊರೆ ಹೋಗೋದು ಸಾಮಾನ್ಯ. ಆದರೂ ಗ್ರಾಹಕರು ಅಂಥಹ ಸ್ಥಳಗಳಿಗೆ ಭೇಟಿ ನೀಡೋದು ಅಷ್ಟಕಷ್ಟೇ.

ಸೌಗಂಧಿಕಾ ಕ್ಯಾಂಟೀನ್

ಆದರೆ ಇಲ್ಲೊಂದು ಕ್ಯಾಂಟೀನ್  ನಲ್ಲಿ ಫ್ಯಾನಿಲ್ಲ, ಎಸಿ ಇಲ್ಲಾ, ಐಷಾರಾಮಿ ಆಸನ ವ್ಯವಸ್ಥೆಯಿಲ್ಲ, ಅತ್ಯಾಧುನಿಕ ಮೇಲ್ಛಾವಣಿ ವ್ಯವಸ್ಥೆಯಿಲ್ಲ. ಆದರೆ ಈ ಕ್ಯಾಂಟೀನ್ ಗೆ ಬಂದ ಗ್ರಾಹಕ ಮತ್ತೊಮ್ಮೆ ಇತ್ತ ಮುಖ ಮಾಡದೇ ಇರಲಿಕ್ಕಿಲ್ಲ. ಅರೆ ಅಂಥಹ ಸೆಳೆತ ಈ ಕ್ಯಾಂಟಿನ್ ನಲ್ಲಿ ಏನಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹೊರವಲಯದ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಪರ್ಪುಂಜದಲ್ಲಿರುವ ಸೌಗಂಧಿಕಾ ಕ್ಯಾಂಟೀನ್ ಗೆ ಒಮ್ಮೆ ಭೇಟಿ ನೀಡಲೇ ಬೇಕು.

ಹೂ, ಗಿಡ, ಬಳ್ಳಿಗಳಿಂದಲೇ ಟೀ ತಯಾರಿ

ಈ ಕ್ಯಾಂಟೀನ್ ನಲ್ಲಿ ಕ್ಯಾಂಟೀನ್ ಜೊತೆ ವಿವಿಧ ಹೂ, ಔಷಧೀಯ ಗುಣಗಳಿರುವ ಗಿಡಗಳಿದ್ದು, ಇವುಗಳನ್ನೇ ಬಳಿಸಿಕೊಂಡು ಇಲ್ಲಿ ಹೆಚ್ಚಿನ ಟೀ ಹಾಗೂ ಪಾನೀಯಗಳನ್ನು ತಯಾರಿಸಲಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಹೆದ್ದಾರಿ ಪಕ್ಕದಲ್ಲೇ ಇರುವ ಮನೆಯ ಸುತ್ತ ನರ್ಸರಿ ಮತ್ತು ಪುಟ್ಟ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿರುವ ಚಂದ್ರಹಾಸ್ ಮತ್ತು ಪ್ರೀತಿ ದಂಪತಿಗಳು ನರ್ಸರಿಯಲ್ಲಿ ಬೆಳೆಯುವ ವಿವಿಧ ಜಾತಿಯ ಔಷಧೀಯ ಗುಣಗಳಿರುವ ಏಲಕ್ಕಿ, ಮಸಾಲ ಎಲೆಗಳು, ಬಿದಿರಿನ ಚಿಗುರು, ವೀಳ್ಯ, ಕರಿಮೆಣಸು, ಗಾಂಧಾರಿ, ಕಾಮಕಸ್ತೂರಿ, ಲೆಮೆನ್ ಗ್ರಾಸ್ ಹೀಗೆ ವಿವಿಧ ಜಾತಿಯ ಎಲೆಗಳನ್ನು ಬಳಸಿಕೊಂಡು ಇಲ್ಲಿ ಟೀ ಮಾಡಲಾಗುತ್ತದೆ.

ಆರೋಗ್ಯಕ್ಕೂ ಬೆಸ್ಟ್

ಈ ಟೀ ಗ್ರಾಹಕನಿಗೆ ಸ್ವಾದದ ಜೊತೆಗೆ ದೇಹದ ಆರೋಗ್ಯಕ್ಕೂ ಉಪಕಾರಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಈ ಸೌಗಂಧಿಕಾ ಕ್ಯಾಂಟೀನ್ ಗೆ ಭೇಟಿ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಮನೆಯಲ್ಲಿದ್ದ ಹಿರಿಯರು ಕಫ, ಶೀತ, ತಲೆನೋವು ಹೀಗೆ ಹಲವು ರೀತಿಯ ಕಾಯಿಲೆಗೆ ನೀಡುತ್ತಿದ್ದ ಕಷಾಯವನ್ನೇ ಟೀ ರೂಪದಲ್ಲಿ ನೀಡುವ ಚಂದ್ರಹಾಸ್ ದಂಪತಿಗಳು ಇರುವುದರಲ್ಲೇ ಸಂತಸದ ಬದುಕು ಸಾಗಿಸುತ್ತಿದ್ದಾರೆ.

ಇದನ್ನೂ ಓದಿ: Kitchen Hacks: ಬೇಸಿಗೆಯಲ್ಲಿ ನಿಮ್ಮ ಅಡುಗೆ ಮನೆ ಹೇಗಿರಬೇಕು? ಅಡುಗೆಯ ರುಚಿ ಹೆಚ್ಚಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಪ್ಸ್

ಪ್ರಕೃತಿಯಿಂದ ಬಂದ ನಾವು ಪ್ರಕೃತಿಯಲ್ಲೇ ಸಿಗುವುದನ್ನು ಬಳಿಸಿಕೊಳ್ಳಬೇಕು ಎನ್ನುವ ಚಂದ್ರಹಾಸ್ ಇದೇ ಕಾರಣಕ್ಕೆ ತಮ್ಮ ಕ್ಯಾಂಟೀನ್ ನಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಬಳಸುತ್ತಿದ್ದಾರೆ. ತಮ್ಮ ನರ್ಸರಿಯಲ್ಲೇ ಬೆಳೆಯುವ ಲಿಂಬೆ ಹಣ್ಣುಗಳನ್ನೇ ಹೆಚ್ಚಾಗಿ ಲೆಮೆನ್ ಸೋಡಾಕ್ಕೆ ಬಳಸಲಾಗುತ್ತಿದೆ.

ತಾಜಾ ಹಣ್ಣಿನ ಜ್ಯೂಸ್ ಲಭ್ಯ

ಮುಸಂಬಿ, ಪಪ್ಪಾಯ, ಫ್ಯಾಷನ್ ಫ್ರುಟ್, ಅನಾನಾಸು ಹೀಗೆ ಹಲವು ಜಾತಿಯ ಹಣ್ಣುಗಳನ್ನೂ ಇಲ್ಲಿ ಬೆಳೆಸಲಾಗುತ್ತಿದ್ದು, ಇದರಲ್ಲಿ ಸಿಗುವ ಉತ್ಪನ್ನಗಳನ್ನೇ ಬಳಸಿ ಗ್ರಾಹಕರಿಗೆ ತಾಜಾ ಜ್ಯೂಸ್ ಗಳನ್ನೂ ನೀಡಲಾಗುತ್ತಿರುವ ಕಾರಣ ಇಲ್ಲಿಗೆ ಬರುವವರಿಗೂ ಖುಷಿ ಆಗುತ್ತಿದೆ ಎನ್ನುತ್ತಾರೆ ಗ್ರಾಹಕ ಕುಶಾಲ್.

ಇದನ್ನೂ ಓದಿ: Healthy Drinks: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

ಹಸಿರು ಹಾಸಿದ ಮೇಲ್ಫಾವಣಿಯನ್ನು ಹೊಂದಿರುವ, ಪ್ರಕೃತಿಯ ಸ್ವಚ್ಛಂದ ಗಾಳಿಯನ್ನು ಸವಿದುಕೊಂಡು ಪ್ರಕೃತಿಯ ಟೀ ಸವಿಯುವ ಉದ್ಧೇಶದಿಂದ ಇಲ್ಲಿಗೆ ಪ್ರಯಾಣಿಕರು ಹೆಚ್ಚಾಗಿ ಬಂದು ಸೇರುತ್ತಾರೆ.
Published by:Divya D
First published: