ಪ್ರೀತಿಯ ಮೊಮ್ಮಗಳಿಗೆ 91 ವಯಸ್ಸಿನ ಅಜ್ಜ ಕಳಿಸಿದ ಕ್ಯೂಟ್‌ ಸಂದೇಶ ಸಿಕ್ಕಾಪಟ್ಟೆ ವೈರಲ್‌!

ಇಲ್ಲೊಬ್ಬ 91 ವರ್ಷದ ಅಜ್ಜ ಇದ್ದಾರೆ, ತಮ್ಮ ಒಬ್ಬಳೇ ಮೊಮ್ಮಗಳಿಗೆ ಕ್ಯೂಟ್‌ ಮೆಸೇಜ್ ಮಾಡುವ ಮೂಲಕ ತನ್ನ ಮೊಮ್ಮಗಳಿಗೆ ಪ್ರೀತಿ ತೋರಿಸುತ್ತಿದ್ದಾರೆ.

ವೈರಲ್​ ಆದ ಸಂದೇಶ

ವೈರಲ್​ ಆದ ಸಂದೇಶ

  • Share this:
ವಯಸ್ಸಾದ ಅಜ್ಜ-ಅಜ್ಜಿ ಮನೆಯಲ್ಲಿ ಇದ್ದರಂತೂ ಮೊಮ್ಮಕ್ಕಳಿಗೆ ಅದಕ್ಕಿಂತ ಖುಷಿ ಬೇರೆಯಿರುವುದಿಲ್ಲ. ಮೊಮ್ಮಕ್ಕಳನ್ನು ತಮ್ಮ ಭುಜದ ಮೇಲೆ ಕೂರಿಸಿಕೊಂಡು ಊರೆಲ್ಲಾ ಸುತ್ತುತ್ತಾರೆ. ಅವರ ಜೊತೆಯಲ್ಲಿ ಮಕ್ಕಳಂತೆ ಆಟವಾಡುತ್ತಾರೆ. ಆದರೆ ಈಗೆಲ್ಲಾ ಗಂಡ, ಹೆಂಡತಿ ಮಕ್ಕಳು ಅಷ್ಟೇ ಮನೆಯಲ್ಲಿ ಇರುತ್ತಿದ್ದು, ಈಗಿನ ಮಕ್ಕಳು ಹೆಚ್ಚಾಗಿ ಆ ಖುಷಿಯನ್ನು ಅನುಭವಿಸಿರುವುದಿಲ್ಲ. ಆದರೆ ಇಲ್ಲೊಬ್ಬ 91 ವರ್ಷದ ಅಜ್ಜ ಇದ್ದಾರೆ, ತಮ್ಮ ಒಬ್ಬಳೇ ಮೊಮ್ಮಗಳಿಗೆ ಕ್ಯೂಟ್‌ ಮೆಸೇಜ್ ಮಾಡುವ ಮೂಲಕ ತನ್ನ ಮೊಮ್ಮಗಳಿಗೆ ಪ್ರೀತಿ ತೋರಿಸುತ್ತಿದ್ದಾರೆ. ಆಕೆಯ ಅಜ್ಜನು ಮಾಡಿದ ಕ್ಯೂಟ್‌ ಸಂದೇಶಗಳನ್ನು ಮೆಗಾನ್ ಎಲಿಜೆಬೆತ್ ತನ್ನ ಟಿಕ್ ಟಾಕ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಆ ಟಿಕ್ ಟಾಕ್ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮನಸೋತ ಜನರು ಆ ವಿಡಿಯೋ ವೈರಲ್ ಮಾಡಿದ್ದಾರೆ.


ಅಜ್ಜನು ನ್ಯೂಸ್ ನೋಡಿ ಅಥವಾ ಎಲ್ಲೋ ಓದಿದ ಸುದ್ದಿಯಿಂದ ಎಚ್ಚೆತ್ತುಕೊಂಡು ತನ್ನ ಮೊಮ್ಮಗಳಿಗೆ ಎಚ್ಚರಿಕೆಯ ಗಂಟೆಯಂತೆ ಸಂದೇಶ ಕಳುಹಿಸಿದ್ದು ತುಂಬಾ ಕ್ಯೂಟ್‌ ಮತ್ತು ಎಂತವರನ್ನು ಮನಸೋಲುವಂತೆ ಮಾಡುತ್ತದೆ. ನ್ನ ಅಜ್ಜ ಕಳುಹಿಸಿದ ಎಲ್ಲಾ ಸಂದೇಶಗಳನ್ನು ಒಟ್ಟುಗೂಡಿಸಿ ಮೆಗಾನ್ ತನ್ನ ಟಿಕ್ ಟಾಕ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಅದಕ್ಕೆ ಒಂದು ಸುಮಧುರವಾದ ಹಿನ್ನಲೆ ಸಂಗೀತವನ್ನು ಸಹ ಸೇರಿಸಲಾಗಿದ್ದು, ನೋಡುಗರಿಗೆ ತನು ಮನ ತಂಪಾಗಿಸುವಂತೆ ಮಾಡಿದೆ.


ಈ ಅಜ್ಜನು ಕಳಿಸಿದ ಒಂದು ಸಂದೇಶದ ಅರ್ಥ ಹೀಗಿದೆ ನೋಡಿ "ನಾನು ಒಂದು ಲೇಖನವನ್ನು ಓದಿದೆ, ಅದರಲ್ಲಿ ಯಾರು 29 ವರ್ಷದ ಒಳಗೆ ಜೀವನ ಸಂಗಾತಿಯನ್ನು ಹುಡುಕಿಕೊಳ್ಳದೆ ಇದ್ದರೆ, ಅವರು ಹಾಗೆಯೇ ಒಂಟಿಯಾಗಿ ಸಾಯುತ್ತಾರೆ ಎಂದಿತ್ತು. ಮೂರು ತಿಂಗಳಲ್ಲಿ ನಿನ್ನ ಹುಟ್ಟುಹಬ್ಬ ಬರುತ್ತಿದೆ. ನಿನಗೆ ತಿಳಿಸಲು ಸಂದೇಶ ಮಾಡಿರುವೆ''.


ಇಂತಹ ಒಂದು ಕ್ಯೂಟ್‌ ಸಂದೇಶಕ್ಕೆ ಮೊಮ್ಮಗಳು ಜಸ್ಟ್ "ಥ್ಯಾಂಕ್ಸ್" ಎಂದು ಹೇಳಿ ಪ್ರತಿಕ್ರಿಯೆ ನೀಡಿದ್ದಾಳೆ. ಅಜ್ಜನು ನೇರವಾಗಿ ವಿಷಯಕ್ಕೆ ಬಾರದೆ ತನ್ನ ಮೊಮ್ಮಗಳಿಗೆ ಒಬ್ಬ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು ಹೇಳಿರುವುದು ನಿಜಕ್ಕೂ ಕ್ಯೂಟ್‌ ಆಗಿದೆ.


ಇನ್ನೊಂದು ಸಂದೇಶದ ಅರ್ಥ ಹೇಗಿದೆ ಎಂದರೆ "ಮೆಗಾನ್, ನಿನ್ನ ಅಜ್ಜನಿದ್ದೇನೆ.. ಮೆಗಾನ್ ನೀನು ನಿನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿರುವೆಯಾ, ಏಕೆಂದರೆ ನಮ್ಮ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಜಾಸ್ತಿ, ಜೋಪಾನ" ಎಂದಿತ್ತು. ಈ ಸಂದೇಶಕ್ಕೆ ಮೆಗಾನ್ ತನ್ನ ಅಜ್ಜನಿಗೆ "ಹೌದು, ಧನ್ಯವಾದಗಳು. ಲವ್‌ ಯೂ'' ಎಂದು ಪ್ರತಿಕ್ರಿಯೆ ನೀಡಿದ್ದಳು.


ಇನ್ನೊಂದು ಸಂದೇಶದಲ್ಲಿ ಅಜ್ಜನು ತನ್ನ ಮೊಮ್ಮಗಳ ಕುಡಿತದ ಅಭ್ಯಾಸದ ಬಗ್ಗೆ ಚಿಂತಿಸುತ್ತ "ನನ್ನ ಪ್ರಕಾರ ನೀನು ಹೆಚ್ಚಾಗಿ ಕುಡಿಯುತ್ತಿಲ್ಲವಲ್ಲ. ಏಕೆಂದರೆ ನ್ಯೂಸ್ನಲ್ಲಿ ನೋಡಿದೆ ಮದ್ಯದ ಮಾರಾಟವು ಜಾಸ್ತಿಯಾಗಿದೆ ಮತ್ತು ಅದಕ್ಕೆ ಕಾರಣ ಜನರು ತುಂಬಾ ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿರುವುದು ಅಂತೆ. ಲವ್ ಯು ನಿನ್ನ ಅಜ್ಜ" ಹೀಗೆ ಸಂದೇಶ ಕಳುಹಿಸಿದ್ದರು. ಇದಕ್ಕೆ ಮೊಮ್ಮಗಳು ಸಮಾಧಾನದಿಂದ ಉತ್ತರಿಸುತ್ತ "ಥ್ಯಾಂಕ್ಸ್ ತಾತ.. ನಾನು ಓಕೆ'' ಹೀಗೆ ಬರೆದು ಕಳುಹಿಸಿದ್ದಾಳೆ.

ಈ ವೈರಲ್ ವಿಡಿಯೋ ನೋಡಿದ ಜನರು ಸಾಮಾಜಿಕ ಮಾಧ್ಯಮದಲ್ಲಿ "ನಿಮ್ಮ ಅಜ್ಜ ನಿಮ್ಮ ಬಗ್ಗೆ ತುಂಬಾ ಕೇರ್ ಮಾಡುತ್ತಾರೆ", "ನಿಮ್ಮ ಅಜ್ಜನು ಮಾಡಿದಂತಹ ಸಂದೇಶಗಳು ತುಂಬಾ ಗಂಭೀರವಾಗಿವೆ ಮತ್ತು ಕ್ಯೂಟ್‌ ಸಹ ಆಗಿವೆ" ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು "ನಿಮ್ಮ ಬಗ್ಗೆ ಕಾಳಜಿಯಿಂದ ಅವರ ಹೃದಯದಿಂದ ಬಂದಿರುವ ಮಾತುಗಳನ್ನು ಸಂದೇಶದ ರೂಪದಲ್ಲಿ ಬರೆದಿದ್ದಾರೆ" ಎಂದು ಹೇಳಿದ್ದಾರೆ.


First published: